ಅಥವಾ
(2) (1) (28) (5) (0) (0) (0) (0) (0) (0) (0) (0) (0) (0) ಅಂ (1) ಅಃ (1) (2) (0) (2) (0) (0) (0) (0) (0) (0) (0) (0) (0) (0) (0) (0) (3) (0) (1) (0) (1) (3) (0) (43) (2) (109) (0) (0) (0) (0) (0) (3) (0) (3) (0) (0)

ಪದದಿಂದ ಪ್ರಾರಂಭವಾಗುವ ವಚನಗಳು:

ಬಳಿಕ್ಕಮೀ ಚಕ್ರದ ಕರ್ಣಿಕಾಕ್ಷರಮಂ ನಿರವಿಸಿ, ಮತ್ತಂ, ಕೇಸರಾಕ್ಷರಗಳಂ ಪೇಳ್ವೆನೆಂತೆನೆ- ಕರ್ಣಿಕೆಯ ಪೂರ್ವ ದಕ್ಷಿಣ ಪಶ್ಚಿಮೋತ್ತರಂಗಳಲ್ಲಿ ನ್ಯಸ್ತವಾದ ಚತುರ್ದಳಾಕ್ಷರಂಗಳೊಳಗೆ ಮೊದಲ ಪೂರ್ವದಳದ ಬಿಂದುಮಯ ಸಕಾರಕ್ಕೆ ಆಧಾರವೆಂದು ಶಕ್ತಿಯೆಂದು ಕಾರ್ಯವೆಂದು ಪರವೆಂದು ಬಿುದುವೆಂದೈದು ಪರ್ಯಾಯನಾಮಂಗಳ್. ಬಳಿಕ್ಕಂ, ದಕ್ಷಿಣದಳದಕಾರಕ್ಕೆ ಅಕಾರವೆಂದು ಆತ್ಮಬೀಜವೆಂದು ದೇಹಿಯೆಂದು ಕ್ಷೇತ್ರಜ್ಞನೆಂದು ಭೋಗಿಯೆಂದೈದು ಪರ್ಯಾಯನಾಮಂಗಳ್. ಮತ್ತಂ, ಪಶ್ಚಿಮದಳದ ನಾದಮಯವಾದೈಕಾರಕ್ಕೆ ಐಕಾರವೆಂದು ಶಿವಬೀಜವೆಂದಾಧೇಯವೆಂದು ಪರವೆಂದು ನಾದಾಂತವೆಂದೈದು ಪರ್ಯಾಯನಾಮಂಗಳ್. ಮರಲ್ದುಂ ಬಡಗಣದಳದ ಕ್ಷಕಾರಕ್ಕೆ ವಿದ್ಯಾಬೀಜವೆಂದು ಕ್ಷಕಾರವೆಂದು ಕೂಟಾರ್ನವೆಂದು ವರ್ಗಾಂತವೆಂದು ದ್ರವ್ಯವೆಂದೈದು ಪರ್ಯಾಯನಾಮಂಗಳ್. ಇತ್ತೆರದಿಂ ಕೇಸರಾಕ್ಷರದ ಚತುರ್ದಳಾಕ್ಷರಂಗಳಂ ನಿರವಿಸಿದೆಯಯ್ಯಾ, ಪರಮ ಶಿವಲೀಂಗೇಶ್ವರ ಕಲ್ಯಾಣಗುಣಾಕರ.
--------------
ಇಮ್ಮಡಿ ಮುರಿಘಾ ಗುರುಸಿದ್ಧ / ಗುರುಸಿದ್ಧಸ್ವಾಮಿ
ಬಳಿಕ್ಕಂ, ಷಡಂಗಮಂತ್ರನ್ಯಾಸಮಂ ಪೇಳ್ವೆನೆಂತೆನೆ- ಅಧಃಪಟ್ಟಿಕೆಯಲ್ಲಿ ಹ್ರಾಂ ಎಂಬ ಹೃದಯಮಂತ್ರಮಂ, ಅಧಃಕಂಜದಲ್ಲಿ ಹ್ರೀಂ ಎಂಬ ಶಿರೋಮಂತ್ರಮಂ, ಕಂಠದಲ್ಲಿ ಹ್ರೂಂ ಎಂಬ ಶಿಖಾಮಂತ್ರಮಂ, ಊಧ್ರ್ವಕಂಜದಲ್ಲಿ ಹ್ರೈಂ ಎಂಬ ಕವಚಮಂತ್ರಮಂ, ಊಧ್ರ್ವಪಟ್ಟಿಕೆಯಲ್ಲಿ ಹ್ರೌಂ ಎಂಬ ನೇತ್ರಮಂತ್ರಮಂ, ಆಜ್ಯಪ್ರಧಾರಿಕೆಯಲ್ಲಿ ಹ್ರಃ ಎಂಬ ಅಸ್ತ್ರಮಂತ್ರಮಂ, ಲಿಂಗದಲ್ಲಿ ನ್ಯಾಸಂಗೆಯ್ವುದೆಂದು ನಿರವಿಸಿದೆಯಯ್ಯಾ, ಪರಶಿವಲಿಂಗಯ್ಯ.
--------------
ಇಮ್ಮಡಿ ಮುರಿಘಾ ಗುರುಸಿದ್ಧ / ಗುರುಸಿದ್ಧಸ್ವಾಮಿ
ಬಳಿಕ್ಕೆಯುಮಗ್ನಿಮಂಡಲದ ವಾಯುದಿಕ್ಕಿನೇಕದಳದಲ್ಲಿ ರಕಾರಮ ನದರಾಚೆಯ ಚಂದ್ರಮಂಡಲದ ವಾಯುದಿಕ್ಕಿನ ದಳದ್ವಯದಲ್ಲಿ ವಾಯುದಳದೊಳಗೆ ಎಕಾರಮಂ, ವಾಯು ಕುಬೇರರಪದಿಕ್ಕಿನ ದಳದ್ವಯದಲ್ಲಿ ಐಕಾರಮ ನದರಾಚೆಯ ಸೂರ್ಯಮಂಡಲದ ದಳತ್ರಯದಲ್ಲಿ ವಾಯುದಳದೊಳಗೆಕಾರಮಂ, ವಾಯು ಕುಬೇರರಪದಿಕ್ಕಿನ ದಳದ್ವಯದಲ್ಲಿ ಥಕಾರ ದಕಾರಂಗಳಂ ಬರೆದು ಭಾವಿಪುದೆಂದೆಯಯ್ಯಾ, ಪರಮ ಶಿವಲಿಂಗೇಶ್ವರ ಪ್ರಚುರ ಕಲ್ಯಾಣ ಗುಣಾಕರ.
--------------
ಇಮ್ಮಡಿ ಮುರಿಘಾ ಗುರುಸಿದ್ಧ / ಗುರುಸಿದ್ಧಸ್ವಾಮಿ
ಬಳಿಕ್ಕಮಾ ಬಾಹ್ಯದ ಸೂರ್ಯಮಂಡಲದ ಬಹಿರ್ವಳಯದಲ್ಲಿ ಮೊದಲ ವರ್ಣದಿಂ ತರವಿಡಿದೆರಳ್ಪದಿನಾರಕ್ಕೆ ಮೂವತ್ತೆರಡೆಸಳ್ಗಳಂ ಬರೆದದರ ಮುಂದಣ ಚಂದ್ರಮಂಡಲದಲ್ಲಿ ಮೊದಲ ಮಂಡಲದೊಳೊಂ[ದೊಂ]ದು ಪಾಲಾದೊಳ್ದಳೋಪದಳಂ- ಗಳಾದ ಪದಿನಾರೆಸಳ್ಗಳಂ ಬರೆದಂತೆಯೆ ಅಗ್ನಿಮಂಡಲದೊಳೆಂಟೆಸಳ್ಗಳಂ ಲಿಖಿಸುತ್ತಂತೆಯೆ ಸೂಕ್ಷ್ಮ ಕರ್ಣಿಕೆಯಂ ಬಳಸಿ ಚೌದಳದ ನ್ಯಾಸಮಂ ತಿಳಿಯೆಂದೆಯಯ್ಯಾ, ಪರಮ ಶಿವಲಿಂಗ ಪ್ರಕಟಿತ ಸುಜ್ಞಾನಪ್ರಸಂಗ.
--------------
ಇಮ್ಮಡಿ ಮುರಿಘಾ ಗುರುಸಿದ್ಧ / ಗುರುಸಿದ್ಧಸ್ವಾಮಿ
ಬಳಿಕ್ಕಂ ಪ್ರಸಾದಿಸ್ಥಲಮೆ, ಪ್ರಸಾದಿಸ್ಥಲ ಗುರುಮಹಾತ್ಮೆಸ್ಥಲ ಲಿಂಗಮಹಾತ್ಮೆಸ್ಥಲ ಜಂಗಮಮಹಾತ್ಮೆಸ್ಥಲ ಭಕ್ತಮಹಾತ್ಮೆಸ್ಥಲ ಶರಣಮಹಾತ್ಮೆಸ್ಥಲ ಪ್ರಸಾದಮಹಾತ್ಮೆಸ್ಥಲಂಗಳೆಂದೇಳ್ತೆರನಾಗಿರ್ಪುದದುಂ ನಿನ್ನೊಡಲಾದಪುದಯ್ಯಾ, ಷಟ್ತ್ರಿಂಶ ತತ್ವಸಾರ ಸದ್ಭಕ್ತ ಹೃದಯಾಬ್ಜಸೂರ ಪರಮ ಶಿವಲಿಂಗೇಶ್ವರಾ.
--------------
ಇಮ್ಮಡಿ ಮುರಿಘಾ ಗುರುಸಿದ್ಧ / ಗುರುಸಿದ್ಧಸ್ವಾಮಿ
ಬಳಿಕ್ಕ, ಭೂತಾಂತಮನುದ್ಧರಿಸಿ ತ್ರಯೋದಶಾಂತ ಸ್ವರದೊಳದಂ ಬೆರಸಿ ಕಾರ್ಯಕಾರಣಮನೊಂದಿಸೆ ಹೌಂ ಎಂಬ ಮೊದಲ ಬೀಜವಾಯ್ತು. ಮತ್ತವಿೂ ಶವರ್ಗದ ಮೊದಲಕ್ಕರಮಾದ ಶಕಾರವ್ಯಂಜನದೊಳ್ತ್ರಿ ಕಲೆ- ಯೆನಿಪಿಕಾರಮಂ ಕೂಡೆ ಶಿ ಯೆನಿಸಲ್ ಸೋಮಸಂಜ್ಞ ಕುಬೇರವರ್ಗದ ಕಡೆಯ ವಕಾರಮಂ ದ್ವಿಕಲೆವೆಸರ ಆಕಾರದೊಡವೆರಸೆ ವಾಯೆಂದಾಯ್ತು. ಮತ್ತಂ, ಸೋಮವರ್ಗದಾದಿಯ ಯ್‍ಕಾರ ವ್ಯಂಜನಮನಾದಿ ಸ್ವರದೊಳ್ಕೂಡೆ ಯ ಎಂದೆನಿಸಿತ್ತು. ವರುಣವರ್ಗದ ಕಡೆಯ ನ್ ಎಂಬ ವ್ಯಂಜನಮನಾದಿ ಸ್ವರದೊಳ್ಕೂಡೆ ನ ಎಂದೆನಿಸಿತ್ತು. ವಾಯುವರ್ಗದ ಕಡೆಯ ಮ್ ಎಂಬ ವ್ಯಂಜನದೊಳ್ ಸ್ವರಾದಿಯಂ ಕೂಡೆ ಮ ಎಂದೆನಿಸಿತ್ತು. ಈ ಹೌಂ `ಸ ಶಿವಾಯ ನಮಃ' ಎಂಬೀ ಷಡಕ್ಷರವೆ ಅಬ್ಥಿವ್ಯದ್ಧಿಯೆಂಬ ಮಂತ್ರವೆಂದರಿಪಿದೆಯಯ್ಯಾ, ಪರಮಶಿವಲಿಂಗ ಪ್ರಮಥಾಂತರಂಗ.
--------------
ಇಮ್ಮಡಿ ಮುರಿಘಾ ಗುರುಸಿದ್ಧ / ಗುರುಸಿದ್ಧಸ್ವಾಮಿ
ಬಳಿಕ್ಕೆಯುಂ, ವಾಂತವೆ ಸೂಕ್ಷ ್ಮ ರುದ್ರಸಂಜ್ಞಿತವಾದಿಕಾರದೊಳ್ಬೆರೆಯೇ ಶಿ ಯೆನಿಸಿತ್ತು. ಲಾಂತವೆ ಅನಂತಾಖ್ಯ ರುದ್ರಸಂಜ್ಞಿತವಾದಾಕಾರದೋಳ್ಕೂದೆ ವಾ ಯೆನಿಸಿತ್ತು. ಮರುದ್ವಾಚ್ಯವಾದ ಮಾಂತವೆ ಯ ಯೆನಿಸಿತ್ತೀ ಮೂರಕ್ಕಾದಿಯಾದ ನಮಃ ಎಂಬ ಹೃದಯಪಲ್ಲವಂಗೂಡಿ ಪಂಚಾಕ್ಷರಮೆನಿಸಲದು `ತಾರಾಧ್ಯೇಯಂ ಷಡಕ್ಷರಂ' ಎಂದು ನಿರ್ವಚಿಸಿದೆಯಯ್ಯಾ, ಪರಶಿವಲಿಂಗಯ್ಯ.
--------------
ಇಮ್ಮಡಿ ಮುರಿಘಾ ಗುರುಸಿದ್ಧ / ಗುರುಸಿದ್ಧಸ್ವಾಮಿ
ಬಳಿಕ್ಕಂ ಶಿವಲಿಂಗಸ್ಥಲಮೆ, ಕಾಯಾನುಗ್ರಹ ಇಂದ್ರಿಯಾನುಗ್ರಹ ಪ್ರಾಣಾನುಗ್ರಹ ಕಾಯಾರ್ಪಿತ ಕರಣಾರ್ಪಿತ ಭಾವಾರ್ಪಿತ ಶಿಷ್ಯ ಶುಶ್ರೂಷಾ ಸೇವ್ಯಂಗಳೆಂದೊಂಬತ್ತಾದುದದೆ ತ್ವದೀಯ ರೂಪವಯ್ಯಾ, ಪರಮ ಶಿವಲಿಂಗ ಪರಾಪರ ಪಾಣಿಕುರಂಗಾ.
--------------
ಇಮ್ಮಡಿ ಮುರಿಘಾ ಗುರುಸಿದ್ಧ / ಗುರುಸಿದ್ಧಸ್ವಾಮಿ
ಬಳಿಕ್ಕಂ, ವಶಮನ್ಯಾಯದಂತೆ ಪೂರ್ಣಚಿತಿಯೆಂತೆನೆ- ಆದಿವಾಲಾದಿ ಮಂತ್ರವಾಹನಾಂತವಾದ ಪದಿನೆಂಟು ಕುರುಹುಗಳನೊಳಕೊಂಡು ಮಯೂರಾಂಡಕುಂಡಲ ಹಿರಣ್ಯ ಸಾಗರೋರ್ಮಿಗಳೆಂತಭೇದವಂತ- ಬ್ಥಿನ್ನ ಪ್ರಕಾಶವೆ ಪೂರ್ಣ ಚಿದ್ಗುಹ್ಯಮೆನಿಕುಮೆಂದೀ ಮಂತ್ರಜಾತದ ಪತ್ತೊಂಬತ್ತು ಲಕ್ಕಣಮಂ ನಿರವಿಸಿದೆಯಯ್ಯಾ, ಪರಶಿವಲಿಂಗಯ್ಯ, ಪರಾತ್ಪರ ಶರಣಾಂತರಂಗ ಶಯ್ಯಾ.
--------------
ಇಮ್ಮಡಿ ಮುರಿಘಾ ಗುರುಸಿದ್ಧ / ಗುರುಸಿದ್ಧಸ್ವಾಮಿ
ಬಳಿಕ್ಕಂ, ಜಪಾಕುಸುಮ ಕುಂದಪಾವಕ ಸುರೇಂದ್ರ ನೀಲ ಸಿಂಧೂರ ಹರಿತಾಳಗಳೆಂಬೀ ಷಡ್ವರ್ಣಗಳ್ವಿದ್ಯಾಂಗವರ್ಣವೆಂದರುಪಿದೆಯಯ್ಯಾ, ಪರಶಿವಲಿಂಗಯ್ಯ.
--------------
ಇಮ್ಮಡಿ ಮುರಿಘಾ ಗುರುಸಿದ್ಧ / ಗುರುಸಿದ್ಧಸ್ವಾಮಿ
ಬಳಿಕ್ಕಾದಿಪ್ರಸಾದ ನಿರೂಪಣಾನಂತರದಲ್ಲಿ- ಯಾತ್ಮಪ್ರಸಾದಮಂ ಪೇಳ್ವೆನೆಂತೆನೆ- ಭೂತಾಂತ ಸಂಜ್ಞೆಯನುಳ್ಳ ಹ್ ಎಂಬಕ್ಕರಕ್ಕದೇ ಪ್ರಕೃತಿಸಂಜ್ಞೆಯನುಳ್ಳ ಆಕಾರಮಂ ಪತ್ತಿಸೆ ಹ ಎಂಬುದಾಯ್ತು. ಮತ್ತಮಗ್ನಿಮಂಡಲದ ಸಾತ್ವಿಕವರ್ಗದಿಂದ್ರದಳದ ಸ್ ಎಂಬ ವ್ಯಂಜನಕ್ಕಾದಿ ಪ್ರಕೃತಿಯಂ ಕೂಡಿಸೆ ಸ ಎನಿಸಲೊ[ಡಿನ್ನ]ವರ ಮಧ್ಯದೊಳ್ಯಕ್ತಿಸಂಜ್ಞಿತವಾದ ಸೊನ್ನೆಯನುದ್ಧರಿಸೆ ಹಂಸ ಎಂದಾಯ್ತದೆ ಆತ್ಮಪ್ರಸಾದವೆನಿಸಿತ್ತದೆ ಸರ್ವರ ಹೃದ್ಗತವಾಗಿ ಜೀವಪ್ರಸಾದವಾದುದೆಂದು ತಿಳಿಪಿದೆಯಯ್ಯಾ, ಪರಮಗುರು ಪರಾತ್ಪರ ಪರಶಿವಲಿಂಗೇಶ್ವರ.
--------------
ಇಮ್ಮಡಿ ಮುರಿಘಾ ಗುರುಸಿದ್ಧ / ಗುರುಸಿದ್ಧಸ್ವಾಮಿ
ಬಳಿಕ್ಕಮೀ ಸಾಮಾನ್ಯಾಂಗ ಮಂತ್ರದೇವತೆಗಳಂ ಸೂಚನಮಂತ್ರದಿಂ ಸೂಚಿಸುವೆನೆಂತೆನೆ- ವಿಧಿ ವಿಷ್ಣು ಪುರಂದರ ರವಿ ಶಶಿ ಗುಹ ಭೈರವ ವಿಘ್ನೇಶಾಷ್ಟಮೂರ್ತಿ ವಸು ವಿದ್ಯೇಶ ಗಣೇಶ ಲೋಕಪಾಲ ವಜ್ರಾದ್ಯಾಯುಧ ಸಿದ್ಧರ ಗಂಧರ್ವಾಪ್ಸರೋ ಯಕ್ಷ ಕಿನ್ನರ ಭೂತ ಮುನಿ ಖೇಚರರೆಂಬಿವ- ರಿನ್ನುಳಿದ ಸಕಲ ದೇವತೆಗಳಾದ ನಾಮಂಗಳಂ ವರ್ಣಪಟದಲ್ಲಿ ಪೇಳ್ದೇಕೈಕಬೀಜಾಕ್ಷರಂಗಳ ಮೇಲೆ ಪಿಂದೆ ಪೇಳ್ದ ಷಟ್‍ಸ್ವರಂಗಳಂ ಪತ್ತಿಸಿ ಕಾರ್ಯ ಕಾರಣದೊಡವೆರಸಿ ಮೊದಲಂತೆ ಕಾಂ ಕೀಂ ಕೂಂ ಕೈಂ ಕೌಂ ಕಃ ಎಂದಾಯಿತ್ತಿದು ವಿಧಿವೆಸರಿದರಂತೆಲ್ಲಮಂ ನೋಡಿಕೊಂಬುದಿದು ಸಾಮಾನ್ಯಾಂಗವೆಂದು ನಿರವಿಸಿದೆಯಯ್ಯಾ, ಪರಮ ಶಿವಲಿಂಗಯ್ಯ.
--------------
ಇಮ್ಮಡಿ ಮುರಿಘಾ ಗುರುಸಿದ್ಧ / ಗುರುಸಿದ್ಧಸ್ವಾಮಿ
ಬಳಿಕ್ಕಮೀ ಚಕ್ರಸ್ಥ ವರ್ನಂಗಳ್ಗೆ ವರ್ಗಭೇದಮುಂಟದೆಂತೆನೆ- ಸ್ಥಿತಿವರ್ಗ ಸೃಷ್ಟಿವರ್ಗ ಸಂಹಾರವರ್ಗಂಗಳೆಂಬೀ ವರ್ಗಂಗಳವರಲ್ಲಿ ಮೊದಲ ಸ್ಥಿತಿವರ್ಗವೊಂದರೊಳಗೆ ಸಾತ್ವಿಕವರ್ಗ ರಾಜಸವರ್ಗ ತಾಮಸವರ್ಗಂಗಳಕ್ಕುಮಿವಕ್ಕೆ ವಿವರಂ. ಪೂರ್ವಾದೀಶಾನಾಂತಮಾಗಿ ಅಗ್ನಿ ಚಂದ್ರ ಸೂರ್ಯಮಂಡಲದಳ ನ್ಯಸ್ತಾಕ್ಷರಗಳೆಲ್ಲಂ ಸ್ಥಿತಿವರ್ಗ- ವಿವರೊಳ್ಸಾತ್ವಿಕವರ್ಗ ರಾಜಸವರ್ಗ ತಾಮಸವರ್ಗಗಳೆಂದು ತ್ರಿವಿಧಮಪ್ಪವರಲ್ಲಿ ಮೊದಲಗ್ನಿಮಂಡಲದೆಂಟು ದಳಂಗಳಲ್ಲಿಯ ಸ ಷ ಶ ವ ಲ ರ ಯ ಮ ಗಳೆಂಬಿವೆಂಟು ಸಾತ್ವಿಕಂಗಳೆನಿಪ- ವದರಾಚೆಯ ಚಂದ್ರಮಂಡಲದ ದಳೋಪದಳಂಗಳಲ್ಲಿ ಪೂರ್ವಾದೀಶಾನಾಂತಮಾಗಿ ನ್ಯಸ್ತವಾದ ಅ ಆ ಇ ಈ ಉ ಊ ಒ ಓ ಏ ಐ ಓ ಔ ಅಂ ಆಃ ಎಂಬೀ ಪದಿನಾರೆ ರಾಜಸಂಜ್ಞೆಂಗಳೆನಿಪ ವದರಾಚೆಯ ಸೂರ್ಯಮಂಡಲದ ಮೂವತ್ತೆರಡು ದಳಂಗಳೊಳಗ- ಣೆಂಟಕ್ಕರಂಗಳಗ್ನಿ ಮಂಡಲದೆಂಟುದಳಂಗಳಲ್ಲಿ ನ್ಯಸ್ತವಾಗಿರ್ದಪವವರ, ಶೂನ್ಯದಳಂಗಳೆಂಟಂ ಬಿಟ್ಟುಳಿದಿರ್ಪತ್ತು ನಾಲ್ಕು ದಳಂಗಳಲಿ ನ್ಯಸ್ತವಾದ ಕಖಗಘಙ ಚಛರುsುಜಞ ಟಠಡಢಣ ತಥದಧನ ಪಫಬಭಂಗಳೆಂಬಿರ್ಪತ್ತನಾಲ್ಕೆ ತಾಮಸಂಗಳೆನಿಪವೀ ವರ್ಗತ್ರಯಂ ಸ್ಥಿತಿವರ್ಗಗತವಾದುದೀ ಮೂರ್ಮೂರ್ವರ್ಗಾಕ್ಷರಂಗಳ ಸಂಜ್ಞೆಯಿಂದೆ ಮಂತ್ರಗಳನುದ್ಧರಿಪು ದಿನ್ನುಂ ಶುದ್ಧಪ್ರಸಾದ ಮೂಲಪ್ರಸಾದ ತತ್ವಪ್ರಸಾದ ಆದಿಪ್ರಸಾದ ಆತ್ಮಪ್ರಸಾದಂಗಳೆಂಬ ಪಂಚಪ್ರಸಾದ ಮಂತ್ರಗಳನೀ ಚಕ್ರಸ್ಥಾಕ್ಷರ ಸ್ಥಿತಿವರ್ಗದಿಂದುದ್ಧರಿಸಿ ಭಾವಿಪುದೆಂದೆಯಯ್ಯಾ, ಪರಮ ಶಿವಲಿಂಗೇಶ್ವರ ಸುಧಾಕರ ಶೇಖರಾ.
--------------
ಇಮ್ಮಡಿ ಮುರಿಘಾ ಗುರುಸಿದ್ಧ / ಗುರುಸಿದ್ಧಸ್ವಾಮಿ
ಬಳಿಕ್ಕಮಾ ಶಿವಸದಸದ್ವಸ್ತ ಸ್ವರೂಪಮುಂ ತಾನೆಯಾಗಿ ಶುದ್ಧ ಸದ್ರೂಪನಾದ ಕಾರಣಂ, ಬೂತಮೆನಿಪಾನಾಕಾಶದ್ವಾಯು ರೀತ್ಯಾದಿ ಶ್ರುತ್ಯುಕ್ತ ಕ್ರಮಸೃಷ್ಟಿಯ ಪಂಚಭೂತದ ಮೊದಲಾಕಾಶಮಯವಾದ. ಮತ್ತೆಯುಂ ಪಂಚಬ್ರಹ್ಮಮಯವಾದ. ಸದಾಶಿವನಪ್ಪುದರಿಂದೆಯುಂ ಪಂಚಮವಾದ. ಬಳಿಕ್ಕಂ, ಸೃಷ್ಟಿವರ್ಗಕ್ರಮದ ಶಕ್ತಿ ಬೀಜವಾದ. ಬಿಂದುಸ್ವರೂಪ ಸಕಾರದುಪರಿಯಲ್ಲಿರುತ್ತಿರ್ದ ಕಾರಣಂ ಶಿವಂ ಸಾಂತವೆನಿಪಂ. ಮತ್ತಂ, ನಿವೃತ್ತಿ ಕಲಾದಿ ಶಿವತತ್ವಾಂತವಾದ, ತತ್ವಾಶ್ರಯವಾದ ಕಾರಣಂ ಶಿವಂ ತತ್ವಾಂತನೆನಿಪನೆಂದು ನಿರವಿಸಿದೆಯಯ್ಯಾ, ಪರಮ ಶಿವಲಿಂಗೇಶ್ವರ ಪ್ರಸಿದ್ಧ ಮಹಿಮಾಕರ.
--------------
ಇಮ್ಮಡಿ ಮುರಿಘಾ ಗುರುಸಿದ್ಧ / ಗುರುಸಿದ್ಧಸ್ವಾಮಿ
ಬಳಿಕ್ಕಂ ಕಠಿಣ ಮೃದೂಷ್ಣ ಶೈತ್ಯಮಿತ್ರ ತೃಪ್ತಿಗಳೆಂಬಿವೆ ದ್ರವ್ಯಂಗಳು ಮತ್ತೆಯರ್ಪಿತಂಗಳಿಂ ಸುಗಂಧ ರಸ ರೂಪ ಸ್ಪರ್ಶ ಶಬ್ದ ತೃಪ್ತಿಗಳೆಂಬಿವೆ ಪದಾರ್ಥಂಗಳಿವೆಲ್ಲಂ ಮೊದಲಂತೆ ನಿನ್ನೊಳರ್ಪಿತಂಗಳಾದವಯ್ಯಾ, ಪರಮ ಶಿವಲಿಂಗೇಶ್ವರ ನಿರಾಳತರ ಗಂಭೀರಾ.
--------------
ಇಮ್ಮಡಿ ಮುರಿಘಾ ಗುರುಸಿದ್ಧ / ಗುರುಸಿದ್ಧಸ್ವಾಮಿ
ಬಳಿಕ್ಕಂ ಗುರುಲಿಂಗಮೆ, ಕ್ರಿಯಾಗಮ ಭಾವಾಗಮ ಜ್ಞಾನಾಗಮ ಸಕಾಯ ಅಕಾಯ ಪರಕಾಯ ಧರ್ಮಾಚಾರ ಭಾವಾಚಾರ ಜ್ಞಾನಾಚಾರಗಳೆಂ ದೊಂಬತ್ತಾಗಿರ್ಪುದದುಂ ನೀನೆ ಅಯ್ಯಾ, ನಿಶ್ಯಂಕ ನಿಷ್ಕಳಂಕ ಶಂಕರ ಪರಮ ಶಿವಲಿಂಗೇಶ್ವರಾ.
--------------
ಇಮ್ಮಡಿ ಮುರಿಘಾ ಗುರುಸಿದ್ಧ / ಗುರುಸಿದ್ಧಸ್ವಾಮಿ
ಬಳಿಕ್ಕಂ, ಶಿವಲಿಂಗದಲ್ಲಿ ಪಂಚಪ್ರಸಾದಮಂತ್ರ ನ್ಯಾಸಮಂ ಪೇಳ್ವೆನೆಂತೆನೆ- ಶಿವಲಿಂಗದ ಮಸ್ತಕದ ಮೇಲೆ ಹ ಎಂಬ ಶುದ್ಧ ಪ್ರಸಾದಮಂತ್ರಮಂ ನ್ಯಾಸಂಗೆಯ್ವುದು. ಸೂತ್ರ ಮಧ್ಯದಲ್ಲಿ ಹ್ರೌಂ ಎಂಬ ಮೂಲಪ್ರಸಾದಮಂತ್ರಮಂ ನ್ಯಾಸಂಗೆಯ್ವುದು. ಬಲದಭಾಗದಲ್ಲಿ ಹಂ ಎಂಬ ತತ್ವಪ್ರಸಾದಮಂ ನ್ಯಾಸಂಗೆಯ್ವು- ದೆಡದಭಾಗದಲ್ಲಿ ಹೌಂ ಎಂಬಾದಿಪ್ರಸಾದಮಂ ನ್ಯಾಸಂಗೆಯ್ವುದು. ಮಧ್ಯಸೂತ್ರದ ಬುಡದಲ್ಲಿ ಹಂಸ ಎಂಬಾತ್ಮಪ್ರಸಾದಮಂತ್ರಮಂ ನ್ಯಾಸಂಗೆಯ್ವುದಿಂತು `ಹ ಹ್ರೌಂ ಹಂ ಹೌಂ[ಹಂಸ]' ಎಂಬ ಪಂಚಪ್ರಸಾದಮಂತ್ರಂಗಳ ನ್ಯಾಸಂಗಳಂ ಶಿವಲಿಂಗದ ಪಂಚಸ್ಥಾನಂಗಳಲ್ಲಿ ನ್ಯಾಸೀಕರಿಸಿದೆಯಯ್ಯಾ, ಪರಮಗುರು ಪರಶಿವಲಿಂಗೇಶ್ವರಾ.
--------------
ಇಮ್ಮಡಿ ಮುರಿಘಾ ಗುರುಸಿದ್ಧ / ಗುರುಸಿದ್ಧಸ್ವಾಮಿ
ಬಳಿಕ್ಕಮಾ ಮಹಾಲಿಂಗದ ಕಂಠಸಂಜ್ಞಿತವಾದ ಮಣಿಪೂರಕಚಕ್ರ ರುದ್ರರೂಪಮೆಂತೆನೆ [ಡ,,,,,(?)], ಢ ಅರ್ಧನಾರೀಶಂ, ಣ ಉಮಾಕಾಂತಂ, ತ ಆಷಾಡಿ, ಥ ದಂಡಿ, ದ ಅತ್ರಿ ಧ ಮಾನಂ, ನ ಮೇಷ, ಪ ಲೋಹಿತಂ, ಫ ಶಿಖಿ, ಇಂತೀ ದಶರುದ್ರರೀ ಮಹಾಲಿಂಗದ ಮಣಿಪೂರಕಚಕ್ರ ದಶಕೋಷ*ದಳ ನ್ಯಸ್ತ ದಶಾಕ್ಷರವಾಚ್ಯರೆಂದು ನಿರವಿಸಿದೆಯಯ್ಯಾ, ಪರಶಿವಲಿಂಗಯ್ಯ.
--------------
ಇಮ್ಮಡಿ ಮುರಿಘಾ ಗುರುಸಿದ್ಧ / ಗುರುಸಿದ್ಧಸ್ವಾಮಿ
ಬಳಿಕಮೀ ಪಂಚವಿಂಶತಿ ಬ್ರಹ್ಮಂಗಳ ಲಕ್ಷಣಮಂ ಪೇಳ್ವೆನೆಂತೆನೆ- ಈಶಾನಾಮೀಶ್ವರಂ ಬ್ರಹ್ಮಶಿವಂ ಸದಾಶಿವಗೀ ಪಂಚಮೂತ್ರ್ಯಾಕೃತಿಗಳಾವಾವವುಂಟವೆ ಪಂಚ ಪ್ರಣವಾಕೃತಿಗಳಿವೆ ಸದ್ಯಾದಿ ಪಂಚಬ್ರಹ್ಮಂಗಳವರ ಲಕ್ಷಣಮೆಂತನೆ ಪೇಳ್ವೆಂ- ಕರ್ತೃಸಾದಾಖ್ಯ, ಕರ್ಮಸಾದಾಖ್ಯ, ಮೂರ್ತಿಸಾದಾಖ್ಯ, ಅಮೂರ್ತಿಸಾದಾಖ್ಯ, ಶಿವಸಾದಾಖ್ಯಂಗಳವರ ಭಾವಮಂ ತರದಿಂ ಸದ್ಯಾದಿಗಳಲ್ಲಿ ತಿಳಿವುದು. ಇಂತು ತಿಳಿದೊಡೆ ಪರಿವಿಡಿಯಿಂ ಪಂಚಪ್ರಸಾದಂಗಳ ಕುರುಪುಗಳುಂಟಾದಪವೆಂದು ನಿರವಿಸಿದೆಯಯ್ಯಾ, ಪರಶಿವಲಿಂಗಯ್ಯ.
--------------
ಇಮ್ಮಡಿ ಮುರಿಘಾ ಗುರುಸಿದ್ಧ / ಗುರುಸಿದ್ಧಸ್ವಾಮಿ
ಬಳಿಕ್ಕಂ ಜಂಗಮಲಿಂಗಮೆ, ಜೀವಾತ್ಮಾಂತರಾತ್ಮ ಪರಮಾತ್ಮ ನಿರ್ದೇಹಾಗಮ ನಿರ್ಭಾವಾಗಮ ನಷ್ಟಾಗಮಾದಿಪ್ರಸಾದಂತ್ಯ ಪ್ರಸಾದಿ ಸೇವ್ಯಪ್ರಸಾದಿಗಳೆಂಬೊಂಬತ್ತು ನಿಜಸ್ವರೂಪಯ್ಯಾ, ಪರಮ ಶಿವಲಿಂಗ ಪಾವನಚರಿತ್ರ, ಜಿತ ಸೂರ್ಪಕ ಭಾವಜಭಂಗಾ.
--------------
ಇಮ್ಮಡಿ ಮುರಿಘಾ ಗುರುಸಿದ್ಧ / ಗುರುಸಿದ್ಧಸ್ವಾಮಿ
ಬಳಿಕ್ಕಮಾ, ಲಿಂಗದಧಃಕಂಜಮೆ ಸ್ವಾಧಿಷಾ*ನಚಕ್ರವೆನಿಸುಗು- ಮದರ ಷಟ್ಕೋಷ*ಂಗಳೆ ಷಡ್ದಳಂಗಳವರಲ್ಲಿ, ಬ ಭ ಮ ಯ ರ ಲ ಎಂಬಾರಕ್ಕರಂಗಳ್ನ್ಯಸ್ತಮಾಗಿರ್ಕುಮೆಂದು ನಿರವಿಸಿದೆಯಯ್ಯ, ಪರಶಿವಲಿಂಗಯ್ಯ.
--------------
ಇಮ್ಮಡಿ ಮುರಿಘಾ ಗುರುಸಿದ್ಧ / ಗುರುಸಿದ್ಧಸ್ವಾಮಿ
ಬಳಿಕ್ಕಮಾಜ್ಯಪ್ರಧಾರಿಕೆಯೆ ಅಜ್ಞಾಚಕ್ರಮೆನಿಕು- ಮಲ್ಲಿಯ ದ್ವಿಕೋಷ*ಂಗಳೆ ದ್ವಿದಳಂಗಳವರಲ್ಲಿ ಳ ಕ್ಷ ಎಂಬೆರಡಕ್ಕರಂಗಳ್ನೆಲಸಿರ್ಕುಮೆಂದು ನಿರವಿಸಿದೆಯಯ್ಯಾ, ಪರಶಿವಲಿಂಗಯ್ಯ.
--------------
ಇಮ್ಮಡಿ ಮುರಿಘಾ ಗುರುಸಿದ್ಧ / ಗುರುಸಿದ್ಧಸ್ವಾಮಿ
ಬಳಿಕಂ ಪೂರ್ವೋಕ್ತ ಚಕ್ರಪ್ರಸಿದ್ಧ ಪ್ರಸಾದಮಂತ್ರವಾದೊಡೆ ಪ್ರಯೆನಲೊಡಂ ಶಿವಂ, ಸಾಯೆನಲೊಡಂ ಶಕ್ತಿ, ದಯೆನಲೊಡಂ ಶಿವಶಕ್ತಿಗಳೈಕ್ಯಂ. ಮತ್ತೆಯುಂ, ಪ್ರಸಾದ ಎಂದೊಡೆ ತರದಿಂ ಶಿವಶಕ್ತ್ಯಾತ್ಮಕವಾದ ಮುಕ್ತಿ ಭುಕ್ತಿಗಳಂ ಕೊಟ್ಟಪುದೆಂದವಯವಾರ್ಥಂ. ಮರಲ್ದುಮಜ್ಞಾನ ಜ್ಞಾನ[ಜ್ಞೇಯ]ಗಳೆಂದು ಮೂದೆರನಿವಕ್ಕೆ ತರದಿಂ ವಿವರಮದೆಂತೆನೆ- ಕಳ್ತಲೆಯಂತಿರ್ಪುದೆ ಅಜ್ಞಾನಂ. ಬೆಳಗಿನಂತಿರ್ಪುದೆ ಜ್ಞಾನಮಾ- ಬೆಳಗಿನಿಂ ತಿಳಯಲ್ತಕ್ಕ ಸೂರ್ಯನಂತಿರ್ಪುದೆ ಜ್ಞೇಯ- ಮಿಂತು ಕನಸಿನಂತೆ ಕಲ್ಪಿತಮದಜ್ಞಾನಾಪಹಾರಿಯಾದ ಸಮ್ಯಜ್ಞಾನದೀಪ್ತಿ ದೀಪ್ತವಾಗಿ-, ಯಗ್ಯುಷ್ಣದಂತವಿನಾಭಾವವಾದ ಶಿವಶಕ್ತ್ಯಾತ್ಮಕವಾದ ಪರಮಸ್ತುವೆ ಬೆಳಗಿಂ ಸೂರ್ಯನೆಂತೆಂತೆ ಸ್ವಕೀಯ ಚಿಚ್ಛಕ್ತಿಯಿಂ ಪ್ರಕಟಿತಮಾದಪುದಂತೆ `ಜ್ಞಾನಾದೇವ ತು ಕೈವಲ್ಯಂ' ವೆಂಬುದರಿಂದೆ ಕೇವಲಜ್ಞಾನ ಸದ್ರೂಪಮೆ ಶುದ್ಧಪ್ರಸಾದವೆಂದು ನಿರವಿಸಿದೆಯಯ್ಯಾ, ಶಿವಾಂತರಂಗ ಪರಶಿವಲಿಂಗಾ.
--------------
ಇಮ್ಮಡಿ ಮುರಿಘಾ ಗುರುಸಿದ್ಧ / ಗುರುಸಿದ್ಧಸ್ವಾಮಿ
ಬಳಿಕ್ಕಮಗ್ನಿಮಂಡಲದ ವರುಣದಿಕ್ಕಿನೇಕದಳದಲ್ಲಿ ಲಕಾರಮ ನದರಾಚೆಯ ಚಂದ್ರಮಂಡಲದ ದಳದ್ವಯದಲ್ಲಿ ವರುಣದಳದೊಳಗೆ ಞಕಾರಮಂ ವರುಣ ವಾಯುಗಳಪದಿಕ್ಕಿನ ದಳದಲ್ಲಿ ಙಕಾರಮಂ ಅದರಾಚೆಯ ಸೂರ್ಯಮಂಡಲದ ದಳತ್ರಯದಲ್ಲಿ ವರುಣ[ದಳ]ದೊಳಗೆ ಡಕಾರಮಂ ವರುಣ ವಾಯುಗಳಪದಿಕ್ಕಿನ ದಳದ್ವಯದಲ್ಲಿ ಢಕಾರ ಣಕಾರಂಗಳ- ನನುಗೊಳಿಸಿ ಭಾವಿಪುದೆಂದೆಯಯ್ಯಾ, ಪರಮ ಶಿವಲಿಂಗ ಫಣೀಶ್ವರ ಭೂಷಿತಾಂಗ.
--------------
ಇಮ್ಮಡಿ ಮುರಿಘಾ ಗುರುಸಿದ್ಧ / ಗುರುಸಿದ್ಧಸ್ವಾಮಿ
ಬಳಿಕ್ಕಮೀ ಸೂಕ್ಷ ್ಮ ಪಂಚಾಕ್ಷರ ನ್ಯಾಸಾನಂತರದಲ್ಲಿ ಸ್ಥೂಲಪಂಚಾಕ್ಷರ ನ್ಯಾಸಮಂ ಪೇಳ್ವೆನೆಂತೆನೆ- ನಕಾರಾದಿಯಕಾರಾಂತವಾದೈದಕ್ಕರಂಗಳನಾಧಾರಾದಿ ವಿಶುದ್ಧಂತ್ಯವಾದೈದುಚಕ್ರಂಗಳಲ್ಲಿರಿಸೂದೆಂದು ನಿರವಿಸಿದೆಯಯ್ಯಾ, ಪರಶಿವಲಿಂಗಯ್ಯ.
--------------
ಇಮ್ಮಡಿ ಮುರಿಘಾ ಗುರುಸಿದ್ಧ / ಗುರುಸಿದ್ಧಸ್ವಾಮಿ

ಇನ್ನಷ್ಟು ...