ಅಥವಾ
(37) (13) (6) (1) (1) (0) (0) (0) (13) (3) (0) (2) (8) (0) ಅಂ (8) ಅಃ (8) (13) (0) (12) (1) (0) (0) (0) (16) (0) (0) (0) (0) (0) (0) (0) (7) (0) (7) (1) (15) (29) (0) (8) (9) (12) (1) (3) (0) (34) (17) (46) (0) (28) (6) (0)

ಪದದಿಂದ ಪ್ರಾರಂಭವಾಗುವ ವಚನಗಳು:

ಧರ್ಮದೊಳಗೆ ಶಿವಧರ್ಮವೇ ಧರ್ಮವೆಂದರಿದೆನಾಗಿ, ಧರ್ಮ ಸಾಧ್ಯವಾಯಿತ್ತೆನಗೆ. ಗುರುಲಿಂಗಜಂಗಮವ ಪಡೆದೆನಾಗಿ, ಅರ್ಥ ಸಾಧ್ಯವಾಯಿತ್ತೆನಗೆ. ಶರಣಸತಿ ಲಿಂಗಪತಿ ಎಂದರಿದೆನಾಗಿ, ಕಾಮ ಸಾಧ್ಯವಾಯಿತ್ತೆನಗೆ. ಮಹಾಪ್ರಸಾದವನಿಂಬುಗೊಂಡು ಧರಿಸಿದೆನಾಗಿ, ಮೋಕ್ಷ ಸಾಧ್ಯವಾಯಿತ್ತೆನಗೆ. ಇಂತೀ ಧರ್ಮಾರ್ಥಕಾಮಮೋಕ್ಷಂಗಳೆಂಬ ಚತುರ್ವಿಧಫಲವೆನಗಾಯಿತ್ತು, ಉರಿಲಿಂಗಪೆದ್ದಿಪ್ರಿಯ ವಿಶ್ವೇಶ್ವರ.
--------------
ಉರಿಲಿಂಗಪೆದ್ದಿ