ಅಥವಾ
(3) (2) (1) (0) (2) (0) (0) (0) (0) (1) (0) (0) (0) (0) ಅಂ (1) ಅಃ (1) (9) (0) (1) (0) (0) (0) (0) (2) (0) (0) (0) (0) (0) (0) (0) (10) (0) (2) (0) (3) (2) (0) (2) (1) (1) (0) (0) (0) (0) (1) (5) (0) (2) (6) (0)

ಪದದಿಂದ ಪ್ರಾರಂಭವಾಗುವ ವಚನಗಳು:

ಉದಯದಲ್ಲಿ ಬ್ರಹ್ಮನ ಕಾವೆ ಮಧ್ಯಾಹ್ನಕ್ಕೆ ವಿಷ್ಣುವ ಕಾವೆ ಅಸ್ತಮಯದಲ್ಲಿ ರುದ್ರನ ಕಾವೆ. ಕತ್ತಲೆಯಾದ ಮತ್ತೆ ತಮ್ಮ ತಮ್ಮ ಮಂದೆಗೆ ಹೊಡೆದು ಈ ಕಾವ ಕಟ್ಟಿಗೆಯ ಇನ್ನೆಂದಿಗೆ ಬಿಡುವೆ? ಗೋಪತಿನಾಥ ವಿಶ್ವೇಶ್ವರಲಿಂಗವು ನಷ್ಟವಹನ್ನಕ್ಕ ಎನ್ನ ಕೈಯ ಕಟ್ಟಿಗೆ ಬಿಡದು.
--------------
ತುರುಗಾಹಿ ರಾಮಣ್ಣ
ಉತ್ಪತ್ಯವೆಂಬ ಪಶುವಿನ ಮೇಲೆ ಸ್ಥಿತಿಯೆಂಬ ವೃಷಭ ಏರಿತ್ತಲ್ಲಾ. ಸ್ವಸ್ಥಾನವಾಗಿ ಸುಖದ ಸುಗ್ಗಿಯಿಂದ ಬಿಂದು ನಿಂದು ಕರು ಹುಟ್ಟಿತ್ತಲ್ಲಾ. ಕರು ಉದಯವಾಗಿ ಕರಿಗೊಂಡಡೆ ಲಲ್ಲೆಯಿಂದ ಕ್ಷೀರ. ಅವು ಒಲ್ಲದಿದ್ದಡೆ ಓರೆಯಾಯಿತ್ತಲ್ಲಾ. ಇಂತೀ ಅರಿವು ಕರಿಗೊಂಡ ಭೇದ. ಇಂತೀ ಅರಿದು ಬರುದೊರೆವೋದ ಭೇದ. ಇಂತೀ ಜ್ಞಾನ ನೇತ್ರಸೂತ್ರ ಗೋಪತಿನಾಥ ವಿಶ್ವೇಶ್ವರಲಿಂಗದಲ್ಲಿ ತುರುಗಾಹಿ ರಾಮನ ಮಾತು.
--------------
ತುರುಗಾಹಿ ರಾಮಣ್ಣ