ದೇವತಾನ್ಯಾಸಾನಂತರದಲ್ಲಿ ಮಂತ್ರನ್ಯಾಸಮಂ ಪೇಳ್ವೆನೆಂತೆನೆ-
ಈ ಚಕ್ರದ ಕರ್ನಿಕಾವೃತ್ತದ ಚೌದಳದ ನಡುವೆ
ಶಿವಬೀಜವಾದ ಹಂಕಾರವನಂಕಿಪುದು.
ಮೂಡಣೆಸಳಲ್ಲಿ ಬಿಂದು ಸಂಜ್ಞಿತವಾದ ಸಕಾರವಂ ಲಿಖಿಪುದ.
ದಾತ್ಮಬೀಜವಾದಕಾರಮಂ ತೆಂಕಣೆಸಳಲ್ಲಿ ಬರೆವುದು.
ಪಡುವಣೆಸಳಲ್ಲಿ ಸೂಕ್ಷ ್ಮನಾದವೆನಿಸಿದೈಕಾರವನುದ್ಧರಿಪುದು.
ಬಡಗಣೆಸಳಲ್ಲಿ ವಿದ್ಯಾಬೀಜವಾದ ಕ್ಷಕಾರವನಿರಿಸುವದಿಂತು
ಕರ್ನಿಕಾಪೂರ್ವದಕ್ಷಿಣಪಶ್ಚಿಮೋತ್ತರಂಗಳೆಂಬಿವೈದರಲ್ಲಿ
ಹ ಸ ಅ ಐ ಕ್ಷ ಎಂಬೈದಕ್ಕರಂಗಳಂ ಭಾವಿಪುದೆಂದೆಯಯ್ಯಾ,
ಪರಮಗುರು ಪರಮ ಶಿವಲಿಂಗೇಶ್ವರಾ.