ಅಥವಾ
(50) (19) (7) (2) (6) (1) (0) (0) (21) (1) (0) (4) (0) (0) ಅಂ (10) ಅಃ (10) (23) (1) (25) (1) (0) (1) (0) (9) (0) (0) (0) (0) (0) (0) (0) (16) (0) (10) (1) (21) (18) (0) (20) (9) (14) (0) (2) (0) (7) (11) (13) (0) (15) (18) (0)

ಪದದಿಂದ ಪ್ರಾರಂಭವಾಗುವ ವಚನಗಳು:

ಇಂದ್ರಲೋಕದವರೆಲ್ಲರೂ ಸೂತಕಲಾಸಂಹಾರಿ ಬಸವ ಎಂದೆಂಬರು. ಚಂದ್ರಲೋಕದವರೆಲ್ಲರೂ ಷೋಡಶಕಲಾ ಪರಿಪೂರ್ಣ ಬಸವಾ ಎಂದೆಂಬರು. ಯುಗಕೋಟಿಬ್ರಹ್ಮರೆಲ್ಲರೂ ಪರಶಿವ ಬಸವಾ ಎಂದೆಂಬರು. ಹರಿವಿರಿಂಚಿಗಳೆಲ್ಲರೂ ಗುರುಲಿಂಗ ಬಸವಾ ಎಂದೆಂಬರು. ಅಷ್ಟದಿಕ್ಪಾಲಕರೆಲ್ಲರೂ ಪರಶಿವ ಬಸವಾ ಎಂದೆಂಬರು. ಸುರಪಡೆಯಲ್ಲಾ ಅಮೃತಸಾಗರ ಬಸವಾ ಎಂದೆಂಬರು. ನವನಾಥಸಿದ್ಧರೆಲ್ಲರೂ ಪರಮಘುಟಿಕೆ ಬಸವಾ ಎಂದೆಂಬರು. ಲಂಬೋದರ ಕುಂಭೋದರ ದಾರುಕ ರೇಣುಕ ಗೌರೀಸುತ ತಾಂಡವರೆಲ್ಲರೂ ಸಕಲಜೀವಚೈತನ್ಯ ಮಾತ್ರ ಬಸವಾ ಎಂದೆಂಬರು. ಓತವರೆಲ್ಲರೂ ಮಾತಾಪಿತ ಬಸವಾ ಎಂದೆಂಬರು. ಒಲಿದವರೆಲ್ಲರೂ ಪ್ರಾಣ ಪರಿಣಾಮಿ ಬಸವಾ ಎಂದೆಂಬರು. ಆನೇನೆಂಬೆನು, ಉಪಮಿಸಬಾರದ ಮಹಾಘನ ಮಹಿಮನ.
--------------
ಮಡಿವಾಳ ಮಾಚಿದೇವ
ಇಷ್ಟಲಿಂಗ ಪೃಥ್ವಿಯಲ್ಲಿ ಸ್ಥಾಪ್ಯವಾದಡೇನು ? ಅಪ್ಪುವಿನಲ್ಲಿ ಅಳಿದಡೇನು ? ಇಷ್ಟಲಿಂಗವು ಶಕ್ತಿಸಂಪುಟದಿಂದ ಉತ್ಕøಷ್ಟವಾದಡೇನು ? ಅಹುದಲ್ಲವೆಂಬ ಅಜ್ಞಾನಮತಿಗಳೆದು ಮುನ್ನಿನಂತೆ ಪೂಜಿಸುವ ಭಕ್ತರ ತೋರಾ, ಕಲಿದೇವರದೇವಾ.
--------------
ಮಡಿವಾಳ ಮಾಚಿದೇವ
ಇದು ಗುರು, ಇದು ಲಿಂಗ, ಇದು ಜಂಗಮ, ಇದು ಪ್ರಸಾದ. ಇಂತೀ ಚತುರ್ವಿಧಸ್ಥಲವನೊಂದುಮಾಡಿ ತೋರಿ, ಸಮತೆ ಸೈರಣೆಯೆಂಬ ಭಕ್ತಿಪ್ರಭೆಯೊಳಗಿರಿಸಿ, ಗತಿಯತ್ತ ಹೊದ್ದಲೀಯದೆ, ಲಿಂಗದ ವ್ಯಾವರ್ಣನೆಯ ತೋರಿ, ಜಂಗಮವ ನಿರಾಕಾರಲಿಂಗವೆಂದು ತೋರಿ, ಆ ಜಂಗಮದ ಪ್ರಸಾದವ ತೋರಿದನು. ನಿರವಯದ ಹಾದಿಯ, ಬಸವಣ್ಣನಿಂದ ಕಂಡೆ ಕಾಣಾ ಕಲಿದೇವಯ್ಯ.
--------------
ಮಡಿವಾಳ ಮಾಚಿದೇವ
ಇಷ್ಟಲಿಂಗವ ಬಿಟ್ಟು ಸೃಷ್ಟಿಯ ಪ್ರತಿಷೆ*ಗೆ ಶರಣೆಂದಡೆ, ಆ ಇಷ್ಟಲಿಂಗದ ಚೇತನ ತೊಲಗಿ, ಭ್ರಷ್ಟನಾಗಿ ಕೆಟ್ಟು, ನರಕಕ್ಕಿಳಿದನೆಂದ, ಕಲಿದೇವಯ್ಯ.
--------------
ಮಡಿವಾಳ ಮಾಚಿದೇವ
ಇರಿಯಲಾಗದು ಪ್ರಾಣಿಯ, ಜರೆಯಲಾಗದು ಹೆರರ. ನೆರನೆತ್ತಿ ನುಡಿಯಲಾಗದಾರುವನು. ಹೆರರ ವಧುವ ಕಂಡು ಮನ ಮರುಗದಿರ್ದಡೆ, ಶಿವಲೋಕ [ಕರ]ತಳಾಮಳಕವೆಂದ ಕಲಿದೇವರದೇವ.
--------------
ಮಡಿವಾಳ ಮಾಚಿದೇವ
ಇರುಳು ಹಗಲೆಂದರಿಯದ ಅಂಧಕನ ಕೈಯಲ್ಲಿ ಕೈದೀವಿಗೆ ಇರ್ದಡೇನು, ಪಥಿವ ನೋಡಿ ನಡೆಯಬಲ್ಲನೆ ? ಗುರುಚರಪರವನರಿಯದ ದುರಾಚಾರಿಯ ಕೈಯಲ್ಲಿ ಲಿಂಗವಿರ್ದಡೇನು, ಅವ ಸತ್ಯಸದಾಚಾರವನುಳ್ಳ ಭಕ್ತಿವಂತರಿಗೆ ಸರಿಯಹನೆ ? ಅವನು ಶಿವಭಕ್ತನಾಗಿ ಕೆಟ್ಟುಹೋದ ತೆರನೆಂತೆಂದಡೆ: ಭಕ್ತರ ಗೃಹದಲ್ಲಿ ತುಡುಗ ತಿಂದ ನಾಯಿ, ಮರಳಿ ಮತ್ತೆ ಹೊಲಸಿಂಗೆರಗಿದ ತೆರನಾಯಿತೆಂದ ಕಲಿದೇವಯ್ಯ.
--------------
ಮಡಿವಾಳ ಮಾಚಿದೇವ
ಇಂದ್ರಲೋಕದವರೆಲ್ಲರೂ ಸಹೀಂದ್ರನಾಥ ಬಸವಣ್ಣಾ ಎಂದು ಹೊಗಳುತಿರ್ಪರಯ್ಯಾ. ಬ್ರಹ್ಮಲೋಕದವರೆಲ್ಲರೂ ಪರಬ್ರಹ್ಮ ಬಸವಣ್ಣಾ ಎಂದು ಹೊಗಳುತಿರ್ಪರಯ್ಯಾ. ವಿಷ್ಣುಲೋಕದವರೆಲ್ಲರೂ ಮಹಾದಂಡನಾಥ ಬಸವಣ್ಣಾ ಎಂದು ಹೊಗಳುತಿರ್ಪರಯ್ಯಾ. ರುದ್ರಲೋಕದವರೆಲ್ಲರೂ ಮಹಾರುದ್ರ ಬಸವಣ್ಣಾ ಎಂದು ಹೊಗಳುತಿರ್ಪರಯ್ಯಾ. ಶಿವಲೋಕದವರೆಲ್ಲರೂ ಪರಶಿವ ಬಸವಣ್ಣಾ ಎಂದು ಹೊಗಳುತಿರ್ಪರಯ್ಯಾ. ಪ್ರಮಥಮಲೋಕದವರೆಲ್ಲರೂ ಪ್ರಮಥನಾಥ ಬಸವಣ್ಣಾ ಎಂದು ಹೊಗಳುತಿರ್ಪರಯ್ಯಾ. ಪರಲೋಕದವರೆಲ್ಲರೂ ಪರಾಪರ ಬಸವಣ್ಣಾ ಎಂದು ಹೊಗಳುತಿರ್ಪರಯ್ಯಾ. ಸತ್ಯಲೋಕದವರೆಲ್ಲರೂ ನಿತ್ಯ ಬಸವಣ್ಣಾ ಎಂದು ಹೊಗಳುತಿರ್ಪರಯ್ಯಾ. ಮತ್ರ್ಯಲೋಕದವರೆಲ್ಲರೂ ಕರ್ತ ಬಸವಣ್ಣಾ ಎಂದು ಹೊಗಳುತಿರ್ಪರಯ್ಯಾ. ನಾಗಲೋಕದವರೆಲ್ಲರೂ ನಾಗನಾಥ ಬಸವಣ್ಣಾ ಎಂದು ಹೊಗಳುತಿರ್ಪರಯ್ಯಾ. ಪಾತಾಳಲೋಕದವರೆಲ್ಲರೂ ಅಪ್ರಮಾಣ ಬಸವಣ್ಣಾ ಎಂದು ಹೊಗಳುತಿರ್ಪರಯ್ಯಾ. ರಸಾತಳಲೋಕದವರೆಲ್ಲರೂ ಮಹಾಮಹಿಮ ಬಸವಣ್ಣಾ ಎಂದು ಹೊಗಳುತಿರ್ಪರಯ್ಯಾ. ಶೂನ್ಯಲೋಕದವರೆಲ್ಲರೂ ಶೂನ್ಯಲಿಂಗ ಬಸವಣ್ಣಾ ಎಂದು ಹೊಗಳುತಿರ್ಪರಯ್ಯಾ. ಸರ್ವಲೋಕದವರೆಲ್ಲರೂ ಸರ್ವಾಧಾರ ಬಸವಣ್ಣ ಎಂದು ಹೊಗಳುತಿರ್ಪರಯ್ಯಾ. ಇಂತು, ನಿತ್ಯರು ನಿಜೈಕ್ಯರು ಬಸವಣ್ಣನ ನೆನೆಯದವರಾರು ? ಸತ್ಯರು ಸದ್ಯೋನ್ಮುಕ್ತರು ಬಸವಣ್ಣನ ಹೊಗಳದವರಾರು ? ಸರ್ವಮಹಿಮನೆ, ಸರ್ವಘನಮನವೇದ್ಯನೆ, ಸರ್ವಪರಿಪೂರ್ಣನೆ ಕಲಿದೇವಾ,ನಿಮ್ಮ ಶರಣ ಬಸವಣ್ಣನಿಂತಹ ಘನಮಹಿಮ ನೋಡಯ್ಯಾ.
--------------
ಮಡಿವಾಳ ಮಾಚಿದೇವ