ಅಥವಾ
(37) (13) (6) (1) (1) (0) (0) (0) (13) (3) (0) (2) (8) (0) ಅಂ (8) ಅಃ (8) (13) (0) (12) (1) (0) (0) (0) (16) (0) (0) (0) (0) (0) (0) (0) (7) (0) (7) (1) (15) (29) (0) (8) (9) (12) (1) (3) (0) (34) (17) (46) (0) (28) (6) (0)

ಪದದಿಂದ ಪ್ರಾರಂಭವಾಗುವ ವಚನಗಳು:

ಬ್ರಹ್ಮಸೃಷ್ಟಿ ಪಂಚಭೂತ ಸಮ್ಮಿಶ್ರದಿಂದಾದ ಕಾಯವು ಭೂತಕಾಯವು. ವಾಯುಪ್ರಾಣಿಗೆ ಉತ್ಪತ್ತಿಸ್ಥಿತಿಲಯ ಕಾರಣಕಾಯವು. ಈ ಪರಿಯ ಉತ್ಪತ್ತಿಯು ದೇವದಾನವ ಮಾನವರಿಗೆಯೂ ಒಂದೇ ಪರಿ. ಶ್ರೀಗುರುವಿನ ಸೃಷ್ಟಿಯಿಂದಲೂ, ಮಹಾಪ್ರಸಾದದಿಂದಲೂ ಮಹಾಮಂತ್ರಸಮ್ಮಿಶ್ರದಿಂದಾದ ಕಾಯವು ಪ್ರಸಾದಕಾಯವು. ಮಹಾಮಂತ್ರಪಿಂಡವು ಭಕ್ತಿಕಾಯವು. ಲಿಂಗಪ್ರಾಣಿಗೆ ಉತ್ಪತ್ತಿಸ್ಥಿತಿಲಯವಿಲ್ಲ. ಸತ್ಯನು ಸದ್ಯೋನ್ಮುಕ್ತನು. ಈ ಪರಿಯ ಶ್ರೀಗುರುಕಾರುಣ್ಯವ ಪಡೆದ ಮಹಾತ್ಮರಿಗೆ ಒಂದೇ ಪರಿ. ಶ್ರೀಗುರುವಿನ ಕಾರುಣ್ಯದ ಪರಿ ಶಿವಭಕ್ತನ ಇರವಿನ ಪರಿ ಇಂತುಟಯ್ಯಾ. ಉರಿಲಿಂಗಪೆದ್ದಿಪ್ರಿಯ ವಿಶ್ವೇಶ್ವರ, ನಿಮ್ಮ ಶರಣರಿಗೆ ಲೋಕದ ಮಾನವರು ಸರಿ ಎಂದಡೆ ನಾಯಕನರಕ ತಪ್ಪದು.
--------------
ಉರಿಲಿಂಗಪೆದ್ದಿ
ಬೆಡಗಿನಲಿಪ್ಪ ಅಗ್ನಿ ಮೈದೋರದಿದ್ದಲ್ಲಿ ಆಕಾರ ನಾಸ್ತಿಯಾಗದು. ಇಷ್ಟಲಿಂಗಕ್ಕೆ ಕಾಯದ ಕೈ ಮುಟ್ಟಿ ಮಾಡುವ ಅಷ್ಟವಿಧಾರ್ಚನೆ ಷೋಡಶೋಪಚರ್ಯದಿಂದ ಬೆಡಗಿನಲಿಪ್ಪ ಜ್ಞಾನಾಗ್ನಿ ಮೈದೋರದಲ್ಲಿ ಆಕಾರನಾಸ್ತಿಯಾಯಿತ್ತು. ಅಂಗದ ಮೇಲಣ ಲಿಂಗದ ಜವನಿಕೆ ಬಗೆದಗೆದಡೆ ಕಾಯದ ಪರಿ ನಷ್ಟ, ಜ್ಞಾನಾಗ್ನಿಯಿಂದ ಪ್ರಾಣನ ಭೋಗ ನಷ್ಟ. ಉರಿಲಿಂಗಪೆದ್ದಿಪ್ರಿಯ ವಿಶ್ವೇಶ್ವರನ ಪೂಜಿಸುವ ಶರಣನ ಮತ್ರ್ಯಜನೆಂದಡೆ ನಾಯಕ ನರಕ.
--------------
ಉರಿಲಿಂಗಪೆದ್ದಿ
ಬಳ್ಳ ಬೇವಿನಕೊರಡು ಆಡಿನಹಿಕ್ಕೆ ಲಿಂಗವೆ ? ಸದ್ಭಾವದಿಂ ಭಾವಿಸಿ ಲಿಂಗವ ಮಾಡಿ ಸದ್ಭಕ್ತರಾದರು ಪುರಾತನರು. ಕೇವಲ ಪರಶಿವಮೂರ್ತಿಲಿಂಗವು. ಶ್ರೀಗುರು ಪರಶಿವನು, ಲಿಂಗವು ಪರಶಿವನು, ಜಂಗಮವು ಪರಶಿವನು, ದಿಟವ ಸೆಟೆಮಾಡಿ ನರಕಕ್ಕಿಳಿಯದಿರಿ, ಅಭಕ್ತರಾಗದಿರಿ. ಇವಂದಿರಂತಿರಲಿ ತಮ್ಮ ಬಲ್ಲಂಗತಾಲಿ. ಮನವೇ ನಾ ನಿಮ್ಮ ಬೇಡಿಕೊಂಬೆನು ನಂಬು ಕಂಡಾ. ಸದ್ಭಾವದಿಂ ಲಿಂಗವ ನಂಬಲು ಭಕ್ತಿ ಸದ್ಭಕ್ತಿ ಕೇವಲ ಮುಕ್ತಿಯಪ್ಪುದು ನೆರೆ ನಂಬು, ಉರಿಲಿಂಗಪೆದ್ದಿಪ್ರಿಯ ವಿಶ್ವೇಶ್ವರಾ.
--------------
ಉರಿಲಿಂಗಪೆದ್ದಿ
ಬ್ರಹ್ಮವೆಂಬುದನರಿದ ಬಳಿಕ ಅಷ್ಟಾದಶ ವಿದ್ಯವ ನೋಡುವ ಕೇಳುವ ಆಯಸವಿನ್ನದೇತಕಯ್ಯಾ ? ಶ್ರೀಗುರುವನರಿದ ಬಳಿಕ ಮೇಲೆ ಬಯಸುವಾಯಸವದೇತಕಯ್ಯಾ ? ಮನವೇ ಮಹಾವಸ್ತುವನರಿದ ಬಳಿಕ ಅಜ್ಞಾನಪ್ರಂಪಚು ಏತಕಯ್ಯಾ ? ಉರಿಲಿಂಗಪೆದ್ದಿಪ್ರಿಯ ವಿಶ್ವೇಶ್ವರ.
--------------
ಉರಿಲಿಂಗಪೆದ್ದಿ
ಬ್ರಹ್ಮದೇವರಾದರೆ ತಾನೇರುವ ಹಂಸೆಯಿಂದಲಿ ಬಿತ್ತಿ ಬೆಳೆದು ಅದರ ಕ್ಷೀರಪ್ರಸಾದದಿಂದ ತೃಪ್ತರಾಗಿ ಅದರ ಮೂತ್ರ ಹಿಕ್ಕೆಯಿಂದ ಪವಿತ್ರ ಪಾವನನಾಗನೇತಕ್ಕೆ ? ವಿಷ್ಣು ತಾ ದೈವನಾದರೆ ತಾನೇರುವ ಗರುಡನಿಂದ ಬಿತ್ತಿ ಬೆಳೆದು ಅದರ ಕ್ಷೀರ ಪ್ರಸಾದದಿಂದ ತೃಪ್ತರಾಗಿ ಅದರ ಮೂತ್ರ ಹಿಕ್ಕೆಯಿಂದ ಪವಿತ್ರ ಪಾವನನಾಗನೇತಕ್ಕೆ ? ವಿನಾಯಕ ಭೈರವ ಮೈಲಾರ ಜಿನ ಇವರು ದೇವರಾದರೆ ತಾವು ಏರುವ ಇಲಿ ಚೇಳು ಕುದುರೆ ಕತ್ತೆಗಳಲ್ಲಿ ಬಿತ್ತಿ ಬೆಳೆದು ಅವರ ಕ್ಷೀರ ಪ್ರಸಾದದಿಂದ ತೃಪ್ತರಾಗಿ ಅವರ ಮೂತ್ರದಿಂದ ಪವಿತ್ರರಾಗರೇತಕ್ಕೆ ? ಅಯ್ಯಾ ಇಂತೀ ಭೇದವನರಿಯದ ಅವಿಚಾರಿ ಹೀನರ ಮಾತದಂತಿರಲಿ, ಬ್ರಹ್ಮರು ಇಂದ್ರ ದಿಕ್ಪಾಲಕರು ಮುಂತಾಗಿ ಸಮಸ್ತದೇವರ್ಕಳೆಲ್ಲ ಕೊಂಬ ಉಂಬುದು ಗೋ ವೃಷಭನ ಅಮೃತ ಪ್ರಸಾದ, ಆ ಗೋಮಯದಿಂದ ಪಾವನ ಶುದ್ಧ ಆ ಮೂತ್ರದಿಂದ ಪವಿತ್ರ ಪಾವನ ಶುದ್ಧರಯ್ಯ. ಆ ವೃಷಭನ ವಿಭೂತಿಯಿಂದ ಸಮಸ್ತದೇವತಾದಿಗಳು ಸರ್ವಮುನಿಜನಂಗಳೆಲ್ಲ ಧರಿಸಿ ಬ್ರಹ್ಮತ್ವಂ ಪಡೆದು ಮುಕ್ತಿಫಲಪದವಾಯಿತ್ತು ಉರಿಲಿಂಗಪೆದ್ದಿಪ್ರಿಯ ವಿಶ್ವೇಶ್ವರಾ.
--------------
ಉರಿಲಿಂಗಪೆದ್ದಿ
ಬಹಿರಂಗದಲ್ಲಿ ಶಿವಲಿಂಗ, ಅಂತರಂಗದಲ್ಲಿ ಅನ್ಯದೈವ ಬಹಿರಂಗದಲ್ಲಿ ಲಿಂಗಕ್ರೀ, ಅಂತರಂಗದಲ್ಲಿ ಅನ್ಯಕ್ರೀ ಬಹಿರಂಗದಲ್ಲಿ ಭಕ್ತರು, ಅಂತರಂಗದಲ್ಲಿ ಭವಿಗಳು ಇಂತಿವರುಗಳ ಭಕ್ತರೆಂಬೆನೆ ? ಎನಬಾರದು, ನಿಮ್ಮ ಪೂಜಿಸಿಹರಾಗಿ ಭಕ್ತರೆಂಬೆನೆ ? ಸದಾಚಾರಕ್ಕೆ ಸಲ್ಲರು. ಲಿಂಗವಂತರು ಮೆಚ್ಚರು. ಈ ಉಭಯ ಸಂಕೀರ್ಣವ ನೀನೆ ಬಲ್ಲೆ. ಎನ್ನ ಮನವಿಡಿಯದು, ಎನಗಿನ್ನಾವುದು ಬುದ್ಧಿ ಎಂಬುದ ವಿಚಾರಿಸಿ ಕರುಣಿಸಯ್ಯಾ ಉರಿಲಿಂಗಪೆದ್ದಿಪ್ರಿಯ ವಿಶ್ವೇಶ್ವರ.
--------------
ಉರಿಲಿಂಗಪೆದ್ದಿ
ಬ್ರಹ್ಮಾಬ್ರಹ್ಮರಿಲ್ಲದಂದು, ವಿಷ್ಣುಮಾಯೆ, ಜಗಮಾಯೆಯಿಲ್ಲದಂದು, ಸೃಷ್ಟಿಯಸೃಷ್ಟಿ ಇಲ್ಲದಂದು, ಕಾಳಿಂಗ ಕರಿಕಂಠರಿಲ್ಲದಂದು, ಉಮೆಯ ಕಲ್ಯಾಣವಿಲ್ಲದಂದು, ದ್ವಾದಶಾದಿತ್ಯರಿಲ್ಲದಂದು, ನಂದಿಕೇಶ್ವರ ದಂಡನಾಥರಿಲ್ಲದಂದು, ವಿಷವನಮೃತ ಮಾಡದಂದು, ಲಿಂಗಸ್ಥಲ, ಜಂಗಮಸ್ಥಲ, ಪ್ರಸಾದಿಸ್ಥಲವಿಲ್ಲದಂದು ಉರಿಲಿಂಗಪೆದ್ದಿಪ್ರಿಯ ವಿಶ್ವೇಶ್ವರ ನಿಮ್ಮ ನಿಲವನಾರು ಬಲ್ಲರು ?
--------------
ಉರಿಲಿಂಗಪೆದ್ದಿ
ಬ್ರಹ್ಮ ವಿಷ್ಣು ಮೊದಲಾದ ದೇವದಾನವ ಮಾನವರೆಲ್ಲರನೂ ಆಸೆ ಘಾಸಿಮಾಡಿ ಕಾಡಿತ್ತು. ಮಹತ್ತಪ್ಪ ವ್ರತನಿಯಮ ಗುರುತ್ವ ಉಳ್ಳವರನೂ ಕೆಡಿ ಲಘುಮಾಡಿ ನಗೆಗೆಡೆಮಾಡಿತ್ತು. ಈ ಸಾಮಥ್ರ್ಯವುಳ್ಳ ಪುರುಷರನು ಘಾಸಿಮಾಡಿ ಸೋಲಿಸಿ ತಾನು ಗೆಲ್ಲುವ ಸಾಮಥ್ರ್ಯವುಳ್ಳ ಆಸೆ ಇದೇನೋ ! ಎಂದು ವಿಚಾರಿಸಲು, ಶಿವಸಂಬಂಧಿ ಆಸೆಗೆ ಆಸಕ್ತನಾದಡೆ ಶಿವನಾಜ್ಞೆಯಿಂದ ಕಾಡುವುದು, ಶಿವನೊಲಿದವರ ಹೊದ್ದಲಮ್ಮದಯ್ಯಾ ಉರಿಲಿಂಗಪೆದ್ದಿಪ್ರಿಯ ವಿಶ್ವೇಶ್ವರ.
--------------
ಉರಿಲಿಂಗಪೆದ್ದಿ