ಅಥವಾ
(2) (5) (1) (2) (4) (0) (0) (0) (5) (0) (1) (0) (0) (0) ಅಂ (0) ಅಃ (0) (25) (0) (4) (0) (0) (1) (0) (2) (0) (0) (0) (0) (1) (0) (0) (4) (0) (0) (0) (7) (2) (0) (9) (2) (5) (1) (1) (0) (4) (4) (0) (0) (4) (3) (0)

ಪದದಿಂದ ಪ್ರಾರಂಭವಾಗುವ ವಚನಗಳು:

ಲಿಂಗಪೂಜೆಯ ಮಾಡುವಲ್ಲಿ ಮನ ಗುರಿಯ ತಾಗಿದ ಕೋಲಿನಂತಿರಬೇಕು. ಶಿವಲಿಂಗಪೂಜೆಯ ಮಾಡುವಲ್ಲಿ ಶ್ರವಕ್ಕೆ ಸಂಜೀವನ ಹುಟ್ಟಿದಂತಿರಬೇಕು. ಹೀಗಲ್ಲದೆ ಪೂಜೆಯಲ್ಲ. ಒಳಗಣ ಹುಳುಕು ಮೇಲಕ್ಕೆ ನಯವುಂಟೆ, ಆ ತರು ಒಣಗುವವಲ್ಲದೆ? ಇಂತೀ ಬರುಬರ ಅರ್ಚನೆ ಹುರಿಯ ಬೊಂಬೆಯಂತೆ. ಇಂತೀ ಅರಿಗುರಿಗಳ ಪೂಜೆ ಬರುಕಟೆಯಂತೆ ನಾರಾಯಣಪ್ರಿಯ ರಾಮನಾಥಾ.
--------------
ಗುಪ್ತ ಮಂಚಣ್ಣ
ಲಿಂಗ ಸಂಗಿಯಾದಲ್ಲಿ ಕಲ್ಲು ನೆಲ್ಲಿನಂತಿರಬೇಕು. ಲಿಂಗ ಪ್ರಾಣವಾದಲ್ಲಿ ಉರಿ ಕರ್ಪೂರದಂತಾಗಬೇಕು. ಆ ತದ್ಭಾವ ಲಿಂಗದ ಕೂಟ. ವರುಣನ ಕಿರಣ ಕೊಂಡ ಮರೀಚಿಕಾ ಜಲದಂತೆ ಮಕರ ಉದಕ ಪಥದಂತೆ ನಾಮದೋರದ ಇರವು, ನಾರಾಯಣಪ್ರಿಯ ರಾಮನಾಥಾ.
--------------
ಗುಪ್ತ ಮಂಚಣ್ಣ
ಲೋಕವ ಕುರಿತಲ್ಲಿ ಆಚಾರದ ಮಾತು. ತನ್ನ ಕುರಿತಲ್ಲಿ ಅನಾಚಾರದ ಮಾತು. ಆಚಾರಸಂಪನ್ನರನ್ನೆಲ್ಲಿಯೂ ಕಂಡೆ. ಅನಾಚಾರಸಂಪನ್ನರನ್ನೆಲ್ಲಿಯೂ ಕಾಣೆ. ಭಕ್ತ ಭವಿಯಾಗಬಹುದಲ್ಲದೆ, ಭವಿ ಭಕ್ತನಾಗಬಾರದು. ಬೆಣ್ಣೆಗೆ ತುಪ್ಪವಲ್ಲದೆ ತುಪ್ಪ ಬೆಣ್ಣೆಯಪ್ಪುದೆ? ತರು ಬೆಂದಲ್ಲಿ ಕರಿಯಲ್ಲದೆ, ಕರಿ ಬೆಂದಲ್ಲಿ ತರು ಉಂಟೆ? ಇದು ಅಘಟಿತ, ಅನಾಮಯ, ನಾರಾಯಣಪ್ರಿಯ ರಾಮನಾಥಾ.
--------------
ಗುಪ್ತ ಮಂಚಣ್ಣ
ಲಾಭವ ಕಾಬ ಬೆವಹಾರಿ ನಷ್ಟಕ್ಕೆ ಸಿಕ್ಕುವನೆ? ಅದು ತನ್ನ ಸಿಕ್ಕಿನ ಬಹುದ ತಾನರಿಯ. ಈ ಉಭಯವ ತಿಳಿದಲ್ಲಿ ಲಾಭ ನಷ್ಟ ದಿವರಾತ್ರಿಯಂತೆ ಮಾಟ ಕೂಟದ ಒದಗು. ವಿಶ್ವಾಸದಲ್ಲಿ ಲಾಭಾ, ಅದು ಹೀನವಾದಲ್ಲಿ ನಷ್ಟ. ಇಂತೀ ನಷ್ಟ ಲಾಭವ ಬಿಟ್ಟು ಸುಚಿತ್ತ ನಿರ್ಮಲಾತ್ಮಕನಾಗಿ ಅರಿದು ಕರಿಗೊಳ್ಳಬೇಕು. ನಾರಾಯಣಪ್ರಿಯ ರಾಮನಾಥನಲ್ಲಿ ಚಿತ್ತಶುದ್ಧನಾಗಿರಬೇಕು.
--------------
ಗುಪ್ತ ಮಂಚಣ್ಣ