ಅಥವಾ
(3) (3) (2) (0) (0) (0) (0) (0) (0) (1) (1) (0) (0) (0) ಅಂ (1) ಅಃ (1) (3) (0) (4) (1) (0) (0) (0) (3) (0) (0) (0) (0) (0) (0) (0) (1) (0) (2) (0) (3) (17) (0) (2) (1) (1) (0) (1) (0) (1) (1) (2) (0) (5) (1) (0)

ಪದದಿಂದ ಪ್ರಾರಂಭವಾಗುವ ವಚನಗಳು:

ನಿಷ್ಕಳಂಕಾತ್ಮನು ನಿಜಪ್ರಕೃತಿವಶದಿಂ ಮನ ನೆನಹು ಭಾವದೆ ತ್ರಿವಿಧಸ್ವರೂಪವಾಯಿತ್ತು. ಆ ಮನವೊಗ್ದಿದುದೆ ನೆನಹಿಗೆ ಬಂದಿತ್ತು. ಅದೇ ಭಾವದಲ್ಲಿ ತೋರಿತ್ತು ; ಅದೇ ಪ್ರಾಣವಾಯಿತ್ತು ; ಅದೇ ಚೈತನ್ಯಸ್ವರೂಪಮಾಗಿ ತನುವನೆಳದಾಡಿತ್ತು. ಅದಕ್ಕೆ ವಾಯುವೇ ಅಂಗವಾಗಿ ಕರ್ಮಾದ್ಥೀನಮೆನಿಸಿ, ತಾನೆಂಬಹಂಕಾರದಿಂ ತನ್ನ ತಾ ಮರೆತು ತೊಳಲಿಬಳಲುತ್ತಿರಲು, ಅನೇಕಜನ್ಮ ಸಂಚಿತಕರ್ಮ ಸಮೆದು, ಗುರುಕರುಣ ನೆಲೆಗೊಂಡಲ್ಲಿ ಗಗನಾಂಗಿಯಾಗಿ, ಆ ಮನಕ್ಕೆ ತಾನೇ ಆಧಾರಮಾಗಿ, ತಾನೇ ಪರಮನಾಗಿ, ತಾನೇ ಪ್ರಸನ್ನಮಾಗಿರ್ದ ಮಹಾಜಾÕನಶಕ್ತಿಯಂ ಕಂಡದರೊಳಗೆ ಕೂಡಿ, ಸಾಧಕಕ್ಕೊಳಗಾದ ಮನವೇ ಘನವಾಯಿತ್ತು. ಆ ಘನವೇ ಲಿಂಗವಾಯಿತ್ತು, ಆ ಲಿಂಗವೇ ಪ್ರಾಣವಾಯಿತ್ತು, ಆ ಪ್ರಾಣವೇ ಪರಮಾತ್ಮಸ್ವರೂಪಮಾಗಿ ತತ್ತ್ವಮಸಿಪದದಿಂದತ್ತತ್ತ ಹಮ್ಮನಳಿದು ಸುಮ್ಮನೆಯಾದುದೆ ಲಿಂಗೈಕ್ಯ ಕಾಣಾ ಮಹಾಘನ ದೊಡ್ಡದೇಶಿಕಾರ್ಯ ಗುರುಪ್ರಭುವೆ.
--------------
ಮುಮ್ಮಡಿ ಕಾರ್ಯೇಂದ್ರ /ಮುಮ್ಮಡಿ ಕಾರ್ಯ ಕ್ಷಿತೀಂದ್ರ
ನಿಜಮಹಾತ್ಮ್ಯಪ್ರಕಟನ ಪ್ರಪಂಚ ಕ್ರೀಡಾಕಾರಣಮಾದ ನಾನೆಂಬುಪಾಧಿಯಂ ಪ್ರಪಂಚಮುಖದಲ್ಲೇ ಕಲ್ಪಸಿ, ನನ್ನಲ್ಲಿ ತೋರುತ್ತಿರ್ಪ ಪ್ರಪಂಚದಿಂ ನಿಜಾಲಂಕಾರಶೋಭಿಯಾಗಿ ನನ್ನಲ್ಲುದಿಸಿದ ಪಾಪಮಲಿನಮಂ ಕಾಲರೂಪಮಾಗಿ ಸಂಹರಿಸಿ, ಪ್ರಪಂಚಪ್ರಕಟನಮಂ ಮಾಡುತಿರ್ಪೆಯಾಗಿ, ನಿನ್ನ ಮಹಿಮೆಯಂ ಜಡರೂಪಮಾಗಿರ್ಪ ನಾನೆಂತು ಬಲ್ಲೆನಯ್ಯಾ? ನೀನೇ ಸಂಹಾರಕರ್ತೃವಾಗಿ, ಶಕ್ತಿಯೇ ರಕ್ಷಣಕರ್ತೃವಾಗಿ, ನಾನೇ ಸೃಷ್ಟಿಕರ್ತೃವಾಗಿರ್ಪೆನಯ್ಯಾ. ನನ್ನಲ್ಲಿ ಬಾಹ್ಯನೈರ್ಮಲ್ಯವಂ ಅಂತರಂಗದಲ್ಲಿ ಪ್ರಕಾಶವಂ ಮಾಡಿ, ತೋರಿದಲ್ಲಿ, ನನ್ನಲ್ಲಿರ್ಪ ಮಾಯೆ ನನ್ನಲ್ಲಿಯೇ ಅಡಗಿ, ನಾನು ನಿರ್ಮಲಸ್ವರೂಪನಾಗಿ, ನನ್ನಲ್ಲಿ ನಾನೇ ಪ್ರಕಾಶಿಸುತ್ತಿರ್ಪೆನು ಕಾಣಾ ಮಹಾಘನ ದೊಡ್ಡದೇಶಿಕಾರ್ಯಗುರುಪ್ರಭುವೆ.
--------------
ಮುಮ್ಮಡಿ ಕಾರ್ಯೇಂದ್ರ /ಮುಮ್ಮಡಿ ಕಾರ್ಯ ಕ್ಷಿತೀಂದ್ರ
ನೀರು ತನ್ನೊಳಗಿರುವ ಮಲಿನವಂ ಧರೆಗೆಹತ್ತಿಸಿ ತಾನಾರಿಪೋದಡೆ ನೀರೊಳಗಿದ್ದು ಅಗಸನೊಗೆದಂತೆ, ಪ್ರಪಂಚವು ತನ್ನೊಳಗಿರ್ದ ಮಲಿನವಂ ನನಗೆ ಹತ್ತಿಸಿ ತಾನು ಬಯಲಾಗಿಪೋದಡೆ, ಆ ಪ್ರಪಂಚದೊಳಗಿರ್ದ ನನ್ನಂ ಕಾಲನು ಕೊಲ್ಲುತಿರ್ಪನಯ್ಯಾ. ನನಗನುಭವರೂಪಮಾದ ನಾನೆಂಬ ದಿವ್ಯದುಕೂಲವನ್ನು ಹೊದ್ದು, ಮಾಸಿ, ಒಗೆದು, ಹರಿದುಬಿಡದೆ, ನಿನ್ನ ಪರತತ್ವವೆಂಬ ಭಂಡಾರದಲ್ಲಿ ಜ್ಞಾನವೆಂಬ ಪೆಟ್ಟಿಗೆಯೊಳಗೆ ಗಳಿಗೆವಡೆಯದಂತೆ, ಪುರಾತನಕವಳಿಗೆಯೊಳಗೆ ನನ್ನನಿಟ್ಟು ರಕ್ಷಿಸು ಕಂಡ್ಯಾ ಮಹಾಘನ ದೊಡ್ಡದೇಶಿಕಾರ್ಯಗುರುಪ್ರಭುವೆ.
--------------
ಮುಮ್ಮಡಿ ಕಾರ್ಯೇಂದ್ರ /ಮುಮ್ಮಡಿ ಕಾರ್ಯ ಕ್ಷಿತೀಂದ್ರ