ಅಥವಾ
(2) (0) (3) (0) (0) (0) (0) (0) (2) (0) (0) (1) (0) (0) ಅಂ (1) ಅಃ (1) (4) (0) (14) (0) (0) (1) (0) (3) (0) (0) (0) (0) (0) (0) (0) (1) (0) (0) (0) (3) (1) (0) (1) (1) (0) (0) (1) (0) (2) (0) (2) (0) (3) (3) (0)

ಪದದಿಂದ ಪ್ರಾರಂಭವಾಗುವ ವಚನಗಳು:

ಶ್ರೀಗುರುವ ತಾನರಿದು ವರಗುರು ತಾನಾಗಬೇಕು. ಲಿಂಗನೈಷಿ*ಕೆಯಾಗಿ ಪೂಜಿಸಿಕೊಳಬೇಕು. ಜಂಗಮ ತಾ ತ್ರಿವಿಧವ ಮರೆದು ಜಂಘ ನಾಸ್ತಿಯಾಗಿ ಜಂಗಮವಾಗಬೇಕು. ಜಂಗಮಕ್ಕೆ ಮಾಡಿ ನೀಡಿ ಸಂದು ಸಂಶಯವನಳಿದು ನಮ್ಮ ಚಂದೇಶ್ವರಲಿಂಗವನರಿಯಬೇಕು ಕಾಣಾ, ಎಲೆ ಅಲ್ಲಮಪ್ರಭುವೆ.
--------------
ನುಲಿಯ ಚಂದಯ್ಯ
ಶಿಷ್ಯಂಗೆ ಗುರು ಬೋಧಿಸುವಲ್ಲಿ ತನ್ನನಳಿದು ಲಿಂಗದ ಸಂಗವ ತೋರಿಸಬೇಕು. ಲಿಂಗದ ಸಂಗ ನೆನಹಾದಲ್ಲಿ ಆ ಲಿಂಗಕ್ಕೆ ಉಂಬ ಬಾಯಿ ಜಂಗಮವಾದ ಕಾರಣ ಆ ಜಂಗಮದ ದಾಸೋಹದಿಂದ ಬೇರೊಂದಂಗವಿಲ್ಲ; ಸಂಗನ ಬಸವಣ್ಣಪ್ರಿಯ ಚಂದೇಶ್ವರಲಿಂಗವ ಹಿಂಗದಭಾವ.
--------------
ನುಲಿಯ ಚಂದಯ್ಯ