ಅಥವಾ
(2) (1) (28) (5) (0) (0) (0) (0) (0) (0) (0) (0) (0) (0) ಅಂ (1) ಅಃ (1) (2) (0) (2) (0) (0) (0) (0) (0) (0) (0) (0) (0) (0) (0) (0) (3) (0) (1) (0) (1) (3) (0) (43) (2) (109) (0) (0) (0) (0) (0) (3) (0) (3) (0) (0)

ಪದದಿಂದ ಪ್ರಾರಂಭವಾಗುವ ವಚನಗಳು:

ಮತ್ತೆಯುಂ ಸಮಸ್ತ ಕಾರ್ಯ ವಿಸ್ತಾರಮಯ ತ್ರಿಪುಟಿರೂಪ ವಿಶ್ವವೆಲ್ಲಂ ಮಂತ್ರಾಧಾರದೊಳಿರ್ದ ಕಾರಣಮಿದೆಲ್ಲಂ ಮಂತ್ರಾತ್ಮಕಮಾಗಿಯೆ ತಿಳಿವುದಾ ಮಂತ್ರ ಸ್ವರೂಪಮಾದೊಡೆ ಪರಾರ್ಧಕೋಟಿ ಸಂಖ್ಯೆಯಿಂದ ಕೂಡಿ ನಾದಬ್ರಹ್ಮಸ್ವರೂಪ ಪರಮಶಿವ ವದನಾರವಿಂದದತ್ತಣಿಂ ನಿರ್ಗತಮಾದುದರಿಂವಿನಾಯಾವ ಕ್ರಿಯೆಯುಮಿಲ್ಲಂ. ಸರ್ವವುಂ ವಂತ್ರಮಯವೆಂದೆ ನಿರವಿಸಿದೆಯಯ್ಯಾ, ಶರಣಾಂತರಂಗ ಶಯ್ಯ ಪರಮ ಶಿವಲಿಂಗಯ್ಯಾ.
--------------
ಇಮ್ಮಡಿ ಮುರಿಘಾ ಗುರುಸಿದ್ಧ / ಗುರುಸಿದ್ಧಸ್ವಾಮಿ
ಮತ್ತೆಯುಮೀಯೈದು ಹೃದಯಮಂತ್ರಕ್ಕೆಯುಂ ತರದಿಂ ನಮೋಂತವಾಗುಚ್ಚರಿಸಲ್ ``ಓಂ ಹ್ರಾಂ ಕೇವಲ ಹೃದಯಾಯ ನಮಃ' ಎಂದೀತೆರದೈದಕ್ಕೆಯುಚ್ಚರಿಪುದೆಂದು ಬೋದ್ಥಿಸಿದೆಯಯ್ಯಾ, ಪರಶಿವಲಿಂಗಯ್ಯ.
--------------
ಇಮ್ಮಡಿ ಮುರಿಘಾ ಗುರುಸಿದ್ಧ / ಗುರುಸಿದ್ಧಸ್ವಾಮಿ
ಮತ್ತಂ, ಸಚಿತ್ರ ತಮಂಧಾಕಾರಮಾದ ಪುರುಷತತ್ವದ, ಮಂಡಲತ್ರಯದ ತತ್ತಮಂಧರುಚಿಯಂತರ್ಗತ ಮಾಣಿಕ್ಯವರ್ಣದ, ಹಂಸಾಂಕಿತದೆರಡೆಸಳ ನೀರೇಜದ ಕರ್ಣಿಕೆಯ, ಸೂಕ್ಷ ್ಮರಂಧ್ರಗತ ಪ್ರಣವದ ಜ್ಯೋತಿರಾಕೃತಿಯಾದ, ಗುಹ್ಯ ಪ್ರಣವವೆ[ಮ]ಹಾಲಿಂಗಮದು, ನಿನ್ನ ಗೋಪ್ಯ ಸ್ವರೂಪಮಾದುದಯ್ಯಾ, ಪರಮ ಶಿವಲಿಂಗ ಪರಿಪೂರ್ಣ ಷಡಂಗಾ.
--------------
ಇಮ್ಮಡಿ ಮುರಿಘಾ ಗುರುಸಿದ್ಧ / ಗುರುಸಿದ್ಧಸ್ವಾಮಿ
ಮತ್ತಮಾ ಮಹಾಲಿಂಗದಧಃಕಂಜಾಖ್ಯವಾದನಾಹತಚಕ್ರದ ರುದ್ರಸ್ವರೂಪವೆಂತೆನೆ- ಕ ಕ್ರೋಡ್ಥೀಶಂ, ಖ ಚಂಡೇಶಂ, ಗ ಪಂಚಾಂತಕಂ, ಘ ಶಿವೋತ್ತಮಂ, ಙ ಏಕರುದ್ರಂ, [ಚ (?)], ಛ ಏಕನೇತ್ರರುದ್ರಂ, ಜ ಚತುರಾನನರುದ್ರಂ, ರುsು ಅಜೇಶರುದ್ರಂ, ಞ ಶರ್ವರುದ್ರಂ, ಟ ಸೋಮೇಶರುದ್ರಂ, ಠ ಲಾಂಗುಲಿರುದ್ರಂ. ಇಂತೀ ದ್ವಾದಶರುದ್ರರೀ ಮಹಾಲಿಂಗದನಾಹತಚಕ್ರದ ದ್ವಾದಶಕೋಷ್ಠದಳ ನ್ಯಸ್ತಕಾದಿರಾಂತ ದ್ವಾದಶ ವಿಕಲಾಕ್ಷರ ವಾಚ್ಯರೆಂದು ನಿರವಿಸಿದೆಯಯ್ಯಾ, ಪರಶಿವಲಿಂಗಯ್ಯ.
--------------
ಇಮ್ಮಡಿ ಮುರಿಘಾ ಗುರುಸಿದ್ಧ / ಗುರುಸಿದ್ಧಸ್ವಾಮಿ
ಮತ್ತಂ, ಗುಹ್ಯಮಂ ತ್ರಯೋದಶಾಂತದೊಳ್ಬೆರಸಿ ಪರಾಪರದೊಳೊಂದಿಸೆ ಹೌಂ ಎಂಬಾದಿಬೀಜಮಾಯ್ತು. ಮರಲ್ದುಂ, ಹ್ ಎಂಬ ಜೀವಮಂ ವರ್ಗಾದಿಯಾದಕಾರದೊಳ್ಮೋಳ್ಮೇಳಿಸಿ ಶಕ್ತಿಸಂಜ್ಞಿತ ಬಿಂದುವಂ ಬೆರಸೆ ಹಂ ಎನಿಸಿತ್ತು. ಬಳಿಕ್ಕಂ, ಶಕ್ತಿಸಂಜ್ಞಿತವಾದ ಸ್ ಎಂಬ ವ್ಯಂಜನಮಂ ಕಲಾಸಂಜ್ಞಿತವಾದ ಕಾರಣದೊಳ್ಪುದುಗೆ ಸ ಎನಿಸಿತ್ತು. ಮತ್ತೆಯುಂ, ವ್ಯಂಜನಶಕ್ತಿ ಬೀಜವಾದ ಸ್ ಎಂಬುದು ಮಾತ್ರಾದಿ ಸಂಜ್ಞಿತಕಾರಮನೊಂದೆ ಎಂದಿನಂತೆ ಸ ಎನಿ[ಸಿ] ತ್ತು. ಬಳಿಕಂ, ವರುಣವರ್ಗದ ನಾಲ್ಕನೆ ಯ ಎಂಬಕ್ಕರವುಂ ಮೂರನೆಯ ಸ್ವರಮನಸ್ಥಿ ಸಂಜ್ಞಿತಮಾದ ಶ್ ಎಂಬಕ್ಕರದೊಡನೆ ಕೂಡಿಸೆ ಶಿ ಎನಿಸಿತ್ತು. ಸೋಮಾಂತ ಸಂಜ್ಞಿತವಾದ ವಕಾರಮಂ ದ್ವಿಕಲಾಸಂಜ್ಞಿತವಾದಾಕಾರಮ ನೊಂದಿಸೆ ವಾ ಎನಿಸಿತ್ತು. ವಾಯುಬೀಜವಾದ ಯ್ ಎಂಬಕ್ಕರವನಾದಿಕಲಾಸಂಜ್ಞಿತ- ಮಾದಕಾರದೊಡನೆ ಕೂಡಿಸೆ ಯ ಎನಿಸಿತ್ತಿಂತು `ಹೌಂ ಹಂ ಸ ಸದಾಶಿವಾಯ' ಎಂಬಷ್ಟಾಕ್ಷರಮಂತ್ರಮಂ ನಿರವಿಸಿದೆಯಯ್ಯಾ, ಪರಮ ಶಿವಲಿಂಗೇಶ್ವರ.
--------------
ಇಮ್ಮಡಿ ಮುರಿಘಾ ಗುರುಸಿದ್ಧ / ಗುರುಸಿದ್ಧಸ್ವಾಮಿ
ಮತ್ತೆಯಂ, ಸ್ಥೂಲ ಪಂಚಾಕ್ಷರ ಮಂತ್ರಕ್ಕೆ ಅಕ್ಕರಮದೋಂಕಾರ ಪೂರ್ವಕಮಾಗೆ ಷಡಕ್ಷರವೀಯುಭಯ ಮಂತ್ರದ ನಮಃ ಎಂಬುದೇ ಹೃದಯಮಂತ್ರ ಪಲ್ಲವವಿದಲ್ಲಿರ್ದೊಡಂ ಹೃದಯಪಲ್ಲವವೆಯೆಂದರಿವುದೆಂದು ನಿರವಿಸಿದೆಯಯ್ಯಾ, ಪರಶಿವಲಿಂಗಯ್ಯ.
--------------
ಇಮ್ಮಡಿ ಮುರಿಘಾ ಗುರುಸಿದ್ಧ / ಗುರುಸಿದ್ಧಸ್ವಾಮಿ
ಮತ್ತೆಯುಂ, ಧನುರ್ಗತಿವಿಡಿದುದಕದಂತರಾಳದ, ಮಂಡಲತ್ರಯದುದಕದ, ಶ್ವೇತವರ್ಣದ ಬಾದಿಲಾಂತ ಮುಕ್ತಮಾದರುದಳದ ನಳಿನಕರ್ಣಿಕೆಯ, ಸೂಕ್ಷ ್ಮರಂಧ್ರಗತ ಪ್ರಣವದ ದಂಡಾಕೃತಿಯ, ಮಕಾರಮೆ ಗುರುಲಿಂಗಮದು, ನಿನ್ನ ವಾಮದೇವ ಸ್ವರೂಪಮಾದುದಯ್ಯಾ, ಪರಮ ಶಿವಲಿಂಗ ಪ್ರಚುರತರ ಚಿದಂಗಾ.
--------------
ಇಮ್ಮಡಿ ಮುರಿಘಾ ಗುರುಸಿದ್ಧ / ಗುರುಸಿದ್ಧಸ್ವಾಮಿ
ಮತ್ತೆಯುಂ, ಕರ್ನಿಕೆಯಂ ಬಳಸಿದಗ್ನಿಮಂಡಲ ಚಂದ್ರಮಂಡಲ ಸೂರ್ಯಮಂಡಲ ಸಂಜ್ಞಿತವಾದ ವೃತ್ತತ್ರಯದಲ್ಲಿ ತರದಿ ವ್ಯಾಪಕಾಕ್ಷರ ಸ್ವರಾಕ್ಷರ ಸ್ಪರ್ಶಾಕ್ಷರಂಗಳೆಂಬೀ ವರ್ಗತ್ರಯಮಂ ಪುದುಗೊಳಿಪುದಾ ತ್ರಿವರ್ಗಪದಕ್ಷರಗಣನೆ ನಾಲ್ವತ್ತೆಂಟಾಯಿತ್ತೆಂದು ನಿರವಿಸಿದೆಯಯ್ಯಾ, ಪ್ರಪಂಚಾತೀತ ಪರಮ ಶಿವಲಿಂಗೇಶ್ವರಾ.
--------------
ಇಮ್ಮಡಿ ಮುರಿಘಾ ಗುರುಸಿದ್ಧ / ಗುರುಸಿದ್ಧಸ್ವಾಮಿ
ಮತ್ತಂ ಹಸ್ತಮೆನೆ, ಚಿತ್ತಂ ಬುದ್ಧಿಯಹಂಕಾರಂ ಮನಂ ಜ್ಞಾನಂ ಭಾವಮೆಂಬೀ ಷಡ್ವಿಧಕರಣ ಕರಂಗಳಿಂ ಪಿಡಿದು ಪೂರ್ವೋಕ್ತ ಮುಖಲಿಂಗಂಗಳ್ಗಾ ಷಡ್ವಿಧ ಭಕ್ತ[ರ]ರಿಯಲದನಾ ಲಿಂಗಮುಖದಲ್ಲಿ ನೀನೇ ಉಣ್ಬೆಯಯ್ಯ, ಪರಮ ಶಿವಲಿಂಗೇಶ್ವರ ಚಿದ್ಗಗನ ಭಾಸ್ಕರ.
--------------
ಇಮ್ಮಡಿ ಮುರಿಘಾ ಗುರುಸಿದ್ಧ / ಗುರುಸಿದ್ಧಸ್ವಾಮಿ
ಮತ್ತಂ, ಶಿವನೆ ಜೀವನಾದೊಡೆ ಜೀವಂಗುಂಟಾದ ಜನನಾದಿ ದೋಷಂಗಳಿವಂಗುಂಟಾದಪುದಲಾಯೆನೆ ಸಾಗರತರಂಗನ್ಯಾಯದಂತಭೇದಂ. ಕಡಲುದಕಂ ತೃಣ ಕಣ ಜಲಮುಮೇಕಮಾದೊಡಂ ಕಡಲ ಗಂಬ್ಥೀರತೆ ತೃಣ ಕಣ ಜಲಕ್ಕಿಲ್ಲಮಂತೆ ಶಿವಂಗುಂಟಾದ ಗಂಬ್ಥೀರ ಮಹತ್ವಂಗಳ್ಬ ್ರಹ್ಮಾದಿ ಸ್ತಂಭಪರ್ಯಂತಮಾದ ಕಲ್ಪಿತಜೀವಜಾಲಕ್ಕಿಲ್ಲಮೆಂಬುದೆ ನಿಶ್ಚಿತಾರ್ಥಮಕ್ಕು- ಮದಾದೊಡಂ ಶಿವಂ ಪರಿಪೂರ್ಣನಪ್ಪುದರಿಂ ಮುನ್ನಿನಂತೆ ಸಾಗರತರಂಗನ್ಯಾಯದಿಂ ಜೀವನಾದನದು ಕಾರಣದಿಂ ಸದಾಶಿವಾದ್ಯವನಿಪರ್ಯಂತಮಾದ ಜಗತ್ತೇ ದೇಹವನುಳ್ಳ ಕಾರಣಂ ದೇಹಿಯಾ ಫೇನೂರ್ಮಿಕಣಗಳ್ತನ ಗಿರ್ದೊಡುಲುಹಿಲ್ಲದ ಸಮುದ್ರದಂತೆ, ಶಿವಂ ದೇಹವಿರ್ದೊಡಂ ದೇಹವಿಲ್ಲದವನೆಂದೇ ಬೋದ್ಥಿಸಿದೆಯಯ್ಯಾ, ಪರಮ ಶಿವಲಿಂಗ ಸ್ಫಟಿಕರುಚಿ ಸನ್ನಿಭಾಂಗ.
--------------
ಇಮ್ಮಡಿ ಮುರಿಘಾ ಗುರುಸಿದ್ಧ / ಗುರುಸಿದ್ಧಸ್ವಾಮಿ
ಮತ್ತಮೆರಡನೆಯ ಮೂಲಪ್ರಸಾದಮೆಂತೆನೆ- ಯಗ್ನಿಮಂಡಲ ಸ್ಥಿತಿಮಾರ್ಗದೊಳಗಣ ಮೊದಲ ಸಾತ್ವಿಕವರ್ಗದಲ್ಲಿ ಪ್ರದಕ್ಷಿಣೆಯಂ ಪೂರ್ವಾದಿ ದಳನ್ಯಸ್ತ ಲಿಪಿಗಳಾರನೆಯಕ್ಕರಮಂ ಚಂದ್ರಮಂಡಲದ ಸ್ಥಿತಿಮಾರ್ಗದೆರಡನೆಯ ರಾಜಸರ್ವನ್ಯಸ್ತ ಸ್ವರಾಕ್ಷರಂಗಳ ಪದಿಮೂರನೆಯದರ ಕಡೆಯಕ್ಕರಮುಮಂ ಪಂಚಮಮಾದ ಸಾಂತದಲ್ಲಿ ಬೆರಸಿ ಹ್ರೌವೆನಿಸಿತ್ತಾ ಹ್ರೌಗೆ ಆಧಾರ ಶಕ್ತಿ ಕಾರ್ಯ ಪರ ಬಿಂದುಗಳೆಂದೈವೆಸರಾದುದು. ಸಕಾರಮಾ ಬಿಂದುವೆ ಶೂನ್ಯಮದೆ ಸೊನ್ನೆಯು. ಆ ಸೊನ್ನೆಯನೊಂದಿ ಹ್ರೌಮೆನಲೊಡಂ ಮತ್ತೊಂದು ತೆರದಿನಾಧಾರಾಧೇಯ ಶಿವಶಕ್ತಿ ಕಾರ್ಯಕಾರಣ ಪರಾಪರ ನಾದಬಿಂದುಗಳೆಂದು ಜೋಡು ಜೋಡುವೆಸರಪ್ಪುದರಿಂದೆಯುಂ ಶಕ್ತಿಯೆನೆ ಬಿಂದು, ಬಿಂದುವೆನೆ ಸೊನ್ನೆಯು. ಸೊನ್ನೆವೆರೆದು ಹ್ರೌವೆಂಬಕ್ಕರವೆ ಹ್ರೌಮೆಂದು ಶಿವಮಂತ್ರವಾಯಿತ್ತದೆ ಮೂಲಪ್ರಸಾದವೆಂದು ನಿರವಿಸಿದೆಯಯ್ಯಾ, ಪರಾತ್ಪರ ಶಿವಲಿಂಗೇಶ್ವರ.
--------------
ಇಮ್ಮಡಿ ಮುರಿಘಾ ಗುರುಸಿದ್ಧ / ಗುರುಸಿದ್ಧಸ್ವಾಮಿ
ಮತ್ತಂ ತಮ್ಮ ತಮ್ಮ ಹಸ್ತದ ತೊಂಬತ್ತಾರಂಗುಲ ಪ್ರಮಾಣದ ದೇಹದ ಗುದದಿಂ ಮೇಲೆರಡಂಗುಲ ವೃಷಣದಿಂ ಕೆಳಗೆರಡಂಗುಲ- ಮುಭಯ ಮಧ್ಯದ ಚತುರಸ್ರದ ಭೂಮಿಯ ನಡುವಣ ತ್ರಿಕೋಣೆಯಂತರಾಳದ ಮಂಡಲತ್ರಯ ಧರಣಿಯ ಪೀತವರ್ಣದ ವಾದಿಸಾಂತಯುಕ್ತಮಾದ ಚೌದಳ ಕಮಲಕರ್ಣಿಕೆಯ ಸೂಕ್ಷ ್ಮರಂಧ್ರಗತ ಪ್ರಣವ ತಾರಕಾಕೃತಿಯ ನಕಾರಮೆ ಆಚಾರಲಿಂಗಮದು ನಿನ್ನ ಸದ್ಯೋಜಾತ ಸ್ವರೂಪಮಾದುದಯ್ಯಾ, ಪರಮ ಶಿವಲಿಂಗ ಪಟುತರ ಕೃಪಾರಸ ತರಂಗಾ.
--------------
ಇಮ್ಮಡಿ ಮುರಿಘಾ ಗುರುಸಿದ್ಧ / ಗುರುಸಿದ್ಧಸ್ವಾಮಿ
ಮತ್ತಮಾ ಶಕ್ತಿಬೀಜವಾದ ಸಕಾರವೆ ಚತುರ್ಥಸ್ವರದೊಡನೆ ಕೂಡಿ ನಾದ ಬಿಂದು ಸಂಜ್ಞಿತವಾದ ಸೊನ್ನಯೊಡಗಲಸೆ ಸೀಂ ಎಂಬ ವರ್ಣವಾದುದೀ ವರ್ಣವೆ ಎರಡನೆಯ ಶಕ್ತಿಬೀಜವೆಂದು ನಿರವಿಸಿದೆಯಯ್ಯಾ, ಪರಮ ಶಿವಲಿಂಗ ಪವಿತ್ರಾಂತರಂಗ.
--------------
ಇಮ್ಮಡಿ ಮುರಿಘಾ ಗುರುಸಿದ್ಧ / ಗುರುಸಿದ್ಧಸ್ವಾಮಿ
ಮತ್ತೆಯುಂ ಕ ಮಹಾಕಾಳಿ ಖ ಸರಸ್ವತಿ ಗ ಗೌರಿ ಘ ಮಂತ್ರಶಕ್ತಿ ಙ ಆತ್ಮಶಕ್ತಿ ಚ ಭೂತಮಾತೆ ಛ ಲಂಬೋದರಿ ಜ ದ್ರಾವಿಣಿ ರುsು ನಗರಿ ಞ ಖೇಚರಿ ಟ ಮಂಜರಿ ಠ ರೂಪಿಣಿ ಇಂತಿ ಮಹಾಲಿಂಗದ ಶಕ್ತಿಯೂಧ್ರ್ವಾಬ್ವಾಖ್ಯದನಾಹತಚಕ್ರದ ದ್ವಾದಶಕೋಷ್ಠದಳ ನ್ಯಸ್ತ ದ್ವಾದಶರುದ್ರಶಕ್ತಿಯರಂ ನಿರವಿಸಿದೆಯಯ್ಯಾ, ಪರಶಿವಲಿಂಗಯ್ಯ,.
--------------
ಇಮ್ಮಡಿ ಮುರಿಘಾ ಗುರುಸಿದ್ಧ / ಗುರುಸಿದ್ಧಸ್ವಾಮಿ
ಮತ್ತೆಯುಂ, ಕ್ರಿಯೆಯೆ ಶರೀರಂ ಮಂತ್ರವೆ ಜೀವವಿಮೆವೆರಡರ ಯೋಗವೆ ದೇಹ ಪ್ರಾಣ ಸಂಬಂಧವದೆ ಶಿವಸಾನ್ನಿಧ್ಯ ಕಾರಣ- ಮದರಿಂದೆ ಕ್ರಿಯಾಮಂತ್ರಂಗಳುಭಯಂಗೂಡಿ ದೇಹ ಪ್ರಾಣಮಯವೆಂದರಿದಾಚರಿಪುದೆಂದು ನಿರವಿಸಿದೆಯಯ್ಯಾ, ವಿಶ್ವಮಯ ವಿಶ್ವೇಶ್ವರ ಪರಶಿವಲಿಂಗೇಶ್ವರಾ.
--------------
ಇಮ್ಮಡಿ ಮುರಿಘಾ ಗುರುಸಿದ್ಧ / ಗುರುಸಿದ್ಧಸ್ವಾಮಿ
ಮರಲ್ದು, ಷಡಕ್ಷರನ್ಯಾಸಮಂ ಪೇಳ್ವೆನೆಂತನೆ ಓಂಕಾರಮಂ ಲಿಂಗದಲ್ಲಿಡುವುದು. ನಕಾರಮಂ ಶಕ್ತಿಪೀಠದೂಧ್ರ್ವಪಟ್ಟಿಕೆಯಲ್ಲಿರಿಸೂದು. ಮಕಾರಮನೂಧ್ರ್ವಕಂಜದಲ್ಲಿ ಮಡಗುವದು. ಶಿಕಾರಮಂ ವೃತ್ತದಲ್ಲಿ ಸಂಬಂದ್ಥಿಪುದು. ವಕಾರಮಂ ಅಧಃಕಂಜದಲ್ಲಿ ನ್ಯಾಸೀಕರಿಸುವುದು. ಯಕಾರಮನಧಃಪಟ್ಟಿಕೆಯಲ್ಲಿ ನೆಲೆಗೊಳಿಪುದೆಂದೀ ಷಡಕ್ಷರನ್ಯಾಸಮಂ ನಿರವಿಸಿದೆಯಯ್ಯಾ, ಪರಶಿವಲಿಂಗಯ್ಯ.
--------------
ಇಮ್ಮಡಿ ಮುರಿಘಾ ಗುರುಸಿದ್ಧ / ಗುರುಸಿದ್ಧಸ್ವಾಮಿ
ಮರಲ್ದುಂ ಬ ವಾಙ್ಮಯೀ ಭ ಜಯೆ ಮ ಸುಮುಖಿ ಯ ಈಶ್ವರಿ ರ ರೇವತಿ ಲ ಮಾಧವಿ ಇಂತೀ ಮಹಾಲಿಂಗದ ಶಕ್ತಿಯಧಃಕಂಜಸಂಜ್ಞಿತವಾದ ಸ್ವಾದ್ಥಿಷ್ಠಾನಚಕ್ರದ ಷಟ್ಕೋಷ್ಠದಳ ನ್ಯಸ್ತ ಷಡ್ರುದ್ರಶಕ್ತಿಯರಂ ನಿರವಿಸಿದೆಯಯ್ಯಾ, ಪರಶಿವಲಿಂಗಯ್ಯ.
--------------
ಇಮ್ಮಡಿ ಮುರಿಘಾ ಗುರುಸಿದ್ಧ / ಗುರುಸಿದ್ಧಸ್ವಾಮಿ
ಮರಲ್ದುಂ, ರಕ್ತವರ್ನಮಾದ ರಜೋಗುಣದಿಂ, ಸೂತ್ರಮಂ ರಚಿಪುದಾ ಶ್ವೇತಮಾದ ಸತ್ವಗುಣದಿಂ ದಳಂಗಳಂ ನಿಮಿರ್ಚುವುದು. ಕಪ್ಪುವಣ್ಣದ ತಮೋಗುಣದಿಂದಕ್ಕರಂಗಳ ಬರೆವುದು. ಪಳದಿವಣ್ಣದಿಂ ಕರ್ಣಿಕೆಯನೆಸಗುವದೆಂದು ಬೋದ್ಥಿಸಿದೆಯಯ್ಯಾ, ಪರಮ ಶಿವಲಿಂಗ ಪಾರ್ವತಿಯಂತರಂಗ.
--------------
ಇಮ್ಮಡಿ ಮುರಿಘಾ ಗುರುಸಿದ್ಧ / ಗುರುಸಿದ್ಧಸ್ವಾಮಿ
ಮತ್ರಮಾ ಶಿವಾತ್ಮಕ ಪ್ರಸಾದಮಂತ್ರವಾದೊಡೈದು ತೆರದಿಂ ಪೇಳಲ್ಪಟ್ಟುದೆಂತೆನೆ- ಮೊದಲ್ತಾನೆ ಶುದ್ಧಪ್ರಸಾದವೆರಡನೆಯದೆ ಮೂಲಪ್ರಸಾದಂ. ಮೂರನೆಯದೆ ತತ್ವಪ್ರಸಾದಂ. ನಾಲ್ಕನೆಯದೆ ಆದಿಪ್ರಸಾದ- ಮೈದನೆಯದೆ ಆತ್ಮಪ್ರಸಾದಮಿಂತಿವರೊಳ್ಮೊದಲ ಶುದ್ಧಪ್ರಸಾದಮೆಂತೆನೆ- ನಿರ್ದೋಷಮಾಗಿ ಶಿವನೆಂದುಕ್ತಮಾದ ನಾದ ಗುಹ್ಯ ಪರ ಜೀವ ದೇಹಿ ಭೂತ ಪಂಚಮ ಸಾಂತ ತತ್ವಾಂತ ಭೂತತಾಂತ ಶಿವಾರ್ಣ ಶೂನ್ಯಾವ್ಯಯಂಗಳೆಂಬ ತ್ರಯೋದಶ ನಾಮಪರ್ಯಾಯಾಂಕಿತವಾಗಿ ಸಮಸ್ತ ಪ್ರಾಣಿಗಳಂತಸ್ಥಿತಮಾದ ಶಿವಬೀಜವೆ ಸರ್ವ ಕಾರಣ ಕಾರಣವೆನಿಸಿದ ಶುದ್ಧಪ್ರಸಾದವೆನಿಸುಗು- ಮದೆ ಗುರುಮುಖದಿಂ ತನ್ನನರಿದಾತಂಗೆ ಭೋಗ ಮೋಕ್ಷಾದಿ ಸಕಲೈಶ್ವರ್ಯ ಸಿದ್ಧಿಗಳನೀವುದೆಂದೆಯಯ್ಯಾ, ಪರಮ ಶಿವಲಿಂಗ ನಿರಂತರ ಕೃಪಾಪಾಂಗಾ.
--------------
ಇಮ್ಮಡಿ ಮುರಿಘಾ ಗುರುಸಿದ್ಧ / ಗುರುಸಿದ್ಧಸ್ವಾಮಿ
ಮತ್ತಂ, ಪ್ರಣವಭೇದ ನಿರೂಪಣಾನಂತರದಲ್ಲಿ ಅಂಗಭೇದಮಂ ಪೇಳ್ವೆನೆಂತೆನೆ- ಶಿವಾಂಗ ಭೂತಾಂಗ ವಿದ್ಯಾಂಗ ಕೂಪಾಂಗ ಶಕ್ತ್ಯಂಗ ಸಾಮಾನ್ಯಂಗಂಗಳೆಂದಾರು ತೆರನೀ ಷಡಂಗಾಕ್ಷರಂಗಳಲ್ಲಿ ನಾದಬ್ರಹ್ಮಂ ಪರಿಪೂರ್ಣವಾಗಿಹುದಾ ಷಡಂಗಂಗಳಲ್ಲಿ ಮೊದಲ ಶಿವಾಂಗಕ್ಕೆ ವಿವರಂ- `ಆ ಈ ಊ Iೂ ಒ ಐ ಔ ಅಂ ಅಃ' ಎಂಬೀಯೊಂಬತ್ತ್ತು ವಿಕೃತಾಕ್ಷರಂಗಳಲ್ಲಿ ನಾಲ್ಕನೆಯ Iೂಕಾರಮಂ ಐದನೆಯ ಒ ಕಾರಮಂ ಎಂಟನೆಯ ಅಂ ಎಂಬ ಈ ಮೂರಕ್ಕರಮಂ ಬಿಟ್ಟು ಉಳಿದಾರಕ್ಕರಮಂ ಶಿವ ಸಂಜ್ಞಿತವಾದ ಹಕಾರದೊಡನೆ ಕೂಡಿಸೆ ಹಾಂ ಹೀಂ ಹೂಂ ಹೈಂ ಹೌಂ ಹಃ ಎಂಬೀ ಶಿವಷಡಂಗಮಂತ್ರವೆ ರಕಾರದಿಂ ಪೊರಗಪ್ಪುದರಿಂ ತಾಂತ್ರಿಕ ಶಿವಷಡಂಗವೆನಿಕುಂ. ರಕಾರದೊಡನೆ ಕೂಡಿ ಹ್ರಾಂ ಹ್ರೀಂ ಹ್ರೂಂ ಹೆಂ ಹ್ರೌಂ ಹ್ರಃ ಎಂಬ ವೈದಿಕ ಶಿವಷಡಂಗಮಂತ್ರವೆನಿಸುಗು ಮೀಯುಭಯಮಂತ್ರಕ್ಕಂ ಭೇದವಿಲ್ಲವೆಂದು ನಿರೂಪಿಸಿದೆಯಯ್ಯಾ, ಪರಶಿವಲಿಂಗಯ್ಯ.
--------------
ಇಮ್ಮಡಿ ಮುರಿಘಾ ಗುರುಸಿದ್ಧ / ಗುರುಸಿದ್ಧಸ್ವಾಮಿ
ಮತ್ತಮಾ, ಸಹಸ್ರಕಮಲದ ವಿಭಾಗೆಯಂ ಋಗ್ವೇದದಲ್ಲಿ ತೋರ್ದಪೆನೆಂತೆನೆ- `ಆಪ್ಮಾನಂ ತೀರ್ಥಂ ಕ ಇಹ ಪ್ರಾಚಥ್ಯೇನಪಥಾ ಪ್ರಪಿಬಂತಿಸುತಸ್ಯ ವದ್ಯಾವಾಪೃಥುವೀ ತಾವದಿತ್ತತ್ ಸಹಸ್ರಥಾ ಪಂಚದಶಾನ್ಯುಕ್ಥೌ ಯಾ- ಸಹಸ್ರಥಾ ಮಹಿಮಾನಃ ಸಹಸ್ರಃ ಯಾವದ್ಬ ್ರಹ್ಮಾದ್ಥಿಷ್ಠಿತಂ ತಾವತೀ ವಾಕ್' ಟೀಕೆ|| ಸಹಸ್ರಥಾ- ಸಾವಿರ ಪ್ರಕಾರವಾದ ಮಹಿಮಾನಃ- ಮಹಿಮರೂಪರಾದ ಚಿದಾನಂದಾತ್ಮರುಗಳು ಬ್ರಹ್ಮಾದ್ಥಿಷ್ಠಿತಂ- `ಬ್ರಹ್ಮಾತ್ಮನಾಂ ಬ್ರಹ್ಮಮಹದ್ಯೋನಿರಹಂ ಬೀಜಪ್ರದಃ ಪಿತಾ' ಎಂದುಂಟಾಗಿ, ಬ್ರಹ್ಮವೆಂದು ಪ್ರಕೃತಿ- ಆ ಪ್ರಕೃತಿಯಿಂದೆ ಅದ್ಥಿಷ್ಠಿತಂ- ಅದ್ಥಿಷ್ಠಿಸಲ್ಪಟ್ಟುದಾಗಿ ಸಹಸ್ರಃ- ಸಾವಿರಗಣನೆಯನುಳ್ಳುದಾಗಿ ಇತ್- ಲಯಾದ್ಥಿಷ್ಠಾನ ರೂಪವಾದ ತತ್- ಆ ಬ್ರಹ್ಮವು, ಯಾವತ್- ಎಷ್ಟು ಪ್ರಮಾಣವುಳ್ಳುದು ತಾವತ್- ಅಷ್ಟು ಪ್ರಮಾಣವಾಗಿ ಆಪ್ಮಾನಂ- ಪಾದೋದಕರೂಪವಾದ, ತೀರ್ಥಂ- ತೀರ್ಥವನು ಯೇನ ಪಥಾ- ಆವಮಾರ್ಗದಿಂದೆ, ಸು- ಚೆನ್ನಾಗಿ ಪ್ರ ಪಿಬಂತಿ- ಪಾನವ ಮಾಡುವರು ತಸ್ಯ- ಆ ಮಾರ್ಗದ, ಉಕ್ಥಾ- ನಿಲುಕಡೆಯಾದ ವಾಕ್- ಶಬ್ದಬ್ರಹ್ಮವು ಸಹಸ್ರಥಾ- ಸಾವಿರ ಪ್ರಕಾರವುಳ್ಳದಾಗಿ ದ್ಯಾವಾ ಪೃಥಿವೀ- ದ್ಯಾವಾಪೃಥುಗಳ ವ್ಯಾಪಿಸಿಕೊಂಡುದಾಗಿ ಪಂಚ ದಶಾನಿ- ಐವತ್ತು ವರ್ಣಂಗಳಾಕಾರವುಳ್ಳುದಾಗಿ ತಾವತಿ- ಅಷ್ಟಾಗಿಹುದೆಂದು, ಕಃ- ಚತುರ್ಮುಖದ ಬ್ರಹ್ಮನು ಇಹ- ಈರ್ಣಾಧ್ರ್ವದಲ್ಲಿ ಪ್ರಾವೋಚತ್- ನುಡಿದನೆಂದು- ನಿರವಿಸಿದೆಯಯ್ಯಾ ಪರಶಿವಲಿಂಗಯ್ಯ.
--------------
ಇಮ್ಮಡಿ ಮುರಿಘಾ ಗುರುಸಿದ್ಧ / ಗುರುಸಿದ್ಧಸ್ವಾಮಿ
ಮತ್ತಂ, ಆ ಶಾಂಭವಚಕ್ರಮೆ ಪೀಠ ಕಟ್ಯಾತ್ಮಕ ಸೂರ್ಯಮಂಡಲ, ವರ್ತುಳ ಗೋಮುಖಾತ್ಮಕ ಚಂದ್ರಮಂಡಲ, ನಾಳಗೋಳಕಾತ್ಮಕ ಪಾವಕಮಂಡಲಂಗಳೆಂದು ತ್ರಿಸ್ಥಾನಂಗಳ್. ಅವರಲ್ಲಿ ಪೂರ್ವೋಕ್ತ ಸಂಬಂದ್ಥಿತ ಸಕೀಲ ನಿಕರ ಸಮನ್ವಿತ ಷಟ್ಸ ್ಥಲಾತ್ಮಕವಾದ ಸೋಹಮೆಂಬಾತ್ಮಪ್ರಸಾದ. ಮನುವಿನ ವ್ಯಂಜನ ಸ್ ಹ್ ಎಂಬಕ್ಷರದ್ವಯಮಂ ಕುಂಭಕದೊಳ್ಳೋಪಿಸಲುಳಿಜಾಮೆಂಬೇಕಾಕ್ಷರಮಯವಾದ ಮಹಾಲಿಂಗವೆನಿಸಿತ್ತಾ ಮಹಾಲಿಂಗವೆ ಮಹಾಚಕ್ರವೆನಿಸಿತ್ತಾ ಮಹಾಚಕ್ರವೆ ಸಹಸ್ರಕಮಲವೆನಿಸಿತ್ತೆಂದು ನಿರವಿಸಿದೆಯಯ್ಯಾ, ಪರಶಿವಲಿಂಗಯ್ಯ.
--------------
ಇಮ್ಮಡಿ ಮುರಿಘಾ ಗುರುಸಿದ್ಧ / ಗುರುಸಿದ್ಧಸ್ವಾಮಿ
ಮತ್ತಂ, ಪೃಥ್ವೀ ಪೀತವರ್ಣಂ. ಉದಕಂ ಶ್ವೇತವರ್ಣಂ. ಅಗ್ನಿಯರುಣವರ್ಣಂ. ವಾಯು ಕೃಷ್ಣವರ್ಣಂ. ಆಕಾಶ ಧೂಮವರ್ಣಂ. ಉಳಿದುದೆ ಪಾವಕವರ್ಣಂ ಮಿಂತೀ ಷಡ್ವರ್ಣವೇ ಭೂತಾಂಗವರ್ಣವೆಂದು ನಿರೂಪಿಸಿದೆಯ್ಯಾ, ಪರಶಿವಲಿಂಗಯ್ಯ.
--------------
ಇಮ್ಮಡಿ ಮುರಿಘಾ ಗುರುಸಿದ್ಧ / ಗುರುಸಿದ್ಧಸ್ವಾಮಿ
ಮತ್ತಂ, ಪಿಂದಣ ಚಕ್ರೋದ್ಧರಣಮೆ ಈ ಲಿಂಗೋದ್ಧರಣ ವದೇಂಕಾರಣವೆಂದೊಡೆ, ಸಕಲಾತ್ಮರ ದ್ವಾದಶಾಂತದಲ್ಲಿ ಮಂಡಲತ್ರಯ ಮಧ್ಯದ ಸ್ಥೂಲ ಕರ್ಣಿಕಾಂತಸ್ಥಿತ ಸೂಕ್ಷ ್ಮರಂಧ್ರಗತವಾದ ಮೂಲಾಧಾರಂ ತೊಡಗಿ ಬ್ರಹ್ಮರಂಧಸಂಜ್ಞಿತ ಬ್ರಹ್ಮನಾಡಿ ಪರ್ಯಂತಂ ವ್ಯಾಪಕವಾಗಿ ನಾದಬ್ರಹ್ಮವೆನಿಪ ಪರಮ ಚೈತನ್ಯಕ ಪರಮಾತ್ಮನೆನಿಕುಮದೆ ನವನೀತದೊಳ್ ಘೃತವಿರ್ದಂತೆಲ್ಲರೆಳಿರ್ದೊಡೆಯು ಅಗ್ನಿಮುಖದೊಳ್ತುಪ್ಪವೆಂತು ಸಾಕ್ಷಾತ್ಕರಿಪುದಂತೆ ಜ್ಞಾನಗುರುಮುಖದಿಂ ಪ್ರತ್ಯಕ್ಷವಾಗಿ ಲಿಂಗಾಕಾರವಾಗಿರ್ಪುದಾ ಚಕ್ರೋದ್ಧರಣ ಕೋಷ್ಠದಳ ನ್ಯಸ್ತ ವಾಚಕ ವಾಚ್ಯರುದ್ರರುಂ ರುದ್ರಶಕ್ತಿಯರುಮೊಂದೆಯೆಂದು ನಿರವಿಸಿದೆಯಯ್ಯಾ, ಶಿವಲಿಂಗಯ್ಯ.
--------------
ಇಮ್ಮಡಿ ಮುರಿಘಾ ಗುರುಸಿದ್ಧ / ಗುರುಸಿದ್ಧಸ್ವಾಮಿ
ಮರಲ್ದುಂ ಗುಳಿ ತೆವರಿಲ್ಲದ ಗೋಮಯಾನುಲೇಪಿತ ಶುದ್ಧಭೂಮಿಯಲ್ಲಿ ರಾಜಾನ್ನದ ಹಿಟ್ಟಿನಿಂದಳ್ದಿದ ದಾರದಿಂ ಪೂರ್ವ ಪಶ್ಚಿಮಮಕ್ಕೆಯುಂ ದಕ್ಷಿಣೋತ್ತರಕ್ಕೆಯುಂ ತರದಿಂ ಪದಿನೇಳು ಪದಿನೇಳು ಗೆರೆಗಳಪ್ಪಂತೆ ಮಿಡಿಯೆ ಪದಿನಾರುಪಂತಿಗಳಹವಾದಕಡೆಗೆಯುಮಿವಂ ಗುಣಿಸೆ ಇನ್ನೂರೈವತ್ತಾರು ಮನೆಗಳಹವೆಂದು ನಿರೂಪಿಸಿದೆಯಯ್ಯಾ, ಪರಶಿವಲಿಂಗಯ್ಯ.
--------------
ಇಮ್ಮಡಿ ಮುರಿಘಾ ಗುರುಸಿದ್ಧ / ಗುರುಸಿದ್ಧಸ್ವಾಮಿ

ಇನ್ನಷ್ಟು ...