ಅಥವಾ
(2) (5) (1) (2) (4) (0) (0) (0) (5) (0) (1) (0) (0) (0) ಅಂ (0) ಅಃ (0) (25) (0) (4) (0) (0) (1) (0) (2) (0) (0) (0) (0) (1) (0) (0) (4) (0) (0) (0) (7) (2) (0) (9) (2) (5) (1) (1) (0) (4) (4) (0) (0) (4) (3) (0)

ಪದದಿಂದ ಪ್ರಾರಂಭವಾಗುವ ವಚನಗಳು:

ಉದಕಕ್ಕೆ ಹಳಚಿಕೆಯಲ್ಲದೆ ಪಾಕುಳಕ್ಕುಂಟೆ ಅಯ್ಯಾ. ಮನದ ಮನ್ನಣೆ ಮಾನ್ಯರಿಗಲ್ಲದೆ ಸಮಯಕ್ಕುಂಟೆ? ಇಂತೀ ಮನದೆರನರಿ, ನಾರಾಯಣಪ್ರಿಯ ರಾಮನಾಥಾ.
--------------
ಗುಪ್ತ ಮಂಚಣ್ಣ
ಉದಕ ಒಂದಾದಡೆ ಕೂಟದ ಗುಣದಿಂದ ಜಾತಿ ಉತ್ತರವಾಯಿತ್ತು. ಹಾಲು ಹುಳಿ ಕಹಿ ಖಾರ ಇವು ಮೊದಲಾಗಿರೆ ಅವರವರಲ್ಲಿ ಅವ ಬೆರಸಿದಡೆ ಅವರವರ ಭಾವಕ್ಕೆ ತಕ್ಕಂತೆ ಇಪ್ಪ ಜಲಭೇದದ ವಸ್ತು ನಿರ್ದೇಶ. ಆನೆಯ ಮಾನದಲ್ಲಿ ಇರಿಸಬಹುದೆ? ಕಿರಿದು ಘನದಲ್ಲಿ ಅಡಗುವುದಲ್ಲದೆ ಘನ ಕಿರಿದಿನಲ್ಲಿ ಅಡಗುವುದೆ? ಅಮೃತದ ಕೆಲದಲ್ಲಿ ಅಂಬಲಿಯುಂಟೆ? ನಾರಾಯಣಪ್ರಿಯ ರಾಮನಾಥಾ.
--------------
ಗುಪ್ತ ಮಂಚಣ್ಣ
ಉಡುವಿನ ನಾಲಗೆ ಮದಾಳಿಯ ಕಾಲು ಮಾರನ ಕಣ್ಣು ಮನ್ಮಥನ ಬಾಣ ಸಾರಥಿಯ ರೂಪು ಸಕಲರ ಸಂಗದಲ್ಲಿ ವಿಕಳತೆಗೊಂಬ ಪಶುಗಳಿಗುಂಟೆ? ರಸಾಳದ ಅಸು ನಾರಾಯಣಪ್ರಿಯ ರಾಮನಾಥನಲ್ಲಿ ಅರಿದು ಮರೆದೊರಗಿದವಂಗಲ್ಲದೆ.
--------------
ಗುಪ್ತ ಮಂಚಣ್ಣ
ಉಳಿಯ ಹಿಡಿಯಲ್ಲಿ ಕಲೆ ಮಾಡಿಸಿಕೊಂಡ ದೇವರಿಗೆ ಅಳಿವು ಉಳಿವಲ್ಲದೆ, ಉಳಿಗೆ ಹೊರಗಾದ ಅಳಿಯದವನನರಿಯಾ, ನಾರಾಯಣಪ್ರಿಯ ರಾಮನಾಥಾ.
--------------
ಗುಪ್ತ ಮಂಚಣ್ಣ