ಭ ಪದದಿಂದ ಪ್ರಾರಂಭವಾಗುವ ವಚನಗಳು:
ಭಾವವುಳ್ಳನ್ನಕ್ಕ ಭ್ರಮೆಯ ಬೀಜ.ಭ್ರಮೆ ನಿಭ್ರಮೆಯಹನ್ನಕ್ಕ ಪೂಜೆಯ ದೃಷ್ಟ.ಪುಣ್ಯದ ಬೀಜ ಸುಖದ ಬೆಳೆ ಸಾಧನ ಸಂಪತ್ತು.ಇಂತೀ ಕ್ರೀ ಸಾಧ್ಯವಹನ್ನಕ್ಕ ಅಸಾಧ್ಯದ ಸಂಬಂಧ.ವಿರಳ ಅವಿರಳವೆಂಬ ಕಲೆ ಕಳೆಯಲ್ಲಿ ಕಲೆದೋರದೆ ನಿಂದುದುಗೋಪತಿನಾಥ ವಿಶ್ವೇಶ್ವರಲಿಂಗವು ವಿಶ್ವನಾಮ ನಷ್ಟವಾದಭೇದ.