ಅಥವಾ
(2) (1) (28) (5) (0) (0) (0) (0) (0) (0) (0) (0) (0) (0) ಅಂ (1) ಅಃ (1) (2) (0) (2) (0) (0) (0) (0) (0) (0) (0) (0) (0) (0) (0) (0) (3) (0) (1) (0) (1) (3) (0) (43) (2) (109) (0) (0) (0) (0) (0) (3) (0) (3) (0) (0)

ಪದದಿಂದ ಪ್ರಾರಂಭವಾಗುವ ವಚನಗಳು:

ಇಂತು ಭಕ್ತನ ಪದಿನೈದುಂ ಮಾಹೇಶ್ವರನೊಂಬತ್ತುಂ ಪ್ರಸಾದಿ ಏಳುಂ ಪ್ರಾಣಲಿಂಗಿಯೈದುಂ ಶರಣನ ನಾಲ್ಕುಮೈಕ್ಯನ ನಾಲ್ಕುಮಿದುಂ ನಿನ್ನ ತೂರ್ಯಕಳೇವರಮಯ್ಯ, ಸಮಷ್ಟಿ ಯಿಂತೀಯಂಗಸ್ಥಲಂಗಳು ನಾಲ್ವತ್ತನಾಲ್ಕುಂ ಕೂಡಿ ನಿನ್ನ ಪೂರ್ಣಾಂಗಮಾದುದಯ್ಯಾ, ನಿರಂತರ ಪರಬ್ರಹ್ಮ ಪರಮ ಶಿವಲಿಂಗೇಶ್ವರಾ.
--------------
ಇಮ್ಮಡಿ ಮುರಿಘಾ ಗುರುಸಿದ್ಧ / ಗುರುಸಿದ್ಧಸ್ವಾಮಿ
ಇನ್ನುಮಷ್ಟವಿಧ ಸಕೀಲದೊಳೊಲಿದರ್ಪಿತ ಪ್ರಸಾದಂಗಳೊಂದರೊಳಾರಾರಾಗಲವಂ ಕೂಡಲೆಪ್ಪತ್ತೆರಡಾಗಲಾ ಪಿಂದಣರುವೆರಕ್ಕೆಗಳಂ ಕೂಡಿ ಗಣಿಸಲ್ ಸಾವಿರದೇಳ್ನೊರಿಪ್ಪತ್ತೆಂಟಾದುದೆಲ್ಲಂ ನೀನೆಯಯ್ಯಾ, ಪರಮ ಶಿವಲಿಂಗೇಶ್ವರಾ.
--------------
ಇಮ್ಮಡಿ ಮುರಿಘಾ ಗುರುಸಿದ್ಧ / ಗುರುಸಿದ್ಧಸ್ವಾಮಿ
ಇನ್ನುಂ, ಸೋವರಿಜಮಾದಾಗಸದ ಮಂಡಲತ್ರಯದ, ತದ್ಗಗನ ಧೂಮವರ್ಣದ ಷೋಡಶ ಸ್ವರಾನ್ವಿತದ, ಪದಿನಾರೆಸಳ ನಿ[ೀ]ರಲ ಕರ್ಣಿಕೆಯ, ಸೂಕ್ಷ ್ಮರಂಧ್ರಗತ ಪ್ರಣವದ ದರ್ಪಣಾಕೃತಿಯಾದ, ಯಕಾರವೆ ನಿನ್ನೀಶಾನ ಸ್ವರೂಪಮಾದುದಯ್ಯಾ, ಪರಮ ಶಿವಲಿಂಗ ಪ್ರಮಥಗಣಾಂತರಂಗಾ.
--------------
ಇಮ್ಮಡಿ ಮುರಿಘಾ ಗುರುಸಿದ್ಧ / ಗುರುಸಿದ್ಧಸ್ವಾಮಿ
ಇಂತು, ಮೂಲಪ್ರಸಾದ ನಿರೂಪಣಾನಂತರದಲ್ಲಿ ತತ್ವಪ್ರಸಾದಮಂ ಪೇಳ್ವೆನೆಂತೆನೆ- ತತ್ವಾಂತವೆನಿಸುವ ವ್ಯಂಜನರೂಪವಾದ ಹ್ ಎಂಬಕ್ಕರದಲ್ಲಿ ಆದಿಬೀಜವೆನಿಪಕಾರಮಂ ಕೂಡಿಸಿ ಹ ಎಂದಾಯಿತ್ತದಂ ಕಾರ್ಯಕಾರಣ ಸಂಜ್ಞಿತ ಬಿಂದುವಿನೊಡನೆ ಕೂಡಿಸೆ ಹಂ ಎಂದಾಯಿತ್ತೀ ಹಂ ಎಂಬಕ್ಷರವೆ ಸರ್ವ ತತ್ವಾತ್ಮಕವಾದ ತತ್ವಪ್ರಸಾದವಾದುದೆಂದು ನಿರವಿಸಿದೆಯಯ್ಯಾ, ಪರಮ ಶಿವಲಿಂಗೇಶ್ವರ
--------------
ಇಮ್ಮಡಿ ಮುರಿಘಾ ಗುರುಸಿದ್ಧ / ಗುರುಸಿದ್ಧಸ್ವಾಮಿ
ಇಂತಪ್ಪ ದಿವ್ಯಚಕ್ರಮಂಬುಜ ಪತ್ರೆ ಚಿನ್ನ ಬೆಳ್ಳಿ ತಾಮ್ರ ಮೊದಲಾದವರ ತಗಡುಗಳೊಳಗರು ಚಂದನ ಕುಂಕುಮ ಕರ್ಪೂರ ಗೋರೋಚನಾದಿ ದ್ರವ ದ್ರವ್ಯಂಗಳಿಂ ಬರೆದು ಕಂಡಿಕೆಯಂ ಮಾಡಿ ಶಿರದೊಳ್ತಳೆಯೆ ಸಮಸ್ತ ವಶ್ಯ ರೋಗಾಪಹರಣ ಭೋಗ ಮೋಕ್ಷಾದಿಗಳಪ್ಪವೆಂದುಸಿರ್ದೆಯಯ್ಯಾ, ಪರಮ ಶಿವಲಿಂಗೇಶ್ವರ ಫಣೀಶ್ವರ ಕಂಕಣ ಕರಾ.
--------------
ಇಮ್ಮಡಿ ಮುರಿಘಾ ಗುರುಸಿದ್ಧ / ಗುರುಸಿದ್ಧಸ್ವಾಮಿ
ಇಂತಷ್ಪಾಕ್ಷರಮಂತ್ರ ನಿರೂಪಣಾನಂತರದಲ್ಲಿ ನವಾಕ್ಷರ ಮಂತ್ರಮಂ ಪೇಳ್ವೆನೆಂತೆನೆ ಭೂತಾಂತ ಸಂಜ್ಞಿತ ಹಕಾರಮನುದ್ಧರಿಸಿ ಸ್ವರ ತ್ರಯೋದಶಾಂತದೊಡನೆ ಕೂಡಲ್ ಹೌ ಎನಿಸಿತ್ತು. ಸಂಜ್ಞಿತವಾದಕಾರದೊಡನೆ ಕೂಡೆ ಹ ಎನಿಸಿತ್ತು. ಹೌ ಹ ಎಂಬಿವೆರಡು ಶಕ್ತಿ ಸಂಜ್ಞಿತವಾದ ಬಿಂದುವಂ ಬೆರಸೆ ಹೌಂ ಹಂ ಎಂದೆನಿಸಿದವು. ಶಕ್ತಿ ಸಂಜ್ಞಿತವಾದ ಸ್ ಎಂಬ ವ್ಯಂಜನಂ ಮಾತ್ರಾಸಂಜ್ಞಿತವಾದ ಕಾರಮನೊಂದೆ ಸ ಎನಿಸಿ- ತೇಳನೆಯ ವರ್ಗಾಂತ್ಯಾಕ್ಷರವಾದ ವ್ ಎಂಬುದಂ ಪಿಂಪೇಳ್ದ ಸಕಾರದ ಪೂರ್ವದೊಳಿಡೆ ಸ್ವ ಎನಿಸಿತ್ತು. ವಾಯುವರ್ಗದ ಕಡೆಯ ಮ್ ಎಂಬುದನಾದಿಭೂತ ಸಂಜ್ಞಿತಮಾದಾಕಾಶ ವರ್ಗಾಂತ್ಯವಾದಕಾರದೊಡನೆ ಕೂಡೆ ಮ ಎನಿಸಿತ್ತು. ಲಯ ವರ್ಗದಾದಿಯ ಕ್ಷಕಾರಮಂ ವರುಣವರ್ಗದಾದಿಯ ತಕಾರಮುಮನುದ್ಧರಿಸಿ ಯವೆರಡರ ನಡುವೆ ಯಾಂತವಾದಾ ರ್ ಎಂಬ ವ್ಯಂಜನಮನಾದಿಬೀಜ ಸಂಜ್ಞಿತವಾದಕಾರದೊಡನೆ ಕೂಡೆ ರ ಎನಿಸಿತಿಂತು ಕ್ಷ ರ ತ ಎನಿಸಿದವು. ಸಪ್ತಮವರ್ಗದಾದಿಯಾದ ಯ್ ಎಂಬಕ್ಕರವನಾದಿಸಂಜ್ಞಿತವಾದ ಕಾರದೊಡನೆ ಕೂಡೆ ಯ ಎನಿಸಿತ್ತಾರನೆಯ ವಾಯುವರ್ಗಾಂತವಾದ ಮ್ ಎಂಬಕ್ಕರ ಮನಾದಿಸಂಜ್ಞಿತವಾದ ಕಾರದೊಡನೆ ಬೆರಸೆ ಮ ಎನಿಸಿ, ಒಂಬತುಮಮಂ ಬಿಂದು ನಾದಸಂಜ್ಞಿತವಾದ ಸೊನ್ನೆಯಂ ಕೂಡಿಸೆ, `ಹೌಂ ಹಂ ಸ್ವಂ ಮಂ ಕ್ಷಂ ರಂ ತಂ ಯಂ ಮಂ' ಎಂಬೀ ನವಾಕ್ಷರ ಮಂತ್ರ ಸರ್ವಸಿದ್ಧಿಪ್ರದ ಶಾಂತಿಕಮಂತ್ರವೆಂದು ನಿರೂಪಿಸಿದೆಯಯ್ಯಾ, ಪರಶಿವಲಿಂಗೇಶ್ವರ ನವಲಿಂಗ ಭಾಸ್ವರಾ.
--------------
ಇಮ್ಮಡಿ ಮುರಿಘಾ ಗುರುಸಿದ್ಧ / ಗುರುಸಿದ್ಧಸ್ವಾಮಿ
ಇಂತು, ಸದಾಶಿವಮಂತ್ರ ನಿರೂಪಣಾನಂತರದಲ್ಲಿ ಮಹೇಶ್ವರಮಂತ್ರಮಂ ಪೇಳ್ವೆನೆಂತೆನೆ- ಮಹೇಶ್ವರನೆನೆ ರುದ್ರನಾತನೆ ಸಂಹಾರಕಾರಣನಾತನ ಮಂತ್ರಮಂ ಸಂಹಾರವರ್ಗಕ್ರಮದಿಂದುದ್ಧರಿಪುದೆನಲದು ಸೃಷ್ಟಿ ಸ್ಥಿತಿ ಲಯಂಗಳೆಂದು ಮೂದೆರನಾಗಿರ್ಪು- ವವರ ಮೊದಲ ಸೃಷ್ಟಿವರ್ಗಮದೆಂತೆನೆ, ಭೂವರ್ಗದ ಮೂರನೆಯಕ್ಕರಮಾದ ಹಕಾರಮನುದ್ಧರಿಸಿ, ಜಲವರ್ಗದ ಮೊದಲಾದ ಮಕಾರಮನದರೊತ್ತಿನೊಳಿರಿಸಿ, ಭೂವರ್ಗದೊಂಬತ್ತನೆಯ ದಕಾರಮನವೆರಡರ ಮುಂದಿ ಟ್ಟಾಕಾಶವರ್ಗದಾರನೆಯದಾದೆಕಾರಮನದರಿದಿರೊಳ್ಮಡಂಗಿ ಯಾಧಾರಾಧೇಯಸಂಜ್ಞಿತವಾದ ಸೊನ್ನೆಯಿಂ ಕೂಡಿಸೆ ¬ೂ ನಾಲ್ಕಕ್ಕರಂಗಳ್ `ಹಂ ಮಂ ದಂ ಎಂ' ಎಂಬೀ ಚತುರಕ್ಷರಮಂತ್ರವು ಸೃಷ್ಟಿಮಂತ್ರವೆಂದರುಪಿದೆಯಯ್ಯಾ, ಪರಮ ಶಿವಲಿಂಗದೇವ ಪರಿಪೂರ್ಣ ಭಾವಾ.
--------------
ಇಮ್ಮಡಿ ಮುರಿಘಾ ಗುರುಸಿದ್ಧ / ಗುರುಸಿದ್ಧಸ್ವಾಮಿ
ಇಂತು ಶಿವ ಸದಾಶಿವ ಮಹೇಶ್ವರ ನಿರೂಪಣಾನಂತರದಲ್ಲಿ ಪಂಚಶಕ್ತಿ ಮಂತ್ರಬೀಜಂಗಳಂ ಪೇಳ್ವೆನೆಂತೆನೆ ಶಕ್ತಿಸಂಜ್ಞಿತವಾದ ಸ್ ಎಂಬುದನ್ನುದ್ಧರಿಸಿ, ವಿಕೃತಿಸಂಜ್ಞಿತವಾದಾಕಾರವಂ ಪತ್ತಿಸಿ- ಯಗ್ನಿಸಂಜ್ಞಿತವಾದ ರ್ ಎಂಬುದಂ ಬೆರಸೆ ಸ್ರಾಯೆನಿಸಿತ್ತದಂ ಬಿಂದು ನಾದ ಸಂಜ್ಞಿತವಾದ ಸೊನ್ನೆಯೊಳ್ಕೂಡೆ ಸ್ರಾಂ ಯೆನಿಸಿತ್ತೀ ಶಕ್ತಿಬೀಜಂ ಸಮಸ್ತ ಶಕ್ತ್ಯಾಶ್ರಯವಾದ ಪ್ರಥಮಶಕ್ತಿಯೆಂದು ನಿರೂಪಿಸಿದೆಯಯ್ಯಾ, ಪರಶಿವಲಿಂಗಯ್ಯಾ.
--------------
ಇಮ್ಮಡಿ ಮುರಿಘಾ ಗುರುಸಿದ್ಧ / ಗುರುಸಿದ್ಧಸ್ವಾಮಿ
ಇಲ್ಲಿಯಷ್ಟವಿಧ ಸಕೀಲಂಗಳ್ವತ್ಯಾಸಮಾದೊಡಂ, ತತ್ವಮಸ್ಯಾರ್ಥಮನುಕೂಲಮಾಗಲೊಡಂ, ಸಂದೆಯಮಿಲ್ಲಮೆಂದು ತಿಳಿಯಲುಚಿತವಿೂಯಷ್ಟವಿಧ ಸಕೀಲಂಗಳೊಳಗೆ ತರದಿಂದೊಂದೊಂದಾರಾಗಲೆಂಟಾರ್ಗಳ್ನಾಲ್ವತ್ತೆಂಟಾಯ್ತಯ್ಯಾ, ಪರಮ ಶಿವಲಿಂಗ ಪಶುಪಾಶ ವಿಭಂಗಾ.
--------------
ಇಮ್ಮಡಿ ಮುರಿಘಾ ಗುರುಸಿದ್ಧ / ಗುರುಸಿದ್ಧಸ್ವಾಮಿ
ಇನ್ನು ಸೃಷ್ಟಿವರ್ಗನಿರೂಪಣಾನಂತರದಲ್ಲಿ ಸಂಹಾರವರ್ಗಮಂ ಪೇಳ್ವೆನೆಂತೆನೆ- ಕ್ಷಕಾರಾದ್ಯಕಾರಾಂತಮಾದಕ್ಷರಮಾಲಿಕೆಯೆ ಸಂಹಾರವರ್ಗಮೆನಿಕುಂ. ಅದರಲ್ಲಿ ಕ್ಷ ಳ ಹ ಸ ಷ ಶ ವ ಲ ರ ಯಂ ಗಳೆಂಬೀ ಪತ್ತೆ ಸಂಹಾರವರ್ಗದಲ್ಲಿ ಮೊದಲವರ್ಗಮಿದು ಪೃಥ್ವಿ. ಮ ಭ ಬ ಫ ಪ ನ ಧ ದ ಥ ತಂಗಳೆಂಬೀ ಪತ್ತೆ ಸಂಹಾರಿವರ್ಗದೊಳೆರಡನೆಯ ವರ್ಗಮಿದಪ್ಪು. ಣ ಢ ಡ ಠ ಟ ಞ ರುsು ಜ ಛ ಚಂಗಳೆಂಬೀ ಪತ್ತೆ ಸಂಹಾರವರ್ಗದಲ್ಲಿ ಮೂರನೆಯ ವರ್ಗಮಿದಗ್ನಿ. ಙ ಘ ಗ ಖ ಕಂಗಳೆಂಬೀವೈದುಂ ಸಂಹಾರವರ್ಗದಲ್ಲಿ ನಾಲ್ಕನೆಯ ವರ್ಗಮಿದು ವಾಯು, ಅಃ ಆಂ ಔ ಓ ಐ ಏ ಒ ಓ Iೂ ಋ ಊ ಉ ಈ ಇ ಆ ಅ ಎಂಬೀ ಪದಿನಾರೆ ಸಂಹಾರವರ್ಗದಲ್ಲಿಯೈದನೆಯ ವರ್ಗಮಿದಾಕಾಶ- ಮಿವೈದು ವರ್ಗಂಗಳನೊಳಕೊಂಡು ಸಂಹಾರವರ್ಗ ಮಿರ್ಪುದಿದಲ್ಲಿಯೆ ಸಮಸ್ತವಾದ ರುದ್ರಮಂತ್ರಗಳನುದ್ಧರಿಪುದಿದೀಗ ಸಂಹಾರವರ್ಗಂ. ಇಂತು ಸ್ಥಿತಿ ಸಂಹಾರ ತಾಮಸವರ್ಗ ವರ್ಗತ್ರಯಂಗಳಂ ನಿರವಿಸಿದೆಯಯ್ಯಾ, ನಿರಾಳ ನಿಶ್ಚಿಂತ ಪರಮ ಶಿವಲಿಂಗೇಶ್ವರ.
--------------
ಇಮ್ಮಡಿ ಮುರಿಘಾ ಗುರುಸಿದ್ಧ / ಗುರುಸಿದ್ಧಸ್ವಾಮಿ
ಇಂತು ಕರ್ಣಿಕಾಗ್ನಿಂದು ಸೂರ್ಯಮಂಡಲದಳಸ್ಥಂಗಳಾದಕ್ಷರಂಗಳ ಗಣನೆಯೈವತ್ತೊಂದಾಯಿತ್ತು. ಮತ್ತವಿೂ ಚಕ್ರಕರ್ಣಿಕಾದಿ ಮಂಡಲತ್ರಯಾನ್ವಿತ ವಾಚಕರೂಪ ಹಕಾರಾದಿ ವರ್ನ ವಾಚ್ಯ ನಿರೂಪಣಾನಂತರದಲ್ಲಿ, ಕಡೆಯ ಸೂರ್ಯಮಂಡಲದುಪದಳಂಗಳಂ ಬಿಟ್ಟುಳಿದ ಪರಶಿವಾದ್ಯಧಿದೇವತೆಗಳಂ ತಿಳಿದು ಭಾವಿಸಿ ಪೂಜಿಪುದೆಂದೆಯಯ್ಯಾ, ಪರಮ ಮಹಿಮ ಪರಶಿವಲಿಂಗೇಶ್ವರಾ.
--------------
ಇಮ್ಮಡಿ ಮುರಿಘಾ ಗುರುಸಿದ್ಧ / ಗುರುಸಿದ್ಧಸ್ವಾಮಿ
ಇಂತು ತತ್ವಮಸಿ ಎಂಬ ಮಹಾವಾಕ್ಯರ್ಥಂಗಳೊಳ್ತತ್ತೆನೆ ಲಿಂಗಂ. ತ್ವಮೆನೆಯಂಗಮಸಿಯೆನೆಲಿಂಗಾಂಗೈಕ್ಯಂ. ಮತ್ತಂ, ಪೂವೋಕ್ತಮಾದ ತ್ವಂ ತದಸಿ ತತ್ವಮಸಿ ಇವರ ಶಬ್ದವಾಚ್ಯಮಾದಂಗಲಿಂಗೈಕ್ಯ ಪ್ರತಿಪಾದಿತ ಮಹಾವಾಕ್ಯ ಸೂತ್ರಾಂತರ್ಗತಮಾದಂಗಸ್ಥಲಂಗಳ ನಾಲ್ವತ್ತನಾಲ್ಕಕ್ಕಂ ಲಿಂಗಸ್ಥಲಂಗಳೈವತ್ತೇಳಕ್ಕಂ ನೂರೊಂದು ಸ್ಥಲ ಗಣನೆಯಾದುದಾಯುಭಯ್ಯಾತ್ಮಕಂ ನೀನೆ ಗಡಾ, ಪರಮ ಶಿವಲಿಂಗ ಪ್ರಚುರಾನುಕಂಪ ತರಂಗಾ.
--------------
ಇಮ್ಮಡಿ ಮುರಿಘಾ ಗುರುಸಿದ್ಧ / ಗುರುಸಿದ್ಧಸ್ವಾಮಿ
ಇಂತೀ ಮಹಾಲಿಂಗದ ಪೂರ್ವೋಕ್ತ ಪಟ್ಚ ್ರಕ್ರಂಗಳೆಲ್ಲ ಶಿವಚಕ್ರಂಗಳಲ್ಲಿ ನ್ಯಸ್ತವಾದ ಮುವತ್ತೈದು ವ್ಯಂಜನ. ಭಿಕ್ಷಾರವಾಚ್ಯರಾದ ಮುವತ್ತೈದು ರುದ್ರರೆ ತ್ರಿಶೂಲ ಕಪಾಲ ವರದಾಭಯಯುಕ್ತ ಕರಚತುಷ್ಟಯದಿಂ, ಕಟಕ ಮಕುಟಾದಿ ಭೂಷಣಂಗಳಿಂ. ದಿವ್ಯಗಂಧ ಮಾಲ್ಯ ದುಕೂಲಂಗಳಿಂ, ಶೋಭೆವಡೆದು ರಕ್ತಕಾಂತಿಯ ಕಾಯದ ಲಾವಣ್ಯವಂತರಾಗಿರ್ಕು- ಮಂತೆಯೆ ಷೋಡಶ ಸ್ವರಾಕ್ಷರವಾಚ್ಯರಾದರುಮಿದೆ ತೆರದಿಂ ತಂತಮ್ಮ ನಿಜ ಲಾಂಛನ ಯುಕ್ತರಾಗಿರ್ದಪರೆಂದು ನಿರವಿಸಿದೆಯಯ್ಯಾ, ಪರಶಿವಲಿಂಗಯ್ಯ.
--------------
ಇಮ್ಮಡಿ ಮುರಿಘಾ ಗುರುಸಿದ್ಧ / ಗುರುಸಿದ್ಧಸ್ವಾಮಿ
ಇಂತಾಚಾರಲಿಂಗಸ್ಥಲಮೊಂಬತ್ತುಂ ಗುರುಲಿಂಗಸ್ಥಲಮೊಂಬತ್ತುಂ ಶಿವಲಿಂಗಸ್ಥಲಮೊಂಬತ್ತುಂ ಜಂಗಮಲ್ಲಿಂಗಸ್ಥಲಮೊಂಬತ್ತುಂ ಪ್ರಸಾದಿಲಿಂಗಸ್ಥಲಂ ಪನ್ನೆರಡುಂ ಮಹಾಲಿಂಗಸ್ಥಲಮೊಂಬತ್ತು ಮಿಂತೀ ಯೈ[ವ]ತ್ತೇಳುಂ ನಿನ್ನ ಸ್ವಯಂ ಪ್ರಭಾಮಯಮಯ್ಯಾ, ಪರಮ ಶಿವಲಿಂಗ ಪತಂಗಜ ವಿಭಂಗಾ.
--------------
ಇಮ್ಮಡಿ ಮುರಿಘಾ ಗುರುಸಿದ್ಧ / ಗುರುಸಿದ್ಧಸ್ವಾಮಿ
ಇಂತು, ಪಂಚಭೌತಿಕವಾದೈವತ್ತಕ್ಕರವೆ ಜೀವಸಂಜ್ಞಿತಮಪ್ಪ ಸಾಂತಕ್ಕೆ ಪುರಾಷ್ಟಕಮೆನಿಸಿತ್ತು. ಮತ್ತಮೀ ಮೂಲಪ್ರಸಾದವೆ ಜೀವಪ್ರಸಾದವಾದುದು. ಬಳಿಕಂ, ಬ್ರಹ್ಮಾದಿ ತೃಣಂ ಕಡೆಯಾಗಿ ಚರಾಚರರೂಪವಾದ ಜತ್ಕಾರಣಮೆನಿಸಿ ಭೂತಭವಿಷ್ಯದ್ವರ್ತಮಾ[ನಾ]ತ್ಮಕವೆಲ್ಲವುಂ ಮೂಲಪ್ರಸಾದದಲ್ಲಿಯೆ ಸಾಗರತರಂಗನ್ಯಾಯದಿಂದಂತ- ರ್ಗತವಾದುದೆಂದು ನಿರೂಪಿಸಿದೆಯ್ಯಾ, ಪರಶಿವಲಿಂಗೇಶ್ವರ ಗಿರಿಜೋತ್ಸವಾಬ್ಧಿ ನಿಶಾಕರ.
--------------
ಇಮ್ಮಡಿ ಮುರಿಘಾ ಗುರುಸಿದ್ಧ / ಗುರುಸಿದ್ಧಸ್ವಾಮಿ
ಇಂತೀ ಮಹಾಲಿಂಗದ ಶಿವಶಕ್ತ್ಯಾತ್ಮಕ ಚಕ್ರನ್ಯಾಸ ನಿರೂಪಣಾನಂತರದಲ್ಲಿ, ಮೂರ್ತಮಂತ್ರಮಂ ಪೇಳ್ವೆನೆಂತೆನೆ- ನಾದ ಸಂಜ್ಞಿತವಾದ ಹಕಾರಮನಾಜ್ಯಪ್ರಧಾರಿಕೆ ಮೇಲಣ ಪಂತಿಯ ಮೇಲೆ ಚತುಷ್ಕೋಷ* ಮಧ್ಯದಲ್ಲಿ ನ್ಯಾಸಂಗೆಯ್ವುದು. ಬಿಂದು ಸಂಜ್ಞಿತವಾದೋಕಾರಮನಾದ್ಯಪ್ರದಾರಿಕೆಯಲ್ಲಿರಿಸೂದು. ಮಕಾರಮಂ ಊಧ್ರ್ವಪಟ್ಟಿಕಾದಿಯಾಗಿ ಊಧ್ರ್ವಕಂಜಪರ್ಯಂತದಲ್ಲಿ ಮಡಗುವುದು. ವೃತ್ತದಲ್ಲಿ ಉಕಾರಮನಿರಿಸೂದು. ಅಕಾರಮನಧಃಕಂಜಾಧಃ ಪಟ್ಟಿಕೆಗಳಲ್ಲಿಡುವುದಿಂತು ಹ ಒ ಮ ಉ ಅ ಎಂಬೀ ಸೂಕ್ಷ ್ಮ ಪಂಚಾಕ್ಷರ ನ್ಯಾಸಮಂ ನಿರವಿಸಿದೆಯಯ್ಯಾ, ಪರಶಿವಲಿಂಗಯ್ಯ.
--------------
ಇಮ್ಮಡಿ ಮುರಿಘಾ ಗುರುಸಿದ್ಧ / ಗುರುಸಿದ್ಧಸ್ವಾಮಿ
ಇಂತು ಪಂಚಪ್ರಣವ ನಿರೂಪಣಾನಂತರದಲ್ಲಿ ಬ್ರಹ್ಮಭೇದವಿಧಿಯಂ ಪೇಳ್ವೆನೆಂತೆನೆ- ಬ್ರಹ್ಮವೆಂದೊಡೆ ದೊಡ್ಡಿತ್ತಹತನದಿಂದೆಯುಂ ಪೂರ್ಣವಹಣದಿಂದೆಯುಂ `ಸರ್ವಂ ಖಲ್ವಿದಂ ಬ್ರಹ್ಮ'ವೆಂಬ ವಚನಾರ್ಥ ಸಾರ್ಥಕವಾಗಿಯಾ ಆದ್ವಿತೀಯ ಶಿವತತ್ವ ಬ್ರಹ್ಮವೆ ಪಂಚಪ್ರಕಾರವಾದವಾ ಪಂಚಬ್ರಹ್ಮವೊಂದೊಂದೈದೈದಾಗುತ್ತಿರ್ಪತ್ತೈದಾದುದೆಂತೆನೆ ಮೂರ್ತಿಬ್ರಹ್ಮ, ತತ್ವಬ್ರಹ್ಮ, ಭೂತಬ್ರಹ್ಮ ಪಿಂಡಬ್ರಹ್ಮ, ಕಲಾಬ್ರಹ್ಮಗಳೆಂಬೀವೈದುಂ ಪಂಚಬ್ರಹ್ಮಂಗಳಿವಕ್ಕೆ ವಿವರವೆಂತೆನೆ ಅಕಾರೋಕಾರಮಕಾರಾಧಿದೇವತೆಗಳಾದ ಸೃಷ್ಟಿಸ್ಥಿತ್ಯಂತ್ಯಕಾರಿಗಳಾದ ಬ್ರಹ್ಮ ವಿಷ್ಣು ರುದ್ರರುಂ ಸಾಕಲ್ಯಾದಿ ಪಂಚಪ್ರಣವಾಂಗರೂಪ ಸಮಸ್ತಾಕ್ಷರಂಗಳು- ಮಿವೆಲ್ಲವಾದ ಬ್ರಹ್ಮ ಸಂಜ್ಞಿತವಾದ ಹಕಾರಾಂತಸ್ಥವಾದುದರಿಂದೀ ಸರ್ವವುಂ ಮೂರ್ತಿಬ್ರಹ್ಮವೆನಿಕುಂ. ಮತ್ತವಿೂ ತ್ರಿವರ್ಣಸಂಭೂತವಾದ ಸಮಸ್ತ ವರ್ಣತತ್ವಂಗಳ್ಗೆಯು ಶಿವತತ್ವವೆ ಪ್ರಭುವಾದುದರಿಂ ಶಿವಬೀಜ ಸಂಜ್ಞಿತವಾದ ಹ ಎಂಬ ಶುದ್ಧ ಪ್ರಸಾದಾಧ್ಯಾತ್ಮಪ್ರಸಾದಾಂತವಾದ ಪಂಚಪ್ರಸಾದಮಂತ್ರವೆ ತತ್ವಬ್ರಹ್ಮವೆನಿಕುಂ. ಬಳಿಕ್ಕಂ ಮಾಂಸ ಸಂಜ್ಞಿತವಾದ ಲಕಾರವೆ ಪೃಥ್ವೀಭೂತ ಬೀಜಂ. ಮೇದಸ್ಸಂಜ್ಞಿತವಾದ ವಕಾರವೆ ಜಲಭೂತ ಬೀಜಂ. ಷಷ* ್ಯ ಸಂಜ್ಞಿತವಾದ ರಕಾರವೆ ತೇಜೋಭೂತ ಬೀಜಂ. ಸಪ್ತಮಸಂಜ್ಞಿತವಾದ ಹಕಾರವೆ ಆಕಾಶಭೂತ ಬೀಜವೀ ಪ್ರಕಾರದಿಂ ಪಂಚಭೂತಾತ್ಮಕವಾದುದೆ ಭೂತಬ್ರಹ್ಮವೆನಿಕುಂ. ಮರಲ್ದುಂ, ಪ್ರಕೃತಿಸಂಜ್ಞಿತವಾದ ಅ ಇ ಉ ಋ ಒ ಎ ಒಯೆಂಬೀ ಪ್ರಕೃತಿಗಳಲ್ಲಿ ಋ ಒ ದ್ವಯಂಮಂ ಬಿಟ್ಟುಳಿದ ಅ ಇ ಉ ಎ ಒ ಯೆಂಬೀಯೈದಕ್ಕರಮಂ ಪಂಚಸಂಜ್ಞಿತವಾದ ಹಕಾರದೊಡನೆ ಕೂಡೆ, ಬಿಂದುನಾದ ಸೌಂಜ್ಞಿತವಾದ ಸೊನ್ನೆಯೊಳ್ಬೆಸೆ, ಹ್ರಂ ಹ್ರೀಂ ಹ್ರುಂ ಹ್ರೇಂ ಹ್ರೌಂ ಎಂಬೀ ಬ್ರಹ್ಮಬೀಜಂಗಳೈದಂ ಪೇಳ್ದು, ಮತ್ತವಿೂ ಬೀಜಗಳೊಳ್ವಾಚಕವಾದ ಪಂಚಬ್ರಹ್ಮಂಗಳಂ ಪೇಳ್ವೆನೆಂತೆನೆ- ಸದ್ಯೋಜಾತ ವಾಮದೇವಾಘೋರ ತತ್ಪುರುಷೇಶಾನಂಗಳೆಂಬಿವೆ ಪಂಚಬ್ರಹ್ಮಂಗಳಿವಕ್ಕೆ ಪ್ರಣವವಾದಿಯಾಗಿ ನಮಃ ಪದಂ ಕಡೆಯಾಗಿ ಚತುಥ್ರ್ಯಂತಮಂ ಪ್ರಯೋಗಿಸೆ ಆ ಪಂಚಬ್ರಹ್ಮ ಮಂತ್ರೋದ್ಧರಣೆಯಾದುದೆಂತನೆ- ಓಂ ಹ್ರಂ ಸದ್ಯೋಜಾತಾಯ ನಮಃ ಓಂ ಹ್ರೀಂ ವಾಮದೇವಾಯ ನಮಃ ಓಂ ಹ್ರುಂ ಅಘೋರಾಯ ನಮಃ ಓಂ ಹ್ರೇಂ ತತ್ಪುರುಷಾಯ ನಮಃ ಓಂ ಹ್ರೌಂ ಈಶಾನಾಯ ನಮಃ ಎಂದು ಶಿವಬೀಜದೋಳ್ವೀವ ಪ್ರಕೃತಿ ಪಂಚಾಕ್ಷರಂಗಳಂ ಕೂಡಿಸಿ ಸಬಿಂದುವಾಗುಚ್ಚರಿಸೆ, ಪಂಚಬ್ರಹ್ಮವೆನಿಸಿದ ಕರ್ಮಸಾದಾಖ್ಯ ಸ್ವರೂಪಮೆ ಪಿಂಡಬ್ರಹ್ಮವೆನಿಕುಂ. ಮತ್ತಂ, ಪಿಂಡಬ್ರಹ್ಮವೆಂಬ ಪಂಚಬ್ರಹ್ಮ ನಿರೂಪಣಾನಂತರದಲ್ಲಿಯಾ ಪಂಚಬ್ರಹ್ಮಮಂತ್ರಕ್ಕೆ ಮೂವತ್ತೆಂಟು ಕಳೆಗಳುಂಟದೆಂತೆನೆ- ಈಶಾನ ತತ್ಪುರುಷಾಘೋರ ವಾಮದೇವ ಸದ್ಯೋಜಾತಂಗಳಿವಕ್ಕೆ ವಿವರಂ ಈಶಾನಕ್ಕೆದು ಕಲೆ. ತತ್ಪುರುಷಕ್ಕೆ ನಾಲ್ಕು ಕಲೆ. ಅಘೋರಕ್ಕೆಂಟು ಕಲೆ. ವಾಮದೇವಕ್ಕೆ ಪದಿರ್ಮೂಕಲೆ. ಸದ್ಯೋಜಾತಕ್ಕೆಂಟು ಕಲೆ. ಅಂತು, ಮೂವತ್ತೆಂಟು ಕಲೆ. ಇವಕ್ಕೆ ವಿವರಂ, ಮೊದಲೀಶಾನಕ್ಕೆ- `ಈಶಾನಸ್ಸರ್ವ ವಿದ್ಯಾನಾಂ' ಇದು ಮೊದಲ ಕಲೆ. `ಈಶಾನಾಸ್ಸರ್ವ ಭೂತಾನಾಂ' ಇದೆರಡನೆಯ ಕಲೆ. `ಬ್ರಹ್ಮಣಾಧಿಪತಿ ಬ್ರಹ್ಮಣಾಧಿಪತಿ ಬ್ರಹ್ಮ' ಇದು ಮೂರನೆಯ ಕಲೆ. `ಶಿವೋಮೇಸ್ತು' ಇದು ನಾಲ್ಕನೆಯ ಕಲೆ. `ಸದಾ ಶಿವೋಂ' ಇದು ಐದನೆಯ ಕಲೆ. ತತ್ಪುರುಷಕ್ಕೆ- `ತತ್ಪುರುಷಾಯ ವಿದ್ಮಹೆ' ಇದು ಮೊದಲ ಕಲೆ. `ಮಹಾದೇವಾಯ ಧೀಮಹಿತನ್ನೋ' ಇದೆರಡನೆಯ ಕಲೆ. `ರುದ್ರಃ' ಇದು ಮೂರನೆಯ ಕಲೆ. `ಪ್ರಚೋದಯಾತ್' ಇದು ನಾಲ್ಕನೆಯ ಕಲೆ. ಅಘೋರಕ್ಕೆ `ಅಘೋರೇಭ್ಯಃ' ಇದು ಮೊದಲ ಕಲೆ. `ಘೋರೇಭ್ಯಃ' ಇದು ಎರಡನೆಯ ಕಲೆ. `ಘೋರಘೋರ' ಇದು ಮೂರನೆಯ ಕಲೆ. `ತರೇಭ್ಯ' ಇದು ನಾಲ್ಕನೆಯ ಕಲೆ. `ಸರ್ವತಃ' ಇದೈದನೆಯ ಕಲೆ. `ಸರ್ವ' ಇದಾರನೆಯ ಕಲೆ. `ಸರ್ವೇಭ್ಯೇ ನಮಸ್ತೇಸ್ತು' ಇದೇಳನೆಯ ಕಲೆ. `ರುದ್ರ ರೂಪೇಭ್ಯಃ' ಇದೆಂಟನೆಯ ಕಲೆ. ವಾಮದೇವಕ್ಕೆ- `ವಾಮದೇವಾಯ' ಇದು ಮೊದಲ ಕಲೆ. `ಜೇಷಾ*ಯ' ಇದೆರಡನೆಯ ಕಲೆ. `ರುದ್ರಾಯ ನಮಃ' ಇದು ಮೂರನೆಯ ಕಲೆ. `ಕಲಾಯ' ಇದು ನಾಲ್ಕನೆಯ ಕಲೆ. `ಕಲಾ' ಇದೈದನೆಯ ಕಲೆ. `ವಿಕರಣಾಯ ನಮಃ' ಇದಾರನೆಯ ಕಲೆ. `ಬಲಂ' ಇದೇಳನೆಯ ಕಲೆ. `ವಿಕರಣಾಯ' ಇದೆಂಟನೆಯ ಕಲೆ. `ಬಲಂ' ಇದೊಂಬತ್ತನೆಯ ಕಲೆ. `ಪ್ರಮಥನಾಥಾಯ' ಇದು ಪತ್ತನೆಯ ಕಲೆ. `ಸರ್ವಭೂತ ದಮನಾಯ ನಮಃ' ಇದು ಪನ್ನೊಂದನೆಯ ಕಲೆ `ಮನ' ಇದು ಪನ್ನೆರಡನೆಯ ಕಲೆ. `ಉನ್ಮನಾಯ' ಇದು ಪದಿಮೂರನೆಯ ಕಲೆ. ಸದ್ಯೋಜಾತಕ್ಕೆ- `ಸದ್ಯೋಜಾತಂ ಪ್ರಪದ್ಯಾಮಿ' ಇದು ಮೊದಲ ಕಲೆ. `ಸದ್ಯೋಜಾತಾಯವೈ ನಮಃ' ಇದೆರಡನೆಯ ಕಲೆ. `ಭವೆ' ಇದು ಮೂರನೆಯ ಕಲೆ. `ಭವೇ' ಇದು ನಾಲ್ಕನೆಯ ಕಲೆ. `ನಾತಿಭವೆ' ಇದೈದನೆಯ ಕಲೆ. `ಭವಸ್ವ ಮಾಂ' ಇದಾರನೆಯ ಕಲೆ. `ಭವ' ಇದೇಳನೆಯ ಕಲೆ. `ಉದ್ಭವ' ಇದೆಂಟನೆಯ ಕಲೆ. ಇದು ಕಲಾಬ್ರಹ್ಮವಿಂತು ಮೂರ್ತಿಬ್ರಹ್ಮ ತತ್ವಬ್ರಹ್ಮ ಭೂತಬ್ರಹ್ಮ ಪಿಂಡಬ್ರಹ್ಮ ಕಲಾಬ್ರಹ್ಮಗಳೆಂಬ ಪಂಚಬ್ರಹ್ಮಗಳಂ ನಿರವಿಸಿದೆಯಯ್ಯಾ, ಪರಮ ಶಿವಲಿಂಗಯ್ಯ.
--------------
ಇಮ್ಮಡಿ ಮುರಿಘಾ ಗುರುಸಿದ್ಧ / ಗುರುಸಿದ್ಧಸ್ವಾಮಿ
ಇಂತು ಭ್ರೂಮಧ್ಯ ಸಂಜ್ಞಿಕ ಮೇರುಗಿರಿಯುಪರಿಯ ಕೈಲಾಸನಾಮ ದ್ವಾದಶಾಂತ ವಿಶ್ರುತ ಬ್ರಹ್ಮನಾಡಿ ಮೂಲಸೂತ್ರಾಯಮಾನತ್ವಗತ ಬ್ರಹ್ಮರಂಧ್ರಾಖ್ಯ ಪರಿಸ್ಫುಟ ಮಂಡಲತ್ರಯ ವಿಳಸಿತ ಶಾಂಭವಚಕ್ರ ಮಧ್ಯಸ್ಥಿತ ದೇವತಾ ಮಂತ್ರಾಕ್ಷರಂಗಳಂ ನಿರೂಪಿಸಿದೆಯಾ ಮಂತ್ರಾತ್ಮಕದಿಂ ನ್ಯಸ್ತವಾದಕ್ಷರ ಸಂಖ್ಯೆಗಳ್ವೆಂತು ಬಹುದಯಾಪಾಂಗದಿಂ ನೋಡಿ ಸಂಜ್ಞೆಗೈದು ನಿರೂಪಿಸಯ್ಯಾ, ಪರಮ ಶಿವಲಿಂಗೇಶ್ವರ ಪ್ರಕಾಶಿತಾಗಮೋತ್ಕರ.
--------------
ಇಮ್ಮಡಿ ಮುರಿಘಾ ಗುರುಸಿದ್ಧ / ಗುರುಸಿದ್ಧಸ್ವಾಮಿ
ಇದಕ್ಕೆ ತತ್ತ್ವಮಸಿ ಎಂಬ ಮಹಾವಾಕ್ಯಮಿಲ್ಲಿ ತ್ವಮೆನಲಾರಂಗಂ ತತ್‍ಎನಲಾರ್ಲಿಂಗಮಸಿ ಯೆನಲಾರ್ಬಕುತಿ, ಈ ಮೂದೆರನೊಂದಾಲಗದು ನೀನೆ ಅಪ್ರತಕ್ರ್ಯ ಪ್ರಣವಾತ್ಮಕ ಪರಮ ಶಿವಲಿಂಗಾ, ಮಲ್ಲ್ಲಿಕಾ ಕರ್ಪೂರ ಧವಲಾಂಗಾ.
--------------
ಇಮ್ಮಡಿ ಮುರಿಘಾ ಗುರುಸಿದ್ಧ / ಗುರುಸಿದ್ಧಸ್ವಾಮಿ
ಇಂತೀ ಸ್ಥಿತಮಾರ್ಗದೈದು ಪ್ರಸಾದಮಂತ್ರಂಗಳಿವು ಬೀಜವಾದ ಕಾರಣ ಶಿವಮಂತ್ರಂಗಳನ್ನು ಸೃಷ್ಟಿವರ್ಗದಿಂದುದ್ಧರಿಪ ಸಾದಾಖ್ಯ ಸಂಜ್ಞಿತ ಸದಾಶಿವ ಮಂತ್ರಗಳೆಂತೆನೆ- ಮೋಕ್ಷದವೆಂದಭಿವೃದ್ಧಿಯೆಂದು ಕಾಮ್ಯವೆಂದು ಶಾಂತಿಕವೆಂದು ಪೌಷಿ*ಕವೆಂದೈದೆರಂಗಳಾಗಿರ್ಪುವಿವಕ್ಕೆ ವಿವರಂ- ಮೋಕ್ಷದವೆ ಪಂಚಾಕ್ಷರಮಭಿವೃದ್ಧಿಯೆ ಷಡಕ್ಷರಂ. ಕಾಮ್ಯವೆ ಅಷ್ಟಾಕ್ಷರಂ ಶಾಂತಿಕವೆ ನವಾಕ್ಷರಂ. ಪೌಷಿ*ಕವೆ ದಶಾಕ್ಷರಮಿವಕ್ಕೆ ವಿವರ.- ವಗ್ನಿಮಂಡಲದ ಸೃಷ್ಟಿಮಾರ್ಗದಿ ಶವರ್ಗದ ಶಕಾರದ ನಾಲ್ಕನೆಯಕ್ಕರವನುದ್ಧರಿಸಿಮದಕ್ಕೆ ಚಂದ್ರಮಂಡಲದಿಂದ್ರವರ್ಗದ ತ್ರಯೋದಶಾಂತಮಾದಕ್ಕರಮಂ ಪತ್ತಿಸಿ ಪರಾಪರದೊಡನೊಂದಿಸಲ್ಮೊದಲಂತೆ ಮೂಲಪ್ರಸಾದವಾಯಿತ್ತೀ ಮೂಲಪ್ರಸಾದವೆ ಸದಾಶಿವಮಂತ್ರಗಳೈದಕ್ಕೆಯು- ಮಾಧ್ಯಕ್ಷರಮಾದುದೆಂದು ನಿರವಿಸಿದೆಯಯ್ಯಾ, ಪರಮ ಶಿವಲಿಂಗೇಶ್ವರಾ.
--------------
ಇಮ್ಮಡಿ ಮುರಿಘಾ ಗುರುಸಿದ್ಧ / ಗುರುಸಿದ್ಧಸ್ವಾಮಿ
ಇಂತು ವರ್ಗತ್ರಯ ನಿರೂಪಣಾನಂತರದಲ್ಲಿ, ಚಕ್ರಕಮಲಕರ್ಣಿಕಾದಿ ಮಂಡಲತ್ರಯದೊಳಗೆ ನ್ಯಸ್ತವರ್ಗಂಗಳಲ್ಲಿ, ಮೊದಲ ಸೂಕ್ಷ ್ಮಕರ್ಣಿಕಾ ನ್ಯಸ್ತವರ್ಗಮಂ ನಿರೂಪಿಸುವೆನೆಂತೆನೆ- ನಾದವೆಂದು ಗುಹ್ಯವೆಂದು ಪರವೆಂದು ಜೀವವೆಂದು ದೇಹಿಯೆಂದು ಭೂತವೆಂದು ಪಂಚಮವೆಂದು ಸಾಂತವೆಂದು ತತ್ವಾಂತವೆಂದು ಭೂತಾಂತವೆಂದು ಶಿವಾರ್ನವೆಂದು ಶೂನ್ಯವೆಂದವ್ಯಯವೆಂದೀ ಪದಿಮೂರ್ಪೆಸರ್ಕಣ್ರ್ನಿಕಾನ್ಯಸ್ತ ಹಕಾರಕ್ಕೆಂದು ನಿರೂಪಿಸಿಸಿದೆಯಯ್ಯಾ, ಪರಾತ್ಪರ ಪರಮ ಶಿವಲಿಂಗೇಶ್ವರ.
--------------
ಇಮ್ಮಡಿ ಮುರಿಘಾ ಗುರುಸಿದ್ಧ / ಗುರುಸಿದ್ಧಸ್ವಾಮಿ
ಇಂತು ಮಧ್ಯವೃತ್ತದ ದಳಾಪದಳಂಗಳಲ್ಲಿ ನ್ಯಾಸಮಾದ ಪದಿನಾರಕ್ಕರಂಗಳ ಎಸಳುಗಳಲ್ಲಿ ಪೂರ್ವದಳಾದಿಯಾಗಿ ಕಖಗಘಙ ಚಛರುsುಜಞ ಟಠಡಢಣ ತಥದಧನ ಪಫಬಭ ಎಂಬಿಪ್ಪತ್ತುನಾಲ್ಕು ದಳಾಕ್ಷರನ್ಯಾಸಮಾದುದು. ಮಕಾರವೆ ಯಕಾರ ಸವಿೂಪವರ್ತಿಯಾದಕಾರಣ ಮಗ್ನಿಮಂಡಲದಳನ್ಯಸ್ತವಾಯಿತ್ತದು ಗೂಡಿ ಸ್ಪರ್ಶಾಕ್ಷರಂಗಳಿರ್ಪತ್ತೈದಾಯಿತ್ತೆಂದೆಯಯ್ಯಾ, ಪರಮ ಶಿವಲಿಂಗೇಶ್ವರಾ.
--------------
ಇಮ್ಮಡಿ ಮುರಿಘಾ ಗುರುಸಿದ್ಧ / ಗುರುಸಿದ್ಧಸ್ವಾಮಿ
ಇಂತು ಷೋಡಶರುದ್ರವಾಚ್ಯವಾದ ಹದಿನಾರು ಸ್ವರಾಕ್ಷರಂಗಳುಂ ಮೂವತ್ತೈದು ರುದ್ರವಾಚ್ಯವಾದ ಮೂವತ್ತೈದು ವ್ಯಂಜನಾಕ್ಷರಂಗಳುಂ ಕೂಡಿ ಐವತ್ತೊಂದಕ್ಕರ ಗಣನೆಯಾದುದೆಂದು ನಿರವಿಸಿದೆಯಯ್ಯಾ, ಪರಶಿವಲಿಂಗಯ್ಯ.
--------------
ಇಮ್ಮಡಿ ಮುರಿಘಾ ಗುರುಸಿದ್ಧ / ಗುರುಸಿದ್ಧಸ್ವಾಮಿ
ಇನ್ನು ಪ್ರಾಣಲಿಂಗಿಸ್ಥಲಮೆ, ಪ್ರಾಣಲಿಂಗಿಸ್ಥಲ ಪ್ರಾಣಲಿಂಗಾರ್ಚನೆಸ್ಥಲ ಶಿವಯೋಗಸಮಾಧಿಸ್ಥಲ ಲಿಂಗನಿಜಸ್ಥಲಾಂಗ ಲಿಂಗಸ್ಥಲಗಳೆಂದೈದೆರನದುಂ ಸ್ವಕೀಯ ಕಾಯಮಾದುದಯ್ಯಾ, ಯೋಗೀಂದ್ರ ಮನೋಂಬುಜಶಯ್ಯಾ, ನಿರ್ಮಾಯ ನಿರಂಜನ ಪರಮ ಶಿವಲಿಂಗೇಶ್ವರಾ.
--------------
ಇಮ್ಮಡಿ ಮುರಿಘಾ ಗುರುಸಿದ್ಧ / ಗುರುಸಿದ್ಧಸ್ವಾಮಿ
ಇಂತು, ಪೂರ್ವೋಕ್ತ ಪಂಚಬ್ರಹ್ಮವಪ್ಪ ಶಿವಬೀಜವೆ ಸಾಕಲ್ಯಾದಿ ಸಾಯುಜ್ಯಾಂತವಾದ ಪ್ರಣವ ಸ್ವರೂಪವಾದ ಕಾರಣ ಮೂರ್ತಿವೆತ್ತಿಹುದಾಗಿಯಾ ಪಂಚ ಪ್ರಣವವೆ ಮೂರ್ತಿಬ್ರಹ್ಮಂ. ಶುದ್ಧಾಧ್ಯಾತ್ಮಾಂತವಾದ ಪಂಚಪ್ರಸಾದ ಬೀಜವೆ ಸಕಲ ನಿಷ್ಕಲ ಸ್ವರೂಪದಿಂದ ಭೋಗ್ಯಪಂಚಕೋತ್ಪತ್ತಿ ಕಾರಣವೆನಿಸಿತ್ತಾಗಿಯಾ ಪ್ರಸಾದಪಂಚಕವೆ ತತ್ವಬ್ರಹ್ಮಂ. ಭೂಮ್ಯಾದ್ಯಾಕಾಶಾಂತವಾದ ಪಂಚಭೌತಿಕ ಬೀಜಂಗಳೊಳ್ತಾಂ ಶೂನ್ಯಬೀಜವಾದುದರಿಂ ತನ್ನ ಭೋಗವಕ್ತ್ರಪಂಚಕ ಸಾಧನಾರ್ಥ ಭೂತವತ್ತೆನಿಸಿತ್ತಾಗಿಯಾ ಲಕಾರಾದಿ ಹಕಾರಾಂತ ಭೂತವರ್ಣ ಪಂಚಕವೆ ಭೂತಬ್ರಹ್ಮಂ. ಸದ್ಯಾದೀಶಾನಾಂತವಾದ ಪಂಚವಕ್ತ್ರಬೀಜಪಂಚಕವೆ ಪಿಂಡಬ್ರಹ್ಮವದು. ಕರ್ಮಸಾದಾಖ್ಯ ಭೌತಿಕಸ್ತವಾದಾತ್ಮತತ್ವದಲ್ಲಿ ತೋರಿಪ್ಪ ಕಾರಣಂ, `ಹ್ರಸ್ವಸ್ವಂಸ್ಯಾದ್ಬ ್ರಹ್ಮನಿಚಯ'ಮೆಂಬುದರಿಂ, ಹ್ರಸ್ವಸ್ವರ ಪಂಚಕವ[ದೆ]ನಿತ್ತಾಗಿ ಸದ್ಯಾದಿ ವಕ್ತ್ರಪಂಚಕವೆ ಪಿಂಡಬ್ರಹ್ಮ ಪಂಚಕಂ. ಕರ್ಮಸಾದಾಖ್ಯವೆಂದು ದಿವ್ಯಲಿಂಗವೆಂದಾತ್ಮತತ್ವವೆಂದು ಪಂಚವಕ್ತ್ರವೆಂದು ಪಿಂಡವೆಂದಿಲ್ಲವೊಂದರ ಪರ್ಯಾಯನಾಮವಲ್ಲದೆ ಪೆರತಲ್ಲವೀ ಪಂಚಬ್ರಹ್ಮಬೀಜಂಗಳಾರಾಧಕರ ಜಪನಿಮಿತ್ತವಾಗಿ ಪಂಚಬ್ರಹ್ಮಮಂತ್ರ ವಿಭಾಗೆವಡೆದವು. ಕರ್ತೃಸಾದಾಖ್ಯವೆಂದು ದಿವ್ಯಲಿಂಗವೆಂದಾತ್ಮತತ್ವವೆಂದು ಪಂಚವಕ್ತ್ರವೆಂದು ಪಿಂಡಬ್ರಹ್ಮವೆಂದು ನಾಮಪರ್ಯಾಯವಲ್ಲದೆ ಪೆರತಲ್ಲವೀ ಪಂಚಬ್ರಹ್ಮಬೀಜಂಗಳಾರಾಧಕರ ಜಪನಿಮಿತ್ತವಾಗಿಯಾ ಪಂಚಬ್ರಹ್ಮಮಂತ್ರಗಳೆ ವಿಭಾಗೆವಡೆದವು. ಸ್ವ ಪರಾಶಕ್ತಿ ಸಂಭೂತವಾಗಿ ಜೋತಿರ್ದೇವತಾಧಿಪತಿಗಳಾದ ಸಕಲ ವರ್ಣ ಕಲೆಗಳಿಗೆ ತಾನೆ ಆಶ್ರಯವಾದ ಕಾರಣಂ ಪಿಂಡಬ್ರಹ್ಮ ಮಂತ್ರಪಂಚಕವೆ ಕಲಾಬ್ರಹ್ಮ ಪಂಚಕವೆಂದುಕ್ತ ಮಾದುದಿಂತು ಪಂಚಬ್ರಹ್ಮವಿಭಾಗವಾದ ಪಂಚವಿಂಶತಿ ಬ್ರಹ್ಮಭೇದಮಂ ನಿರೂಪಿಸಿದೆಯಯ್ಯಾ, ಪರಮ ಶಿವಲಿಂಗಯ್ಯಾ.
--------------
ಇಮ್ಮಡಿ ಮುರಿಘಾ ಗುರುಸಿದ್ಧ / ಗುರುಸಿದ್ಧಸ್ವಾಮಿ

ಇನ್ನಷ್ಟು ...