ಅಥವಾ
(5) (3) (3) (0) (0) (0) (0) (0) (5) (0) (0) (3) (0) (0) ಅಂ (1) ಅಃ (1) (5) (0) (2) (1) (0) (1) (0) (4) (0) (0) (0) (0) (0) (0) (0) (1) (0) (0) (0) (3) (2) (0) (5) (3) (3) (1) (0) (0) (2) (1) (2) (2) (3) (6) (0)

ಪದದಿಂದ ಪ್ರಾರಂಭವಾಗುವ ವಚನಗಳು:

ಆಡುವಡೆ ಸದಾಚಾರಿಗಳ ಕೂಡೆ ಆಡುವದು. ನುಡಿವಡೆ ಜಂಗಮಪ್ರೇಮಿಯ ಕೂಡೆ ನುಡಿವುದು. ಮಾತಾಡುವಡೆ ಪ್ರಸಾದಿಯ ಕೂಡೆ ಮಾತನಾಡುವದು. ಭಕ್ತಿಹೀನನ ಕಂಡಡೆ ಮನ ಮುನಿಸ ಮಾಡಿಸಾ ರೇಕಣ್ಣಪ್ರಿಯ ನಾಗಿನಾಥ್ಞಿ.
--------------
ಬಹುರೂಪಿ ಚೌಡಯ್ಯ
ಆದಿಶುದ್ಧ ಆಚಾರಲಿಂಗವೆನ್ನುತ್ತಿರ್ಪರೆಲ್ಲರು ಅನಾದಿಯ ಲಿಂಗದ ಭೇದವನರಿಯರಾಗಿ, ನಾಸಿಕಪುಟದ ಆಶ್ರಯದಲ್ಲಿ ಲಿಂಗವನರಿಯರಾಗಿ. ಕೆಲಬರಿಗೆ ಲಿಂಗವು ಹಲಬರಿಗೆ ದೂಷಣೆಯ ಮಾಡಿ ಹೋದ ಲಿಂಗವನರಿಯರಾಗಿ ದೂಷಣೆ ಪಥ್ಯವಾಗಿ, ಮನದಾಶ್ರಯಕ್ಕೆ ತಂದಾತ, ರೇಕಣ್ಣಪ್ರಿಯ ನಾಗಿನಾಥ. ಬಸವಣ್ಣನಿಂದ ಬದುಕಿದೆ.
--------------
ಬಹುರೂಪಿ ಚೌಡಯ್ಯ
ಆಡಿದೆನೈವರನೊಡಗೂಡಿ. ಮಾಡಿದೆ ಶರ್ವನ ಸಂಗವ. ನೋಡಿದೆ ನಾ ನೀನೆಂಬ ಭೇದವಳಿದು. ಕೂಡಿದೆ ಕೇಡಿಲ್ಲದ ಕೂಟವ. ಆಟ ಮಾಯಿತ್ತು, ನೋಟ ತೀರಿತ್ತು ರೇಕಣ್ಣಪ್ರಿಯ ನಾಗಿನಾಥಾ.
--------------
ಬಹುರೂಪಿ ಚೌಡಯ್ಯ