ಅಥವಾ
(5) (3) (3) (0) (0) (0) (0) (0) (5) (0) (0) (3) (0) (0) ಅಂ (1) ಅಃ (1) (5) (0) (2) (1) (0) (1) (0) (4) (0) (0) (0) (0) (0) (0) (0) (1) (0) (0) (0) (3) (2) (0) (5) (3) (3) (1) (0) (0) (2) (1) (2) (2) (3) (6) (0)

ಪದದಿಂದ ಪ್ರಾರಂಭವಾಗುವ ವಚನಗಳು:

ಇನ್ನಾಡುವೆ ಜಂಗಮ ಬಹುರೂಪ, ಕಲ್ಯಾಣವೆಲ್ಲಾ ಅರಿಯಬೇಕೆಂದು. ಎನ್ನ ಬಹುರೂಪ ಕಾಮ ಹೊಯ್ದುಕೊಂಡಿಯೆಂದಡೆ ಪ್ರಸಾದವ ಮಾಡಿಕೊಟ್ಟಡೆ ಇದು ಬಸವನ ಪ್ರಸಾದವೆಂದು ಕೈಕೊಂಡೆ ಕಾಣಾ. ರೇಕಣ್ಣಪ್ರಿಯ ನಾಗಿನಾಥಾ ಬಸವನಿಂದ ಬದುಕಿತೀ ಲೋಕವೆಲ್ಲಾ.
--------------
ಬಹುರೂಪಿ ಚೌಡಯ್ಯ
ಇನ್ನಾಡುವೆ ಜಂಗಮ ಬಹುರೂಪ, ಅಲ್ಲಮನಂತೆ ಆಡುವೆ ಬಹುರೂಪ. ಅಜಗಣ್ಣನಂತೆ ಆಡುವೆ ಬಹುರೂಪ. ಮುಖವಾಡದಯ್ಯಗಳಂತೆ ಆಡುವೆ ಬಹುರೂಪ. ಪುರುಷಾಂಗಣವ ಮೆಟ್ಟಿ ಆಡುವೆ ಬಹುರೂಪ. ರೇಕಣ್ಣಪ್ರಿಯ ನಾಗಿನಾಥಾ ಬಸವನಿಂದ ಬದುಕಿತೀ ಲೋಕವೆಲ್ಲಾ.
--------------
ಬಹುರೂಪಿ ಚೌಡಯ್ಯ
ಇಂದು ಬಂದ ಬಹುರೂಪವ ನೋಡಿರಯ್ಯಾ. ಗತಿಯ ಹೊದ್ದದೆ, ಮತಿಯ ಹೊದ್ದದೆ, ಸ್ಥಿತಿಯ ಹೊದ್ದದೆ ಸ್ಥಾನವ ಹೊದ್ದದೆ, ಐವರು ಕಟ್ಟಿದ ಕಟ್ಟಳೆಯ ಮೀರಿ ನಾನಾಡುವೆ ಬಹುರೂಪವ. ರೇಕಣ್ಣಪ್ರಿಯ ನಾಗಿನಾಥಾ ಬಸವಣ್ಣನಿಂದ ಬದುಕಿದೆ.
--------------
ಬಹುರೂಪಿ ಚೌಡಯ್ಯ