ಅಥವಾ
(15) (6) (1) (0) (3) (0) (0) (0) (5) (0) (0) (3) (0) (0) ಅಂ (4) ಅಃ (4) (11) (0) (4) (1) (0) (0) (0) (3) (0) (0) (0) (0) (0) (0) (0) (3) (0) (3) (0) (3) (4) (0) (6) (3) (5) (0) (1) (0) (5) (2) (7) (0) (0) (6) (0)

ಪದದಿಂದ ಪ್ರಾರಂಭವಾಗುವ ವಚನಗಳು:

ಆವಂಗದಲ್ಲಿದ್ದಡೇನು, ಒಂದು ಸುಸಂಗ ಸುಶಬ್ದವ ನಿಮಿಷವಿಂಬಿಟ್ಟುಕೊಂಡು, ಆ ಘಳಿಗೆ ಅಳಿದಡೇನು, ಉಳಿದಡೇನು, ಸುಸಂಗ ಸುಶಬ್ದವೇದಿಯೆ? ಲಿಂಗದಲ್ಲಿಯೇ ನಿರುತ ಭರಿತ ಕಾಣಿರೆ, ಶರಣ. ಮನದಲ್ಲಿ ಚಲಾಚಲಿತವಿಲ್ಲದೆ ಲಿಂಗವನಿಂಬುಗೊಂಡ ಮಹಂತಂಗೆ ಬೆದರಿ ಓಡವೆ ಕರ್ಮಂಗಳು? ಉದರಿಹೋಗವೆ ಭವಪಾಶಂಗಳು? ಕರ್ಪುರದುರಿಯ ಸಂಗದಂತೆ, ಗುರುಪಾದ ಸೋಂಕು. ಜ್ಞಾನವಾದ ಬಳಿಕ ಜಡಕರ್ಮವಿಹುದೆ, ಮಹಾಲಿಂಗ ಕಲ್ಲೇಶ್ವರಾ?
--------------
ಹಾವಿನಹಾಳ ಕಲ್ಲಯ್ಯ
ಆಗಮಾಚಾರವಿಲ್ಲೆಂದು ಭಕ್ತರನಲ್ಲೆಂಬ ಭ್ರಮಿತರು ನೀವು ಕೇಳಿರೆ! ಮುಕ್ಕುಳಿಸಿದ ನೀರ ಮಜ್ಜನಕ್ಕೆರವುದಿದಾವಾಗಮಾಚಾರ? ಸರವ ಕಟ್ಟಿ, ಪತ್ರೆಯ ಹರಿದು ಹಾಕೂದಿದಾವ ಮಂತ್ರದೊಳಗು? ಸರ್ರನೆ ಹರಿತಂದು ಸುರ್ರನೆ ಕಲ್ಲಲಿಡುವುದಿದಾವ ಪೂಜೆ? ಬಹುಬುದ್ಧಿಗಲಿತು, ಬಹಳ ನುಡಿ ಶಿವಭಕ್ತರ ಕೂಡೆ ಸಲ್ಲದು, ಶರಣೆಂದು ಶುದ್ಧರಪ್ಪುದು. ಮಹಾಲಿಂಗ ಕಲ್ಲೇಶ್ವರನು ತನ್ನ ಭಕ್ತರ ನಿಲುವನು ತಾನೆ ಬಲ್ಲನು.
--------------
ಹಾವಿನಹಾಳ ಕಲ್ಲಯ್ಯ
ಆರಡಿ ತಾನಾಗಿಹ ಆಶ್ರಯವ ಮಾಡುವಲ್ಲಿ ಬೇರೆ ಬಾಯಿಲ್ಲ. ಕುಸುಮದ ಕಂಪಿತವನುಂಬುದಕ್ಕೆ ಬೇರೆ ಬಾಯಿಲ್ಲ. ಇಂತಿದು ಬಿಡುಮುಡಿಯ ಭೇದ. ಕರ್ತು ಭೃತ್ಯನ ವಶಗತವಾಗಿರ್ದ ತ್ರಿವಿಧಮಲವ ಮುಟ್ಟುವಲ್ಲಿ. ತನಗೆ ಬಿಟ್ಟು ಬಹ ಸಮರ್ಪಣೆಯನರಿತು, ಅವ ತೊಟ್ಟಿರ್ದುದ ತಾ ತೊಡದೆ, ಅವ ಬಿಟ್ಟುದ ತಾ ಮುಟ್ಟದೆ, ಅವ ಬಿಟ್ಟುದನರಿತು, ಅವಗೇನು ಪಾಶವ ಕಟ್ಟಿದೆ. ತೊಟ್ಟ ಬಿಟ್ಟ ಹಣ್ಣಿನಂತೆ, ನಿಜನಿಶ್ಚಯವಾದ ಭಕ್ತಿಮೂರ್ತಿ. ಮಹಾಮಹಿಮ ಕಲ್ಲೇಶ್ವರಲಿಂಗ ತಾನಾದ ಶರಣ.
--------------
ಹಾವಿನಹಾಳ ಕಲ್ಲಯ್ಯ
ಆದಿಯಲ್ಲಿ ಪ್ರಸಾದ, ಏಕಮುಖ ಸಾಧಕರ ಮುಖದಿಂದ ಅನಂತಮುಖವಾದುದು. ಎಯ್ದಿ ನಿಂದಲ್ಲಿ ಮತ್ತೆ ಏಕಮುಖವಾದುದು. ಇದರ ಭೇದವ ಬಸವಣ್ಣ ಚೆನ್ನ ಬಸವಣ್ಣನ ಸಂಪಾದನೆಯಿಂದಲಾನರಿದೆನು. ಅರಿದಡೇನು ಎನಗಾಯತವಾಗದು. ಆಯತವಾದಡೇನು ಸನ್ನಹಿತವಾಗದು. ಗುರುಲಿಂಗ ಜಂಗಮದನುವನರಿರದ ವಿಶ್ವಾಸ, ಜಾನಿಗಲ್ಲದೆ ಅಳವಡದು. ಆ ಪರಮ ವಿಶ್ವಾಸ ಸತ್ಸದಯದಿಂದಲ್ಲದೆ ಸಮನಿಸದು. ಇದು ಕಾರಣ, ಪ್ರಸಾದದಾದಿಕುಳವ ನಾನೆತ್ತ ಬಲ್ಲೆನಯ್ಯಾ? ಪ್ರಸಾದವೆಂಬುದು ಅನಿಂದ್ಯ, ಅಮಲ ಅಗೋಚರ, ನಿರಂಜನ, ನಿತ್ಯಸತ್ಯ, ಜ್ಞಾನಾನಂದ, ಪರಬ್ರಹ್ಮ, ನಿಶ್ಚಯ. ಅದು ತನ್ನ ತಾನೆ ನುಡಿವುತ್ತಿಹುದು. ಆ ನುಡಿಯೆ ಸುನಾದ, ಆ ಸುನಾದವೆ ಓಂಕಾರ. ಆ ಓಂಕಾರ ತಾನೆ ಮಹಾಜ್ಞಾನ, ಪರಮಚೈತನ್ಯ, ಪ್ರಸಿದ್ಧ ಪಂಚಾಕ್ಷರ. ಅದೆಂತೆಂದಡೆ : `ಪ್ರಣವೋ ಹಿ ಪರಬ್ರಹ್ಮ ಪ್ರಣವೋ ಹಿ ಪರಂ ಪರದಂ' ಎಂದುದಾಗಿ, ಆ ಪ್ರಸಿದ್ಧ ಪಂಚಾಕ್ಷರವು ತನ್ನಿಂದ ತಾನೆ ಸಕಲ ನಿಷ್ಕಲವಾಯಿತ್ತು. ಆ ಪರಮನಿಷ್ಕಲವೇ ಶ್ರೀಗುರು, ಸಕಲವೇ ಲಿಂಗ, ಸಕಲನಿಷ್ಕಲವೇ ಜಂಗಮ. ಅದೆಂತೆಂದಡೆ : `ಏಕಮೂರ್ತಿಸ್ತ್ರೀಧಾ ಭೇದಾ ಗುರುರ್ಲಿಂಗಂತು ಜಂಗಮ' ಎಂದುದಾಗಿ, ಆ ಜಂಗಮಪ್ರಸಾದÀÀವೆ ಮೂಲವಾದ ಕಾರಣ, ಆ ಜಂಗಮವನಾರಾಧಿಸಿ, ಅನಂತ ಪ್ರಮಥಗಣಂಗಳು ಪ್ರಸಾದವ ಪಡೆದು, ತಮ್ಮ ಸದ್ಭಾವವೆಂತಂತೆ ಸ್ವೀಕರಿಸಿದ ಕಾರಣ, ಅನಂತಮುಖವಾಯಿತ್ತು. ಅವೆಲ್ಲವನೊಳಕೊಂಡು ತಾನೆ ನಿಂದ ಕಾರಣ ಎಂದಿನಂತಾಯಿತ್ತು. ಇದೇ ಪ್ರಸಾಧಾದಿ ಮಧ್ಯಾಂತದರಿವು ಕಾಣಿರೆ. ಇಂತಪ್ಪ ಪ್ರಸಾದವ ಕೊಂಬ ಪ್ರಸಾದಿಯ ನಿಲವೆಂತೆಂದಡೆ : ವಿಶ್ವಾಸವೆ ಒಡಲಾಗಿ, ಲಿಂಗನಿಷೆ*ಯೆ ಇಂದ್ರಿಯಂಗಳಾಗಿ, ಸಾವಧಾನವೆ ಕರಣಂಗಳಾಗಿ, ಶಿವಾನುಭಾವವೆ ಪ್ರಾಣವಾಗಿ, ಮಹದಾನಂದವೆ ತಾನಾಗಿ, ಲಿಂಗಸಮರಸವೆ ಭರಿತವಾಗಿರ್ಪ ಮಹಾಜ್ಞಾನಿಯೆ ಪ್ರಸಾದಿ. ಆ ಪ್ರಸಾದಿಯ ಪ್ರಸಾದವೆ ಎನ್ನ ಲಿಂಗಕ್ಕೆ ಕಳೆಯಾಯಿತ್ತು. ಅದೆ ಎನಗೆ ತಿಳಿವಾಯಿತ್ತು, ಮಹಾಲಿಂಗ ಕಲ್ಲೇಶ್ವರಾ.
--------------
ಹಾವಿನಹಾಳ ಕಲ್ಲಯ್ಯ
ಆವ ನೇಮವನು ಮಾಡ, ಕರ್ಮವನು ಹೊದ್ದ. ಆವ ಶೀಲವ ಹಿಡಿಯ, ಆವ ತಪಕ್ಕೂ ನಿಲ್ಲ. ಆವ ಜಂಜಡಕ್ಕೂ ಹಾರ, ಕೇವಲಾತ್ಮಕನು. ಸಾವಯ ನಿರವಯವೆನಿಸಿದ ಸಹಜವು ತಾನೆ, ಮಹಾಲಿಂಗ ಕಲ್ಲೇಶ್ವರಾ, ನಿಮ್ಮ ಶರಣು.
--------------
ಹಾವಿನಹಾಳ ಕಲ್ಲಯ್ಯ
ಆದಿಜಂಗಮಕ್ಕೆ ಸ್ವಾಯತವಾದಲ್ಲಿ ಆಚಾರಲಿಂಗಪ್ರಾಣಿ. ಆಚಾರಲಿಂಗ ಸ್ವಾಯತವಾದಲ್ಲಿ ಗುರುಲಿಂಗಪ್ರಾಣಿ. ಗುರುಲಿಂಗ ಸ್ವಾಯತವಾದಲ್ಲಿ ಶಿವಲಿಂಗಪ್ರಾಣಿ. ಶಿವಲಿಂಗ ಸ್ವಾಯತವಾದಲ್ಲಿ ಜಂಗಮಲಿಂಗಪ್ರಾಣ. ಜಂಗಮಲಿಂಗ ಸ್ವಾಯತವಾದಲ್ಲಿ ಪ್ರಸಾದಲಿಂಗಪ್ರಾಣಿ. ಪ್ರಸಾದಲಿಂಗ ಸ್ವಾಯತವಾದಲ್ಲಿ ಮಹಾಲಿಂಗಪ್ರಾಣಿ. ಮಹಾಲಿಂಗ ಸ್ವಾಯತವಾದಲ್ಲಿ ಶೂನ್ಯಲಿಂಗಪ್ರಾಣಿ. ಶ್ರುತಿ : ಆದಿಮಧ್ಯಾಂತಶೂನ್ಯಂ ಚ ವ್ಯೋಮಾವ್ಯೋಮವಿವರ್ಜಿತಂ | ಧ್ಯಾನಜ್ಞಾನದ್ವಯಾಧೂಧ್ರ್ಛಂ ಶೂನ್ಯಲಿಂಗಮಿತಿ ಸ್ಮøತಂ || ಇಂತೆಂದುದಾಗಿ, ಶೂನ್ಯಲಿಂಗ ಸ್ವಾಯತವಾದಲ್ಲಿ, `ಲಿಂಗೇ ಜಾತಂ ಲಿಂಗೇ ಬೀಜಂ' ಎಂಬುದಾಗಿ, ಉಪಮೆಗೆ ನಿಲುಕದ ಉಪಮಾತೀತ ನೀನೆ ಬಲ್ಲೆ, ಮಹಾಲಿಂಗ ಕಲ್ಲೇಶ್ವರಾ.
--------------
ಹಾವಿನಹಾಳ ಕಲ್ಲಯ್ಯ