ಅಥವಾ
(2) (0) (3) (0) (0) (0) (0) (0) (2) (0) (0) (1) (0) (0) ಅಂ (1) ಅಃ (1) (4) (0) (14) (0) (0) (1) (0) (3) (0) (0) (0) (0) (0) (0) (0) (1) (0) (0) (0) (3) (1) (0) (1) (1) (0) (0) (1) (0) (2) (0) (2) (0) (3) (3) (0)

ಪದದಿಂದ ಪ್ರಾರಂಭವಾಗುವ ವಚನಗಳು:

ಕೈದ ಹಿಡಿದಾಡುವರೆಲ್ಲರು ಇರಿಯಬಲ್ಲರೆ? ಸಾಧನೆಯ ಮಾಡುವ ಬಾಲರೆಲ್ಲರೂ ಕಾದಬಲ್ಲರೆ? ಅರ್ತಿಗೆ ಮಾಡುವ ಕೃತ್ಯವಂತರೆಲ್ಲರೂ ಸದ್ಭಕ್ತರಪ್ಪರೆ? ಅದು ಚಂದೇಶ್ವರಲಿಂಗಕ್ಕೆ ಸಲ್ಲದ ಮಾಟ.
--------------
ನುಲಿಯ ಚಂದಯ್ಯ
ಕಾಯದಿಂದ ಕಾಬುದು ಕುರುಹಿನ ಮೂರ್ತಿಯ. ಆತ್ಮದಿಂದ ಕಾಬುದು ಅರಿವಿನ ಮೂರ್ತಿಯ. ಅರಿವ ಕುರುಹ ಮರೆದಲ್ಲಿ ಪರಮ ದಾಸೋಹದಿಂದ ಪರಶಿವಮೂರ್ತಿಯ ಕಾಣಬಂದಿತ್ತು. ಚನ್ನಬಸವಣ್ಣಪ್ರಿಯ ಚಂದೇಶ್ವರ ನೀನೆ ಬಲ್ಲೆ.
--------------
ನುಲಿಯ ಚಂದಯ್ಯ
ಕಂದಿಸಿ ಕುಂದಿಸಿ ಬಂಧಿಸಿ ಕಂಡವರ ಬೇಡಿತಂದು ಜಂಗಮಕ್ಕೆ ಮಾಡಿದೆನೆಂಬ ದಂದುಗದೋಗರ ಲಿಂಗಕ್ಕೆ ನೈವೇದ್ಯ ಸಲ್ಲ. ತನು ಕರಗಿ ಮನ ಬಳಲಿ ಬಂದ ಚರದ ಅನುವರಿತು ಸಂದಿಲ್ಲದೆ ಸಂಶಯವಿಲ್ಲದೆ ಜಂಗಮಲಿಂಗಕ್ಕೆ ದಾಸೋಹವ ಮಾಡುವುದೆ ಮಾಟ. ಕಾಶಿಯಕಾಯಿ ಕಾಡಿನ ಸೊಪ್ಪಾಯಿತ್ತಾದಡೂ ಕಾಯಕದಿಂದ ಬಂದುದು ಲಿಂಗಾರ್ಪಿತ. ಚನ್ನಬಸವಣ್ಣಪ್ರಿಯ ಚಂದೇಶ್ವರಲಿಂಗಕ್ಕೆ ನೈವೇದ್ಯ ಸಂದಿತ್ತು.
--------------
ನುಲಿಯ ಚಂದಯ್ಯ
ಕಾಯವಿಡಿದು ಕಾಬುದೆಲ್ಲವು ಗುರುವಿನ ಭೇದ. ಜೀವವಿಡಿದು ಕಾಬುದೆಲ್ಲವು ಲಿಂಗದ ಭೇದ. ಜ್ಞಾನವಿಡಿದು ಕಾಬುದೆಲ್ಲವು ಜಂಗಮದ ಭೇದ ಮೂರನರಿತು ಬೇರೊಂದ ಕಾಬುದೆಲ್ಲವು ಮಹಾಪ್ರಕಾಶ ಚನ್ನಬಸವಣ್ಣಪ್ರಿಯ ಚಂದೇಶ್ವರಲಿಂಗಕ್ಕೆ ಶಬ್ದಮುಗ್ಧವಾದ ಭೇದ.
--------------
ನುಲಿಯ ಚಂದಯ್ಯ