ಅಥವಾ
(5) (3) (3) (0) (0) (0) (0) (0) (5) (0) (0) (3) (0) (0) ಅಂ (1) ಅಃ (1) (5) (0) (2) (1) (0) (1) (0) (4) (0) (0) (0) (0) (0) (0) (0) (1) (0) (0) (0) (3) (2) (0) (5) (3) (3) (1) (0) (0) (2) (1) (2) (2) (3) (6) (0)

ಪದದಿಂದ ಪ್ರಾರಂಭವಾಗುವ ವಚನಗಳು:

ಲಿಂಗನಿಷೆ*ಯಿಲ್ಲದವರಂಗಳವ ಮೆಟ್ಟಲಾಗದು. ಜಂಗಮಪ್ರೇಮವಿಲ್ಲದವರೊಡನೆ ಮಾತನಾಡಲಾಗದು. ಪ್ರಸಾದವ ಪಡೆಯದವರ ಸಮಪಙ್ಞ್ತಯಲ್ಲಿ ಕುಳಿತು ಪ್ರಸಾದ ಭೋಗವ ಮಾಡಲಾಗದು. ಇಂತೀ ಲಿಂಗ ಜಂಗಮ ಪ್ರಸಾದ ವಿಶ್ವಾಸವಿಲ್ಲದವರಿಗೆ ನರಕ ತಪ್ಪದು. ಅಂಥವರ ಸಂಗವ ಸತ್ಯಸಜ್ಜನರು ಮಾಡಲಾಗದು. ಅದೇನು ಕಾರಣವೆಂದಡೆ : ಪ್ರಾಣಲಿಂಗ ಶಿಲಾಭೇದಂ ಚರಲಿಂಗಂತು ಯೋ ನರಃ | ಪ್ರಸಾದಂ ದ್ರವ್ಯ ಭಾವೇನ ರೌರವ ನರಕಂ ವ್ರಜೇತ್ || ಎಂದುದಾಗಿ, ಇಂತೀ ಲಿಂಗ ಜಂಗಮ ಪ್ರಸಾದ ಸದ್ಭಾವ ನಂಬುಗೆಯ ಭಕ್ತಿ ಬೆಸುಗೆಯಿಲ್ಲದವರ ಎನಗೆ ತೋರದಿರಯ್ಯ ರೇಕಣ್ಣಪ್ರಿಯ ನಾಗಿನಾಥಾ
--------------
ಬಹುರೂಪಿ ಚೌಡಯ್ಯ
ಲಿಂಗ ಲಿಂಗೈಕ್ಯನೆಂಬ, ಶಬುದಲಿಂಗೈಕ್ಯಂಗೆ ಭಕ್ತಿಯೆಂತೊ ? ಕಿರಿದಿರಲಿ ಅರಿವು ಕರಘಟಿಸಿ ಘನತೆಗೆ ತೆರಹು ಮರಹು ಕುರುಹು ಕೂಡದ ಬೆರಗು ತೋರದೆ ? ಕೈಮಾಟ ಮಾಟದ ಕೂಟ ನಿಂದಲ್ಲಿ ತಂದಿಂಕೆಡೆಯಾಗಲೊಲ್ಲದೆ ಕುಳ್ಳಿದ್ದಾತ ಭೂತಲಿಂಗೈಕ್ಯ[ನು], ಕಾಯದಲ್ಲಿ ಲಿಂಗೈಕ್ಯನು, ಜೀವದಲ್ಲಿ ಲಿಂಗೈಕ್ಯನು. ಕಾಯ ಜೀವದ ಸಂದಳಿದ ಲಿಂಗಪ್ರಾಣಿಯು ಒಂಬತ್ತನೆಯ ಉತ್ತಮಾಂಗವಲ್ಲದೆ ಹತ್ತನೆಯ ಉತ್ತಮಾಂಗದಲ್ಲಿ ಬೆಳಗಾದ ಬಾಗಿಲನರಿದಾತನೆ ಜೀವಲಿಂಗೈಕ್ಯ. ಕಾರಮೇಘವು ನೀರಲ್ಲಿ ಬೆರಸಿ ಹರಿದುಹೋದ ಪರಿಯಂತೆ ಸಾರಿದ ಶರಣ ಲಿಂಗಸಂಗಿಯಾಗಿರ್ದ. ವಾಯುಮೇಘವು ನೀರು ಬೆರಸಿ ನಿರಾಳವಾಯಿತ್ತ ಕಂಡೆ. ರೇಕಣ್ಣಪ್ರಿಯ ನಾಗಿನಾಥಾ ಶರಣನುಪಮೆಯಿಲ್ಲ.
--------------
ಬಹುರೂಪಿ ಚೌಡಯ್ಯ