ಅಥವಾ
(2) (0) (0) (0) (0) (0) (0) (0) (0) (0) (0) (0) (0) (0) ಅಂ (0) ಅಃ (0) (1) (0) (1) (0) (0) (1) (0) (1) (0) (0) (0) (0) (0) (0) (0) (0) (0) (0) (0) (1) (3) (0) (13) (0) (13) (0) (0) (0) (0) (2) (1) (0) (1) (0) (0)

ಪದದಿಂದ ಪ್ರಾರಂಭವಾಗುವ ವಚನಗಳು:

ಜಾತಿಸೂತಕ ಜನನಸೂತಕ ಪ್ರೇತಸೂತಕ ಉಚ್ಛಿಷ್ಟಸೂಚಕ ರಜಃಸೂತಕ ವೆಂಬ ಪಂಚಸೂತಕವನತಿಗಳೆದಾತನಾಗಿ, ಲಿಂಗಾಚಾರ ಸದಾಚಾರ ಭಕ್ತ್ಯಾಚಾರ ಶಿವಾಚಾರ ಗಣಾಚಾರವೆಂಬ ಪಂಚಾಚಾರನಿಷ*ನಾಗಿ ದಾಸತ್ವ ವೀರದಾಸತ್ವ ಭೃತ್ಯತ್ವ ವೀರಭೃತ್ಯ[ತ್ವ] ಸಮಯಾಚಾರತ್ವ ಸಕಲಾವಸ್ಥಾತ್ವಂಗಳೆಂಬ ಷಡ್ವಿಧ ಸಜ್ಜನತ್ವಯುಕ್ತನಾಗಿ, ದೇಶಕಾಲ ಕಲ್ಪಿತಾದಿ ಲೌಕಿಕಾಚಾರಂಗಳಂ ವಿೂರಿ ಸ್ವತಂತ್ರ ಶೀಲನಾಗಿ, ಶಿವಾತ್ಮರ್ಗೆ ಭೇದಭ್ರಾಂತಿದೋರದಾತನಾಗಿ, ಉಪನಿಷ ದ್ವಾಕ್ಯ ಜನಿತ ವಿದ್ಯೆಯಲ್ಲಿ ರಮಿಸುವ ಶೈವನಪ್ಪುದರಿಂ ತತ್ಸಂಜ್ಞೆಯುಳ್ಳಾತನಾಗಿ, ಜಗತ್ಪೂಜ್ಯನಾಗಿಪ್ಪಾತನೆ ವೀರಶೈವನಪ್ಪನಯ್ಯಾ ಶಾಂತವೀರೇಶ್ವರಾ.
--------------
ಶಾಂತವೀರೇಶ್ವರ