ಅಥವಾ
(5) (3) (3) (0) (0) (0) (0) (0) (5) (0) (0) (3) (0) (0) ಅಂ (1) ಅಃ (1) (5) (0) (2) (1) (0) (1) (0) (4) (0) (0) (0) (0) (0) (0) (0) (1) (0) (0) (0) (3) (2) (0) (5) (3) (3) (1) (0) (0) (2) (1) (2) (2) (3) (6) (0)

ಪದದಿಂದ ಪ್ರಾರಂಭವಾಗುವ ವಚನಗಳು:

ಅಲ್ಲಿಯಬಹುರೂಪ ಇಲ್ಲಿಗೆ ಬಂದಿತ್ತು. ಇಲ್ಲಿಯ ಬಹುರೂಪ ಎಲ್ಲಿ ಅಡಗಿತ್ತೋ? ಎನ್ನ ಬಹುರೂಪ ಬಲ್ಲವರಾರೋ ? ನಾದ ಹರಿದು ಸ್ವರವು ಸೂಸಿದ ಬಳಿಕ ಈ ಬಹುರೂಪ ಬಲ್ಲವರಾರೋ ? ರೇಕಣ್ಣಪ್ರಿಯ ನಾಗಿನಾಥನಲ್ಲಿ ಬಸವಣ್ಣನಿಂದ ಬದುಕಿತೀ ಲೋಕವೆಲ್ಲ.
--------------
ಬಹುರೂಪಿ ಚೌಡಯ್ಯ
ಅಪ್ಪಾ ಬೊಪ್ಪಾ ಚಿಕ್ಕ ಚೋಹಮಂ ತೊಟ್ಟು ಮುಖಕ್ಕೆ ಹೊತ್ತಿಗೊಂದು ಪರಿಯ ಬಚ್ಚಣೆಯನಿಕ್ಕಿ ಮತ್ತದನು ತಲೆಯಲ್ಲಿ ಹೊತ್ತು, ತಪ್ಪಿ ಹೆಜ್ಜೆಯನಿಕ್ಕಿ ಆಡುತ್ತಿದ್ದ ರೇಕಣ್ಣಪ್ರಿಯ ನಾಗಿನಾಥನಲ್ಲಿ ಹೊತ್ತುಹೋಗದ ಬಹುರೂಪವ.
--------------
ಬಹುರೂಪಿ ಚೌಡಯ್ಯ
ಅನುದಿನಂಗಳೆಂಬವು ಪ್ರಣತೆಯಾಗಿ, ವರುಷವೆಂಬವು ಬತ್ತಿಯಾಗಿ, ಜೀವಜಾತಿಯ ಬೆಳಗ ಬೆಳಗಿನಲರಿಯಬೇಕು. ಬೆಳಗುಳ್ಳಲ್ಲಿ ಆತ ನಡೆಸಿದಂತೆ ನಡೆಯಬೇಕು. ಬೆಳಗುಳ್ಳಲ್ಲಿ ಆತ ನುಡಿಸಿದಂತೆ ನುಡಿಯಬೇಕು. ಎಣ್ಣೆಯೆಂಬ ಜವ್ವನ ಸವೆಯದ ಮುನ್ನ, ಬೆಳಗು ಕತ್ತಲೆಯಾಗದ ಮುನ್ನ ರೇಕಣ್ಣಪ್ರಿಯ ನಾಗಿನಾಥ್ಞಿ, ಬೆಳಗ ಬೆಳಗಿನಲರಿಯಬೇಕು.
--------------
ಬಹುರೂಪಿ ಚೌಡಯ್ಯ
ಅಂಡಜ ಪೃಥ್ವಿ ಉದಯಿಸದಂದು ಭೂಮಂಡಲವಾಗದಂದು ಪಿಂಡಜ ಬೀಜವ ನವಬ್ರಹ್ಮರು ತಾರದಂದು ನವಖಂಡವ ರಚಿಸದಂದು ಪೃಥ್ವಿ ಅಪ್ಪು ತೇಜ ವಾಯು ಆಕಾಶವೆಂಬ ಪಂಚಭೂತಾದಿ [ಸ್ಥ]ಳವಿಡದಂದು ಅನುಕರಿಸದಂದು, ರೂಹಿಸದಂದು ಅತಿಮಥನ ಒಡ್ಡದಂದು ಇಪ್ಪತ್ತೈದರ ಸ್ಥಳವ ಹೆಸರುಗೊಂಡು ಕರೆಯದಂದು ಎನಗೆ ತನಗೆಂಬಿಚ್ಫೆ ತನ್ನ ತಲೆದೋರದಂದು ಋಷಿಗಳಾಶ್ರಯ ಲೋಕದಲ್ಲಿ ಹರಿಯದಂದು ಅಂದು ಬಸವನಿದ್ದ ಕಾಣಾ, ರೇಕಣ್ಣಪ್ರಿಯ ನಾಗಿನಾಥಾ.
--------------
ಬಹುರೂಪಿ ಚೌಡಯ್ಯ
ಅರೆಯ ಆಲಯದಲ್ಲಿ ಕರಿಗೊಳಿಸುವ ಶ್ರವಣವೆ ಮೇಲಹ ಆಕಾಶವನಪ್ಪಲು ಉಲುಹು ನಿರ್ಯಾತವಾಗಿ ಚಿತ್ತ ಸಮಾಧಾನವನೈದಲು ಕಾಲ ಕರ್ಮ ಭವಾರಣ್ಯವ ಗೆಲುವುದು ಎನಗರಿದೇನಯ್ಯ, ರೇಕಣ್ಣಪ್ರಿಯ ನಾಗಿನಾಥಾ.
--------------
ಬಹುರೂಪಿ ಚೌಡಯ್ಯ