ಅಥವಾ
(4) (1) (3) (1) (0) (0) (0) (0) (1) (0) (0) (0) (1) (0) ಅಂ (2) ಅಃ (2) (1) (0) (5) (1) (0) (0) (0) (1) (0) (0) (0) (0) (0) (0) (0) (1) (0) (1) (1) (4) (2) (0) (1) (1) (0) (0) (0) (0) (5) (1) (2) (0) (2) (0) (0)

ಪದದಿಂದ ಪ್ರಾರಂಭವಾಗುವ ವಚನಗಳು:

ಭಕ್ತಗಣಂಗಳು ನಮಸ್ಕಾರವ ಮಾಡುವ ಕ್ರಮವು: ಗುರುವಿಗೆ ದೀರ್ಘದಂಡ ನಮಸ್ಕಾರವ ಮಾಡಿದಡೆ ಹಿಂದಣ ಜನ್ಮದ ಪಾತಕದ ಪರಿಹಾರವು. ಲಿಂಗಕ್ಕೆ ಕರಮುಟ್ಟಿ ನಮಸ್ಕಾರವ ಮಾಡಿದಡೆ ಉರಿಯುಂಡ ಕರ್ಪುರದ ಹಾಗೆ ಆಗುವುದು. ಜಂಗಮಕ್ಕೆ ತಲಮುಟ್ಟಿ ನಮಸ್ಕಾರವ ಮಾಡಿದಡೆ ನಿಜಮುಕ್ತಿಯಾಗುವುದು. ಭಕ್ತಂಗೆ ಸಾಷ್ಟಾಂಗ ನಮಸ್ಕಾರವು. ಅಭಯಂಗೆ ಸಾಷ್ಟಾಂಗ ನಮಸ್ಕಾರವು. ಏಕೆಂದಡೆ, ಆ ಭಕ್ತನ ಹೃದಯದಲ್ಲಿ ಅಷ್ಟಾವರಣಮೂರ್ತಿಗಳಿಹರು. ಅದಕ್ಕೆ ಭಕ್ತಂಗೆ ಅಷ್ಟಾಂಗಭೂಮಿಗೆ ಹೊಂದಿ ನಮಸ್ಕಾರವ ಮಾಡಿದಡೆ ಗಣಪದವಿಯಪ್ಪುದು. ಇದಕ್ಕೆ ತ್ರಿಕರಣಶುದ್ಭವಾಗಿ ವಂಚನೆಯಿಲ್ಲದೆ ತನು-ಮನ-ಧನವನೊಪ್ಪಿಸಿ ಈ ಚತುರ್ವಿಧಮೂರ್ತಿಗಳಿಗೆ ನಮಸ್ಕಾರವ ಮಾಡಿದಡೆ ನಾಲ್ಕು ಪದವಿ ಸಿದ್ಧವಪ್ಪುದು ತಪ್ಪದು ಶಾಶ್ವತ ಎಂದಾತ ನಮ್ಮ ಶಾಂತಕೂಡಲಸಂಗಮದೇವ.
--------------
ಗಣದಾಸಿ ವೀರಣ್ಣ