ಅಥವಾ
(15) (6) (1) (0) (3) (0) (0) (0) (5) (0) (0) (3) (0) (0) ಅಂ (4) ಅಃ (4) (11) (0) (4) (1) (0) (0) (0) (3) (0) (0) (0) (0) (0) (0) (0) (3) (0) (3) (0) (3) (4) (0) (6) (3) (5) (0) (1) (0) (5) (2) (7) (0) (0) (6) (0)

ಪದದಿಂದ ಪ್ರಾರಂಭವಾಗುವ ವಚನಗಳು:

ಲಿಂಗಕ್ಕೆ ಕೊಟ್ಟು ಕೊಂಡಡೆ ಪ್ರಸಾದಿ. ಜಂಗಮವಾರೋಗಣೆಯ ಮಾಡಿ, ಮಿಕ್ಕುದ ಕೊಂಡಡೆ ಪ್ರಸಾದಿ. ಇದೇ ಪ್ರಸಾದದಾದಿ ಕಂಡಯ್ಯಾ. ಲಿಂಗಕ್ಕೆ ಕೊಡದೆ, ಜಂಗಮಕ್ಕೆ ನೀಡಿ, ಶೇಷಪ್ರಸಾದಮಂ ಪಡೆಯದೆ ಕೊಂಡಡೆ, ಹುಳುಗೊಂಡದಲ್ಲಿಕ್ಕುವ, ಮಹಾಲಿಂಗ ಕಲ್ಲೇಶ್ವರದೇವರು.
--------------
ಹಾವಿನಹಾಳ ಕಲ್ಲಯ್ಯ
ಲಿಂಗರೂಪಿನ ಸಹಜದುದಯದ ತುಟ್ಟತುದಿಯ ತುರೀಯಾವಸ್ಥೆಯ ಆಡಿ ರೂಪಿಸುವ, ಹಾಡಿ ರೂಪಿಸುವ ಅರಿವಿನುಪಚಾರವುಳ್ಳನ್ನಕ್ಕರ. ಬಯಲು ಬಲಿದು ತಾನು ತಾನಾಗಿಪ್ಪ. ಮಹಾಲಿಂಗ ಕಲ್ಲೇಶ್ವರಾ, ನಿಮ್ಮ ಶರಣನು.
--------------
ಹಾವಿನಹಾಳ ಕಲ್ಲಯ್ಯ
ಲಿಂಗಕ್ಕೆ ಹೊರೆ ಹೊರೆಯಲ್ಲದೆ, ನಿಜಶಿಲೆಯ ದೀಪ್ತಿಯ ತರಂಗಕ್ಕೆ ಹೊರೆಯುಂಟೆ ? ಸಂಸಾರಿಗೆ ಪ್ರಕೃತಿರಾಗದ್ವೇಷವಲ್ಲದೆ, ಮನ ಮಹದಲ್ಲಿ ನಿಂದ ನಿಜಲಿಂಗಾಂಗಿಗೆ ಉಭಯದ ಸಂದುಂಟೆ ? ಈ ಗುಣ ಲಿಂಗಾಂಗಿಯ ಸಂಗ, ಮಹಾಮಹಿಮ ಕಲ್ಲೇಶ್ವರಲಿಂಗವು ತಾನಾದ ಶರಣ.
--------------
ಹಾವಿನಹಾಳ ಕಲ್ಲಯ್ಯ
ಲಿಂಗನಿಷೆ*ಯಿಲ್ಲದವರಂಗಳವ ಮೆಟ್ಟಲಾಗದು. ಜಂಗಮನಿಷೆ*ಯಿಲ್ಲದವರೊಡನೆ ಮಾತನಾಡಲಾಗದು. ಪ್ರಸಾದನಿಷೆ*ಯಿಲ್ಲದವರ ಸಹಪಙÂ್ತಯಲ್ಲಿ ಕುಳ್ಳಿರಲಾಗದು. ಲಿಂಗಮುಖಕ್ಕೆ ಬಾರದ ರುಚಿ,ಕಿಲ್ಬಿಷ[ನೋಡಾ], ಮುಟ್ಟಲಾಗದು, ಮಹಾಲಿಂಗ ಕಲ್ಲೇಶ್ವರನನೊಲಿಸುವ ಶರಣಂಗೆ.
--------------
ಹಾವಿನಹಾಳ ಕಲ್ಲಯ್ಯ
ಲಿಂಗರ್ಪಿತವಿಲ್ಲದೆ ಕೊಂಬ ಕರ್ಮಿಗಳು, ನೀವು ಕೇಳರೆ. ಅನರ್ಪಿತವೇನ ಮಾಡದು ? ಅನರ್ಪಿತವೆಲ್ಲಿಗೈಯದು ? ಶ್ರುತಿ:ಅಸಮಪ್ರ್ಯ ಪದಾರ್ಥಮ ಶಂಭೋಃ ಭುಂಕ್ತೇ ಉದಕಂ ಪಾತಿ ಚ | ಸ್ವಮಾಂಸಮಸ್ಥಿ ಮೂತ್ರಂ ಚ ಭುಂಕ್ತೇ ಖಾದತಿ ಪಾತಿ ಚ |ಎಂದುದಾಗಿ ಇದು ಕಾರಣ ಮಹಾಲಿಂಗ ಕಲ್ಲೇಶ್ವರ ದೇವರಿಗರ್ಪಿಸದೆ ಕೊಂಡಡೆ ನಾಯ ಮಾಂಸ ನಾಯ ಎಲ್ಲು [ವ] ನಾಯ ಮೂತ್ರವನು ತಿಂದು ಅಗಿದು ಕುಡೆದಂತೆ ಕಾಣಿಕೆ,
--------------
ಹಾವಿನಹಾಳ ಕಲ್ಲಯ್ಯ