ಅಥವಾ
(5) (3) (3) (0) (0) (0) (0) (0) (5) (0) (0) (3) (0) (0) ಅಂ (1) ಅಃ (1) (5) (0) (2) (1) (0) (1) (0) (4) (0) (0) (0) (0) (0) (0) (0) (1) (0) (0) (0) (3) (2) (0) (5) (3) (3) (1) (0) (0) (2) (1) (2) (2) (3) (6) (0)

ಪದದಿಂದ ಪ್ರಾರಂಭವಾಗುವ ವಚನಗಳು:

ಕಾಮನ ಮಂದಿರದಡವಿಯೊಳಗೆ ಶುಕ್ಲಶೋಣಿತವೆಂಬ ಮಡಕೆಯ ಮಾಡಿ ಮೂತ್ರ ಶ್ಲೇಷ್ಮ ಅಮೇಧ್ಯವೆಂಬ ಪಾಕದ್ರವ್ಯಂಗಳ ಮಡಕೆಯಲ್ಲಿ ನಿಶ್ಚಯಿಸಿ ಆ ಮಡಕೆಯನೊಡೆದಾ[ಗಲೆ ಭಕ್ತ] ಕಾಣಾ. ರೇಕಣ್ಣಪ್ರಿಯ ನಾಗಿನಾಥಾ ಬಸವಣ್ಣನಿಂದ ಬದುಕಿದೆನು.
--------------
ಬಹುರೂಪಿ ಚೌಡಯ್ಯ
ಕುಲವ ಕೂಡದೆ ಕೋಪವಡಗಿ ಅನ್ಯಹೇಸಿಕೆ ಮತ್ತೆ ಐಕ್ಯವಾದ ನಿರುತ ಭರಿತದ ಪರಮಸುಖ ಎನಗೆಂದಪ್ಪುದೊ? ಕಾಯದಂದುಗ ಬಿಟ್ಟು ನಿರಾಸೆಯಲ್ಲಿ ನೆರೆ ಸಲು[ಹಿ]ಂದ ಎನ್ನ ನಚ್ಚಿನ ಲಿಂಗ ಮೆಚ್ಚಿನ ಘನಕ್ಕೆ ಘನಲಿಂಗವಾಗಿ ರೇಕಣ್ಣಪ್ರಿಯ ನಾಗಿನಾಥನಯಸವಿನೊಲವೆನಗಪ್ಪುದೆಂದೋ ?
--------------
ಬಹುರೂಪಿ ಚೌಡಯ್ಯ
ಕಳ್ಳನ ಕೈಯಲ್ಲಿ ಒಂದು ಒಳ್ಳಿಹ ರತ್ನವ ಕಂಡಡೆ ಎಲ್ಲರೂ ಬಂದು ತಲೆವಿಡಿವರಯ್ಯಾ. ಆ ರತ್ನವ ರತ್ನವ್ಯವಹಾರಿ ಕೊಟ್ಟು ಕೊಂಡಡೆ ಆರೂ ಬಾಯಲೆತ್ತಲಮ್ಮರು. ಶೈವ ಗುರುವಿನ ಕೈಯಲ್ಲಿ ಸಾಹಿತ್ಯವಾದ ಲಿಂಗವನು ವೀರಶೈವ ಗುರುವಿನ ಕೈಯಲ್ಲಿ ಕೊಟ್ಟು ಮರಳಿ ಕೊಂಡಡೆ ಆತ ಇಹಲೋಕ ಪೂಜ್ಯನು, ಪರಲೋಕ ಪೂಜ್ಯನು. ನಿಮ್ಮಾಣೆ, ನಿಮ್ಮ ಪ್ರಮಥರಾಣೆ ತಪ್ಪದು ರೇಕಣ್ಣಪ್ರಿಯ ನಾಗಿನಾಥಾ.
--------------
ಬಹುರೂಪಿ ಚೌಡಯ್ಯ
ಕೈಯ ಮರದು ಕಾದುವ ಅಂಕವದೇನೊ ? ಭಾವ ಮರದು ನೋಡುವ ನೋಟವದೇನೊ ? ಭಯವ ಮರದು ಮಾಡುವ ಭಕ್ತಿಯದೇನೊ ? ರೇಕಣ್ಣಪ್ರಿಯ ನಾಗಿನಾಥನಲ್ಲಿ ಗುರುವ ಮರದು ಲಿಂಗವನೊಲಿಸಿದೆನೆಂದಡೆ ಆ ಉಭಯ ಗುರುಲಿಂಗವೆರಡೂ ಇಲ್ಲ.
--------------
ಬಹುರೂಪಿ ಚೌಡಯ್ಯ
ಕಲ್ಲ ಒಳಗಣ ಕಿಚ್ಚಿಂಗೂ ಬೂದಿಯಿಲ್ಲದಂತಿರಿಸಿದೆ ಅಯ್ಯಾ ಎನ್ನ, ಲಿಂಗದೊಳಗೆ. ಗಾಳಿಗಂಧ ಕೂಡಿದಂತಿರಿಸಯ್ಯಾ ಎನ್ನ, ಲಿಂಗದೊಳಗಂಗವನು. ರೇಕಣ್ಣಪ್ರಿಯ ನಾಗಿನಾಥಾ, ನಿಮ್ಮ ಒಲವಿನೊಳಗಣ ನಿಲವು ಸೊಡರ ಬೆಳಗಿನಲಡಗಿದ ಎಣ್ಣೆಯಂತೆ ಇರಿಸಯ್ಯಾ, ಎನ್ನ ಲಿಂಗದೊಳಗಂಗವನು.
--------------
ಬಹುರೂಪಿ ಚೌಡಯ್ಯ