ಅಥವಾ
(2) (1) (28) (5) (0) (0) (0) (0) (0) (0) (0) (0) (0) (0) ಅಂ (1) ಅಃ (1) (2) (0) (2) (0) (0) (0) (0) (0) (0) (0) (0) (0) (0) (0) (0) (3) (0) (1) (0) (1) (3) (0) (43) (2) (109) (0) (0) (0) (0) (0) (3) (0) (3) (0) (0)

ಪದದಿಂದ ಪ್ರಾರಂಭವಾಗುವ ವಚನಗಳು:

ಗುಣ ರೂಪಂಗಳ ಮೀರಿ ಶಿಷ್ಯಜನ ಮನೋಜ್ಞಾನಾಂಧಕಾರಕ್ಕೆ ಸೂರ್ಯೋದಯನಾಗಿ, ಲಲಾಟಲೋಚನ ಚಂದ್ರಕಳಾ ದಶಭುಜಂಗಳಂ ಜ್ಞಾನ ಶಾಂತಿ ಬಾಹುದ್ವಯಂಗಳಲ್ಲಿ ಪುದುಂಗೊಳಿಸಿ, ಭುವನ ಹಿತಾರ್ಥಮಾಗಿ ದೇಶಿಕಸ್ವರೂಪಮಂ ತಾಳ್ದು, ದೀಕ್ಷಾ ಶಿಕ್ಷಾ ಸ್ವಾನುಭಾವಾತ್ಮಕನಾಗಿ ಚರಿಪ ಷಟ್ಸ ್ಥಲಬ್ರಹ್ಮ ಪ್ರಬೋಧಕ ಪ್ರಭು ಪ್ರಸನ್ನಮೂರ್ತಿ ಪರಮ ಶಿವಲಿಂಗ ಭಕ್ತಜನಾಂತರಂಗಾ. ಮನ್ಮಾನಸಾಂಭೋಜ ಭೃಂಗ ತವ ಪಾದ ಪಲ್ಲವಂಗಳೆ ಮನೋವಚನಕಾಯಂಗಳಿಂ ತ್ರಿವಾರಂ ಶರಣು ಶರಣು.
--------------
ಇಮ್ಮಡಿ ಮುರಿಘಾ ಗುರುಸಿದ್ಧ / ಗುರುಸಿದ್ಧಸ್ವಾಮಿ
ಗಂಧ ರಸ ರೂಪ ಸ್ಪರ್ಶ ಶಬ್ದ ತೃಪ್ತಿಗಳೆಂಬಿವಕ್ಕೆ ವಿವರಂ- ಗಂಧರೂಪರುಚಿ ತೃಪ್ತಿ. ರಸರೂಪರುಚಿ ತೃಪ್ತಿ. ರೂಪರೂಪರುಚಿ ತೃಪ್ತಿ. ಸ್ಪರ್ಶರೂಪರುಚಿ ತೃಪ್ತಿ. ಶಬ್ದರೂಪರುಚಿ ತೃಪ್ತಿ. ತೃಪ್ತಿರೂಪರುಚಿ ತೃಪ್ತಿ. ಇಂತೀಯಷ್ಟಾದಶ ಸಕೀಲಂಗಳೆಯೊಂದೊಂದು ಲಿಂಗದೊಳಾರಾರುಲಿಂಗಗಳ್ಮೀಸಲೊಂದೊಂದರೊಳು ಪದಿನೆಂಟು ಕೂಡಿ ನೂರೆಂಟು ತೆರದರ್ಪಣಮಾಗಲದೆಲ್ಲಂ ನಿಜ ವಿಲಾಸವಯ್ಯಾ, ಪರಮ ಶಿವಲಿಂಗ ಪ್ರಪಂಚ ಸಾರ ನಿಸ್ಸಂಗಾ.
--------------
ಇಮ್ಮಡಿ ಮುರಿಘಾ ಗುರುಸಿದ್ಧ / ಗುರುಸಿದ್ಧಸ್ವಾಮಿ