ಅಥವಾ
(2) (1) (28) (5) (0) (0) (0) (0) (0) (0) (0) (0) (0) (0) ಅಂ (1) ಅಃ (1) (2) (0) (2) (0) (0) (0) (0) (0) (0) (0) (0) (0) (0) (0) (0) (3) (0) (1) (0) (1) (3) (0) (43) (2) (109) (0) (0) (0) (0) (0) (3) (0) (3) (0) (0)

ಪದದಿಂದ ಪ್ರಾರಂಭವಾಗುವ ವಚನಗಳು:

ಭೂವರ್ಗದ ಮೂರನೆಯ ಹ್ ಎಂಬ ವ್ಯಂಜನಮಂ ವ್ಯೋಮವರ್ಗದಂತ್ಯದಕಾರದೊಳ್ಕೂಡಿಸೆ ಹ ಎನಿಸಿತ್ತದರ ಮೇಲೆ ಶಕ್ತಿ ಸಂಜ್ಞಿತವಾದ ಸೊನ್ನೆಯನಿಡೆ ಹಂ ಎನಿಸಿತ್ತಾ ಭೂವರ್ಗದ ತುರ್ಯಗಣನೆಯಾದ ನಾಲ್ಕನೆಯ ಸ್ ಎಂಬುದಕ್ಕೆ ವ್ಯೋಮವರ್ಗದ ಕಡೆಯಕಾರಮಂ ಪತ್ತಿಸೆ ಸ ಎನಿಸಿತ್ತು. ಲಯವರ್ಗದ ಮೊದಲ ಕ್ಷ್ ಎಂಬುದಕ್ಕೆ ವ್ಯೋಮಾಂತಮಂ ಪತ್ತಿಸೆ ಕ್ಷ ಎನಿಸಿತ್ತಗ್ನಿಬೀಜ ಸಂಜ್ಞಿತವಾದ ರ್ ಎಂಬುದಕ್ಕದರಂತೆ ವ್ಯೋಮಾಂತಮಂ ಪತ್ತಿಸೆ ರ ಎನಿಸಿತ್ತು. ಭೂವರ್ಗದ ಕಡೆಯಕ್ಕರವಾದ ಯ್ ಎಂಬುದಕ್ಕೆ ವ್ಯೋಮಾಂತಮಂ ಪತ್ತಿಸೆ ಯ ಎನಿಸಿ- ತ್ತಾಕಾಶವರ್ಗದಾರನೆಯ ಎ ಎಂಬ ಸ್ವರಮುಮಿವೆಲ್ಲಕ್ಕಂ ತರದಿಂ ಶಕ್ತಿಸಂಜ್ಞಿತವಾದ ಸೊನ್ನೆಯಂ ಕೂಡಿಸೆ `ಹಂ ಕ್ಷಂ ಮಂ ರಂ ಯಂ ಎಂ' ಎಂಬೀ ಷಡಕ್ಷರಂ ಹಾರಮಂತ್ರಬೀಜವೆನಿಪುದೀ ಮಹೇಶ್ವರನ ಸೃಷ್ಟಿಸ್ಥಿತಿಲಯಾಭಿಧಾನಮಂತ್ರತ್ರಯವ ನಿರವಿಸಿದೆಯಯ್ಯ, ಪರಶಿವಲಿಂಗದೇವ ಮಹಾನುಭಾವ.
--------------
ಇಮ್ಮಡಿ ಮುರಿಘಾ ಗುರುಸಿದ್ಧ / ಗುರುಸಿದ್ಧಸ್ವಾಮಿ
ಭೇದಾಭೇದಂಗಳೇನುವಿಲ್ಲದಂದು ಶುದ್ಧಾದ್ವೈತ ಪ್ರಭಾಪುಂಜ ರಂಜಿತ ನಿರಂಜನ ಶೂನ್ಯ ನಿಷ್ಯಳ ಸಕಳ ಸಕಳನಿಷ್ಕಳ ಕಳಾವಿಶಿಷ್ಟ ಸಗುಣ ನಿರ್ಗುಣಾತ್ಮಕ ಪರಮ ಶಿವಲಿಂಗ ಸೂರ್ಯೇಂದು ಪಾವಕ ಮಂಡಲತ್ರಯ ಮಧ್ಯಸ್ಥಿತ ದಹರಾಕಾಶಸ್ಥ ಶುದ್ಧ ಮನು ವಿಭ್ರಾಜಿತಾಂಗ.
--------------
ಇಮ್ಮಡಿ ಮುರಿಘಾ ಗುರುಸಿದ್ಧ / ಗುರುಸಿದ್ಧಸ್ವಾಮಿ