ಅಥವಾ
(15) (6) (1) (0) (3) (0) (0) (0) (5) (0) (0) (3) (0) (0) ಅಂ (4) ಅಃ (4) (11) (0) (4) (1) (0) (0) (0) (3) (0) (0) (0) (0) (0) (0) (0) (3) (0) (3) (0) (3) (4) (0) (6) (3) (5) (0) (1) (0) (5) (2) (7) (0) (0) (6) (0)

ಪದದಿಂದ ಪ್ರಾರಂಭವಾಗುವ ವಚನಗಳು:

ಒಂದಹದು ಒಂದನಲ್ಲಾಯೆಂಬುದು ಭಕ್ತಿಯ ಸತ್ಯಕ್ಕೆ ಅದೇ ಭಂಗ. ಮಿಥ್ಯತಥ್ಯವನಳಿದವಂಗೆ, ಮತ್ತೊಂದರಲ್ಲಿ ಹೊತ್ತು ಹೋರುವುದೆ ಸತ್ಯವಲ್ಲ. ಅದು ಮಹಾಲಿಂಗ ಕಲ್ಲೇಶ್ವರಲಿಂಗಕ್ಕೆ ದೂರವಪ್ಪುದು,
--------------
ಹಾವಿನಹಾಳ ಕಲ್ಲಯ್ಯ
ಒಳಗೆ ಶೋಧಿಸಿ, ಹೊರಗಳವಡಿಸಿ, ಭಾವದಿಂ ಗುಡಿ ತೋರಣವ ಕಟ್ಟುವೆನಯ್ಯಾ. ಎನ್ನ ಲಿಂಗವೆ ಬಾರಯ್ಯಾ, ಎನ್ನ ದೇವ ಬಾರಯ್ಯಾ. ಎನ್ನ ಅಂತರಂಗದ ಪರಂಜ್ಯೋತಿರ್ಲಿಂಗವ ಇದರುಗೊಂಬೆನು ಬಾರಯ್ಯಾ. ಮಹಾಲಿಂಗ ಕಲ್ಲೇಶ್ವರಾ, ನಿಮ್ಮ ಧರ್ಮವು ಬಾರಯ್ಯಾ.
--------------
ಹಾವಿನಹಾಳ ಕಲ್ಲಯ್ಯ
ಒಲಿದೊಲಿಸಿಕೊಳ್ಳಬೇಕು, ಒಲ್ಲದಿಲ್ಲದಿಲ್ಲ. ಹಲವು ಕೊಂಬಿಂಗೆ ಹಾರದಿರು, ಮರುಳೆ. ಅಟ್ಟಿ ನೋಡುವ, ಮುಟ್ಟಿ ನೋಡುವ, ತಟ್ಟಿ ನೋಡುವ, ಒತ್ತಿ ನೋಡುವ. ಅಟ್ಟಿದಡೆ ತಟ್ಟಿದಡೆ, ನಿಷೆ*ಯಂ ಬಿಡದಿರ್ದಡೆ, ತನ್ನನೀವ, ಮಹಾಲಿಂಗ ಕಲ್ಲೇಶ್ವರ.
--------------
ಹಾವಿನಹಾಳ ಕಲ್ಲಯ್ಯ