ಅಥವಾ
(15) (6) (1) (0) (3) (0) (0) (0) (5) (0) (0) (3) (0) (0) ಅಂ (4) ಅಃ (4) (11) (0) (4) (1) (0) (0) (0) (3) (0) (0) (0) (0) (0) (0) (0) (3) (0) (3) (0) (3) (4) (0) (6) (3) (5) (0) (1) (0) (5) (2) (7) (0) (0) (6) (0)

ಪದದಿಂದ ಪ್ರಾರಂಭವಾಗುವ ವಚನಗಳು:

ತನ್ನ ಗುಣವ ಹೊಗಳಬೇಡ, ಇದರ ಗುಣವ ಹಳೆಯಬೇಡ. ಕೆಮ್ಮೆನೊಬ್ಬರ ನುಡಿಯಬೇಡ, ನುಡಿದು ನುಂಪಿತನಾಗಬೇಡ. ಇದಿರ ಮುನಿಯಿಸಬೇಡ, ತಾ ಮುನಿಯಬೇಡ. ತಾನು ಬದುಕವೈಸುದಿನ, ಸಮತೆ ಸಮಾಧಾನ ತುಂಬಿ ತುಳುಕದಿರಬೇಕು. ಮಹಾಲಿಂಗ ಕಲ್ಲೇಶ್ವರದೇವರ ನಿಚ್ಚಳ ನಿಜವನರಿದಡೆ, ಬಚ್ಚಬರಿಯ ಸಹಜ ಸಮಾಧಾನವಳವಟ್ಟಿರಬೇಕು.
--------------
ಹಾವಿನಹಾಳ ಕಲ್ಲಯ್ಯ
ತನುವ ಗುರುವಿಂಗಿತ್ತ, ಮನವ ಲಿಂಗಕಿತ್ತ, ಧನವ ಜಂಗಮಕಿತ್ತ, ಎನ್ನ ಬಸವರಾಜನಯ್ಯ. ಗುರುವಿನಲ್ಲಿ ಶುದ್ಧ, ಲಿಂಗದಲ್ಲಿ ಸಿದ್ಧ, ಜಂಗಮದಲ್ಲಿ ಪ್ರಸಿದ್ಧ ಪ್ರಸಾದಿಯಯ್ಯಾ, ಎನ್ನ ಬಸವರಾಜನ[ಯ್ಯ] ಲಿಂಗದಲ್ಲಿ ದೀಕ್ಷೆ ಶಿಕ್ಷೆ ಸ್ವಾನುಭಾವ ಆಯತ ಸ್ವಾಯತ ಸನ್ನಹಿತ, ಎನ್ನ ಬಸವರಾಜನಯ್ಯ. ಮಹಾಲಿಂಗ ಕಲ್ಲೇಶ್ವರಾ, ನಿಮ್ಮ ಶರಣ ಬಸವರಾಜನಯ್ಯ.
--------------
ಹಾವಿನಹಾಳ ಕಲ್ಲಯ್ಯ
ತಾನಿಲ್ಲದ ಮುನ್ನ ಗುರುವೆಲ್ಲಿಹುದೊ ? ಲಿಂಗವೆಲ್ಲಿಹುದೊ ? ಜಂಗಮವೆಲ್ಲಿಹುದೊ ? ಪ್ರಸಾದವೆಲ್ಲಿಹುದೊ ? ಪಾದೋದಕವೆಲ್ಲಿಹುದೊ ? ಪರವೆಲ್ಲಿಹುದೊ ? ಸ್ವಯವೆಲ್ಲಿಹುದೊ ? ತನಗೆ ತೋರಿದ ಗುರು, ತನಗೆ ತೋರಿದ ಲಿಂಗ, ತನಗೆ ತೋರಿದ ಜಂಗಮ, ತನಗೆ ತೋರಿದ ಪ್ರಸಾದ, ತನಗೆ ತೋರಿದ ಪಾದೋದಕ, ತನಗೆ ತೋರಿದ ಪರವು, ತನಗೆ ತೋರಿದ ಸ್ವಯವು. ಗುರುವೆಂದರಿದವನೂ ತಾನೆ, ಲಿಂಗವೆಂದರಿದವನೂ ತಾನೆ, ಜಂಗಮವೆಂದರಿದವನೂ ತಾನೆ. ಪ್ರಸಾದವೆಂದರಿದವನೂ ತಾನೆ, ಪಾದೋದಕವೆಂದರಿದವನೂ ತಾನೆ, ಪರವೆಂದರಿದವನೂ ತಾನೆ, ಸ್ವಯಂವೆಂದರಿದವನೂ ತಾನೆ, ಇಂತಿವೆಲ್ಲವ ಪೆತ್ತರಿವು ತಾನೆ ಸ್ವಯಂಜ್ಯೋತಿ, ಮಹಾಲಿಂಗ ಕಲ್ಲೇಶ್ವರಾ.
--------------
ಹಾವಿನಹಾಳ ಕಲ್ಲಯ್ಯ