ಅಥವಾ
(4) (6) (8) (1) (0) (0) (0) (0) (0) (0) (0) (0) (1) (0) ಅಂ (1) ಅಃ (1) (4) (0) (4) (0) (0) (0) (0) (1) (0) (0) (0) (0) (0) (0) (0) (1) (0) (1) (0) (2) (1) (1) (2) (2) (3) (0) (0) (0) (1) (0) (0) (0) (0) (0) (0)

ಪದದಿಂದ ಪ್ರಾರಂಭವಾಗುವ ವಚನಗಳು:

ಮಕರತರ್ಕದ ಪ್ರಸ್ತಾವನ ವಚನ : ಅರಿಷಡ್ವರ್ಗವೆಂಬ ಆರು ನಾಯಿಗಳು ಬೊಗಳುತ್ತಿರೆ, ಹೊನ್ನು ಹೆಣ್ಣು ಮಣ್ಣೆಂಬ ತ್ರಿವಿಧ ನರಿ ಕೂಗುತ್ತಿರೆ, ಹಸಿವು ತೃಷೆ ನಿದ್ರೆ ಜಾಡ್ಯವೆಂಬ ನಾಲ್ಕು ಸೂಕರ ಮುತ್ತಿಕೊಂಡಿರೆ, ಸಪ್ತವ್ಯಸನಗಳೆಂಬ ಏಳು ಬೆಕ್ಕು ಸುಳಿವುತ್ತಿರೆ, ಪಂಚೇಂದ್ರಿಯವೆಂಬ ಐದು ವರ್ಣದ ಹುಲಿ ನುಂಗುತ್ತಿರೆ, ಸಪ್ತಧಾತುಗಳೆಂಬ ಏಳುಮಂದಿ ಹೊಲೆಯರು ಮುಟ್ಟಿ ತನ್ನಂಗದೊಳು ನಾನು ನೀನೆಂಬ ಅಹಂಕಾರದ ಜಾಗಟೆಯ ಪಿಡಿದು ಅಜಾÕನವೆಂಬ ಕುಡಿಯಲ್ಲಿ ಬಾರಿಸಿ, ಇಂತಪ್ಪ ಪರಿಯಲ್ಲಿದ್ದ ಸೂತಕಂಗಳ ಪರಿಯದೆ ಹೊರಮಾತ ಕೇಳಬಾರದೆಂದು ಜಾಗಟೆಯ ಹೊಯ್ಸಿ ನಾದದ ಮರೆಯಲ್ಲಿ ಆಹಾರವ ಕೊಂಬ ಸೇವಕರ ನೋಡಿ ನಗುತಿರ್ದ ನಮ್ಮ ಗೊಹೇಶ್ವರಪ್ರಿಯ ನಿರಾಳಲಿಂಗಾ.
--------------
ಗುಹೇಶ್ವರಯ್ಯ
ಮೇರುಗಿರಿ ಉದಯಗಿರಿ ನೀಲಗಿರಿ ಹೇಮಗಿರಿ ರಜತಗಿರಿ ಇಂತೀ ಗಿರಿಗಳಿಗೆ ಛಳಿಯಾದರೆ ಹೊದ್ದಿಸುವರುಂಟೇನಯ್ಯಾ? ಆ ಗಿರಿಯ ಕೆಳಗೆ ಗಗನವುಂಟು ; ಆ ಗಗನಕ್ಕೆ ಗಬಸಣಿಗೆಯಿಕ್ಕುವರುಂಟೇನಯ್ಯ? ಆ ಗಗನದ ಕೆಳಗೆ ಸಪ್ತಸಮುದ್ರಗಳುಂಟು. ಅವುಗಳ ನೀರುಡುಗಿದರೆ ಆ ನೀರ ಕೂಡಿಸುವರುಂಟೇನಯ್ಯಾ? ಆ ಸಮುದ್ರಂಗಳ ಕೆಳಗೆ ಒಂದು ಮದಸೊಕ್ಕಿದ ಇಲಿ, ಆ ಇಲಿಯ ತಿಂದೆನೆಂದು ಒಂದು ಮಾರ್ಜಲ ಬರಲು, ಆ ಮಾರ್ಜಾಲನು ಆ ಇಲಿಯ ಕಂಡು ನಿಬ್ಬೆರಗಾಯಿತ್ತು. ಆ ಇಲಿಯು ಬಂದು ಆ ಮಾರ್ಜಾಲನ ಕಿವಿಯ ತಿಂಬೋದು. ಆದ ಕಂಡು ಬೆರಗಾದ ನಮ್ಮ ಗೊಹೇಶ್ವರಪ್ರಿಯ ನಿರಾಳಲಿಂಗ.
--------------
ಗುಹೇಶ್ವರಯ್ಯ
ಮನಹೀನ ಬಂಟನ ಕೈಯಲ್ಲಿ ಬತ್ತೀಸಾಯುಧವಿದ್ದರೇನಯ್ಯ? ಜಾರಸ್ತ್ರೀ ಸರ್ವಾಭರಣವನಿಟ್ಟಿದ್ದರೇನಯ್ಯ? ಕುರುಡನ ಕೈಯಲ್ಲಿ ದರ್ಪಣವಿದ್ದರೇನಯ್ಯ? ಧರ್ಮವನರಿಯದವನ ಕೈಯಲ್ಲಿ ಹಣವಿದ್ದರೇನಯ್ಯ? ಜ್ಞಾನಹೀನ ರೂಪಧರಿಸಿದ್ದರೇನಯ್ಯ? ಪ್ರಾಣಲಿಂಗವನರಿಯದ ನರಗುರಿಗಳು ಅಂಗದ ಮೇಲೆ ಲಿಂಗವ ಕಟ್ಟಿದ್ದರೇನಯ್ಯ? ಇಂತೀ ಷಡ್ವಿಧ ಭೇದವನರಿಯದ ಭವಿಗಳು ನಿಮ್ಮ ಹೊಲಬನವರೆತ್ತಬಲ್ಲರಯ್ಯ? ಇಟ್ಟು ಪೂಜೆಯ ಮಾಡುವ ಆ ದ್ರೋಹಿಗಳಿಗೆ ನಾನೇನೆಂಬೆನಯ್ಯ ಗೊಹೇಶ್ವರಪ್ರಿಯ ನಿರಾಳಲಿಂಗಾ.
--------------
ಗುಹೇಶ್ವರಯ್ಯ