ಅಥವಾ
(2) (5) (1) (2) (4) (0) (0) (0) (5) (0) (1) (0) (0) (0) ಅಂ (0) ಅಃ (0) (25) (0) (4) (0) (0) (1) (0) (2) (0) (0) (0) (0) (1) (0) (0) (4) (0) (0) (0) (7) (2) (0) (9) (2) (5) (1) (1) (0) (4) (4) (0) (0) (4) (3) (0)

ಪದದಿಂದ ಪ್ರಾರಂಭವಾಗುವ ವಚನಗಳು:

ನಾಯ ನರಿಯ ಮಧ್ಯದಲ್ಲಿ ನಾರಿವಾಳದ ಸಸಿ ಹುಟ್ಟಿತ್ತು. ಐದು ಗೇಣು ಉದ್ದ ಎಂಟು ಗೇಣು ವಿಸ್ತೀರ್ಣ. ಅದರ ಬೇರು ಪಾತಾಳಕ್ಕೆ ಇಳಿಯಿತ್ತು; ಬೇರಿನ ಮೊನೆ ನೀರ ತಿಂದಿತ್ತು; ನೀರ ಸಾರ ತಾಗಿ ಮರನೊಡೆಯಿತ್ತು, ಮಟ್ಟೆ ಇಪ್ಪತ್ತೈದಾಗಿ ಹೊಂಬಾಳೆ ಬಿಟ್ಟಿತ್ತು; ಹದಿನಾರು ವಳಯದಲ್ಲಿ ಕಾಯಿ ಬಲಿದವು. ಮೂರು ದಿಸೆಯಲ್ಲಿ ಆ ಮರವ ಹತ್ತಿ ಕಾಯ ಕೆಡಹುವರಿಲ್ಲ. ವಾಯವಾಯಿತ್ತು ಮರಹುಟ್ಟಿ ಮರದ ಕೆಳಗಿದ್ದು ಹಣ್ಣಿನ ಹಂಬಲು ಹರಿವುದ ನೋಡುತ್ತಿದ್ದೇನೆ. ನಾರಾಯಣಪ್ರಿಯ ರಾಮನಾಥಾ.
--------------
ಗುಪ್ತ ಮಂಚಣ್ಣ
ನಾನಾ ಭೇದವ ತಂತಿಗೆ ಜೀವ ಸೆವರಿನಲ್ಲಿ ಅಡಗುವಂತೆ ನಾನಾ ಜೀವದ ಕಳೆ ನಿನ್ನ ಕಾರುಣ್ಯದಲ್ಲಿ ಬೆಳೆವುತಿಪ್ಪ ಮೂರುತಿ ನೀನೆ ನಾರಾಯಣಪ್ರಿಯ ರಾಮನಾಥಾ.
--------------
ಗುಪ್ತ ಮಂಚಣ್ಣ
ನಾನು ಭೃತ್ಯನಾಗಿದ್ದಲ್ಲಿ ಕರ್ತರ ಇರವ ವಿಚಾರಿಸೂದು ಭಕ್ತರ ಇರವಲ್ಲ, ಇದು ವಿಶ್ವಾಸದ ಯುಕ್ತಿ. ಇಷ್ಟಕಂಜಿ ಬಿಟ್ಟಡೆ ಮೊದಲು ಮೋಸವಾದಲ್ಲಿ ಲಾಭಕ್ಕೆಸರಿಹುದುಗುಂಟೆ? ಶರಣರ ಮರೆ ಮನಕ್ಕೆ ವಿರೋಧವುಂಟೆ? ಮಣ್ಣಿನ ಹೊದಕೆ ಮೈ ಜಲಕ್ಕೆ ನಿರ್ಮಲವಲ್ಲದೆ ಬ್ಥಿನ್ನಭಾವವಿಲ್ಲ. ಎನ್ನ ಮಾತು ನಿನಗೆ ಅನ್ಯವೆ, ನನ್ನಿಯಲ್ಲದೆ? ಅದಕ್ಕೆ ಬ್ಥಿನ್ನ ಭಾವವಿಲ್ಲ, ನಾರಾಯಣಪ್ರಿಯ ರಾಮನಾಥಾ.
--------------
ಗುಪ್ತ ಮಂಚಣ್ಣ
ನಾ ಬಂದೆ ಹರಿಭಕ್ತನಾಗಿ, ಬಾಹಾಗ ನಾ ದಾಸನಾಗಿ. ಒಂಬತ್ತು ಜೂಳಿಯ ತಣ್ಣೀರ ಕಣಿತೆಯ ಹೊತ್ತು ತಿತ್ತಿಗ ನೀರ ಕಾಣೆ. ಲೆಕ್ಕವಿಲ್ಲದ ನಾಮವನಿಕ್ಕಿದೆ, ಸುತ್ತಿ ಸುತ್ತಿ ಬಳಸಿದೆ. ಹೀಲಿಯ ಗರಿಯ ಹೇಕಣ್ಣ, ಪಜ್ಞೆಯ ನಾಮವ ದೃಷ್ಟಿಯ ಮಧ್ಯದಲ್ಲಿ ಇಕ್ಕಿ ಮತ್ತೆ ಅದರ ನಡುವೆ ನಿಶ್ಚಯ ಬಿಳಿಯ ನಾಮವನಿಕ್ಕಿ ಹೊತ್ತ ದಾಸಿಕೆ ಹುಸಿಯಾಯಿತ್ತು. ದಾಸೋಹವೆಂಬುದನರಿಯದೆ ಎನ್ನ ವೇಷ ಹುಸಿಯಾಯಿತ್ತು, ನಾರಾಯಣಪ್ರಿಯ ರಾಮನಾಥಾ.
--------------
ಗುಪ್ತ ಮಂಚಣ್ಣ
ನೀಲಮೇಘದ ಭೂಮಿಯಲ್ಲಿ ಕಾಳ ಗೂಳಿ ಹುಟ್ಟಿತ್ತು. ಬಾಲ ಬಿಳಿದು ಕಾಲು ಕೆಂಪು. ಅದರ ಕೋಡು ಕಾಳಕೂಟ. ಅದರ ಬಾಯಿ ಅಸಿಯ ಬಳಗ. ಅದರ ನಾಲಗೆ ಸಾಲು ಲೋಕದ ಸಂಹಾರ. ಅದರ ನಾಸಿಕದ ವಾಸ ಶೇಷನ ಕಮಠನ ಆಶ್ರಯಿಸಿದ ಕ್ಷೋಣಿ. ಇಂತಿವು ಉಚ್ಚಾಸದಲ್ಲಿ ಆಡುವ ತುಂತುರು ಬಿಂದು. ಇದರಂತುಕದಲ್ಲಿ ನಿಂದು ಹೂಂಕರಿಸಲಾಗಿ ಅಡಗಿತ್ತು ಜಗ, ಉಡುಗಿತ್ತು ಆಕಾಶ. ತಮ್ಮತಮ್ಮ ತೊಡಿಗೆಯ ಬಿಟ್ಟರು, ಮೂರು ಜಾತಿ ಕುಲ ವರ್ಗ. ಇಂತೀ ಗೂಳಿಯ ದೆಸೆಯಿಂದ ಗೋಳಕಾಕಾರವಾದೆ ಗೋಪಾಲಪ್ರಿಯ ರಾಮನಾಥಾ.
--------------
ಗುಪ್ತ ಮಂಚಣ್ಣ
ನಾ ವಿಶ್ವಾಸಿಯಾದಡೆ ಗುಪ್ತ ಭಕ್ತಿಯ ಮಾಡಬೇಕೆ? ನಾ ವಿಶ್ವಾಸಿಯಾದಡೆ ಹರಿವೇಷವಂ ಇದಿರಿಗೆ ತೊಟ್ಟು ಹರನ ಹರಣದಲ್ಲಿ ಇರಿಸಿಹೆನೆಂಬ ಸಂದೇಹವೇತಕ್ಕೆ? ನನ್ನ ವಿಶ್ವಾಸಕ್ಕೆ ಇದಿರ ಅರಿತಡೆ ಅಸುವ ಹೊಸೆದೆಹೆನೆಂಬ ಹುಸಿಮಾತಿನ ಗಸಣಿಯೇತಕ್ಕೆ? ಎನ್ನ ವೇಷವು ಹುಸಿ, ನಿಮ್ಮ ಭಕ್ತಿಯ ದಾಸೋಹದ ದಾಸನೆಂಬುದು ಹುಸಿಯಯ್ಯಾ, ನಾರಾಯಣಪ್ರಿಯ ರಾಮನಾಥಾ.
--------------
ಗುಪ್ತ ಮಂಚಣ್ಣ
ನೀರ ನೆಳಲು ನುಂಗಿತ್ತೆಂದು, ಆರೈಕೆಗೊಂಬವನ ಅರಣ್ಯ ನುಂಗಿತ್ತು. ನುಂಗಿದ ಅರಣ್ಯವ ಗುಂಗುರು ನುಂಗಿತ್ತು. ಗುಂಗುರ ಅಂಗವ ಸೀಳಲಾಗಿ ಕಂಡರು ಮೂರು ಲೋಕವ. ಈ ಗುಣವ ಕಂಡ ಕಂಡವರಿಗೆ ಹೇಳಿ, ಭಂಡಾಹವರ ಕಂಡು ನಿಂಗು ನೋಡುತ್ತಿದ್ದೆ ನಾರಾಯಣಪ್ರಿಯ ರಾಮನಾಥಾ.
--------------
ಗುಪ್ತ ಮಂಚಣ್ಣ