ಅಥವಾ
(2) (0) (0) (0) (0) (0) (0) (0) (0) (0) (0) (0) (0) (0) ಅಂ (0) ಅಃ (0) (1) (0) (1) (0) (0) (1) (0) (1) (0) (0) (0) (0) (0) (0) (0) (0) (0) (0) (0) (1) (3) (0) (13) (0) (13) (0) (0) (0) (0) (2) (1) (0) (1) (0) (0)

ಪದದಿಂದ ಪ್ರಾರಂಭವಾಗುವ ವಚನಗಳು:

ಬಳಿಕಾ ಧ್ಯಾನಕ್ರಮದಲ್ಲಿ ಮಂತ್ರಾದ್ಥಿದೇವತೆಗೆ ಅಘೋರಾದಿ ಘೋರ ಮೂರ್ತಿ ಎಂದು, ಸದಾಶಿವಾದಿ ಮಿಶ್ರಮೂರ್ತಿ ಎಂದು, ಸಾಂಬಶಿವಾದಿ ಶಾಂತ ಮೂರ್ತಿ ಎಂದು ತ್ರಿವಿಧಮೂರ್ತಿಗಳುಂಟವರಲ್ಲಿ ಘೋರಮೂರ್ತಿಧ್ಯಾನದಿಂ ಚಿರಕಾಲಕ್ಕೆ ಸಕಲ ಸಿದ್ಧ್ಯಾದಿಗಳಹವು. ಶಾಂತಮೂರ್ತಿ ಧಾನ್ಯನದಿಂದ ಶೀಘ್ರ ಚಿರಕಾವವಲ್ಲದೆ ಪ್ರಚಾದಿಗಳ ಹವೆಂದರಿದು ಧ್ಯಾನಿಸೂದಾ ಧ್ಯಾನರಹಿತವಾಗಿ ಮಾಳ್ಪುದೆ ಅಗರ್ಭಜಪವಾ ಧ್ಯಾನ ಯುಕ್ತಮಾಗಿ ಮಾಳ್ಪುದೆ ಸಗರ್ಭಜಪವವ ರೊಳಗೆ ಅಗರ್ಭಕ್ಕೆ ಸಗರ್ಭವೆ ಕೋಟಿ ಮಡಿ ಮಿಗಿಲೆಂದು ಸಂಧ್ಯಾನಿಸೂದಯ್ಯ ಶಾಂತವೀರೇಶ್ವರಾ.
--------------
ಶಾಂತವೀರೇಶ್ವರ
ಬಳಿಕ ಕ್ರಿ....ತನ್ನ ಶಿಷ್ಯನ ಕರೆದೆಲೆ ಮಗನೆ ನಿನ್ನ ಪ್ರಾ[ಣ]ಲಿಂಗವಿದು ತಾನೆ, ತತ್ವಾತೀತಮಾದ ಪರವಸ್ತುವಿದು ತಾನೆ, ಹರಿಬ್ರಹ್ಮರರಸಿ ಕಾಣದ ನಿಜತತ್ವವಿದ ನಿನ್ನು ನಿಮಿ...ರ್ಧಮಾದರೂ ನಿನ್ನ ಶರೀರದಿಂ ವಿಯೋಗಮಾಗದಂತೆ ಸಾವಧಾನದಿಂ ಧರಿಸು, ತ್ರಿಕಾಲಂ ತಪ್ಪದರ್ಚಿಸುತ್ತಿರು, ಲಿಂಗಾರ್ಪಿತವಲ್ಲ ದೇನೊಂದನು ಸ್ವೀಕರಿಸದಿರು, ಸಕಲಭೋಗಮೋಕ್ಷಂಗಳೆಲ್ಲಾ...ಸಾರಿದವೆಂದು ನಂಬು, ಸರ್ವ ಕ್ಲೇಶಮಂ ಬಿಡು, ನಿತ್ಯಸುಖಿಯಾಗು, ಸತ್ಯಮಿದೆಂಬಿವು ಮೊದ ಲಾದ ಶಿವಕ್ರಿಯೆಗಳ ನುಪದೇಶಂಗೆಯುಂತು ಪೇಳ ವೀರಶೈವದೀಕ್ಷೆಯಾದೊಡೆ ಆಜ್ಞಾದೀಕ್ಷೆ ಉಪ[ಮಾ]ದೀಕ್ಷೆ, ಸ್ವಸ್ಥಿಕಾರೋಹಣ, ಕಳಶಾಬ್ಥಿಷೇಕ, ವಿಭೂತಿಯ ಪಟ್ಟ, ಲಿಂಗಾಯತ, ಲಿಂಗಸ್ವಾಯತಮೆಂದು ಸಪ್ತವಿಧಮಾಗಿಹುದವರಲ್ಲಿ ಶ್ರೀಗುರು ತನ್ನಾಜ್ಞೆಯನೆ ಶಿಷ್ಯನಲ್ಲಿ ಪ್ರತಿಪಾದಿಸೊದೆ ಆಜ್ಞಾದೀಕ್ಷೆ ಎನಿಸೂದು. ಪುರಾತನ ಸಮಯಾಚಾರಕ್ಕೆ ಸದೃಶಮಾಗಿ ಮಾಡೂದೆ ಉಪಮಾದೀಕ್ಷೆ ಎನಿಸೂದು. ಸ್ವಸ್ತಿಕಮೆಂಬ ಮಂಡಲದ ಮೇಲೆ ಶಿಷ್ಯನಂ ಕುಳ್ಳಿರಿಸಿ ಮಂತ್ರ ನ್ಯಾಸಾದಿಗಳಂ ಮಾಡಿ ಮಂತ್ರಶರೀರಿ ಎನಿಸೂದೆ ಸ್ವಸ್ತಿಕಾರೋಣವೆನಿಸೂದು. ಪಂಚಕಳಶೋದಕಂಗಳಿಂ ಶಿಷ್ಯಂಗೆ ಸ್ನಪನಂಗೆಯ್ವುದೆ ಕಳಶಾಬ್ಥಿಷೇಕವೆನಿ ಸೂದು. ಆಗಮೋಕ್ತಸ್ಥಾನಂಗಳಲ್ಲಿ ತತ್ತನ್ಮಂತ್ರಂಗಳಿಂ ಶ್ರೀವಿಭೂತಿ ಧಾರಣಂ ಗೆಯ್ವುದೆ ವಿಭೂತಿಯ ಪಟ್ಟವೆನಿಸೂದು. ಆಚಾರ್ಯಂ ತಾನೂ ಶಿಷ್ಯಂಗೆ ಕೊಡಲುತಕ್ಕ ಲಿಂಗವನರ್ಚಿಸಿ ಶಿಷ್ಯನಂ ನೋಡಿಸೊದೆ ಲಿಂಗಾಯತವೆನಿಸೂದು. ಆ ಶ್ರೀಗುರುವಿತ್ತ ಲಿಂಗವನೆ ಶಿಷ್ಯನು ಸಾವಧಾನದಿಂದುತ್ತಮಾಂಗಾದಿ ಸ್ಥಾನಂಗಳಲ್ಲಿ ಧರಿಸೂದೆ ಲಿಂಗಸ್ವಾಯತವೆನಿಸೂದು. ಇಂತು ಶಾಸ್ತ್ರೋಕ್ತ ಕ್ರಮದಿಂ ಸಾಂಗಿಕಮಾದ ಶಿವದೀಕ್ಷೆಯಿಂ ಲಿಂಗಾಂಗಸಂಬಂದ್ಥಿಯಾದ ವೀರಶೈವನು ಮಾಳ್ಪ ಶಿವಲಿಂಗ ಪೂಜಾಕ್ರಮವೆಂತೆಂದೊಡೆ :ಶ್ರೇಷ್ಠರುಗಳಾ ವಾವುದನಾಚರಿಸುವರದನೆ ಲೋಕದವರನುವರ್ತಿಪುದರಿಂ, ಜಗಕ್ಕುಪದೇಶ ಮಪ್ಪಂತೆ ತಾನು ನಿತ್ಯನಿರ್ಮಲನಾದರೂ ಮಂತ್ರನ್ಯಾಸಾ... [ಸಾಂಸ್ಥಿಕಮಾಗಿ] ಶಿವಲಿಂಗಾರ್ಚನೆಯಂ ಮಾಡುವಲ್ಲಿ ಮೊದಲು...ಳತನುಲಿಂಗುಪದೇಶಮಂ ಮಾಳ್ಪುದು. ಪದಿನೆಂಟುಕುಲ ಪ್ರವರ್ತನೆಯನಳಿದು, ಶರಣರ ಕುಲ ವನೊ.... ಶಿವಪೂಜೋಪಚಾರವೆ ತನಗೆ ಸಂಸಾರವೆನಲದುವೆ ನಿಸ್ಸಂಸಾರ ದೀಕ್ಷೆ ತ್ರಿಮಲ ಭವದೊಳು...ಲಿಂಗಾಂಗಸಮರಸವ ಮಾಳ್ಪುದೆ ತತ್ವದೀಕ್ಷೆ. ಲಿಂಗಾಂಗಸ್ವಯ ಲಿಂಗ ನೀನೆಂದು ತಿಳುಪುವದೆ ಅ...ಹವು ಹಿಂಗದಾ ಸಚ್ಚಿದಾನಂದಬ್ರಹ್ಮಾತ್ಮಕ ತಾನೆನಲ ದುಸತ್ಯಶುದ್ಧೀದಕ್ಷೆ. ಯೀ ಸಪ್ತಕವ....ಯದೆಹುದೆ ಏಕಾಗ್ರಚಿತ್ತದೀಕ್ಷೆ. ವ್ರತನಿಯಮಂ[ಗಳಲ್ಲಿ]....ಯ ಕರಣಭಾವಾರ್ಪಿತಗಳಂ ಸರ್ವಕಾಲದೊಳು ಇಷ್ಟ ಪ್ರಾಣವಾಸ ಲಿಂಗಂ.....ದಿರ್ಪುದೆ ....ದೀಕ್ಷೆಯೆನಿಪುದು. ಆದಿಮಧ್ಯಾವ ಸಾನರಹಿತ ಶಿವ ತಾನೆ ನಲ....ಚ್ಚಿ ಬೇರ್ಪಡಿಸದಿರವೆ ಸದ್ಯೋನ್ಮುಕ್ತಿದೀಕ್ಷೆ. ಈ ಏಳನು ಭಾವಕುಪದೇಶ ಮಂ....(ಅಪೂರ್ಣ)
--------------
ಶಾಂತವೀರೇಶ್ವರ
ಬಳಿಕಾ ಮಂತ್ರಗಳ ವಾಚ್ಯ ವಾಚಕ ಸಂಬಂಧವರಿದು, ಮೇಲೆ ಪಂಚಬ್ರಹ್ಮ ಷಡಂಗಂಗಳೆ ಪ್ರಥಮಾವರಣ, ಅನಂತಾದ್ಯಷ್ಟ ವಿದ್ಯೇಶ್ವರರೆರಡನೆ ಯಾವರಣ, ಉಮೆ ಚಂಡೀಶ್ವರ ನಂದಿಕೇಶ್ವರ ಮಹಾಕಾಳ ಭೃಂಗಿರಿಟಿ ಗಣಪತಿ ವೃಷಭ ಷಣ್ಮುಖರೆಂಬ ಅಷ್ಟಗಎೀಶ್ವರರೆ ಮೂರನೆಯಾವರಣ, ಇಂದ್ರಾದಿ ಲೋಕಪಾಲಾಷ್ಟಕರು ಬ್ರಹ್ಮವಿಷ್ಣುಗಳು ನಾಲ್ಕನೆಯಾವರಣ, ವಜ್ರಾದಿ ದ್ಪಚಕ್ರಂಗಳೆಂಬ ದಶಾಯುಧಂಗಳೈನೆಯಾವರಣ, ಬ್ರಾಹ್ಮಾದಿ ಸಪ್ತಮಾಕೃಕೆಯ ರಾರನೆಯಾವರಣ, ಅಷ್ಟವಸುಗಳೇಳನೆಯಾವರಣ, ಏಕಾ ದಶರುದ್ರರೆಂಟನೆ ಯಾವರಣ, ಆದಿತ್ಯಾದಿ ನವಗ್ರಹಂಗಳೊಂಬತ್ತನೆ ಯಾವರಣವಹುದಾಗಿ, ಪಂಚಾಕ್ಷರಾದಿ ಮಂತ್ರಾದ್ಥಿದೇವತೆಯನಾವರಣ ಸಹಿತಮಾಗಾದರೂ, ನಿರಾ ವರಣಮಾಗಾದರೂ ಧ್ಯಾನಿಸುತ್ತೆ ಜಪಿಸೂದಾ ಧಾನ್ಯದಲ್ಲಿ ಅಬ್ಥಿಚಾರ ಗ್ರಹೋ ಚ್ಚಾಟನಾದಿಗಳಿಗೆ ಕೃಷ್ಣವರ್ಣರೂಪದಿಂ, ಮುಕ್ತ್ಯಾದಿಗಳಿಗೆ ಶುಕ್ರವರ್ಣ ರೂಪದಿಂ ಧ್ಯಾನಿಸೂದಯ್ಯ ಶಾಂತವೀರೇಶ್ವರಾ.
--------------
ಶಾಂತವೀರೇಶ್ವರ
ಬಳಿಕ ನಿಷ್ಕಾಮನಾದ ಮೋಕ್ಷಾಧಿಕಾರಿಗಭ್ಯಂತರದಲ್ಲಿ ಮುಖ್ಯಮಾಗಿ ಜ್ಞಾನ ಮಯನಾದ ಪೂಜೆ ಕತ್ರ್ಯವ್ಯಮಾ ಪೂಜೋಪಚಾರಂಗಳಲ್ಲಿ ಉಪಚಾರಮಂ ಉಪಚಾರ್ಯಮಾದ ದೇವತೆಯ ಗುಣಂಗಳನಾರೋಪಿಸಿ ಮಾಡಲು ತಕ್ಕು ದದೆಂತೆಂದೊಡೆ :ಮೊದಲು ತದನಂತರದಲ್ಲಿ ಶಿವಧರ್ಮವೆ ಕಂದ, ಸುಜ್ಞಾನವೆ ನಾಳ, ಅಷ್ಟಮಹ ದೈಶ್ವರ್ಯವೆ ದಳ, ರುದ್ರೇಶ್ವರಾದಿಕವೆ ಕೇಸರ, ವೈರಾಗ್ಯವೆ ಕರ್ಣಿಕೆಗಳಾಗಿ ಚಂದ್ರಪ್ರಭಾಮಯವೆನಿಸಿ ಮೆರೆವ ಹೃದಯಕಮಲದ ಸೋಮ ಸೂರ್ಯಾಗ್ನಿ ಮಂಡಲತ್ರಯದ ಮಧ್ಯದಲ್ಲಿ ಸತ್ತೆಂಬ ದಿವ್ಯಮೂರ್ತಿಯಿಂ, ಚಿತ್ತೆಂಬ ಕಾಯ ಕಾಂತಿಯಿಂ, ಆನಂದವೆಂಬ ಲಾವಣ್ಯದಿಂ, ತತ್ವ ಪರಿಕಲ್ಪಿತಮಾ ದಾಭರಣಾಯುಧಾದಿಗಳಿಂದಲಂಕೃತ ಮಾಗಿ, ಸ್ಫಟಿಕದೊಳಗಣ ದೀಪದಂತೆ ಒಳಹೊರಗೆ ಬೆಳಗುತ್ತಿರ್ದೀಶ್ವರನಂ ಪರಿಭಾವಿಸಿ ಬಳಿಕ ಸರ್ವಾಧಾರ ನೀಶ್ವರನೆಂಬ ಬುದ್ಧಿಯೆ ಆಸನ, ಪರಮಾತ್ಮನು ಪರಿಪೂರ್ಮನೆಂಬ ಮತಿ[ಯೆ] ಆವಾಹನ, ಜಗಕೆಲ್ಲಂ ಶಿವನ ಶ್ರೀಪಾದವೆಂಬ ತಿಳಿವೆ ಪಾದ್ಯಂ, ಸುಖಾಂಬುಧಿ ಶಂಭುವೆಂಬನುಸಂಧಾನವೆ ಅಘ್ರ್ಯ, ಪರಮಪವಿತ್ರ ಸ್ವರೂಪನಭವನೆಂಬರಿವೆ ಆಚಮನೀಯ, ನಿತ್ಯನಿರ್ಮಳ ನೀಶ್ವರನೆಂಬುಪಲಬ್ದಿಯೆ ಸ್ನಾನ, ಜಗವೆಲ್ಲವನತಿ ಕ್ರಮಿಸಿರ್ಪ ಶುದ್ಧವಿದ್ಯೆಯ ವಸ್ತ್ರ, ತ್ರಿಗುಣಾಗಮಾತೀತಮಾದ ಜ್ಞಾನವೆ ಯಜ್ಞ ಸೂತ್ರ, ಚೈತನ್ಯವೆ ಜಗದಲಂಕಾರಮೆಂಬ ಪ್ರತಿಭೆಯ ಆಭರಣ, ಶುದ್ಧಚಿಚ್ಛಕ್ತಿಯೆ ಅನುಲೇಪನ, ಕಾರುಣ್ಯವೆ ಅಕ್ಷತೆ, ಪ್ರಣವಾತ್ಮಕ ಸತ್ಯವಚನವೆ ಪುಷ್ಪ, ವಿಷಯ ವಾಸನಾವಿಲಯವೆ ಧೂಪ, ಜಗದ್ವರ್ತಿ ವಿಡಿದುಜ್ವಲಿಪ ಪರಂಜ್ಯೋತಿಯೆ ದೀಪ, ಜಗವೆಲ್ಲಮಂ ಕಬಳೀಕರಿಸಿಕೊಂಡಿಪ್ಪಾತ್ಮನೆ ನಿತ್ಯತೃಪ್ತನೆಂಬ ಸಂವಿತ್ತೇ ನೈವೇದ್ಯ, ತ್ರಿಗುಣಂಗಳ ನೊಳಕೊಂಡು ನಿಂದ ಜ್ಞಪ್ತಿಯೆ ತಾಂಬೂ, ಸೋಹಂ ಭಾವದಾವೃತ್ತಿಯೆ ಪ್ರದಕ್ಷಿಣ, ಸಮಸ್ತ ತತ್ತ್ವಂಗಳನತಿಕ್ರಮಿಸಿನಿಂದ ನಿಜವೆ ನಮಸ್ಕಾರ, ಶಿವೈಕ್ಯಸ್ಥಿತಿಯೆ ವಿಸರ್ಜನವೆಂಬ ಉಪಚಾರಂಗಳಿಂದಂತಃಪೂಜೆಯಂ ರಚಿಸೆಂದೊರೆದಿರಯ್ಯಾ ಶಾಂತವೀರೇಶ್ವರಾ.
--------------
ಶಾಂತವೀರೇಶ್ವರ
ಬಳಿಕ, ಜೈಮಿನಿ ಅಶ್ವಪಾದ ಕಣಾದರೆಂಬ ಋಷೀಶ್ವರರಿಂ ಕ್ರಮದಿಂದುಕ್ತ ಮಾದ ಪೂವòವಿೂಮಾಂಸೆ ನ್ಯಾಯ ವೈಶೇಷಿಕವೆಂಬ ದೃಷ್ಟಾದೃಷ್ಟ ಫಲಂಗಳುಳ್ಳ ವೈದಿಕಶಾಸ್ತ್ರಂಗಳು ಅವರಲ್ಲಿ ಪೂರ್ವವಿೂಮಾಂಸೆಯೆ ಉಪಕ್ರಮಾದಿ ಷಡ್ವಿಧಲಿಂಗ ತಾತ್ಪರ್ಯದಿಂ ವೇದವಾಕ್ಯ ವಿಚಾರಪೂರ್ವಕಮಾಗಿ ಜ್ಯೋತಿಷ್ಟೋಮ ಯಾಗಾದಿ ಕರ್ಮಂ ವಿಧಿಸೂದಯ್ಯಾ ಶಾಂತವೀರೇಶ್ವರಾ.
--------------
ಶಾಂತವೀರೇಶ್ವರ
ಬಳಿಕಾ ವೀರಶೈವನೆ ಕ್ರಿಯಾಭೇದದಿಂ ಸಾಮಾನ್ಯವೀರಶೈವನೆಂದು, ವಿಶೇಷ ವೀರಶೈವನೆಂದು ನಿರಾಭಾರಿವೀರಶೈವನೆಂದು ತ್ರಿವಿಧಮಾಗಿರ್ಪನವರಲ್ಲಿ ಶ್ರೀಗುರುವಿನ ಹಸ್ತಮಸ್ತಕಸಂಯೋಗದಿಂ ವಿಭೂತಿಯ ಪಟ್ಟದಿಂ ಶಿವಮೊತ್ರೋ ಪದೇಶದಿಂ ಲಿಂಗಾಗಂಸಂಗಿಯಾಗಿ ಹಸ್ತಮಸ್ತಕ ಕಂಠ ಕಕ್ಷ ವಕ್ಷಸ್ಥಲಾದಿಗಳಲ್ಲಿ ಶಿವಲಿಂಗಧಾರಕನಾಗಿ ಏಕಕಾಲಮಾದೊಡಂ ಹಸ್ತಮಸ್ತಕ ಕಂಠ ಕಕ್ಷ ವಕ್ಷಸ್ಥಲಾದಿ ಗಳಲ್ಲಿ ಶಿವಲಿಂಗಧಾರಕನಾಗಿ ಏಕಕಾಲಮಾದೊಡಂ ತ್ರಿಕಾಲಮಾದೊಡಂ ಲಿಂಗಾರ್ಚನಾಸಕ್ತನಾಗಿ ಗುರುಲಿಂಗಭಸಿತಂಗಳಲ್ಲಿ ಭಕ್ತಿಯುಕ್ತನಾಗಿಪ್ಪಾತನೆ ಸಾಮಾನ್ಯವೀರಶೈವನಪ್ಪನಯ್ಯ ಶಾಂತವೀರೇಶ್ವರಾ.
--------------
ಶಾಂತವೀರೇಶ್ವರ
ಬಿಂದ್ವಾಕಾಶದ ಮಧ್ಯದಲ್ಲಿ ಇರುತ್ತಿರ್ದ ಸೂಕ್ಷ್ಮವಾದ ಜ್ಯೋತಿರ್ಮಯ ವಾದ ಬ್ರಹ್ಮನಾಳವುಂಟು. ಮುಕ್ತಿಸ್ವರೂಪಕ್ಕೆ ಪ್ರಕಾಶಕ್ಕೆ ಪ್ರಕಾಶವಾದ ಆ ಸೂಕ್ಷ್ಮರಂಧ್ರವನು ಕಂಡು, ಆ ಶರಣನು ಸಮಸ್ತ ಪ್ರಾಣಿಗಳಲ್ಲಿ ಅಂತರ್ಯಾಮಿ ಯಾಗಿರ್ದನಯ್ಯ ಶಾಂತವೀರೇಶ್ವರಾ.
--------------
ಶಾಂತವೀರೇಶ್ವರ
ಬೃಹಸ್ಪತಿ ಅರ್ಹತ ಸುಗತರೆಂಬಿವರಿಂ ಕ್ರಮದಿಂ ಪೇಳಲ್ಪಟ್ಟ ಚಾರ್ವಾಕ ಜೈನ ಬೌದ್ಧಂಗಳೆಂಬುವೆ ಅವೈದಿಕ ಶಾ....ದ್ಯಾದಿ ಚತುರ್ಭೂತವಿಕಾರಮಾದ ಜಗತ್ತಿನಲ್ಲಿ ಸುಖವೇ ಸ್ವರ್ಗ, ದುಃಖವೇ ನರಕವಲ್ಲದೆ ಬೇರೆ ಸ್ವರ್ಗ ನರಕಾದಿಗಳಿಲ್ಲವೆಂದು ಪೇಳೂದು ಜೈನವೇ ಸಿದ್ಧ ಬದ್ಧ.....ಣಂಗಳಂ ಒಡ್ಡೀಶ ಒಡ್ಡಾಮಮಲ್ಲೇಶ್ವರ ಜ್ವಾಲಿನೀಕಲ್ಪ ಪದ್ಮಾವತೀಕಲ್ಪ ಶಾರದಾಕಲ್ಪ ಕುಕ್ಕುರ ನಾಥಾದಿ ಕಲ್ಪಂಗಳಿಂದ, ಮಂತ್ರೌಷಧಾದಿ....ರುಗಳಂ ಲೂನಕೇಶ ದಿಗಂಬರ ಪಾಣಿಪಾತ್ರೆ ಮಯೂರಪಿಂಛ ಕುಂಚ ಮಲಧಾರಣಾದಿಗಳಿಂ, ಹುಸಿ ಕಳವು ಪಾರದ್ವಾರ ಅತಿ...ಬ ಪಂಚಾಣು ವ್ರತಂಗಳಿಂ, ಮಧುಫಲಾಂಡು ಮೊದಲಾದ ನಿಷಿದ್ಧದ್ರವ್ಯಯಂಗಳಂ ಬಿಟ್ಟು ವಾಲ್ಮೀಕಂಗಳಿಂದ ತಪ್ತ ಶಿಲಾಶಯನಾದಿಗಳಿಂದ ಉಗ್ರತಸ್ಸನಾಚ...ಚಂದ್ರ ನಾಗಚಂದ್ರ ನೇಮಿಚಂದ್ರ ಮಾಘಚಂದ್ರ ಮೇಘಚಂದ್ರ ಅರ್ಹತ ಆದಿನಾಥ ಅಗ್ಗಳ ಪಾಶ್ರ್ವನಾಥ ಸೌಗತ ಶ್ರುತಕೀರ್ತಿ ಶ್ರೀಮತಿ ಕಾಮರಖಾತ [?] ಮುನೀಶ್ವರ ಚರಿತ್ರಂಗಳಂ ಸ್ಯಾದಸ್ತಿ ಸ್ಯಾನ್ನಾಸ್ತಿಯೆಂಬಿವು ಮೊದಲಾದ ಸಪ್ತಭಂಗಿಗಳಂ ಜೀವ [ಅಜೀ]ವ ನಿ[ರ್ಜರಾ] ಮೋಕ್ಷಮೆಂಬ ಸಪ್ತಪದಾರ್ಥಂಗಳ..[ಶಾಂತ]ವೀರಪ್ರಭುವೇ.
--------------
ಶಾಂತವೀರೇಶ್ವರ
ಬಳಿಕ ವಾಹನ ಮಂಚ ತಲೆ ಸುತ್ತು ಕುಪ್ಪಸ ದಿಗಂಬರ ಮುಕ್ತಕೇಶ ಅಶುಚಿತ್ವ ಬಹುಭಾಷಿ ಆಗುಳಿಗೆ ಸೀನು ತೂಕಡಿಗೆ ನಿಷ್ಟಿವನ ನೀಚಪ್ರಾಣಿದರ್ಶನ ಕ್ರೋಧ ವ್ಯಾಕುಲತೆಗಳುಳ್ಳಾತನಾಗಿ ಜಪಿಸಲಾಗದೆಂದು, ನಿರ್ವಿಕಾರತ್ವದಿಂ ಕಾಷ್ಟಮೌನಿ ಯಾಗಿ, ಸಮಗ್ರೀವ ಶಿರಃಶರೀರಿಯಾಗಿ, ಮನೋದೃಷ್ಟಿಗಳೇಕಾಗ್ರತೆಯಿಂ ಧ್ಯಾನ ಮುದ್ರಾಸಮನ್ವಿತನಾಗಿ ಕುಳ್ಳಿರ್ದು, ಬಳಿಕ ಭಸಿತ ರುದ್ರಾಕ್ಷಾಭರಣ ಗುರುಪಾದ ಸ್ಮರಣ ಪೂರ್ವಕಮಾಗಿ, ಮರಳಿ ಕನಿಷ* ಅನಾಮಿಕೆ ಆಂಗುಷ್ಟ ಮೆಂಬಂಗುಲಿತ್ರಯದಿಂ ವಾಮದಕ್ಷಿಣ ನಾಸಾಪುಟಮಂ ಪಡಿದು, ಮೇಲೆ ಬ್ರಹ್ಮಾಧಿದೇವತೆಯಪ್ಪು ಪ್ರಣವಾದಿಯಾದ ಆಕಾರಮಂತ್ರಮಂ ಆಕಾರ ಮಂತ್ರಮಂ ಚಿಂತಿಸುತ್ತೆ , ಈಡೆಯೊಳ್ಪವನನಂ ತನ್ನ ಶಕ್ತ್ಯಾನುಸಾರದಿಂದುರದಲ್ಲಿ ಪೂರಿಸಿ, ಬಳಿಕ ವಿಷ್ಣುವಧಿದೇವತೆಯಾದ ಪ್ರಣವ ಮಧ್ಯದಲ್ಲಿಪ್ಪ ಉಕಾರಮಂ ಧ್ಯಾನಿಸುತ್ತಾ ಪೂರಿಸುತ್ತಾ ಪೂರಿಸಿದ ಪ್ರಾಣನನಲ್ಲಿಯೆ ಕುಂಭಿಸಿ, ಬಳಿಕ ರುದ್ರಾದಿದೇವತ್ಮಾಕ್ರಮದ ಪ್ರಣವದಂತ್ಯಮಪ್ಪ ಮಕಾರಮಂ ಸ್ಮರಿಸುತ್ತ, ಕುಂಭಿಸಿದ ವಾಯುಮಂ ಮೆಲ್ಲನ ಪಿಂಗಲೆಯಿಂ ರೇಚಿಸಿ, ಒಮ್ಮೆಲೆಯಾ ಮಂತ್ರ ಕ್ರಮವಿಡಿದು, ಮತ್ತೆ ಪಿಂಗೆಲೆಯಿಂ ಪೂರಿಸುತ್ತುದರದಲ್ಲಿ ಕುಂಭಿಸುತ್ತೀಡೇಯಿಂ ರೇಚಸುತ್ತಿಂತು ಪ್ರಾಣಾಯಾಮಕ್ರಮಂ ಮಾಡುವುದಯ್ಯ ಶಾಂತವೀರೇಶ್ವರಾ.
--------------
ಶಾಂತವೀರೇಶ್ವರ
ಬಳಿಕಾ ಮಂತ್ರಂಗಳಿಗೆ ಆತ್ಮಗರ್ಭ ಶಿವಗರ್ಭ ಶಕ್ತಿಗರ್ಭ ಗರ್ಭತ್ರಯ ಯುಂಟವರಲ್ಲಿ ಆತ್ಮಗರ್ಭಮಾಗೆ ಸುಪ್ತಲೀಲಾ ಸಮರ್ಥವಹುದು, ಶಿವಗರ್ಭ ಮಾಗೆ ನಪುಂಸವಹುದು, ಶಕ್ತಿಗರ್ಭಮಾಗೆ ಭುಕ್ತಿ ಮುಕ್ತಿಪ್ರದವಹುದೆಂದೀ ಕ್ರಮವರಿದಿಂತು ವಿದ್ಯುಕ್ತಮಾಗಿ ಜಪಂಗೆಯ್ದು, ಜಪಸಮಾಪ್ತಿಯಾದ ಮೇಲೆಯೂ ಪೂರ್ವೋಕ್ತಮಾದ ವಿಧಿಗೆ ವಿಪರೀತಮಾದ ಪ್ರಾಣಾಯಾಮ ತ್ರಯದಿಂದ ಮೊದಲಂತೆ ಛಂದೃಷಿ ದೇವತಾದಿಗಳಿಂ ವಿಧಿಸಿ, ಸ್ಮರಿಸಬೇಕೆಂದು ವಿಧಿಸಿ, ಬಳಿಕೀ ಮಂತ್ರಾದಿ ಸಕಲ ಕ್ರಿಯೆಗಳಂ ಶ್ರೀಗುರೂ ಪದೇಶದಿಂದ ಭ್ಯಾಸಂಗೆಯ್ಯೆ, ಸರ್ವಾರ್ಥಸ್ಥಿಯಹುದಲ್ಲದೆ ಯುಕ್ತಿಶಾಸ್ತ್ರದಿಂದನುಷ್ಟಿಸ ಲಾಗದೆಂದು ದೃಢವಿಡಿದು, ಅನಂತ[ರ]ದೊಳಿಂತು ಭಸಿತ ರುದ್ರಾಕ್ಷ ಪಂಚಾಕ್ಷರ ಮಂತ್ರವಿಧಾನಸಿದ್ಧನಾದ ಶುದ್ಧಶೈವಂಗೆ ಶಿವಾರ್ಚನವೆ ಕರ್ತವ್ಯ ವಹುದಲ್ಲಿ ಮೂಲಾ ಭಿಷೇಚನದಿಂ ತರುಶಾಖೋಪಶಾಖಾದಿಕವೆಲ್ಲಂ ಪಲ್ಲವಿಸು ವಂತೆ, ಪ್ರಾಣೋಪಹಾರದಿಂ ಸಕಲೇಂದ್ರಿಯ ಸಮೂಹವೆಲ್ಲಂ ಪರಿಪೋಷಿಸು ವಂತೆ, ಶಿವಾರ್ಚನಮೊಂದರಿಂದಖಿಳ ದೇವತಾಸಂತುಷ್ಟಿಯಹುದಾಗಿ, ಚಂದ್ರ ಸೂರ್ಯ ಮಂಡಲವಹ್ನಿ ಗಂಗಾಸ್ಥಡಿಲ ಕಲಶ ಮಸ್ತಕ ಸಾಲಗ್ರಾಮಾದಿ ಪೂಜಾ ಸ್ಥಾನಂಗಳೊಳಗೆ ಲಿಂಗಾಧಿಷಾ*ನವೆ ಮಹಾವಿಶೇಷವೆಂದು ಶಿಲಾಮಯ ಲಿಂಗವನೆ ಬ್ರಹ್ಮನು, ಇಂದ್ರನೀಲಮಯ ಲಿಂಗವನೆ ವಿಷ್ಣು, ರತ್ನ ಮಯ ಲಿಂಗವನೆ, ಇಂದ್ರನು, ಸುವರ್ಣಮಯ ಲಿಂಗವನೆ ಕುಬೇರನು, ರಜತಮಯ ಲಿಂಗವನೆ ವಿಶ್ವದೇವರ್ಕಳು, ಪಿತ್ತಳಮಯ ಲಿಂಗವನೆ ವಾಯು, ಕಾಂಸ್ಯಮಯ ಲಿಂಗವನೆ ವಸುಗಳು, ಮೃಣ್ಮಯ ಲಿಂಗವನೆ ಅಶ್ವಿನಿದೇವರ್ಕಳು, ಸ್ಫಟಿಕಮಯ ಲಿಂಗವನೆ ವರುಣನು, ಅನ್ನಮಯ ಲಿಂಗವನೆ ಅಗ್ನಿ, ತಾಮ್ರಮಯ ಲಿಂಗವನೆ ಸೂರ್ಯನು, ಮುಕ್ತಾ ಫಳಮಯ ಲಿಂಗವನೆ ಚಂದ್ರನು, ಮಣಿಮಯಲಿಂಗ ಬಹುವರ್ಣದ ಲಿಂಗವನೆ ನಕ್ಷತ್ರಗಳು, ಮಣಿಮಯ ಲಿಂಗವನೆ ಬುಧನು, ಕಾರ್ಭೊನ್ನಲಿಂಗವನೆ ಶುಕ್ರನು, ವಿದ್ರುಮದ ಲಿಂಗವನೆ ಮಂಗಳನು, ಮಾಣಿಕ್ಯದ ಲಿಂಗವನೆ ಬೃಹಸ್ವತಿ, ತಾಮ್ರಲಿಂಗವನೆ ಶನಿ, ಕುಶಮಯ ಲಿಂಗವನೆ ಸಪ್ತಋಷಿಗಳು, ನೀಲದ ಲಿಂಗವನೆ ಧ್ರುವನು, ಸ್ಥಾಣುನಾಮ ಲಿಂಗವನೆ ಮಾರ್ಕಂಡೇಯನು, ದರ್ಭಾಮಯ ಲಿಂಗವನೆ ಪಿಶಾಚರು, ತ್ರಿಲೋಹಮಯ ಲಿಂಗವನೆ ಗುಹ್ಯಕರು, ವಜ್ರಮಯಲಿಂಗವನೆ ಮಾತೃಕೆಗಳು, ಪ್ರಸೂನಮಯ ಲಿಂಗವನೆ ಮನ್ಮಥನು, ನಾನಾಕಾರದ ಲಿಂಗವನೆ ಲಕ್ಷ್ಮಿ ಸರಸ್ವತಿ ಶಚಿ ಮಾತೃಕಾದಿ ಮಹಾಶಕ್ತಿ ದೇವತೆಗಳಿಂತು ಬೇರೆ ಬೇರೆ ಲಿಂಗವನೆ ಪೂಜಿಸಿ, ತಮ್ಮ ತಮ್ಮ ಪದಂಗಳಲ್ಲಿ ಸುಖಿಮಿರ್ಪರೆಂ[ದೊ]ಡೆ ಕೀಟಕ ಮನುಷ್ಯರೊಳವರಿ ವರೆನ್ನದೆಲ್ಲರೂ ಸ್ವಯಂಭೂಲಿಂಗ ಬಾಣಲಿಂಗ ಚರಲಿಂಗ ಸಂಕೀರ್ಣಲಿಂಗ ಪ್ರಾಣಲಿಂಗವೆಂಬ ಪಂಚವಿಧಲಿಂಗಂಗಳ ತಮ್ಮ ತಮ್ಮ ಶಕ್ತ್ಯಾನುಸಾರ ಮಾದರ್ಚನಾತತ್ಪರರಾಗಲೆವೇಳ್ಕುಮೆಂಬುದನಂಗೀಕರಿಸಿ ಲಿಂಗಾರ್ಚನೆಯ ಮಾಳುದಯ್ಯಾ ಶಾಂತವೀರೇಶ್ವರಾ.
--------------
ಶಾಂತವೀರೇಶ್ವರ
ಬಳಿಕ ವಂಶಾಸನದಿಂ ದರಿದ್ರ, ಪಾಷಾಣಾಸನದಿಂ ವ್ಯಾಧಿ, ಭೂಮ್ಯಾಸ ನದಿಂ ದುಃಖ ಮಂತ್ರಹಾನಿಗಳು, ದಾರುಕಾಸನದಿಂ ದುರ್ಭಾಗ್ಯ ವ್ಯಾಧಿಗಳು, ತೃಣಾಸನದಿಂ ಯಶೋಹಾನಿ, ಪಲ್ಲವಾಸನದಿಂ ಚಿತ್ತಭ್ರಾಂತಿ, ಕೃಷ್ಣಾ ಜಿನಾಸನದಿಂ ಜ್ಞಾನಾಸಿದ್ಧಿ, ವ್ಯಾಘ್ರಾ ಜಿನಾಚರ್ಮಾಸನದಿಂ ಮೋಕ್ಷಲಕ್ಷ್ಮಿ , ವಸ್ತ್ರಾಸನದಿಂದ ವ್ಯಾಧಿ ನಿವೃತ್ತಿ, ಕಂಬಲಾಸನದಿಂ ಸುಖ್ಯತೆ, ಕೃಷ್ಣ ವಸ್ತ್ರಾಸನದಿಂ ಅಭಿಚಾರ ಕ್ರಿಯೆಗೆ, ರಕ್ತ ವಸ್ತ್ರಾಸನವೆ ವಶ್ಯಾದಿ ಕ್ರಿಯೆಗೆ, ಶುಭ್ರವಸ್ತ್ರಾಸನವೆ ಶಾಂತ್ಯಾಧಿವಿಧಿಗೆ, ಚಿತ್ರ ಕಂಬಲಾಸನವೆ ಸರ್ವಾರ್ಥಸಿದ್ಧಿಗಳಿವೆಂದು ಪೀಠಂಗಳಂ ಕುರುಹಿಟ್ಟು, ಬಳಿಕೆಂಬತ್ತನಾಲ್ಕಾಸನಂಗಳೊಳಗೆ ಸಿದ್ಧಾಸನ ಪದ್ಮಾಸನ ಸ್ವಸ್ತಿ ಕಾಸನ ವೀರಾಸನ ಗೋಮುಖಾಸನ ಸುಖಾಸನಂಗಳೇ ಜಪಕರ್ಮಕ್ಕೆ ಯೋಗ್ಯ ಮಾದಾ ಸನಂಗಳೆಂದು ಸುಸ್ಥಿರನಾಗಿ ಕುಳ್ಳಿರುವುದಯ್ಯ ಶಾಂತವೀರೇಶ್ವರಾ.
--------------
ಶಾಂತವೀರೇಶ್ವರ
ಬಳಿಕಾ ಲೌಕಿಕ ವೈದಿಕ ಅಧ್ಯಾತ್ಮಕಂ ಅತಿಮಾರ್ಗಿಕ ಮಾಂತ್ರಿಕವೆಂದು ಪಂಚವಿಧ ಶಾಸ್ತ್ರಂಗಳು ಅವರಲಿ ಲೌಕಿಕ [ಮೆಂಬುದು] ಧನ್ವಂತರ್ಯಾದಿಗಳಿಂದುಕ್ತಮಾದ ಆಯುರ್ವೇದಂ ದಂಡನೀತಿ ಮೊದಲಾದ ದೃಷ್ಟಫಲಂಗಳಂ ನಿರ್ಧರಿಸುತ್ತಿರ್ಕುಂ ಶಾಂತವೀರೇಶ್ವರಾ.
--------------
ಶಾಂತವೀರೇಶ್ವರ
ಬಳಿಕಿಂತು ಹೃತ್ಕಮಲಕರ್ಣಿಕಾಮಧ್ಯದಲ್ಲಿ ಗುರುವಿಚಿತ್ತಿಷ್ಟಲಿಂಗದಲ್ಲಿ ಸಿಂಹಾಸನದಲ್ಲಿ ಮಾಡುವಾತ್ಮಾರ್ಥವಾದ ಪೂಜೆಗಳಂ ಗ್ರಾಮ ನದಿತೀರಾದಿ ಕ್ಷೇತ್ರಂಗಳಲ್ಲಿ ದೇವದಾನವಾದಿಗಳಿಂ ಪ್ರತಿಷಿ*ತಮಾದ ಲಿಂಗಂಗಳಲ್ಲಿ ಮಾಳ್ಪ ಪದಾರ್ಥಪೂಜೆಗಳಂ ಬಿಡದಾರಾಧಿಸುತ್ತಮಾತ್ಮಾರ್ಥ ಪೂಜೆಯೋಳೀಶ್ವ ರಾವರಣಮಾದ ವೃಷಭ ಭಾಸ್ಕರ ವೀರಭದ್ರ ಮಾತೃಕೆ ಸ್ಕಂದ ಕ್ಷೇತ್ರಪಾಲ ಬ್ರಹ್ಮ ವಿಷ್ಣು ರುದ್ರರೆಂಬ ದೇವತೆಗಳನವರವರ ಸ್ಥಾನಕ್ರಮವರಿದಾರಾಧಿಸುತ್ತೆ ಬೇರೆ ಸ್ಥಾಪಿತಂಗಳಾದ ವಿಷ್ಣಾ ್ವದಿ ದೇವತಾಭಜನೆಗಳಂ ತ್ಯಜಿಸಿ, ತನ್ನಿಷ್ಟಲಿಂಗವು ಚೋರಾದಿಗಳಿಂ ಪೋಗಿ ಬಾರದಿರ್ದೊಡೊಂದು ಲಕ್ಷ ಅಘೋರಮಂತ್ರ ಜಪದಿ ಶುದ್ಧಾತ್ಮನಾಗಿ, ಮೇಲಾಚಾರ್ಯನಿಂ ವಿಧ್ಯುಕ್ತಮಾಗಿ ಮತ್ತೆ ಪಡೆದು ವ್ರತ ನಿಯ ಮಾದಿ ಲೋಪಮಾಗ ಲಷ್ಟೋತ್ತರಶತ ಗಾಯತ್ರಿ ಜಪದಿಂ ಪರಿಶುದ್ಧಿವಡೆದು, ಬಳಿಕ ಪರಮಪವಿತ್ರಮಾದ ಶಿವಪಾದೋದಕ ಸ್ವೀಕಾರ ಶಿವಪ್ರಸಾದಾನ್ನ ಸೇವನೆ ಶಿವಪ್ರಾಸಾದಾಂಬುಪಾನ ಶಿವನಿರ್ಮಾಲ್ಯದಳ ಕುಸುಮಧಾರಣಂಘಳು ಸದ್ಬ್ರಾಹ್ಮಣರು ಮೊದಲಾದ ಶ್ರೀವಿಶಿಷ್ಟರ್ಗೆ ಕರ್ತವ್ಯವಹುದು. ಮಿಕ್ಕ ಪಾಪಾತ್ಮರ್ಗೆ ಪಾಷಂಡಿಘಳಿಗೆ ಶಾಪದಗ್ಧರಿಗೆ ಶಿವಸಂಸ್ಕಾರಹೀನರ್ಗೆ ನಾಸ್ತಿಕರ್ಗೆ ವೇದಬಾಹ್ಯರಿಗೆ ಯೋಗ್ಯವಲ್ಲೆಂದು ಪರಿಭಾವಿಸುತ್ತಿಂತು ಸಕಲಸತ್ಕಿøಯೆಗಳಿಂ ನಿರ್ಮಲಾಂತಃಕರಣನಾಗಿರ್ಪಾತನೆ ಶುದ್ಧ ಶೈವನಪ್ಪನಯ್ಯಾ ಶಾಂತವೀರ ಪ್ರಭುವೇ.
--------------
ಶಾಂತವೀರೇಶ್ವರ