ಅಥವಾ
(2) (5) (1) (2) (4) (0) (0) (0) (5) (0) (1) (0) (0) (0) ಅಂ (0) ಅಃ (0) (25) (0) (4) (0) (0) (1) (0) (2) (0) (0) (0) (0) (1) (0) (0) (4) (0) (0) (0) (7) (2) (0) (9) (2) (5) (1) (1) (0) (4) (4) (0) (0) (4) (3) (0)

ಪದದಿಂದ ಪ್ರಾರಂಭವಾಗುವ ವಚನಗಳು:

ಮರುಳನ ಊಟದಂತೆ, ಮಯೂರನ ನಿದ್ರೆಯಂತೆ, ಮಾರ್ತಾಂಡನ ಕಿರಣದಂತೆ, ಸ್ಫಟಿಕದ ಘಟದಂತೆ, ಕಟಕದಲ್ಲಿ ತೋರುವ ಅಸಿಯ ರಸೆಯಂತೆ, ಹೊದ್ದಿಯೂ ಹೊದ್ದದಂತೆ, ಇದ್ದೂ ಇಲ್ಲದಂತೆ, ಕಂಡೂ ಕಾಣದಂತೆ ಕೇಳಿಯೂ ಕೇಳದಂತೆ, ಇಪ್ಪ ಸುಳಿವ ಜಂಗಮಮೂರ್ತಿಯ ಕಂಡು ನಮೋ ನಮೋ ಎಂಬೆ ನಾರಾಯಣಪ್ರಿಯ ರಾಮನಾಥಾ.
--------------
ಗುಪ್ತ ಮಂಚಣ್ಣ
ಮತ್ರ್ಯಲೋಕವ ಪಾವನವ ಮಾಡುವೆನೆಂದು ಸುಳಿವ ವಿರಕ್ತ ಜಂಗಮದಿರವು ಹೇಗಿರಬೇಕೆಂದಡೆ: ಕಲ್ಲಿನ ಮೇಲೆ ಹೊಯ್ದ ನೀರಿನಂತಿರಬೇಕು. ಪಥವಿಲ್ಲದ ಪಯಣವ ಹೋಗಿ ಗತಿಗೆಟ್ಟವನಂತಿರಬೇಕು. ಶ್ರುತಿಯಡಗಿದ ನಾದದ ಪರಿಯಂತಿರಬೇಕು. ಹುರಿದ ಬೀಜದ ಒಳಗಿನಂತಿರಬೇಕು. ಅದಾವಂಗೂ ಅಸಾಧ್ಯ ನೋಡಾ, ನಾರಾಯಣಪ್ರಿಯ ರಾಮನಾಥಾ.
--------------
ಗುಪ್ತ ಮಂಚಣ್ಣ
ಮಾತಿನಲ್ಲಿ ಬಲ್ಲೋತ್ತರವಂತರೆಲ್ಲರೂ ಆತನನರಿದುದಿಲ್ಲ ಆತ ಏತರೊಳಗೂ ಸಿಕ್ಕದ ಅಜಾತ ಶಂಭು. ಆತನ ನೀತಿಯನರಿವುದಕ್ಕೆ ಅಸುರ ಕರ್ಮವ ಬಿಟ್ಟು ವೇಷದಿಂದಾದ ಘಾತಕತನವನೊಲ್ಲದೆ ಭಕ್ತಿಯೆಂಬ ಆಶೆ ಕುರಿತು ಪೋಷಣವ ಹೊರೆಯದೆ ನಿಜ ತತ್ವದ ಆಶೆಯೇ ಸಾಕಾರವಾಗಿ ಅರಿದ ಆತ್ಮ ಕರಿಗೊಂಡಲ್ಲಿ ಹರಿಪ್ರಿಯ ಅಘೋರನಾಶನ ರಾಮನಾಥಾ.
--------------
ಗುಪ್ತ ಮಂಚಣ್ಣ
ಮಣ್ಣ ಹೂಟೆ ಮಳೆಗೆ ಮುಚ್ಚುವುದಲ್ಲದೆ ಕಲ್ಲ ಹೂಟೆ ಮುಚ್ಚುವುದೆ? ಬಲ್ಲವನಲ್ಲಿ ಸೋಂಕು ಸುಳಿದಡೆ ಅಲ್ಲ ಅಹುದೆಂದು ತಿಳಿಯಬಲ್ಲವ ಎಲ್ಲವನು ಬಲ್ಲ, ಮಣ್ಣಿನ ಬಿರಯ ತೆರದಂತೆ. ಬಲ್ಲತನವಿಲ್ಲದವನ ಅನುಭಾವಕೂಟ ಕಲ್ಲಿನ ಹೋಟೆಯಂತೆ, ನಾರಾಯಣಪ್ರಿಯ ರಾಮನಾಥಾ.
--------------
ಗುಪ್ತ ಮಂಚಣ್ಣ
ಮಾಧವನ ಮನೆಯ ಬಾಗಿಲಿನಲ್ಲಿ ಮಹಾಜನಂಗಳೆಲ್ಲರು ಕೂಡಿ ಹೋಮವನಿಕ್ಕಲಾಗಿ, ಎದ್ದಿತ್ತು ಉರಿ. ಮೂವರ ಮಸ್ತಕವ ಮುಟ್ಟಿ, ಆ ಹೋಮದ ಹೊಗೆ ತಾಗಿ ನಾಲ್ವರ ಕಣ್ಣು ಕೆಟ್ಟಿತ್ತು. ಆ ಹೋಮದ ದಿಕ್ಕಿನ ಕುಂಭ ಉರುಗಿಹೋಗಲಾಗಿ ತೊರೆ ಹರಿಯಿತ್ತು. ಕಾಲ ಕಡಹು ಆರಿಗೂ ಆಗದು. ಎಲ್ಲಾ ಠಾವಿನಲ್ಲಿ ಮಡುಮಯವಾಯಿತ್ತು. ಮಡುವಿನ ಮೊಸಳೆ ತಡಿಯಲ್ಲಿ ಆರನೂ ನಿಲಲೀಸದೆ ಕಡಿದು ನುಂಗಿಹುದಿನ್ನೇವೆ. ಮೊಸಳೆಯ ಹಿಡಿವರ ಕಾಣೆ, ಮಡುವ ಒಡೆವರ ಕಾಣೆ, ಹೋಮವ ಕೆಡಿಸುವರ ಕಾಣೆ, ಮಾಧವನ ಬಾಗಿಲಿನಲ್ಲಿ ನಿಂದು ಹೋದರು ಹೊಲಬುದಪ್ಪಿ, ನಾರಾಯಣಪ್ರಿಯ ರಾಮನಾಥಾ.
--------------
ಗುಪ್ತ ಮಂಚಣ್ಣ