ಅಥವಾ
(2) (5) (1) (2) (4) (0) (0) (0) (5) (0) (1) (0) (0) (0) ಅಂ (0) ಅಃ (0) (25) (0) (4) (0) (0) (1) (0) (2) (0) (0) (0) (0) (1) (0) (0) (4) (0) (0) (0) (7) (2) (0) (9) (2) (5) (1) (1) (0) (4) (4) (0) (0) (4) (3) (0)

ಪದದಿಂದ ಪ್ರಾರಂಭವಾಗುವ ವಚನಗಳು:

ಸಮಯಕ್ಕೆ ಹೋರಬೇಕು, ಜ್ಞಾನದಲ್ಲಿ ಸುಮ್ಮನಿರಬೇಕು. ಹೋರದಿದ್ದಡೆ ರುದ್ರಂಗೆ ದೂರ. ಹೋರಿದಡೆ ಪರವಸ್ತುವಿಗೆ ದೂರ. ಇದರಿಂದ ಬಂದುದು ಬರಲಿ. ಮನೆಯೊಳಗಿದ್ದು ಮನೆಯ ಸುಟ್ಟರುಂಟೆ? ನಾರಾಯಣಪ್ರಿಯ ರಾಮನಾಥಾ.
--------------
ಗುಪ್ತ ಮಂಚಣ್ಣ
ಸರ್ವಜ್ಞಾನ ಸಂಬಂಧಿಯ ಇರವು: ಕಿರಣದೊಳಗಣ ಸುರಂಗದಂತೆ ಸುರಭಿಯೊಳಗಣ ನವನೀತದಂತೆ ಬೀಜದೊಳಗಣ ವೃಕ್ಷದಂತೆ ಸಾಧಕರಲ್ಲಿ ತೋರುವ ಸಂಕಲ್ಪದಂತೆ ಸಾತ್ವಿಕರಲ್ಲಿ ತೋರುವ ವಿಲಾಸಿತದಂತೆ ಆಗ್ನಿಯಲ್ಲಿ ಹೊರಹೊಮ್ಮದ ತೆರವು ಕೆಡದೆ ಉಡುಗಿ ತೋರುವ ಬೆಳಗಿನಂತೆ ತೆರಹಿಲ್ಲದ ಭಾವ ವೇದಕ್ಕೆ ಅತೀತ, ಶಾಸ್ತ್ರಕ್ಕೆ ಅಗಮ್ಮ, ಪುರಾಣಕ್ಕೆ ಆಗೋಚರ, ಪುಣ್ಯದ ಪಟಲ ದಗ್ಧ, ನಾಮ ನಾಶ, ನಾರಾಯಣಪ್ರಿಯ ರಾಮನಾಥನಲ್ಲಿ ಐಕ್ಯವಾದ ಶರಣ.
--------------
ಗುಪ್ತ ಮಂಚಣ್ಣ
ಸ್ಥೂಲ ತನುವನರಿದು ಮರೆದಲ್ಲಿ ಗುರುವನರಿದವ. ಸೂಕ್ಷ ್ಮ ತನುವನರಿದು ಮರೆದಲ್ಲಿ ಲಿಂಗವನರಿದವ. ಕಾರಣ ತನುವನರಿದು ಮರೆದಲ್ಲಿ ಜಂಗಮವನರಿದವ. ಇಂತೀ ತ್ರಿವಿಧವನರಿದು ನಿಶ್ಚಯವಾದ ನಿಶ್ಚಟಂಗೆ ಅರಿದು ಮರೆಯಲಿಲ್ಲ, ಮರೆದು ಅರಿಯಲಿಲ್ಲ. ವಾಯುವಿನ ಕೈಯ ಗಂಧದಂತ ನಾರಾಯಣಪ್ರಿಯ ರಾಮನಾಥನಲ್ಲಿ ಭಾವ ನಿರ್ಭಾವನಾದವಂಗೆ.
--------------
ಗುಪ್ತ ಮಂಚಣ್ಣ
ಸರ್ವವ ಮುಟ್ಟಿ ಅರ್ಪಿಸುವಲ್ಲಿ ಅರ್ಪಿಸಿಕೊಂಬ ವಸ್ತು ಹಿಂಚೊ ಮುಂಚೊ ಎಂಬುದನರಿದಲ್ಲದೆ ಅರ್ಪಿತಾವಧಾನಿಗಳಲ್ಲ. ಅರ್ಪಿಸಿಕೊಂಬ ದ್ರವ್ಯ ವಸ್ತುವ ಅರಿಯಬೇಕೊ ವಸ್ತು ದ್ರವ್ಯವ ತಾನರಿತು ಅರ್ಪಿಸಿಕೊಳಬೇಕೊ? ಈ ಉಭಯವನರಿತಡೆ ಅರ್ಪಿತ ಅವಧಾನಿ. ಪುರುಷಂಗೆ ಸತಿ ಸಂಯೋಗದಿಂದಲ್ಲದೆ ಸತಿಗೆ ಪುರುಷನ ಸಂಯೋಗದಿಂದಲ್ಲದೆ ಈ ಉಭಯ ಸುಖವಿಲ್ಲ ನಾರಾಯಣಪ್ರಿಯ ರಾಮನಾಥಾ.
--------------
ಗುಪ್ತ ಮಂಚಣ್ಣ