ಅಥವಾ
(2) (5) (1) (2) (4) (0) (0) (0) (5) (0) (1) (0) (0) (0) ಅಂ (0) ಅಃ (0) (25) (0) (4) (0) (0) (1) (0) (2) (0) (0) (0) (0) (1) (0) (0) (4) (0) (0) (0) (7) (2) (0) (9) (2) (5) (1) (1) (0) (4) (4) (0) (0) (4) (3) (0)

ಪದದಿಂದ ಪ್ರಾರಂಭವಾಗುವ ವಚನಗಳು:

ಹರಿ ಮಾಡಿದ ಭಕ್ತಿಗೆ ಕಡೆ ನಡು ಮೊದಲಿಲ್ಲ ಜಗದ ಕಂಟಕ ಬಂದಲ್ಲಿ ದಶಾವತಾರನಾಗಿ ಪಶುಪತಿಯ ಸೇವೆ ಮಾಡಿದ. ಶಶಿಶೇಖರನ ಅಲಯದಲ್ಲಿ ಪತಿಭಕ್ತಿಯಾಗಿಪ್ಪ ನಾರಾಯಣನ ಜಗವೇಷಮಂ ತಾಳಿ ಇಂತಿವರೆಲ್ಲರೂ ಎನ್ನ ರಾಮನಾಥ ಗೋವಿಂದಾ ಗೋವಿಂದಾ ಎನುತಿದ್ದರು.
--------------
ಗುಪ್ತ ಮಂಚಣ್ಣ
ಹಾಸನಿಕ್ಕುವಾತನ ಕೈಯ ತೂತಿನ ಕೊಳಪೆಯ ನೂಲು ನುಂಗಿತ್ತು. ಕಡ್ಡಿಯ ಸುತ್ತುವ ಕೂಸ ರಾಟಿಯ ಕೈ ನುಂಗಿತ್ತು. ಉಂಕೆಯ ಮಾಡುವಾತನ ಕೈಯ ಕುಂಚಿಗೆಯ ತುಂತುರು ನುಂಗಿತ್ತು. ನೆಯ್ವ ಅಣ್ಣನ ಕೈಯ ನಳಿಗೆ ನುಂಗಿತ್ತು. ಹಾಸಿನ ಕಡ್ಡಿಯ ಉಂಕೆಯ ನೆಯ್ವಾತನ ಬುದ್ಧಿಯ ಚಿತ್ತವ ಏನೆಂದರಿಯದ ಕೂಸು ನುಂಗಿತ್ತು. ನಾರಾಯಣಪ್ರಿಯ ರಾಮನಾಥನಲ್ಲಿ ಐಕ್ಯಾನುಭಾವಿಯಾದ ಶರಣ.
--------------
ಗುಪ್ತ ಮಂಚಣ್ಣ
ಹರಿ ಬಂದ ವಿಧಿ, ಬ್ರಹ್ಮ ಬಂದ ಭವ, ಜಿನ ಬಂದ ಲಜ್ಜೆ. ದೃಷ್ಟವ ಕಂಡೇಕೆ ಮಿಥ್ಯದಿಂದ ಹೋರುವರು? ಆದಿ ವಸ್ತುವಿನ ಕಾಲುರಂಗು ವಿಷ್ಣು, ಅರೆರಂಗು ಬ್ರಹ್ಮ, ಸಂದೇಹ ಮಾತ್ರ ಜಿನ. ಇವರ ಭಂಗಿತವ ಹೇಳಲೇಕೆ? ಇವರ ಸಂದೇಹದ ಮಂದಮತಿಯ ದಿಂಡೆಯತನದಿಂದ ಹೋರುವ ಭಂಡರ ತಿಳಿ, ನಾರಾಯಣಪ್ರಿಯ ರಾಮನಾಥನಲ್ಲಿ ಗುಪ್ತಭಕ್ತರಪ್ಪ ಸತ್ಯವಂತರು.
--------------
ಗುಪ್ತ ಮಂಚಣ್ಣ