ಅಥವಾ
(2) (0) (0) (0) (0) (0) (0) (0) (0) (0) (0) (0) (0) (0) ಅಂ (0) ಅಃ (0) (1) (0) (1) (0) (0) (1) (0) (1) (0) (0) (0) (0) (0) (0) (0) (0) (0) (0) (0) (1) (3) (0) (13) (0) (13) (0) (0) (0) (0) (2) (1) (0) (1) (0) (0)

ಪದದಿಂದ ಪ್ರಾರಂಭವಾಗುವ ವಚನಗಳು:

ಮತ್ತಮಾ ಪರಮೇಶ್ವರ ನಿರ್ಮಿತಮಾದ ಜಗತ್ತಿನಲ್ಲಿ ಚರಮಶರೀರಿ ಎನಿಸಿಕೊಂಡು ಸಮಸ್ತ ಶೈವರೊಳತಿ ವಿಶಿಷ್ಟನಾಗಿ, ಇತರ ಶೈವರಂತೆ ಕ್ರಿಯಾಬಹುಲದಿಂದಲ್ಪಫಲಮಂ ಪಡೆಯದೆ ಅಲ್ಪಕ್ರಿಯೆಯಿಂದನಂತಫಲಮಂ ಪಡೆವಾತನಾಗಿ, ಶಿವದೀಕ್ಷೆಯಿಂ ಮೇಲೆ ಸ್ನಾನ ಭೋಜನ ನಿದ್ರೆ ಜಾಗರಣ ಮಲಮೂತ್ರ ವಿಸರ್ಜನಾದಿ ಕಾಲಂಗಳಲ್ಲಿ ಅಶುಚಿಭಾವನೆದೋರದೆ ಸದಾ ಲಿಂಗಾಂಗಸಂಬಂದ್ಥಿಯಾಗಿ, ಲಿಂಗಭೋಗೋಪಭೋಗಿಯಾಗಿ, ತನ್ನಿಷ್ಟಲಿಂಗ ದಲ್ಲಿ ಆವಾಹನ ವಿಸರ್ಜನಾದಿ ಕ್ರಿಯೆಗಳಂ ಮಾಡದಾತನಾಗಿ, ತ್ರಿಕಾಲ ಲಿಂಗಾ ರ್ಚನಾಶಕ್ತನಾಗಿ, ಲಿಂಗಲೋಪವ್ರತ ಲೋಪಂಗಳಲ್ಲಿ ಪ್ರಾಣತ್ಯಾಗವಲ್ಲದೆ ಬೇರೊಂದು ಪ್ರಾಯಶ್ಚಿತ್ತವಿಲ್ಲದಾತನಾಗಿ, ಗುರುನಿಂದೆ ಶಿವನಿಂದೆ ಜಂಗಮ ನಿಂದೆ ಪ್ರಸಾದಪಾದೋದಕ ಭಸ್ಮಧಾರಣನಿಂದೆ ಶಿವಾಗಮ ಶಿವಕ್ಷೇತ್ರ ಶಿವಾ ಚಾರನಿಂದೆಗಳಂ ಸೈರಿಸದಾತನಾಗಿ, ವಿಷ್ಣುವಾದಿ ದೇವತೆಗಳಂ ಲೆಕ್ಕಿಸದಾತನಾಗಿ, ಬಾಹ್ಯದಲ್ಲಿ ಶಿವಲಿಂಗ ಲಾಂಛನವಿಲ್ಲದ ಭವಿಗಳೊಡನೆ ಏಕಾಸನ ಶಯನ ಯಾನ ಸಂಪರ್ಕ ಸಹಭೋಜನಾಗಳಿಲ್ಲದಾತನಾಗಿ, ಅನೃತ ಅಸ್ಥಿರವಾಕ್ಯ ವಂಚನೆ ಪಙÂ್ತಭೇದ ಉದಾಸೀನ ನಿರ್ದಯೆಯೆಂಬ ಅರಂತರಂಗ ಭವಿಗಳಿಲ್ಲದಾತನಾಗಿ, ಶಿವಮಾಹೇಶ್ವರಂ ಕಾಣುತಲೇಳೂದು, ಇದಿರಾಗಿ ನಡೆವುದು, ಅವರ್ಗೂಡಿ ತಿರುಗೂದು, ಪ್ರಿಯವಚನಮಂ ನುಡಿವುದು, ಗದ್ದುಗೆಯ ನಿಕ್ಕೂದು, ಅನ್ನ ಪಾನಂಗಳಂ ಸಮರ್ಪಿಸೂದೆಂಬ ಮುಕ್ತಿಸೋಪಾನಕ್ರಮ ಸಪ್ತ ಕ್ರಮಯುಕ್ತವಾಗಿ ಪ್ಪಾತನೆ ವೀರಶೈವನಯ್ಯಾ ಶಾಂತವೀರೇಶ್ವರಾ.
--------------
ಶಾಂತವೀರೇಶ್ವರ
ಮತ್ತಮಾ ಸಾಧಾರದೀಕ್ಷೆಯು ಸಬೀಜದೀಕ್ಷೆ ನಿರ್ಬೀಜದೀಕ್ಷೆ ಚಿನ್ಮಯ ದೀಕ್ಷೆ ಯೆಂದು ಮೂರು [ಪ್ರಕಾರದವು]. ಅವು ಯಥಾಕ್ರಮದಿಂದ ಕರ್ಮಕಾಂಡ ಭಕ್ತಿ ಕಾಂಡ ಜ್ಞಾನಕಾಂಡಗಳಲ್ಲಿಯ ದೀಕ್ಷೆ ಎನಿಸಿಕೊಂಬವು. ಇಂತೆಂದು ಕಾರಣಾಗಮ ಪೇಳೂದಯ್ಯಾ. ಅವರೊಳು ನಿರ್ಬೀಜದೀಕ್ಷೆ[ಯು ಸದ್ಯೋ ನಿರ್ವಾಣದೀಕ್ಷೆ ಎಂದು] ಚಿರಂ ನಿರ್ವಾಣದೀಕ್ಷೆ ಎಂದು ಎರಡು ಭೇದವು ಪೇಳಲ್ಪಡುತ್ತಿಹುದು. ಅವರೊಳು ಅತ್ಯಂತ ವಿರಕ್ತನಾದ ಶಿಷ್ಯ[ನು] ಅನೇಕ ಭವಂಗಳಲ್ಲಿ ಮಾಡಲ್ಪಟ್ಟ ಸಂಚಿತಕರ್ಮಂಗಳನು, ಮತ್ತಮಾ ಸಂಚಿತಕರ್ಮರಾಶಿಯೊಳಂ ಆಗ ತಾಳ್ದಿರ್ದ ಶರೀರವಿಡಿದು ಅನುಭವಿಸುತ್ತಿರ್ದ ಪ್ರಾರಬು ಕರ್ಮಂಗಳನು, ಮುಂದೆ ಭವಾಂ ತರಂಗಳಲ್ಲಿ ಅನುಭವಿಸಲುಳ್ಳ ಆಗಾಮಿ ಕರ್ಮಂಗಳನು ಶೋದ್ಥಿಸಿ ಸದ್ಯೋನ್ಮುಕ್ತಿ ಯನೆಯಿಸುವ ದೀಕ್ಷೆ ಸದ್ಯೋನಿರ್ವಾಣದೀಕ್ಷೆ ಎನಿಸುವದಯ್ಯಾ, ಶಾಂತವೀರ ಪ್ರಭುವೇ.
--------------
ಶಾಂತವೀರೇಶ್ವರ
ಮತ್ತಮಾ ಮಂತ್ರಂಗಳಿಂ ಕರನ್ಯಾಸ ದೇಹನ್ಯಾಸ ಅಂಗನ್ಯಾಸಮೆಂಬ ನ್ಯಾಸತ್ರಯಂಗಳ ಉತ್ರತ್ತಿ ಸ್ಥಿತಿ ಸಂಹಾರ ಭೇದಂಗಂಳಂ ಪೂರ್ವೋಕ್ತ ಕ್ರಮ ದಿಂದರಿದು ವಿಸ್ತರಿಸುವದರಲ್ಲಿ ಗೃಹಸ್ಥಂಗೆ ಮುತ್ತೈದೆ ವಿಧವೆಯರಿಗೆ ಸ್ಥಿತಿನ್ಯಾಸ ವಹುದು, ಬ್ರಹ್ಮಚಾರಿಗೆ ಉತ್ಪನ್ಯಾಸವಹುದು, ವಾನಪ್ರಸ್ಥ ಯತಿಗಳಿಗೆ ಸಂಹಾರ ನ್ಯಾಸ ವಹದೆಂದನುವದಿಸಿ, ಬಳಿಕ ಅಗುಷ್ಠದಿಂ ಮೋಕ್ಷ, ತರ್ಜನಿಯಿಂ ಶತ್ರು ಹಾನಿ, ಮಧ್ಯಾಂಗುಲಿಯಿಂದರ್ಥಸಿದ್ಥಿ, ಅನಾಮಿಕೆಯಿಂ ಶಾಂತಿ, ಕನಿಷ್ಠದಿಂ ರಕ್ಷಣೆಗಳಪ್ಪವಲ್ಲಿ, ಮಧ್ಯಾಂಗುಷ್ಠ ಯೋಗದಿಂ ಮಾಲಿಕೆಯಂ ಪಿಡಿದು ಜಪಂಗೆಯ್ವುದೆ ಕನಿಷ್ಠ ವೆನಿಸೂದು. ತರ್ಜನ್ಯಂಗುಷ್ಠ ಯೋಗದಿಂ ಜಪಿಸೂದೆ ಮಧ್ಯಮವೆನಿಸೂದು. ಅನಾಮ್ಯಂಗುಷ್ಠ ಯೋಗದಿಂ ಜಪಂಗೆಯ್ವುದೆ ಉತ್ತಮ ವೆನಿಸೂದು. ಬಳಿಕಲ್ಲಿ ಮಧ್ಯಾಂಗುಷ್ಠಂಗಳಿಂ ಭಾಷ್ಯಜಪಂಗೆಯು, ತರ್ಜನ್ಯಂ ಗುಷ್ಠಂಗಳಿಂದುಪಾಂಶು ಜಪಂಗೆಯ್ವುದು, ಅನಾಮಿಕೆ ಮಧ್ಯಾಂಗುಷ್ಠಂಗಳಿಂ ಮಾನಸೆಜಪಂಗೆಯ್ವುದವರ ಅಲ್ಲಿ ಪರಶ್ರುತಿ ಗೋಚರವಪ್ಪುದೆ ಉಚ್ಚರಿಪುದೆ ವಾಚಕವಹುದು, ಸ್ವಶ್ರುತಿಸಾರವಾಗಿ ಓಷ್ಟ ಸ್ಪಂದನಮಾಗುಚ್ಚರಿಪುದೆ ಉಪಾಂಶುವಹುದು, ಮಂತ್ರವಾಕ್ಯಾರ್ಥಚಿಂತನಂಗೆಯ್ವುದೆ ಮಾನಸವಹುದು. ಅವರೊಳಗೆ ವಾಚಕಜಪವೆ ಕ್ಷುದ್ರಕಾರ್ಯಂಗಳಿಗೆ, ಉಪಾಂಶುಜಪವೆ ಸಕಲಸಿದ್ಧಿ ಗಳಿಗೆ, ಮಾನಸಜಪವೆ ಮುಕ್ತಿಗಹುದೆಂದು ನಿಯಾಮಿಸಿ ಜಪಂಗೆಯ್ವುದಯ್ಯ ಶಾಂತವೀರೇಶ್ವರಾ.
--------------
ಶಾಂತವೀರೇಶ್ವರ
ಮತ್ತಮಾ ಶಿಷ್ಯನ ಸಂಚಿತಕರ್ಮಗಳನು ಆಗಾಮಿಕರ್ಮಂಗಳನು ಕೆಡಿಸಿ, ದೀಕ್ಷೋತ್ತರ ಕ್ರಿಯಾವಸಾನ ಪರಿಯಂತರವಾಗಿ ಅನುಭವಿಸುತ್ತಿರ್ದ ಪ್ರಾರಬ್ಧ ಕರ್ಮಂಗಳ ಭೋಗಾಂತರದಲ್ಲಿ ಮುಕ್ತಿಯನೆಯ್ದಿಸುವ ದೀಕ್ಷೆ ಚಿರಂನಿರ್ವಾಣವೆನಿ ಸೂದು. ಇಂತೆಂದು ಪಾರಮೇಶ್ವರತಂತ್ರಂ ಪೇಳೂದಯ್ಯ, ಶಾಂತವೀರ ಪ್ರಭುವೇ.
--------------
ಶಾಂತವೀರೇಶ್ವರ
ಮತ್ತಮಾ ಶಿವಪೂಜಾವಿಧಿಗೆ ದೇಶ ಕಾಲ ಸ್ಥಾನ ದ್ರವ್ಯ ಪ್ರಯೋಜನಾದಿ ಗಳಂ ತಾಂತ್ರಿಕ ವೈದಿಕಮೆಂಬೆರಡೂ ಪೂಜಾಭೇದಂದಳಂ, ಅಂತಃಶೌಚ ಬಾಹ್ಯ ಶೌಚಯೆಂಬೆರಡೂ ಶೌಚಭೇದಂಗಳಂ, ಶೋಷಣ ದಹನ ಪ್ಲಾವನಮೆಂಬ ಕ್ರಿಯೆಗಳಂ, ಆತ್ಮಶುದ್ಧಿ ಸ್ಥಾನಶುದ್ಧಿ ದ್ರವ್ಯ ಶುದ್ಧಿ [ಲಿಂಗಶುದ್ಧಿ] ಮಂತ್ರ ಶುದ್ಧಿಯೆಂಬ ಪಂಚ ಶುದ್ಧಿಗಳ ವಿಸ್ತರಿಸುದವರಲ್ಲಿ ಶೌಚಾಚಮನಸ್ನಾನ ಭಸ್ಮರುದ್ರಾಕ್ಷಧಾರಣ ಕವಚ ಮಂತ್ರ ಕಲಾನ್ಯಾಸ ಧ್ಯಾನಾದಿ ರಚನೆಂಗೆಯ್ದುದೇ ಆತ್ಮಶುದ್ಧಿ ಎನಿಸೂದು. ಸಮ್ಮಾರ್ಜನಾನುಲೇಪನ ವರ್ಣಕ ಗಂಧಪುಷ್ಪಧೂಪ ದೀಪಾದಿ ನಿರ್ಮಲೋಪ ಕರಣಂಗಳಿಂ ಚೌಕಮನಲಂಕರಿಪುದೆ ಸ್ಥಾನ ಶುದ್ಧಿ ಎನಿಸೂದು. ಜಲಗಂಧಾಕ್ಷತಾ ಪುಷ್ಪಾದಿಗಳಂ ನಿರೀಕ್ಷಿಸಿ, ಭಸ್ಮಮಂತ್ರವಾರಿಗಳಿಂ ಸಂಪ್ರೋಕ್ಷಣಂಗೆಯ್ವುದೆ ದ್ರವ್ಯಶುದ್ಧಿ ಎನಿಸೂದು. ಅನಾಮಿಕ ಮಧ್ಯಮೆಗಳ ಮಧ್ಯದಲ್ಲಿ ನವೀನಕುಸುಮವಿಡಿದು ಅಂಗುಷ*ತರ್ಜನಿಗಳಿಂ ಮೊದಲ ನಿರ್ಮಾಲ್ಯಮಂ ತ್ಯಜಿಸಿ, ಲಿಂಗಪೀಠಮಂವಾರಿಯಿಂ ಪ್ರಕ್ಷಾಲನಂ ಗೆಯ್ವುದೆ ಲಿಂಗಶುದ್ಧಿ ಎನಿಸೂದು. ಸಕಲಪೂಜಾತ್ರ್ಥಮಾಗಿ ಒಂ ನಮಃ ಶಿವಾಯ ಸ್ವಾಹಾ ಎಂದುಚ್ಚರಿಪುದೆ ಮಂತ್ರಶುದ್ಧಿಯಹುದೆಂದೊಡಂ ಬಟ್ಟು, ಬಳಿಕ ಅಸ್ತ್ರಮುದ್ರೆ ಚಕ್ರಮುದ್ರೆ ಮಹಾಮುದ್ರೆ ಶೋಧನಿಮುದ್ರೆ ಸಂಹಾರ ಪಂಚಮುಖ ಮುದ್ರೆ ಸುರಭಿಮುದ್ರೆ ದ್ರವ್ಯಮುದ್ರೆ ಮುಕುಳಿಕಾಮುದ್ರೆ ಪದ್ಮಮುದ್ರೆ ಶಶಕರ್ಣವೆÅದ್ರೆ ಶಕ್ತಿಮುದ್ರೆ ಬೀಜಮುದ್ರೆ ಶಾಂತಿಮುದ್ರೆ ಆವಾಹನ ಮುದ್ರೆ ಮನೋರಮಮುದ್ರೆ ಧ್ವಜಮುದ್ರೆ ಲಿಂಗಮುದ್ರೆ ಗಾಯತ್ರಿಮುದ್ರೆ ಕಾಲಕಂಢ ಮುದ್ರೆ ಶೂಲಮುದ್ರೆ ನಮಸ್ಕಾರಮುದ್ರೆ ಯೋನಿಮುದ್ರೆ [ವಿ]ಬ್ದೊಟ..... ಮುದ್ರೆ....ರ ಮುದ್ರೆ ಎಂಬ ಸಕಲ ಮುದ್ರಾಲಕ್ಷಣವನರಿದಾಯಾ ಯೋಗ್ಯ ಕ್ರಿಯೆಗಳಿಲ್ಲಿ ಪ್ರಯೋಗಿಸಿ, ಬಳಿಕ ಕೂರ್ಮ ಆನಂತಸಿಂಹ ಪದ್ಮವಿ.......... ಪೀಠಂಗಳಲ್ಲಿ......ಮಾದ ಸಿಂಹಾಸನಕ್ಕೆ ಶ್ವೇತರಕ್ತಪೀತಶ್ಯಾಮವರ್ಣದ ಸಿಂಹಾ ಕಾರಮಾದ ಧರ್ಮಜ್ಞಾನ ವೈರಾಗ್ಯ ಐಶ್ವರ್ಯವೆ,ಬ ನಾಲ್ಕೆ ಕ್ರಮದಿಂದಾಗ್ನ್ಯಾದಿ ದಿಕ್ಕಿನ ಪಾದಚತುಷ್ಟಯಂಗಳು, ರಾಜಾವರ್ತಪ್ರಭೆಯ ರೂಪಮಾದ ಅಧರ್ಮ ಅಜ್ಞಾನ ಅವೈರಾಗ್ಯ ಅನೈಶ್ವರ್ಯವೆಂಬ ನಾಲ್ಕೆ ಕ್ರಮದಿ ಪೂರ್ವಾದಿ ದಿಕ್ಕಿನ ಪಾದಚತುಷ್ಟಯಂಗಳು ಮೇಲೆ ಅಣಿಮಾದಿಗಳೆ ಪೂರ್ವಾದ್ಯಷ್ಟದಿಕ್ಕಿನ ದಳಂಗಳು, ವಾಮಾದಿ ಸರ್ವಭೂತ ದಮನಾಂತಮಾದ ರುದ್ರವೆ ಪೂರ್ವಾ ದ್ಯಷ್ಟದಿಕ್ಕಿನ ಕೇಸರಂಗಳು, ವೈರಾಗ್ಯವೆ ಕರ್ಣಿಕೆ ವಾಮೆ ಮೊದಲು ಮನೋನ್ಮನಿ ಕಡೆಯಾದ ನವಶಕ್ತಿಗಳೆ ಪೂರ್ವಾದಿಮಧ್ಯಾಂತವಾದ ಕರ್ಣಿಕಾಬೀಜಂಗಳು, ಬಳಿಕದರ ಮೇಲೆ ಅಗ್ನಿರವಿಶಶಿ ಮಂಡಲತ್ರಯಂಗಳು, ಬಳಿಕದರ ಮೇಲೆ ತಮೋರಜಸತ್ವಗುಣಂಗಳವರ ಮೇಲೆ ಜೀವಾತ್ಮ ಅಂತರಾತ್ಮ ಪರಮಾತ್ಮರು ಗಳವರ ಮೇಲೆ ಆತ್ಮತತ್ವ ವಿದ್ಯಾತತ್ವ ಶಿವಶತ್ವಂಗಳಿಂತು ಪರಿವಿಡಿದಾಯತ ಮಾದ ಸಿಂಹಾಸನಮಂ ಪರಿಕಲ್ಪಿಸಿ ಲಿಂಗಾರ್ಚನೆಯಂ ಮಾಳ್ಪುದಯ್ಯಾ ಶಾಂತ ವೀರೇಶ್ವರಾ.
--------------
ಶಾಂತವೀರೇಶ್ವರ
ಮತ್ತಮಾ ಸ್ವಾಯತದೀಕ್ಷೆಯು ವೇಧಾದೀಕ್ಷೆ ಮಂತ್ರದೀಕ್ಷೆ ಕ್ರಿಯಾದೀಕ್ಷೆ ಎಂದು ಮೂರು ಪ್ರಕಾರಮಪ್ಪುದು. ಅವಾವೆಂದೊಡೆ:ಗುರು ಶಿಷ್ಯನ ಮಸ್ತಕದಲಿ ಆಗಮೋಕ್ತ ವಿಧಾನದಿಂ ಶಿವಾಸನವನು ಧ್ಯಾನಿಸಿ, ಅಲ್ಲಲ್ಲಿ ಅವುದಾ ನೊಂದು ಶಿವತತ್ವಸಮಾವೇಶವು ವೇಧಾದೀಕ್ಷೆ ಎನಿಸಿಕೊಂಬುದು. ದೇವತಾದಿ ಗಳು ಸಹವಾಗಿ ಮಂತ್ರೋಪದೇಶವನು ಮಾಡುವುದು ಮಂತ್ರದೀಕ್ಷೆ ಎನಿಸಿ ಕೊಂಬುದು. ದೀಕ್ಷೋತ್ತರ ಕ್ರಿಯೆಗೂಡಿ ಪ್ರಾಣಲಿಂಗೋಪದೇಶವನು ಮಾಡು ವುದು ಕ್ರಿಯಾದೀಕ್ಷೆ ಎನಿಸಿಕೊಂಬುದು. ಇಂತೆಂದು[ದು]ವಾ ತೂಳಂ. ಮತ್ತಮಾ ಗುರುವು ಶಿಷ್ಯನ ಕರ್ಣದಲ್ಲಿ ಮಂತ್ರೋಪದೇಶವ ಮಾಡೂದೇ ಮಂತ್ರದೀಕ್ಷೆ. ಶಿಷ್ಯನ ಹಸ್ತದಲ್ಲಿ ಗುರುವು ಲಿಂಗವ ಕೊಡುವುದೆ ಕ್ರಿಯಾದೀಕ್ಷೆ. ಗುರು ತನ್ನ ಹಸ್ತವ ಶಿಷ್ಯನ ಮಸ್ತಕದಲ್ಲಿಡುವುದೆ ವೇಧಾದೀಕ್ಷೆ ಎನಿಸುವುದ[ಯ್ಯಾ] ಶಾಂತವೀರ ಪ್ರಭುವೇ.
--------------
ಶಾಂತವೀರೇಶ್ವರ
ಮತ್ತಂ ಪರಮಕಾರಣನಾದ ಶಿವನು ಗ್ರಾಹ....ತಿ ಬ್ರಾಹ್ಮಣಾದಿ ವರ್ಣಗಳು ನ್ಯೂನಾಧಿಕವಹತದಿಂದಿದ್ದಂಥಾವು. ಅವರವರ ಸಂಸ್ಕಾರವೂ ಆ ಪ್ರಕಾರವೇ ಆಗಬೇಕು. ಅಂತದರಿಂ ಫಲವು ಈ ಪ್ರಕಾರವೇಕಾಗದು? ಇಂತೆಂದು ಕಿರಣದಲ್ಲಿ ಚೋದ್ಯಮಂ ಪ್ರಶ್ನೋತ್ತರ ಕ್ರಮದಿಂ ಪರಿಹರಿಸುತ್ತಿದ್ದಾನು. ಸಂಸ್ಕಾ ರವು ಆತ್ಮಂಗೆ ಅಪ್ಪುದು, ಜಾತಿಗೂ ಇಲ್ಲ ಶರೀರಕ್ಕೂ ಇಲ್ಲ. ಇತ್ತಲಾನು ಜಾತಿಗೆ ಸಂಸ್ಕಾರವಪ್ಪೊಡೆ ಒಬ್ಬನು ದೀಕ್ಷಿತನಾಗಲಾಗಿ ಸರ್ವರೂ ದೀಕ್ಷಿತರಾಗಬೇಕು. ಅಂತದರಿಂ ಜಾತಿಗೆ ಸಂಸ್ಕಾರವಿಲ್ಲ. ಮತ್ತಂ ಶರೀರವು ಜಡವಹತನದಿಂದವಕ್ಕೆ ಸಂಸ್ಕಾರವಿಲ್ಲ. ಅಂತದರಿಂ ಸರ್ವಾನುಗ್ರಾಹಕನಾದ ಶಿವನು ಚಿದ್ರೂಪರಾದ ಆತ್ಮರುಗಳನ್ನು ಅನುಗ್ರಹಿಸುವನಯ್ಯಾ ಶಾಂತವೀರೇಶ್ವರಾ.
--------------
ಶಾಂತವೀರೇಶ್ವರ
ಮತ್ತಮಾ ಸಿಂಹಾಸನಾಗ್ರದಲ್ಲಿ ಶಿವಲಿಂಗ ವಾಹನ ಸ್ಥಾಪನ ಸನ್ನಿಧಾನ ಸಂರೋಧನ ಸಮ್ಮುಖೀಕರಣಮೆಂಬ ಕ್ರಿಯೆಗಳಂ ಮಾಡಿ, ಬಳಿಕ ಪೂಜಾ ಪ್ರಾರಂಭದಿಂ ತೊಡಗಿ, ಪೂಜಾ ಸಮಾಪ್ತಿ ಪರಿಯಂತರಂ ಕ್ಷಾಲನಪಾತ್ರ ಜಲಮಂ ಮರಳಿ ಮರಳಿ ಮುಷ್ಟಿ ಮುಷ್ಟಿ ಸಕಲ ಕ್ರಿಯೆಗಳನೀಶ್ವರಾರ್ಪಣಂ ಗೆಯ್ಯ ಬೇಕೆಂದರಿದು, ಬಳಿಕ ನದಿ ತ[ಟಾ]ಕ ಕೂಪಂಗಳಲ್ಲಿ ಸ್ವಾದುಮಿಶ್ರ ಲವಣಂಗಳಾದ ಕ್ರಮದಿಂದುತ್ತಮ ಮಧ್ಯಮ ಕನಿಷ್ಟಮಾದ ಪೂಜಾಯೋಗ್ಯ ಮಾದುದಕ ಭೇದಂಗಳಂ ಬಿಳಿಯ ಸಾಸಿವೆ ಕುಸುಮ ದೂರ್ವೆ ಕೋಷ್ಟ ಲಾಮಂಚ ಕರ್ಪೂರವೆಂಬಾರು ಪಾದ್ಯ ದ್ರವ್ಯಂಗಳಂ ಕುಶಾಗ್ರ ತಿಲ ಬಿಳಿಯ ಸಾಸಿವೆ ಜವೆ ನೆಲ್ಲು ಕ್ಷೀರಮೆಂಬಾರು ಅಘ್ರ್ಯ ದ್ರವ್ಯಂಗಳಂ, ಮುಖಾಂಬುಜಕ್ಕೀ ಘೃತದಧಿ ಮಧು ಮಿಶ್ರಮಾದ ಮಧುಪರ್ಕ ದ್ರವ್ಯಂಗಳಂ, ಫಲ ಕಚೋರ ಕರ್ಪೂರ ಕೋಷ್ಟ ಕುಂಕುಮ ಯಾಲಕ್ಕಿಯೆಂಬಾರು ಆಚಮನ ದ್ರವ್ಯಂಗಳಂ, ಪಂಚಗವ್ಯಂ ಪಂಚಾಮೃತಂಗಳಂ, ಗೋಧೂಮ ಚೂರ್ಣ ಗಂಧಾದ್ಯುದ್ವರ್ತನ ದ್ರವ್ಯಂಗಳಂ, ಮಂದೋಷ್ಣಾದಿ ಸ್ನಾನವಾರಿಗಳಂ, ಗಂಧೋದಕ ಪುಷ್ಪೋದಕ ರತ್ನೋದಕ ಮಂತ್ರೋದತಂಗಳಂ, ಮಹಾಸ್ನಾನೋದಕಂಗಳು, ವಿಧಿ ನಯ ಶುಭ್ರಾದಿ ಗುಣಯುಕ್ತ ಭಸಿತಂಗಳು, ಪ[ಟ್ಟೆ] ದೇವಾಂಗ ಶುಭ್ರ ಚಿತ್ರಾದಿ ವಸ್ತ್ರಂಗಳಂ, ಸುವರ್ಣ ರಜತ ಪ[ಟ್ಟೆ] ಸೂತ್ರಾದಿ ಯಜ್ಞೋಪವೀತಂಗಳಂ, ಕಿರೀWಟಾಘೆದ್ಯಾಭರಣಂಗಳಂ, ಚಂದನ ಅಗರು ಕಸ್ತೂರಿ ಕರ್ಪೂರ ತಮಾಲ ದಳ ಕುಂಕುಮ ಲಾಮಂಚ ಕೋಷ್ಟಂಗಳೆಂಬ ಅಷ್ಟಗಂಧಂಗಳಂ, ಜವೆ ಬಿಳಿಯ, ಸಾಸಿವೆ ತಿಲ ತಂಡುಲ ಮುಕ್ತಾಫಲಾಧ್ಯಕ್ಷತೆಗಳಂ, ಶುಭ್ರರಕ್ತ ಕೃಷ್ಣವರ್ಣ ಕ್ರಮದಿಂ ನಂದ್ಯಾದಿ ವತ್ರ್ತಾದಿ ಕಮಲಾದಿ ನೀಲೋತ್ಪಲಾದಿ ಸಾತ್ವಿಕ ರಾಜಸ ತಾಮಸ ಪುಷ್ಪಂಗಳಂ, ದೂರ್ವೆ ತುಲಸಿ ಬಿಲ್ವಾದಿ ಪತ್ರಜಾಲಂಗಳಂ, ಕರಿಯ[ಗ]ರು ಬಿಳಿಯಗರು ಗುಗ್ಗುಲ ಶ್ರೀಗಂಧ ಆಗರು ಬಿಲ್ವಫಲ ತುಪ್ಪ ಜೇನುತುಪ್ಪ ಸಜ್ಜರಸ ಕರ್ಪೂರವೆಂಬ ದಶಾಂಗ ಧೂಪಂಗಳಂ, ತೈಲವರ್ತಿ ಘೃತಕರ್ಪೂರವೆಂಬ ದೀಪ ಸಾಧನಂಗಳಂ, ಹರಿದ್ರಾನ್ನ ಪರಮಾನ್ನ ಮುದ್ಗಾನ್ನ ಕೃಸರಾನ್ನ ದಧ್ಯಾನ್ನ ಗುಡಾನ್ನಮೆಂಬ ಷಡ್ವಿಧಾನ್ನಾದಿ ನೈವೇದ್ಯಂಗಳಂ, ಪೂಗ ಪರ್ಣ ಚೂರ್ಣ ಕರ್ಪೂರಾದಿ ತಾಂಬೂಲ ದ್ರವ್ಯಂಗಳಂ, ಬೇರೆ ಬೇರೆ ಸಂಪಾದಿಸುವುದಯ್ಯಾ ಶಾಂತವೀರೇಶ್ವರಾ.
--------------
ಶಾಂತವೀರೇಶ್ವರ
ಮತ್ತಮಾ ಚಿರಂನಿರ್ವಾಣದೀಕ್ಷೆಯು, ಆಜ್ಞಾದೀಕ್ಷೆಯು, ಉಪಮಾದೀಕ್ಷೆ ಸ್ವಸ್ವಿಕಾರೋಹಣ್, ವಿಭೂತಿಯಪಟ್ಟ. ಕಲಶಾಭಿಷೇಕ, ಲಿಂಗಾಯತ, ಲಿಂಗ ಸ್ವಾಯತಗಳೆಂದು ಏಳು ಪ್ರಕಾರವು. ಅವರೊಳು ಗುರುವಿನಾಜ್ಞಾಪಾಲನದಲ್ಲಿ ಸಮರ್ಥವಾದುದು ಆಜ್ಞಾದೀಕ್ಷೆ ಎನಿಸಿಕೊಂಬುದು. ಪುರಾತನರುಗಳ ಸಮಯಾ ಚಾರಕ್ಕೆ ಸದೃಶವಾದುದು ಉಪಮಾದೀಕ್ಷೆ ಸ್ವಸ್ತಿಕವೆಂಬ ಮಂಡಲದ ಮೇಲೆ ಶಿಷ್ಯ ನ ಕುಳ್ಳಿರಿಸಿ,ಮಂತ್ರನ್ಯಾಸಮಂ ಮಾಡಿ, ಮಂತ್ರಪಿಂಡವಾಗಿ ಮಾಡುವದು ಸ್ವಸ್ತಿ ಕಾರೋಹಣ. ಆಗಮೋಕ್ತಸ್ಥಾನಂಗಳಲ್ಲಿ ತತ್ತನ್ಮಂತ್ರಂಗಳಿಂ ವಿಭೂತಿಧಾರಣವು ವಿಭೂತಿಯಪಟ್ಟ. ಪಂಚಕಲಶಂಗಳಲ್ಲಿ ತೀರ್ಥೋದಕಗಳಂ ತುಂಬಿ ಶಿವಕಲಾ ಸ್ಥಾಪನಂ ಮಾಡಿ, ಆ ಕಲಶೋದಕಂಗಳಿಂ ಶಿಷ್ಯಂಗೆ ಸ್ನಪನವಂ ಮಾಡೂದು ಕಲ ಶಾಭಿಷೇಕ. ಆಚಾರ್ಯನು ಶಿಷ್ಯಂಗೆ ಉಪದೇಶಿಸಲ್ತಕ್ಕೆ ಲಿಂಗಮಂ ತಾನು ಆರ್ಚನೆ ಯಂ ಮಾಡಿ, ಶಿಷ್ಯನಂ ನೋಡಿಸುವುದು ಲಿಂಗಾಯತವೆನಿಸಿಕೊಂಬುದು. ಆ ಶ್ರೀಗುರುನಾಥನಿಂದುಪದಿಷ್ಟವಾದ ಪ್ರಾಣಲಿಂಗವನು ಶಿಷ್ಯನು ಭಕ್ತಿಯಿಂ ಸ್ವೀಕ ರಿಸಿ, ತನ್ನ ಉತ್ತಮಾಂಗಾದಿ ಸ್ಥಾನಂಗಳಲಿ ಧರಿಸೂದು ಲಿಂಗಸ್ವಾಯತವೆನಿಸಿಕೊಂ ಬುದು. ಇಂತೆಂದುಕಾಮಿಕಂ ಪೇಳೂದಯ್ಯ, ಶಾಂತವೀರಪ್ರಭುವೆ.
--------------
ಶಾಂತವೀರೇಶ್ವರ
ಮತ್ತಮಾನುಗ್ರಹಿಸಲು ಯೋಗ್ಯನಾದ ಶಿಷ್ಯನ ಸವಿನಯದಲ್ಲಿಯೂ, ಅನುಗ್ರಾಹಕನಾದ ಗುರುವಿನ ಕಾರುಣ್ಯದಲ್ಲಿಯೂ, ಸರ್ವಾನುಗ್ರಾಹಕನಾದ ಶಿವನೆ ಕರ್ತನಾದ ಕಾರಣ, ಸರ್ವಲಕ್ಷಣಸಂಪನ್ನನಾದ ಗುರುವಿನ ಸರ್ವಲಕ್ಷಣಸಂಪನ್ನ ನಾದ ಶಿಷ್ಯನ ಯೋಗವು ಅತ್ಯಂತ ದುರ್ಲಭವಾದಂಥಾದು. ಇಂತೆಂದು ಪೌಷ್ಕ ರಂ ಪೇಳುತ್ತಿರ್ದಪುದು ಶಾಂತವಿರೇಶ್ವರಾ.
--------------
ಶಾಂತವೀರೇಶ್ವರ
ಮತ್ತಂ ಶಿವನು ಸರ್ವಾನುಗ್ರಹಕರ್ತೃವಹತನದಿಂದ ಬಾಲರು ಬಾಲಿಶರು ಭೋಗೀಶರುಗಳಿಗೆ ಅನುಗ್ರಹಮಾಡಲ್ತಕ್ಕುದೆಂಬಲ್ಲಿ, ಆಯಾ ಅನುಗ್ರಹವು ಅವರವರ ಸಂಸ್ಕಾರ ಪೂರ್ವಕವಾಗಿದ್ದಂಥಾದು. ಮತ್ತಮಾ ಸಂಸ್ಕಾರದಿಂದವೆ ಮುಕ್ತಿಯಪ್ಪುದೆಂದೊಡೆ ಕ್ರಿಯಾಜ್ಞಾನವ್ರತ ಮೊದಲಾದ ಉಪಾಯಂಗಳಿಗೆ ಕಾರಣವಿಲ್ಲದೆ ಹೋಗುವುದು. ಇಂತೆಂಬ ಚೋದ್ಯಮಂ ಪರಿಹರಿಸುತ್ತಿದನು. ಆರು ಕೆಲಂಬರು ಹೇಗೆ ಇದಾರು ಅವರಿಗೆ ಹಾಗೆ ಶಿವನು ಅನುಗ್ರಹ ಮಾಡುವನು. ಅದು ಹೇಗೆಂದೊಡೆ :ಕೆಲಂಬರು ಕ್ರಿಯಾಯೋಗ್ಯರು, ಅವರಿಗೆ ಕ್ರಿಯೆಯಿಂದವೆ ಮುಕ್ತಿಯಪ್ಪುದು. ಕೆಲಂಬರು ಜ್ಞಾನಯೋಗ್ಯರು. ಕೆಲಂಬರು ಚರ್ಯಾಯೋಗ್ಯರು. ಕೆಲಂಬರು ಯೋಗಾರ್ಹರು. ಈ ಪ್ರಕಾರದಲ್ಲಿ ಅರಿಗೆ ಅವುದರಿಂ ಮೋಕ್ಷವು ಪೇಳಲ್ಪಟ್ಟಿತ್ತು, ಅದು ಶಿವನ ಕೃಪೆಯತ್ತಣಿಂದಪ್ಪುದು. ಅದು ಕಾರಣ, ಜ್ಞಾನಾದ್ಯು ಪಾಯಂಗಳಿಗೆ ದೀಕ್ಷೆ ಕಾರಣವೆಂದು ಇಚ್ಚೈಸಲ್ಪಡುತ್ತಿದ್ದಿತು. ಅಂತದರಿಂ ದೀಕ್ಷೆಯಿಂದವೆ ಮೋಕ್ಷಮಪ್ಪುದು, ಉಪಾಯವೆ ನಿಯಾಮಕ ಮಪ್ಪುದು. ಮತ್ತಂ ಶಿವನು ಸರ್ವಾನುಗ್ರಹಕ್ಕೆ ಕರ್ತೃವಾದ ಕಾರಣ, ಆ ಉಪಾ ಯಂಗಳು ಶಿವನಿಂದವೆ ಉದಿತವಾಗಿದ್ದಂಥಾವು. ಇಂತೆಂದು ಕಾರಣಾಗಮ ಪೇಳೂದಯ್ಯಾ, ಶಾಂತವೀರೇಶ್ವರಾ.
--------------
ಶಾಂತವೀರೇಶ್ವರ
ಮತ್ತಂ ಸಮಸ್ತಪಾಶಂಗಳು ತೊಲಗಲೋಸ್ಕರ ದೀಕ್ಷೆ ಮಾಡಲ್ಪಟ್ಟಿತ್ತು. ಅಂತಾದೊಡೆ ದೀಕ್ಷೆಯಾಗಿಯೂ ಕರ್ಮಾಧಿಕಂಗಳು ಏನು ಕಾರಣ ತೊಲಗವು? ಇಂತೆಂಬ ಚೋದ್ಯಮಂ ಕಿರಣದಲಿ ಪ್ರಶ್ನೋತ್ತರ ಕ್ರಮದಿಂದ ದೃಷ್ಟಾಂತಪೂರ್ವಕವಾಗಿ ತೊಲಗಿಸುತ್ತಿದಾನು. ಅದೆಂತೆಂದೊಡೆ :ಸಿದ್ಧವಾದ ಮಂತ್ರಂಗಳಿಂದ ಅಮೂರ್ತವಾದ ವಿಷಯ ಶಕ್ತಿಗೆ ಕ್ಷಯವೆಂತಂತೆ ಅಂಕುರೋತ್ಪತ್ತಿಗೆ ಕಾರಣವಾದ ಬೀಜವೆಂತು ಹುರಿಯಲ್ಪಡುವ[ದೆಂತಂತೆ] ದೀಕ್ಷಾಕಾಲದ ಪ್ರಸಿದ್ಧವಾದ ಮಂತ್ರಂಗಳಿಂದ ಅನೇಕ ಭವಂಗಳಲ್ಲಿ ಮಾಡಲ್ಪಟ್ಟ. ಭವಬೀಜಂಗಳಾದ ಕರ್ಮಂಗಳು ಸುಡಲ್ಪಟ್ಟವು. ಆಗಾಮಿ ಕರ್ಮಂಗಳು ತಡೆಯಲ್ಪಟ್ಟವು. ಪ್ರಾರಬ್ಧಕರ್ಮವು ಭೋಗಾಂತರದಲ್ಲಿ ಕೆಡಲ್ಪಟ್ಟಿತು. ಇಂತೆಂದು ಕಿರಣಂ, ಗರುಡ ಉವಾಚ :`ಪಾಶವಿಶ್ಲೇಷಣಾರ್ಥಂತು ನ್ಯ ದೀಕ್ಷಾಚ ಕ್ರಿಯತೇ ಕಿಲ | ವಿಶ್ಲೇಷೋSಪಿನ [ಈಶ್ವರ] ದೃಷ್ಟತ್ವಾತ್ಕಥಂ ವದ ಭವಾನೆ ಹೋ || ವಾಚ ಪಾಶಸ್ತೋಮಃ ಕ್ಷಯಃ ಸಿದ್ಧಃ ಸಂಸಿದ್ಧಿಃ ಸೋSಪಿ ಶಂಬರೈಃ ಶಂಬರಾಣಾಮಚಿಂತ್ಯತ್ವಾದ್ಯಥಾ ಮೂರ್ತಿ ವಿಚಕ್ಷಯಃ || ಅನೇಕ ಭವಿ ಕರ್ಮದಗ್ಧಂ ಬೀಜಮಿವಾಣುಭಿಃ| ಭವಿಷ್ಯದಪಿ ಸಂರುದ್ಧಂಯಯೇದಂ ತದ್ಧಿ ಭೋಗತಃ || ಇಂತೆಂದು ಕಿರಣಾಗಮಂ ಪೇಳೂದಯ್ಯ, ಶಾಂತವೀರೇಶ್ವರಾ.
--------------
ಶಾಂತವೀರೇಶ್ವರ
ಮತ್ತಂ ದೀಕ್ಷೆಯಿಂ ಸಮಸ್ತ ಪಾಶಂಗಳು ತೊಲಗು[ವ]ವಪ್ಪಡೆ ದೀಕ್ಷೆಯಾ ಗಿಯೂ ಶರೀರಸ್ಥಿತಿಯೆಂತು ಸಂಭವಿಪುದೆಂಬ ಚೋದ್ಯಮಂ ದೃಷ್ಟಾಂತಪೂರ್ವಕವಾಗಿ ಪರಿಹರಿಸುತ್ತಿದ್ದನು. ಘಟನಿಷ್ಪತ್ತಿಯಾದರೂ ಮತ್ತೂ ಪರಿಭ್ರಮಿಸುತ್ತಿರ್ದ ಕುಲಾಲಚಕ್ರವೆಂತಂತೆ ದೀಕ್ಷೆಯಾದರೂ ದೀಕ್ಷೋತ್ತರ ಕ್ರಿಯಾವಸ್ಥಾನ ಪರ್ಯಂತರವಾಗಿ ಪ್ರಾರಬ್ಧಕರ್ಮವಾಸನೆಯಿಂದ ಶರೀರಸ್ಥಿತಿ ಸಂಭವಿಪ್ಪುದು. ಮತ್ತಂ ಘಟದೊಳಗಿದ್ದ ದೀಪವು ಘಟವೊಡೆಯಲಾಗಿ, ಘಟದೊಳಗಿರ್ದ ದೀಪ ಎಲ್ಲಾ ಕಡೆಯಲ್ಲಿಯೂ ಎಂತು ಪ್ರಕಾಶಿಸುವುದಂತೆ ದೀಕ್ಷಿತನು ದೇಹಾವಸಾನದಲ್ಲಿ ಪರಮುಕ್ತನಪ್ಪನು. ಇಂತೆಂದು ಕಿರಣಂ ಪೇಳ್ದಪುದು, ಶಾಂತವೀರೇಶ್ವರಾ.
--------------
ಶಾಂತವೀರೇಶ್ವರ