ಅಥವಾ
(2) (5) (1) (2) (4) (0) (0) (0) (5) (0) (1) (0) (0) (0) ಅಂ (0) ಅಃ (0) (25) (0) (4) (0) (0) (1) (0) (2) (0) (0) (0) (0) (1) (0) (0) (4) (0) (0) (0) (7) (2) (0) (9) (2) (5) (1) (1) (0) (4) (4) (0) (0) (4) (3) (0)

ಪದದಿಂದ ಪ್ರಾರಂಭವಾಗುವ ವಚನಗಳು:

ತ್ರೈಮೂರ್ತಿಗಳು ನಿನ್ನ ಸಾಕಾರದ ಶಾಖೆ. ತ್ರೈಮೂರ್ತಿಗಳು ನಿನ್ನ ಅಪ್ಪುವಿನ ಅಂಕುರ ಶಕ್ತಿ. ಇಂತೀ ಸರ್ವಗುಣ ಸಂಪನ್ನನಾಗಿ ಬ್ರಹ್ಮಂಗೆ ಅಂಡವ ಕೊಟ್ಟು ವಿಷ್ಣುವಿಗೆ ಪಿಂಡವ ಕೊಟ್ಟು ರುದ್ರಂಗೆ ಕಂಡೆಹವ ಕೊಟ್ಟು ಹಿಂಗಿದೆ. ನೀನಿದರಂದವನೊಲ್ಲದೆ ಅಂಗಕ್ಕೆ ಮಯ ನೀನೇ, ನಿರಂಗಕ್ಕೆ ಸಂಗ ನೀನೇ. ಹಿಂಗೂದಕ್ಕೆ ನಿನ್ನಂಗ ಅನ್ಯ ಬ್ಥಿನ್ನವಲ್ಲ. ಮುಕುರದ ಮರೆಯಲ್ಲಿ ತೋರುವ ಪ್ರತಿರೂಪಿನಂತೆ ಸಕಲದೇವರ ಚೈತನ್ಯಭಾವ ನಿನ್ನ ಉಷ್ಣ ಬಿಂದು, ಸಕಲದೇವರ ಶಾಂತಿ ನಿನ್ನ ಸಮಾನ ಬಿಂದು, ಇಂತಿವ ಹೇಳುವಡೆ ವಾಙ್ಮನಕ್ಕತೀತ ಅತ್ಯತಿಷ್ಠದ್ದಶಾಂಗುಲ ನಾರಾಯಣ ನಯನಪೂಜಿತ ಪ್ರಿಯ ರಾಮೇಶ್ವರಲಿಂಗ ನಾ ನೀನಾದೈಕ್ಯ.
--------------
ಗುಪ್ತ ಮಂಚಣ್ಣ
ತನ್ನ ಮರೆದಡೆ ಜಗವೆಲ್ಲವೂ ತನ್ನ ಸುತ್ತಿದ ಮಾಯೆ ತಾನರಿತಡೆ ತನ್ನಯ ಅನ್ಯ ಭಿನ್ನವಿಲ್ಲ. ಪ್ರತಿಬಿಂಬದ ಹಾಗೆ ನಾರಾಯಣಪ್ರಿಯ ರಾಮನಾಥಾ.
--------------
ಗುಪ್ತ ಮಂಚಣ್ಣ
ತೊಳಸಿಯ ಗಿಡುವ ಮೆಲಲಾರದೆ ಕಿವಿಯೊಳಗಿಕ್ಕಿದೆ. ಕಲಸಿದ ನಾಮಕ್ಕೆ ಹಣೆಯ ಕಾಣದೆ ಎದೆಯೊಳಗಿಕ್ಕಿದೆ. ತಾವರೆಯ ಮಣಿಯ ತಾವಡಿಸೂದಕ್ಕೆ ಠಾವ ಕಾಣದೆ ಡಾವರಿಸುತ್ತಿದ್ದೆ, ಇದಕಿನ್ನಾವುದು ಹದನಯ್ಯಾ. ಎನ್ನ ನಿಮ್ಮ ದಾಸೋಹದ ದಾಸನ ಮಾಡಿಸಯ್ಯಾ ನಾರಾಯಣಪ್ರಿಯ ರಾಮನಾಥಾ.
--------------
ಗುಪ್ತ ಮಂಚಣ್ಣ
ತುಂಬಿ ಕಡದ ಗೂಡಿನ ಮರಿಯಂದವ ತಿಳಿ. ಆತ್ಮನಿಪ್ಪ ಅಂದವನರಿ. ಅದರ ಗುಣದ ಸಂಗದ ಯೋಗ ಕೀಟದ ಸಂಗದ ಗುಣ. ಖೇಚರದ ಆಟ ತಪ್ಪದೆ, ರತಿಯ ಕೂಟ ತಪ್ಪದೆ. ಇಪ್ಪುದು ಯೋಗ ಸಂಬಂಧ ನಾರಾಯಣಪ್ರಿಯ ರಾಮನಾಥಾ.
--------------
ಗುಪ್ತ ಮಂಚಣ್ಣ