ಅಥವಾ

ಪ್ರಾರಂಭ ಪದದ ಹುಡುಕು

(19) (5) (2) (1) (6) (0) (0) (0) (4) (4) (0) (1) (0) (0) ಅಂ (19) ಅಃ (19) (27) (0) (23) (3) (0) (4) (0) (6) (0) (0) (0) (0) (2) (0) (0) (7) (0) (7) (0) (17) (6) (0) (19) (3) (31) (0) (5) (0) (1) (13) (8) (1) (23) (10) (0)
-->

ಪ್ರಾರಂಭ ಪದದ ಹೆಸರಿರುವ ವಚನಕಾರರು

ಉಗ್ಘಡಿಸುವ ಗಬ್ಬಿದೇವಯ್ಯ
ಕಾಲ ಸು. 1160. ಬಸವಣ್ಣನ ಮಹಾಮನೆಯ ಬಾಗಿಲು ಕಾಯುವ ಕೆಲಸದಲ್ಲಿದ್ದವನು. ಈತನ 10 ವಚನಗಳು ದೊರೆತಿವೆ. ತೆಳು ಹಾಸ್ಯ, ಕಾಯಕನಿಷ್ಠೆ ಇವು ಇವನ ವಚನಗಳಲ್ಲಿ ಕಾಣುತ್ತವೆ.
ಉಪ್ಪರಗುಡಿಯ ಸೋಮಿದೇವಯ್ಯ
ಕಾಲ ಸು. 1160. 11 ವಚನಗಳು ದೊರೆತಿವೆ. ಕಾಯ ಮತ್ತು ಆತ್ಮ, ಕ್ರಿಯೆ ಮತ್ತು ಜ್ಞಾನ ಇವುಗಳ ಸಂಬಂಧವನ್ನು ವಿವೇಚಿಸಿದ್ದಾನೆ.
ಉರಿಲಿಂಗದೇವ
ಕಾಲ 1160. ಸ್ಥಳ: ಅವಸೆ ಕಂಧಾರ. ಪುಲಿಗೆರೆಯ ಮಹಾಲಿಂಗದೇವನ ಗುರುಪರಂಪರೆಗೆ ಸೇರಿದ ಶಿವಲೆಂಕ ಮಂಚಣ್ಣನ ಶಿಷ್ಯ. ದಲಿತ ವಚನಕಾರ ಉರಿಲಿಂಗಪೆದ್ದಿಯು ಉರಿಲಿಂಗದೇವನ ಶಿಷ್ಯ. ಉರಿಲಿಂಗದೇವನ ಲಿಂಗನಿಷ್ಠೆಯನ್ನು ಪರೀಕ್ಷಿಸಲೆಂದು ಅನ್ಯಮತೀಯರು ಅವನ ಗುಡಿಸಿಲಿಗೆ ಬೆಂಕಿ ಇಟ್ಟರೂ ಆತ ವಿಚಲಿತನಾಗದೆ ಪೂಜಾಮಗ್ನನಾಗಿದ್ದ ಎಂಬ ಕಥೆ ಇದೆ. ಈತನ 48 ವಚನಗಳು ದೊರೆತಿವೆ. ಅಕ್ಕಮಹಾದೇವಿಯ ಶೈಲಿ ಮತ್ತು ಮನೋಧರ್ಮಗಳು ಇವನ ರಚನೆಗಳಲ್ಲೂ ಕಾಣುತ್ತವೆ. ತನ್ನನ್ನೇ ಪತ್ನಿ ಎಂದೂ ಶಿವನನ್ನು ಪತಿ ಎಂದೂ ಭಾವಿಸಿದ ನಿಲುವು ಇವನ ರಚನೆಗಳಲ್ಲಿ ಕಾಣುತ್ತದೆ.
ಉರಿಲಿಂಗಪೆದ್ದಿ
ಕಾಲ ಸು. 1160. ಕಳ್ಳತನ ಮಾಡುತಿದ್ದ ಪೆದ್ದಿ ಉರಿಲಿಂಗದೇವನ ಶಿಷ್ಯನಾಗಿ ಅವನ ನಂತರ ಅದೇ ಪೀಠದ ಮುಖ್ಯಸ್ಥನಾದ. ಅಸ್ಪೃಶ್ಯ ಜನಾಂಗದ ಪೆದ್ದಿ ವಿದ್ವಾಂಸನಾಗಿ, ಅನುಭಾವಿಯಾಗಿ, ಮಠದ ಮುಖ್ಯಸ್ಥನೂ ಆದದ್ದು ಆ ಕಾಲದ ಮಹತ್ವದ ಸಂಗತಿ. ಈತನ 366 ವಚನಗಳು ದೊರೆತಿವೆ. ಕರ್ನಾಟಕದಲ್ಲಿರುವ ಅಸ್ಪೃಶ್ಯ ಜನಾಂಗಗಳಿಗೆ ಸೇರಿದ ಮಠಗಳನ್ನು ಉರಿಲಿಂಗಪೆದ್ದಿಗಳ ಮಠವೆಂದೇ ಕರೆಯುವ ರೂಢಿ ಇದೆ.
ಉರಿಲಿಂಗಪೆದ್ದಿಗಳ ಪುಣ್ಯಸ್ತ್ರೀ ಕಾಳವ್ವೆ
ಕಾಲ ಸು. 1160. ಈಕೆ ಉರಿಲಿಂಗಪೆದ್ದಿಯ ಪತ್ನಿ ಎಂಬುದನ್ನು ಬಿಟ್ಟರೆ ಉಳಿದ ವಿವರ ತಿಳಿದಿಲ್ಲ. ಈಕೆಯ 12 ವಚನಗಳು ದೊರೆತಿವೆ. ಕುಲ-ಜಾತಿಗಳ ವಿಡಂಬನೆ, ವ್ರತದ ಮಹತ್ವ ಮೊದಲಾದ ಸಂಗತಿಗಳ ಬಗ್ಗೆ ಹೇಳಿದ್ದಾಳೆ.
ಉಳಿಯುಮೇಶ್ವರ ಚಿಕ್ಕಣ್ಣ
ರಾಯಚೂರು ಜಿಲ್ಲೆಯ ಸಿಂಧನೂರು ತಾಲ್ಲೂಕಿನ ದೇವರಗುಡಿ ಗ್ರಾಮಕ್ಕೆ ಸೇರಿದವನು. ಕಲ್ಲೇದೇವರಪುರದ ಕ್ರಿಶ 1279ರ ಶಾಸನದಲ್ಲಿ ಬರುವ ಚಿಕ್ಕ ಎಂಬ ಹೆಸರು ಈತನದೇ ಇರಬಹುದು ಎಂಬ ಊಹೆ ಇದೆ. ದೇವರಗುಡಿಯ ಶಾಸನಗಳಿಂದ ಈತ ಕಾಳಾಮುಖ ಶೈವ ಆಚಾರ್ಯನೆಂದು ತಿಳಿಯುತ್ತದೆ. ಈತನ 12 ವಚನಗಳು ದೊರೆತಿವೆ.