ಅಥವಾ
(5) (1) (1) (0) (0) (0) (0) (0) (0) (0) (1) (0) (0) (0) ಅಂ (1) ಅಃ (1) (3) (0) (0) (0) (0) (0) (0) (1) (0) (0) (0) (0) (0) (0) (0) (1) (0) (0) (0) (2) (1) (0) (0) (1) (1) (0) (0) (0) (0) (2) (0) (0) (0) (1) (0)

ಪದದಿಂದ ಪ್ರಾರಂಭವಾಗುವ ವಚನಗಳು:

ಜಿಹ್ವೆಂದ್ರಿಯವೆಂಬ ರೋಗ ಬಾಯಲ್ಲಿ ಹುಟ್ಟಿ, ಗುಹ್ಯೇಂದ್ರಿಯವೆಂಬ ರೋಗ ಚಿತ್ತದಲ್ಲಿ ತತ್ತರಿಸುತ್ತಿದೆ ನೋಡಾ. ಆಸೆಯೆಂಬ ರೋಗ ಸರ್ವಾಂಗದಲ್ಲಿ ಹೊಕ್ಕು, ಸರ್ವರಿಗೆಲ್ಲಕ್ಕೂ ಪಾಷಂಡಿ ವೇಷಧಾರಿಗಳೆನಿಸುತ್ತಿದೆ ನೋಡಾ. ಈ ರೋಗ ನಿರೋಗವಹುದಕ್ಕೊಂದು ಮದ್ದುಂಟು. ಅದು ಬೇರು ಮೂರು, ಶಾಖೆ ಐದು, ಎಲೆ ಆರು, ಕೊನೆ ಇಪ್ಪತ್ತೈದು. ಇಂತೀ ಗಿಡುವ ಸಹ ಮೂಲಸಹಿತ ತಂದು, ಕಂಗಳ ಕಲ್ಲಿನಲ್ಲಿ ಇಂಗಿಸಿ, ಆನಂದಾಶ್ರುವೆಂಬ ಜಲವನೆರೆದು, ಚಿತ್ತಶುದ್ಧವೆಂಬ ಗುಂಡಿನಲ್ಲಿ ಲಕ್ಷಿಸಿ ಅರೆಯಲಾಗಿ, ಮದ್ದು ನೀರೊಳಡಗಿತ್ತು . ಕಲ್ಲು ಗುಂಡಿನಲ್ಲಿಗೆ ಸಾಧ್ಯವಲ್ಲದೆ ಹೋಯಿತ್ತು, ಮರುಳಶಂಕರಪ್ರಿಯ ಸಿದ್ಧರಾಮೇಶ್ವರಲಿಂಗದಲ್ಲಿಗೆ.
--------------
ವೈದ್ಯ ಸಂಗಣ್ಣ