ಅಥವಾ
(2) (0) (0) (0) (0) (0) (0) (0) (0) (0) (0) (0) (0) (0) ಅಂ (0) ಅಃ (0) (1) (0) (1) (0) (0) (1) (0) (1) (0) (0) (0) (0) (0) (0) (0) (0) (0) (0) (0) (1) (3) (0) (13) (0) (13) (0) (0) (0) (0) (2) (1) (0) (1) (0) (0)

ಪದದಿಂದ ಪ್ರಾರಂಭವಾಗುವ ವಚನಗಳು:

ಪ್ರಮಾಣ ಪ್ರಮೇಯ ಸಂಶಯ ಪ್ರಯೋಜನ ದೃಷ್ಟಾಂತ ಸಿದ್ಧಾಂತ ಅವಯವ ಕರ್ತ ನಿರ್ಣಯ ವಾದ ಜಲ್ಪ ವಿತಂಡ ಹೇತ್ವಾಭಾಸ ತ [ಛಲ] ಜಾತಿ ನಿಗ್ರಹಸ್ಥಾನಂಗಳೆಂಬ ಷೋಡಶಪದಾರ್ಥಮಂಪೇಳುತ್ತವೆ. ಪ್ರಪಂಚಕ್ಕೀಶ್ವರ ಕರ್ತೃತ್ವಮಂ ನಿಶ್ಚೈಸೂದಯ್ಯಾ ಶಾಂತವೀರೇಶ್ವರಾ.
--------------
ಶಾಂತವೀರೇಶ್ವರ
ಪರಾರ್ಥಪೂಜೆಯನಾಯಿತ್ತಾದೊಡೆ, ಅಲ್ಲಿಂದ ಮೇಲೆ ಕೇಳು:`ಗ್ರಾಮಾದೌ ಸ್ಥಾಪಿತೇ ಲಿಂಗೇ ಯದ್ವಾದೈವಾದಿ ನಿರ್ಮಿತೇ ಪರಾರ್ಥಮಿತಿಜ್ಞೇಯಂ ಸರ್ವಪ್ರಾಣಿತಾವಹಿ' ಇಂತೆಂದು ಆವುದಾನೊಂದು ಕಾರಣದಿಂದ ದೇವ ಋಷಿ ದಾನವ ಮಾನವಾದಿಗಳಿಂದ ನಿರ್ಮಿಸಿ, ಗ್ರಾಮಗಿರಿ ಗಂಹರವನ ಮೊದಲಾದವ ರಲ್ಲಿ ಪ್ರತಿಷಿ*ತವಾದ ಶಿವಲಿಂಗಪೂಜೆ ಪರಾರ್ಥ ಪೂಜೆ ಎಂದು ಅರಿಯ ಬೇಕಾದುದು. ಆ ಪೂಜೆಯಲ್ಲಿ ಪ್ರಾಣಿಗಳಿಗೆಯೂ ಹಿತವ ಮಾಡುವಂಥಾದು `ಶಿವದ್ವಿಜೇನ ಕರ್ತನ್ಯಂ ದ್ವಿಧಾ ಪೂಜೇತಿ ಬೋಧಿತಾ' ಎಂದು ಈ ಕ್ರಮದಿಂದ ಹೇಳಲ್ಪಟ್ಟಎರಡು ಪ್ರಕಾರದ ಪೂಜೆ ಶಿವಬ್ರಾಹ್ಮಣನಿಂದವೆ ಮಾಡಲ್ತಕ್ಕಂಥಾದು ಶಾಂತವೀರೇಶ್ವರಾ.
--------------
ಶಾಂತವೀರೇಶ್ವರ
ಪೂರ್ವಾಭಿಮುಖದಿಂ ವಶ್ಯ, [ಆಗ್ನೆ]ಯಿಂ ವ್ಯಾಧಿ, ದಕ್ಷಿಣದಿಂದಭಿಚಾರ, ನೈರುತ್ಯನಿಂ ದ್ವೇಷ, ಪಶ್ಚಿಮದಿಂ ಧನಲಾಭ, ವಾಯವ್ಯದಿಂದಾಕರ್ಷಣ, ಉತ್ತರದಿಂ ಶಾಂತಿ, ಈಶಾನ್ಯದಿಂ ಮೋಕ್ಷಸಿದ್ಧಿಗಳಪ್ಪವೆಂದು ದಿಗ್ವಿಚಾರಮಂ ಮಾಳ್ಪುದು ಶಾಂತವೀರೇಶ್ವರಾ.
--------------
ಶಾಂತವೀರೇಶ್ವರ