ಅಂಗಾಲ ಮೇಲಣ ದೊಡ್ಡಂಗುಷ್ಟ ಮಧ್ಯದಲ್ಲಿ ಪೃಥ್ವಿನಾಡಿ,
ನಾಬ್ಥಿ ಮೂತ್ರನಾಳದ ನಾಲ್ಕಂಗುಲ ಮಧ್ಯದಲ್ಲಿ ಅಪ್ಪುನಾಡಿ,
ಉಡಸೂತ್ರ ನಾಬ್ಥಿ ಮೊದಲಾದ
ಪಂಚಾಂಗುಲ ಮಧ್ಯದ ಮೇಲೆಸೆಯಲ್ಲಿ [ತೇಜನಾಡಿ]
ಇಡಾ ಪಿಂಗಳ ಮಧ್ಯದಲ್ಲಿ ವಾಯುನಾಡಿ,
ಸುಷುಮ್ನನಾಳದ ಅಂಗುಲ ನಡುಮಧ್ಯದಲ್ಲಿ ಆಕಾಶಕೈದಿದನಾಡಿ,
ಇಂತೀ ಪಂಚಪಥವನೈದುವ ನಾಡಿಯಲ್ಲಿ ಆಡುವ
ಆತ್ಮನ ವಿವರದ ದೆಸೆಯನರಿದು,
ಇಂತೀ ಐದು ಮುಚ್ಚಿ ಮೇಗಳ ಬ್ರಹ್ಮರಂಧ್ರದಲ್ಲಿಯೆಯಿದರೆಮ್ಮ ವೈದ್ಯರು.
ನಾದ ಬಿಂದು ಕಳೆಗತೀತ ನೋಡಾ,
ಮರುಳಶಂರಪ್ರಿಯ ಸಿದ್ಧರಾಮೇಶ್ವರಲಿಂಗವು.