ಅಥವಾ
(2) (1) (28) (5) (0) (0) (0) (0) (0) (0) (0) (0) (0) (0) ಅಂ (1) ಅಃ (1) (2) (0) (2) (0) (0) (0) (0) (0) (0) (0) (0) (0) (0) (0) (0) (3) (0) (1) (0) (1) (3) (0) (43) (2) (109) (0) (0) (0) (0) (0) (3) (0) (3) (0) (0)

ಪದದಿಂದ ಪ್ರಾರಂಭವಾಗುವ ವಚನಗಳು:

ಈ ತೆರದಿಂ ತತ್ವಪ್ರಸಾದನಿರೂಪಣಾನಂತರದಲ್ಲಿ ಆದಿಪ್ರಸಾದಮಂ ಪೇಳ್ವೆನೆಂತೆನೆ- ಮೊದಲ ರಾಜಸವರ್ಗವೆನಿಸುವ ಚಂದ್ರಮಂಡಲದಿಂದ್ರದಳದಲ್ಲಿ ನ್ಯಸ್ತವಾದಕಾರಕ್ಕೆ ಹಕಾರದಲ್ಲಿ ಕೂಡಿಸೆ ಹೌ ಎಂದಾಯಿತ್ತದನಾಧಾರಾಧೇಯ ಸಂಜ್ಞಿತನಾದ ಬಿಂದುವಿನೊಡನೆ ಕೂಡಿಸೆ ಪೂರ್ವೋಕ್ತ ತಾಂತ್ರಿಕ ಮೂಲಪ್ರಸಾದಮಾದೊಡಂ ತನ್ನ ಔಯೆಂದಾದಿಶಕ್ತಿಯೊಡನೆ ಕೂಡಿಸೆ ಹೌಂ ಎಂದೆನಿಸಿ ಶಿವಮಯವಾದಾದಿಪ್ರಸಾದವಾದುದೆಂದು ನಿರವಿಸಿದೆಯಯ್ಯಾ, ಪರಶಿವಲಿಂಗ ಪರಿಪೂರ್ಣ ಪ್ರಭಾಂಗಾ.
--------------
ಇಮ್ಮಡಿ ಮುರಿಘಾ ಗುರುಸಿದ್ಧ / ಗುರುಸಿದ್ಧಸ್ವಾಮಿ
ಈ ಮಂತ್ರೋದ್ಧರಣಕ್ಕೆ ನಾಗರಲಿಪಿಯೆ ಸ್ಪಷ್ಟಮದೆಂತೆನೆ || || ತ-ರಾ ಯಿಂದು ಸ್ವರಂ ಓ0 ಇದು ವ್ಯಂಜನವಿಶಿಷ್ಟ ಮೂಲಪ್ರಸಾದ ಮಂತ್ರಮೂರ್ತಿ. ಮರಲ್ದುಮಾ ಶಿವಾತ್ಮಕ ಮೂಲಪ್ರಸಾದಮಂತ್ರಮೂರ್ತಿಗೆ ಶಾಂಭವೀರೇಖೆಯೆನಿಪಡ್ಡಗೆರೆಗಳ ಶೃಂಗಂಗಳೆ ತೋಳ್ಗ- ಳ್ಬಳಿಕ್ಕಮಗ್ನಿ ಸಂಜ್ಞಿತವಾದಧೋರೇಖೆಗಳೆ ಆ ಶಿವಬೀಜಮೂರ್ತಿಗೆ ಚರಣಂಗಳಿಂತೀ ಮೂಲಪ್ರಸಾದಮಂತ್ರವೆ ಶಿವಮೂತ್ರ್ಯಾಕಾರವೆಂದು ನಿರವಿಸಿದೆಯಯ್ಯಾ, ಮಹಾಗುರು ಶಿವಲಿಂಗೇಶ್ವರಾ.
--------------
ಇಮ್ಮಡಿ ಮುರಿಘಾ ಗುರುಸಿದ್ಧ / ಗುರುಸಿದ್ಧಸ್ವಾಮಿ
ಈ ಲಿಂಗಾರ್ಪಿತ ಷಡ್ವಿಧ ಪ್ರಸಾದಂಗಳಂ ಯಥಾಕ್ರಮದಿಂ ಪೂರ್ತಿಗೊಳಿಸಿ, ತತ್ಪ್ರಸಾದ ಸ್ವರೂಪನಾಗಿರ್ಪಂ ನೀನೆಯಯ್ಯಾ, ಪರಮ ಶಿವಲಿಂಗಯ್ಯಾ, ಪರಮುಕ್ತ ಹೃದಯಾಬ್ಜ ಶಯ್ಯಾ.
--------------
ಇಮ್ಮಡಿ ಮುರಿಘಾ ಗುರುಸಿದ್ಧ / ಗುರುಸಿದ್ಧಸ್ವಾಮಿ
ಈ ವಿದ್ಯಾಂಗ ನಿರೂಪಣಾನಂತರದಲ್ಲಿ ಶಕ್ತ್ಯಂಗಮಂ ಪೇಳ್ವೆನೆಂತೆನೆ- ಆಧಾರ ಸಂಜ್ಞಿತವಾದ ಸಕಾರಂ ಶಕ್ತಿ ಬೀಜವಾದಕಾರವೇ ಸ್ತ್ರೀತ್ವವಿಷಯವಾಗಿಯಾಕಾರಮಾಗಲದರೊಡನೆ ನಾದ ಬಿಂದು ಸಂಜ್ಞಿತವಾದ ಸೊನ್ನೆ ಬಂದು ಕೂಡಲದು ಸಾಂ ಎಂಬ ಪ್ರಥಮ ಶಕ್ತಿಬೀಜವೆಂದು ನಿರವಿಸಿದೆಯಯ್ಯಾ, ಪರಮ ಶಿವಲಿಂಗ ಕಾರುಣ್ಯಸಾಗರಾಪಾಂಗಾ.
--------------
ಇಮ್ಮಡಿ ಮುರಿಘಾ ಗುರುಸಿದ್ಧ / ಗುರುಸಿದ್ಧಸ್ವಾಮಿ
ಈ ತೆರದಿಂದೀ ಮಹಾಲಿಂಗದ ಪೂರ್ವೋಕ್ತವಾದಧಶ್ಚಕ್ರಂಗಳೆಲ್ಲ ಶಕ್ತಿ ಷಟ್ಚಕ್ರಂಗಳಲ್ಲಿ ನ್ಯಸ್ತವಾದ ಮೂವತ್ತೈದು ವ್ಯಂಜನ ಭಿಕ್ಷಾರವಾಚ್ಯರಾದ ಮೂವತ್ತೈದು ರುದ್ರಶಕ್ತಿಯರೆ, ನೀಲೋತ್ಪಲಾದಿಗಳಿಂದಲಂಕೃತ ಹಸ್ತಂಗಳಿಂ, ದಿವ್ಯದುಕೂಲ ಗಂಧಮಾಲ್ಯಾಭರಣಾದಿಗಳಿಂ, ಶೋಭೆವಡೆದು ವಿರಾಜಿಪರಾ ಷೋಡಶ ಸ್ವರಾಕ್ಷರ ವಾಚ್ಯಶಕ್ತಿಯರೆಲ್ಲರುಮಂತೆಯೆ ತಂತಮ್ಮ ನಿಜಲಾಂಛನಧಾರಿಣಿಯರಾಗಿರ್ಪರೀಯುಭಯ ಸ್ವರವ್ಯಂಜನಂಗಳೈದಶಕ್ತಿ ಬೀಜಂಗಳಾದ ಕಾರಣವಗ್ಯುಷ್ಣದಂತೇಕವಾಗಿ ಐವತ್ತೊಂದಕ್ಕರಂಗಳ ಗಣನೆಯಾದುದೆಂದು ನಿರವಿಸಿದೆಯಯ್ಯಾ, ಪರಶಿವಲಿಂಗಯ್ಯ.
--------------
ಇಮ್ಮಡಿ ಮುರಿಘಾ ಗುರುಸಿದ್ಧ / ಗುರುಸಿದ್ಧಸ್ವಾಮಿ