ಅಥವಾ
(5) (1) (1) (0) (0) (0) (0) (0) (0) (0) (1) (0) (0) (0) ಅಂ (1) ಅಃ (1) (3) (0) (0) (0) (0) (0) (0) (1) (0) (0) (0) (0) (0) (0) (0) (1) (0) (0) (0) (2) (1) (0) (0) (1) (1) (0) (0) (0) (0) (2) (0) (0) (0) (1) (0)

ಪದದಿಂದ ಪ್ರಾರಂಭವಾಗುವ ವಚನಗಳು:

ಕಣ್ಣು ಕಳೆದ ಮತ್ತೆ ಅಂಜನಕ್ಕೆ ತಿಳಿವುದೆ ? ಆತ್ಮನಿದ್ದಲ್ಲಿ ಅರಿಯದೆ ಹಸು ಸತ್ತ ಮತ್ತೆ ಮೋಕ್ಷವನರಸಲುಂಟೆ ? ಎಚ್ಚರಿಕೆ ತನಗಿದ್ದಲ್ಲಿ ನಾನೊಂದು ನಿಶ್ಚಯದ ಮದ್ದ ತಂದೆ. ಆ ಮದ್ದಿನ ಭೇದ ಘಟಕ್ಕೆ ಕೇಡಿಲ್ಲ. ಆತ್ಮಂಗೆ ಭವವಿಲ್ಲ. ಅರಿವಿಂಗೆ ತುದಿಮೊದಲಿಲ್ಲ. ಇದು ನಿರಿಗೆ ಕೊಳಬಲ್ಲಡೆ, ಗುರುವಿಂಗೆ ತನು, ಲಿಂಗಕ್ಕೆ ಮನ, ಜಂಗಮಕ್ಕೆ ಧನ. ರೋಗ ಹೋಯಿತ್ತು, ಬೇಗ ಅರಿದುಕೊಳ್ಳಿ, ಮರುಳಶಂಕರಪ್ರಿಯ ಸಿದ್ಧರಾಮೇಶ್ವರಲಿಂಗ ಸಾಕ್ಷಿಯಾಗಿ.
--------------
ವೈದ್ಯ ಸಂಗಣ್ಣ
ಕಕ್ಕಯ್ಯನೆನಗೆ ಕಾಮಧೇನುವಯ್ಯ. ಚೆನ್ನಯ್ಯನೆನಗೆ ಕಲ್ಪವೃಕ್ಷವಯ್ಯಾ. ಹರಳಯ್ಯನೆನಗೆ ಚಿಂತಾಮಣಿಯಯ್ಯಾ. ಕೆಂಭಾವಿಯ ಭೋಗಯ್ಯನೆನಗೆ ಸುದಾಬ್ಧಿಯಯ್ಯಾ. ಶಿವನಾಗಮಯ್ಯನೆನಗೆ ಪರುಷದ ಗಿರಿಯಯ್ಯಾ. ಇಂತೀ ಐವರ ಕಾರುಣ್ಯ ಪ್ರಸಾದವ ಕೊಂಡು ಬದುಕಿದೆನಯ್ಯಾ. ಮರುಶಂಕರಪ್ರಿಯ ಸಿದ್ಧರಾಮೇಶ್ವರಯ್ಯಾ.
--------------
ವೈದ್ಯ ಸಂಗಣ್ಣ
ಕಾಯಕರ್ಮವ ಅನುಭವಿಸುತ್ತ ಮತ್ತೆ , ದಿವ್ಯಜ್ಞಾನದ ಮಾತದೇತಕ್ಕೆ ? ವಾಗ್ವಾದಕ್ಕೂ ದಿವ್ಯಜ್ಞಾನಕ್ಕೂ ಅನುಪಾನಉಂಟೆ ? ರಸವಾದದ ಬೇರ ಕದ್ದ ಚೋರನಂತೆ, ಅದರ ಭೇದವನರಿಯ, ಅದ ವೇಧಿಸಿ ಕಾಣ. ಕಳಂಕ ಹೋದ ಹೊಲಬನರಿಯ, ಆ ಚೋರನ ಮಾತ ವೇದಿಗಳೊಪ್ಪುವರೆ ? ಇಂತಿ ಭೇದವ ತಿಳಿದು, ಷಡುಸ್ಥಲವೇದಿಗಳಾಗಬೇಕು. ಮರುಳಶಂಕರಪ್ರಿಯ ಸಿದ್ಧರಾಮೇಶ್ವರಲಿಂಗವ, ಅರಿವಿನಲ್ಲಿ ವೇಧಿಸಿಕೊಳ್ಳಬೇಕು.
--------------
ವೈದ್ಯ ಸಂಗಣ್ಣ