ಅಥವಾ
(2) (5) (1) (2) (4) (0) (0) (0) (5) (0) (1) (0) (0) (0) ಅಂ (0) ಅಃ (0) (25) (0) (4) (0) (0) (1) (0) (2) (0) (0) (0) (0) (1) (0) (0) (4) (0) (0) (0) (7) (2) (0) (9) (2) (5) (1) (1) (0) (4) (4) (0) (0) (4) (3) (0)

ಪದದಿಂದ ಪ್ರಾರಂಭವಾಗುವ ವಚನಗಳು:

ಬಣ್ಣ ನುಂಗಿದ ಕಪ್ಪಡಕ್ಕೆ ಮುನ್ನಿನ ಅಂದವುಂಟೆ? ನಿಜದ ನನ್ನಿಯನರಿತವಂಗೆ ಮುನ್ನಿನ ಕುನ್ನಿಯ ಗುಣವುಂಟೆ? ಇದು ಸನ್ನದ್ದ ನಾರಾಯಣಪ್ರಿಯ ರಾಮನಾಥನಲ್ಲಿ ಸುಸಂಗಿಯಾದ ಶರಣಂಗೆ.
--------------
ಗುಪ್ತ ಮಂಚಣ್ಣ
ಬಣ್ಣವ ಬಯಲು ನುಂಗಿದಾಗ ಅಣ್ಣಗಳೆಲ್ಲಕ್ಕೂ ಮರಣವಹಾಗ ಮದವಳಿಗೆಯ ಮದವಳಿಗೆ ಹೋದನೆಂದುಕೊಂಡ. ಒಂದು ಕಡೆಯಲ್ಲಿ ತಾ ಒಂದು ಕಡೆಯಾದ ಪರಿಯ ನೋಡಾ! ಗಂಡನೊಂದಾಗಿ ಹೋದವರ ಮಿಂಡ ಉಳುಹಿಸಿಕೊಂಡ ಪರಿಯ ನೋಡಾ! ಮಿಂಡನೊಂದಾಗಿ ಗಂಡನ ಕೂಡಿಕೊಂಬ ಉಂಡ ಮುಂಡೆಯರತನವ ಕಂಡು ನಾನಂಜುವೆ, ನಾರಾಯಣಪ್ರಿಯ ರಾಮನಾಥಾ.
--------------
ಗುಪ್ತ ಮಂಚಣ್ಣ
ಬಿರಿದ ಕಟ್ಟಿದವನಿದ್ದಂತೆ ಕಟ್ಟಿಸಿಕೊಂಬ ಕೈದುವಿಂಗೇನು ಒಚ್ಚೆ ಕಟ್ಟಿದವಂಗಲ್ಲದೆ? ಜ್ಞಾನವರಿತೆಹೆನೆಂಬ ಭಾವಿಗಲ್ಲದೆ ನಿರ್ಭಾವಿಗುಂಟೆ ಬಂಧ ಮೋಕ್ಷ ಕರ್ಮಂಗಳೆಂಬವು? ಇದರಂಗದ ಸಂಗ ಕರಿ ಮುಕುರ ನ್ಯಾಯ. ಪರಿಪೂರ್ಣ ಪರಂಜ್ಯೋತಿ ಅಘನಾಶನ ನಾರಾಯಣಪ್ರಿಯ ರಾಮನಾಥಾ.
--------------
ಗುಪ್ತ ಮಂಚಣ್ಣ
ಬೆಲ್ಲದಿಂದಾದ ಸಕ್ಕರೆ ತವರಾಜಗೂಳ ಇವೆಲ್ಲವು ಅಲ್ಲಿ ಒದಗಿದವಲ್ಲದೆ ಬೇರೆ ಮತ್ತೊಂದರಲ್ಲಿ ಒದಗಿದವೆ? ಇವರಂದವ ತಿಳಿದು ನೋಡಲಾಗಿ ಹಿಂಗದ ದೈವಕ್ಕೆ ಕೊಂಡಾಡಲೇತಕ್ಕೆ? ಸಂದಳಿದಭಂಗಂಗೆ ಅದು ನಿಂದಲ್ಲಿಯೆ ತಾನು ನಾರಾಯಣಪ್ರಿಯ ರಾಮನಾಥಾ.
--------------
ಗುಪ್ತ ಮಂಚಣ್ಣ
ಬ್ರಹ್ಮ ಅಂಡಿಂಗೆ ಒಡೆಯನಾದಲ್ಲಿ, ವಿಷ್ಣು ಖಂಡಿಂಗೆ ಒಡೆಯನಾದಲ್ಲಿ, ರುದ್ರ ಮಂಡೆಗೆ ಒಡೆಯನಾದಲ್ಲಿ ಅಂಡು ಆಧಾರ, ಖಂಡಿ ಸ್ಥಿತಿ, ಮಂಡೆ ಮರಣ. ಇಂತೀ ಮೂವರ ಅಂದವನರಿತ ಮತ್ತೆ ಕೊಂಡಾಡಲೇತಕ್ಕೆ? ಬೇರೊಂದು ಲಿಂಗವುಂಟೆಂದು ಮೂವರ ಹಂಗ ಹರಿದಲ್ಲದೆ ಪ್ರಾಣಲಿಂಗಿಯಲ್ಲ ನಾರಾಯಣಪ್ರಿಯ ರಾಮನಾಥಾ.
--------------
ಗುಪ್ತ ಮಂಚಣ್ಣ
ಬಿತ್ತು ರಸವ ಮೆದ್ದಾಗ ಹಣ್ಣಿನ ಹಂಗು ಹರಿಯಿತ್ತು. ಬಲ್ಲವ ಗೆಲ್ಲ ಸೋಲವ ನುಡಿಯಲಾಗಿ ಬಲ್ಲತನ ಅಲ್ಲಿಯೇ ಅಡಗಿತ್ತು. ಬೆಲ್ಲದ ಸಿಹಿಯಂತೆ ಬಲ್ಲವನ ಇರವು, ಎಲ್ಲಕ್ಕೂ ಸರಿ, ನಾರಾಯಣಪ್ರಿಯ ರಾಮನಾಥಾ.
--------------
ಗುಪ್ತ ಮಂಚಣ್ಣ
ಬಿತ್ತಿದ ಬೆಳೆದ ಪೃಥ್ವಿ ನುಂಗಿದಾಗ ಬಿತ್ತದ ವಟ್ಟ ಎಂತಪ್ಪುದೋ? ಇಷ್ಟಲಿಂಗವ ಚಿತ್ತ ನುಂಗಿದಾಗ ಭಕ್ತಿಯ ಹೊಲ ಎಂತಪ್ಪುದೊ? ಮಾರ್ಗವ ಕೇಳುವ ಶಿಷ್ಯ ಪ್ರತ್ಯುತ್ತರಗೆಯ್ದಲ್ಲಿ ಭೃತ್ಯನಹ ಪರಿಯಿನ್ನೆಂತೊ? ಇದರಚ್ಚುಗವ ನೋಡಾ, ನಾರಾಯಣಪ್ರಿಯ ರಾಮನಾಥಾ.
--------------
ಗುಪ್ತ ಮಂಚಣ್ಣ
ಬ್ರಹ್ಮ ಆಧಾರ ಚಕ್ರವಾದಲ್ಲಿ, ವಿಷ್ಣು ಯೋನಿಯಾದಲ್ಲಿ, ರುದ್ರ ಪ್ರಜಾಪತಿಯಾಗಿ ಸಂಯೋಗವಾದಲ್ಲಿ ಜಗದ ವ್ಯಾಪಾರ. ಇದು ಕಾರಣ, ತಲ್ಲೀಯವಾಗಲ್ಪಟ್ಟುದು ಲಿಂಗವೆಂದು ಹಿಂಗಿದೆ. ಅವನ ಇತ್ತ ಸಂಗದ ನಿಜವೇ ಆದೆ. ನಾರಾಯಣಪ್ರಿಯ ರಾಮನಾಥನಲ್ಲಿ ನಾಮರೂಪು ಲೇಪವಾದ ಶರಣ.
--------------
ಗುಪ್ತ ಮಂಚಣ್ಣ
ಬ್ರಹ್ಮ ಮಣಿಯಾದ ವಿಷ್ಣು ಬಲಿಯಾದ ಸಕಲ ದೇವತಾ ಕುಲವೆಲ್ಲ ಗೊರುವ ದಾರವಾದರು ವ್ಯಾಪಾರವೆಂಬ ಹೊಳೆಯಲ್ಲಿ ಬೀಸಲಾಗಿ ಸಿಕ್ಕಿತ್ತು ಜೀವವೆಂಬ ಮತ್ಸ ್ಯ. ಆ ಮತ್ಸ ್ಯಕ್ಕೆ ಕಣ್ಣು ಮೂರು, ಬಾಯಿ ಐದು, ಗರಿ ಹದಿನಾರು, ಹಲ್ಲು ಎಂಟು, ಆ ಹೊಲಸಿನ ಮುಳ್ಳು ಲೆಕ್ಕವಿಲ್ಲ. ಕತ್ತಿಗಳವಡದು ಬೆಂಕಿಗೆ ಬೇಯದು. ಈ ಶಂಕೆಯ ಇನ್ನಾರಿಗೆ ಹೇಳುವೆ, ನಾರಾಯಣಪ್ರಿಯ ರಾಮನಾಥಾ.
--------------
ಗುಪ್ತ ಮಂಚಣ್ಣ