ಅಥವಾ
(5) (1) (1) (0) (0) (0) (0) (0) (0) (0) (1) (0) (0) (0) ಅಂ (1) ಅಃ (1) (3) (0) (0) (0) (0) (0) (0) (1) (0) (0) (0) (0) (0) (0) (0) (1) (0) (0) (0) (2) (1) (0) (0) (1) (1) (0) (0) (0) (0) (2) (0) (0) (0) (1) (0)

ಪದದಿಂದ ಪ್ರಾರಂಭವಾಗುವ ವಚನಗಳು:

ವೈದ್ಯವೆಂದು ಮಾಡುವಲ್ಲಿ ನಾನಾಮೂಲಿಕೆ, ವನದ್ರವ್ಯ ಸಹ ಮುಂತಾಗಿ, ಲವಣ, ಪಾಷಾಣ, ಲೋಹ, ಪಂಚಸಿಂಧೂರಂಗಳಿಂದ ರಸ ದ್ರವ್ಯ ಮುಂತಾದ ಸಾರಂಗಳ ಕ್ರಮಂಗಳಲ್ಲಿ ಸರ ಸಂದಾನ ವಿಹಂಗ ಮೃಗ ನರ ಮತ್ತಿವರೊಳಗಾದ ನಾನಾ ಜೀವಂಗಳ ನಿಮಿತ್ಯವ ಪ್ರಮಾಣಿಸಿ, ತನ್ನಾತ್ಮಸಿದ್ಧಿಯಾಗಿ, ತಾ ಮಾಡಿದ ಔಷಧ ಪ್ರಸಿದ್ಧವಾಗಿ, ಇಂತಿವ ಪ್ರಮಾಣಿಸಿಕೊಂಡು, ಇದರ ರುಜೆಯ ಪರಿಹರಿಸಿದೆನೆಂಬಲ್ಲಿ, ಅವನ ದೃಷ್ಟಿ ಮುಟ್ಟಿ, ಸತ್ವ ಸಮಾಧಾನ ಅವಗಡಿಸಿದ ವ್ಯಾಧಿಯ ಚಿತ್ತವನರಿದು, ವೈದ್ಯವ ಲಕ್ಷಿಸಬೇಕು. ಅವನ ಶರೀರದ ಕಟ್ಟಳೆಯನರಿದು, ತನ್ನ ಔಷಧಿಯ ದೃಷ್ಟವ ಪ್ರಮಾಣಿಸಿ, ಅವನಂಗದ ಪೃಥ್ವಿಗುಣ, ಅಗ್ನಿಗುಣ, ವಾಯುಗುಣ, ಆಕಾಶಗುಣ, ಇಂತೀ ಪಂಚಗುಣ ಕರತಳನಾಡಿಯಲ್ಲಿದು ಆಡುವ ಐದು ಜೀವದ ಗುಣಮಂ ತಿಳಿದು, ಷಡಾಧಾರಂಗಳ ಸ್ವಸ್ಥಾನಮಂ ಮುಟ್ಟಿ ನೋಡಿ, ಆ ಮನ ವಿರೋಚನಕ್ಕೆ ಪ್ರಮಾಣದಲ್ಲಿ ಪ್ರಮಾಣಿಸಿ, ಸುಮನ ಸುಗತಿಯಲ್ಲಿ ಪಿಂಡ ಪ್ರಾಣಾರೋಗ್ಯದಿಂದ ರುಜೆಯ ಸಂಬಂಧವ ಮುರಿದವ ಪಂಡಿತನಪ್ಪ. ಅದರಂದವ ತಿಳಿದು ಬಂದೆ, ಸರ್ವಾಂಗಲಿಂಗಿಗಳಿಗೆ ಪಂಡಿತನಾಗಿ, ಮೂರ ಮುರಿದು, ಆರನರದು, ಏಳ ಕಿತ್ತು, ಎಂಟು ಗಂಟನಿಕ್ಕಿ, ಈರಾರ ಮಾರಿ, ಹದಿನಾರ ವೇಧಿಸಿ, ಇಪ್ಪತ್ತೈದು ನಷ್ಟವಮಾಡಿ, ಮುೂವತ್ತಾರ ತೂರಿ, ಗಾರುಮಾಡಿ, ಐವತ್ತೆರಡರ ಉಲುಹಿನ ಬಲೆಯ ಹರಿದು, ಸಿಂಧೂರ ಬಂದಿದೆ ಕೊಳಬಲ್ಲಡೆ ಕೊಳಬಾರದೆ ? ಕೊಂಡಡೆ ತ್ರಿವಿಧದ ತೊಟ್ಟು ಬಿಟ್ಟು, ಭವಮಾಲೆಯ ಕಟ್ಟಿದ ಕ್ರಮ ಒಡೆದು, ವಸ್ತುವಿನ ನಿಜನಿಳಯದ ಬಟ್ಟೆಯ ಹೋಹೆ. ಇದು ದೃಷ್ಟ, ಪ್ರಮಥರ ಪ್ರಸನ್ನ ಸಾಕ್ಷಿ. ಎನ್ನ ವೈದ್ಯದ ಕ್ರಮ ಸರ್ವವಿಕಾರದ ಭವಹರಿವ ತೆರ, ಮರುಳಶಂಕರಪ್ರಿಯ ಸಿದ್ಧರಾಮೇಶ್ವರಲಿಂಗ ವೈದ್ಯ ವೈದ್ಯನಾದ.
--------------
ವೈದ್ಯ ಸಂಗಣ್ಣ
ವಾತ ಪಿತ್ತ ಶ್ಲೇಷ್ಮಂಗಳಿಂದ ವ್ಯಾಧಿ ಬಂದಿತ್ತೆಂದು ನುಡಿವರು, ಪಂಡಿತ ವರ್ಗಂಗಳೆಲ್ಲರು. ಕರಣನಾಳದ ನಾಡಿಯ ಮುಟ್ಟಿ ನೋಡಿ, ವಾಯುಗತಿ ನಡೆವ ವರ್ಗಂಗಳ ನೋಡಿ, ಮಂದಗತಿ, ತಮಂಧಗತಿ, ತಾರುಗತಿ, ತ್ರಯಗತಿ, ಚತುರ್ಗತಿ, ಪಂಚಗತಿ. ಇಂತೀ ಐದಂಗುಲಿಗೈದು, ನಾಳದ ನಾಡಿ ಸೂತ್ರಗಳ ಭೇದವನರಿದೆವೆಂದು, ದೀಪನ ಪಚನ ಪೈತ್ಯ ಶ್ಲೇಷ್ಮವಿದೆಯೆಂದು ಆತ್ಮನ ನಿಹಿತವನರಿಯದ ತೂತವೈದ್ಯನಲ್ಲ. ಆತ್ಮಹಂಸನು ಷಡಾಧಾರವ ಮುಟ್ಟಿ, ಅಷ್ಟದಳ ಕಮಲವ ಮೆಟ್ಟಿ, ಮಿಕ್ಕಾದ ದ್ವಾರಂಗಳಲ್ಲಿ ತಟ್ಟಿ ಮುಟ್ಟದೆ ಹೋಹ ಭೇದವ ಬಲ್ಲಡೆ, ನಾಡಿಯಲಾಡುವ ಆತ್ಮನ ಭೇದವ ಬಲ್ಲವ. ಆತ್ಮನ ಸೋದಿಸಿ ತಿಳಿದಡೆ, ರುಜೆ ರೋಗವಳಿಯಿತ್ತಲ್ಲಿಯೆ, ಮರುಳಶಂಕರಪ್ರಿಯ ಸಿದ್ಧರಾಮೇಶ್ವರಲಿಂಗದಲ್ಲಿ.
--------------
ವೈದ್ಯ ಸಂಗಣ್ಣ