ಅಥವಾ
(5) (1) (1) (0) (0) (0) (0) (0) (0) (0) (1) (0) (0) (0) ಅಂ (1) ಅಃ (1) (3) (0) (0) (0) (0) (0) (0) (1) (0) (0) (0) (0) (0) (0) (0) (1) (0) (0) (0) (2) (1) (0) (0) (1) (1) (0) (0) (0) (0) (2) (0) (0) (0) (1) (0)

ಪದದಿಂದ ಪ್ರಾರಂಭವಾಗುವ ವಚನಗಳು:

ನಾನಾ ರೋಗಂಗಳು ಬಂದು ದೇಹವ ಹಿಡಿದಲ್ಲಿ ಶಿವಾರ್ಚನೆಯ ಬೆರಕೊಳ್ಳಿ, ಸಕಲಪುಷ್ಪಂಗಳಿಂದ ಪೂಜೆಯ ಮಾಡಿಕೊಳ್ಳಿ, ಪಂಚಾಕ್ಷರಿ ಪ್ರಣಮವ ತಪ್ಪದೆ ತ್ರಿಸಂದ್ಥಿಯಲ್ಲಿ ನೆನಹುಗೊಳ್ಳಿ, ಇವರಿಂದ ರುಜೆದರ್ಪಂಗಡಗು, ಮರುಳಶಂಕರಪ್ರಿಯ ಸಿದ್ಧರಾಮೇಶ್ವರ ಲಿಂಗ ಸಾಕ್ಷಿಯಾಗಿ.
--------------
ವೈದ್ಯ ಸಂಗಣ್ಣ
ನವಪಾಷಾಣ ರಸ ಮುಂತಾದ ಔಷಧಿಗಳೆಲ್ಲವೂ ಈ ಮೂರು ಮೂಲಿಕದೊಳಗು. ಇವು ಮತ್ರ್ಯದ ಜೀವರ ಚಿಕಿತ್ಸೆ. ಭಕ್ತಂಗೆ, ನಿಷಾ*ಪರಂಗೆ, ಸುಚಿತ್ತ ನಿರ್ಮಲ ವಿರಕ್ತಂಗೆ, ರೋಗರುಜೆಯಡಸಿದಲ್ಲಿ ತನುವಿಂಗೆ ಕ್ರೀ ಮಾಡಿದಡೂ ದೋಷವಿಲ್ಲ. ಅದೆಂತೆಂದಡೆ : ಉಷ್ಣಕ್ಕೆ ಶೈತ್ಯ ನೆರವಣಿಗೆಯಾದಂತೆ, ಪಂಚಭೌತಿಕದಿಂದಾದ ಶರೀರಕ್ಕೆ ಚಿಕಿತ್ಸೆ, ಅರಿವು ತಲೆದೋರಿದ ರೇತಕ್ಕೆ ಸಾವಧಾನದಲ್ಲಿ ತ್ರಿವಿಧದ ಬಿಡುಗಡೆ. ತ್ರಿವಿಧಕಿತ್ತು ವಸ್ತುವನೊಡಗೂಡಿ ಎಂಯ್ದಿದವಂಗೆ ರೋಗದಡಿಯಲ್ಲಿ ಸತ್ತವನಲ್ಲ, ಮರುಳಶಂಕರರಪ್ರಿಯ ಸಿದ್ಧರಾಮೇಶ್ವರಲಿಂಗದಡಿಯೊಳಗಡಗಿದವಾ.
--------------
ವೈದ್ಯ ಸಂಗಣ್ಣ