ಅಥವಾ
(15) (6) (1) (0) (3) (0) (0) (0) (5) (0) (0) (3) (0) (0) ಅಂ (4) ಅಃ (4) (11) (0) (4) (1) (0) (0) (0) (3) (0) (0) (0) (0) (0) (0) (0) (3) (0) (3) (0) (3) (4) (0) (6) (3) (5) (0) (1) (0) (5) (2) (7) (0) (0) (6) (0)

ಪದದಿಂದ ಪ್ರಾರಂಭವಾಗುವ ವಚನಗಳು:

ಪೂರ್ವಜಾತವ ಕಳೆದು ಪುನರ್ಜಾತನಾದ ಬಳಿಕ, ಏನೆಂದೆನಲುಂಟೆ ? ಭಕ್ತಕಾಯ ಮಮಕಾಯವಾದ ಬಳಿಕ, ಏನೆಂದೆನಲುಂಟೆ ? ಅದೆಂತೆಂದಡೆ : ನ ಮುಕ್ತಿಶ್ಚ ನ ಧರ್ಮಶ್ಚ ನ ಪುಣ್ಯಂ ನ ಚ ಪಾಪಕಂ | ನ ಕರ್ಮಾ ಚ ನ ಜನ್ಮಾ ಚ ಗುರೋರ್ಭಾವನೀರಿಕ್ಷಣಾತ್ || ಎಂದುದಾಗಿ, ಇದು ಕಾರಣ, ಹಮ್ಮು ಬಿಮ್ಮು ಸೊಮ್ಮನಳಿದ, ಮಹಾಲಿಂಗ ಕಲ್ಲೇಶ್ವರ ತಾನಾದ ಬಳಿಕ, ಏನೆಂದೆನಲುಂಟೆ ?
--------------
ಹಾವಿನಹಾಳ ಕಲ್ಲಯ್ಯ
ಪರಮಪವಿತ್ರ ನಿರ್ಮಲಲಿಂಗ ತನ್ನ ಅಂಗದ ಮೇಲಿರುತ್ತಿರಲು, ಅಂಗಶುದ್ಧ ಸೌಕರ್ಯವಿಲ್ಲದವನ ಮುಖವ ನೋಡಲಾಗದು. ಅವನ ಮುಟ್ಟಲೆಂತೂ ಆಗದು. ಮನದ ಮಲಿನವ ಕಳೆದು ಪ್ರಾಣಲಿಂಗವ ಧರಿಸಬೇಕು. ತನುವಿನ ಮಲವ ಕಳೆದು ಇಷ್ಟಲಿಂಗವ ಧರಿಸಬೇಕು. ಜೀವತ್ರಯಂಗಳ ಮಲವ ಕಳೆದು ಪ್ರಸಾದವ ಧರಿಸಬೇಕು. ಮನದ ಮಲಿನವಾವುದೆಂದಡೆ ಮನವ್ಯಾಕುಲ. ತನುವಿನ ಮಲಿನವಾವುದೆಂದಡೆ ತನುಗುಣವ್ಯಾಪ್ತಿ ತನುತ್ರಯದ ಮಲಿನವಾವುದೆಂದಡೆ ಈಷಣತ್ರಯ. ಜೀವತ್ರಯದ ಮಲವಾವುದೆಂದಡೆ ಅವಸ್ಥಾತ್ರಯ. ಕರಣಂಗಳ ಮಲವಾವುದೆಂದಡೆ ಸಂಕಲ್ಪ ವಿಕಲ್ಪ. ಅಸತ್ಯ ನಿಂಧ್ಯ ಮಿಥ್ಯವಾದ ಸತ್ಕಿರಿಸುತಿಹ, ಅನ್ಯರಿಗೆ ಕೈಯನಾನುಹ. `ನಿರ್ಮಲಸ್ಯ ತು ನಿರ್ಮಾಲ್ಯಂ ಮಲದೇಹೀ ನ ಧಾರಯೇತ್' ಎಂದುದಾಗಿ, ಲಿಂಗವಿಪ್ಪ ಸುಕ್ಷೇತ್ರ ಕಾಯದ ಮಲಿನವ ಕಳೆದು, ಪ್ರಸಾದವ ಧರಿಸದಿದ್ದಡೆ, ಭವಮಾಲೆ ಹಿಂಗದು, ನರಕ ತಪ್ಪದಯ್ಯಾ, ಮಹಾಲಿಂಗ ಕಲ್ಲೇಶ್ವರಾ.
--------------
ಹಾವಿನಹಾಳ ಕಲ್ಲಯ್ಯ
ಪರಮಪದವಿಯ ನಿಮ್ಮ ಕೊರಳಲ್ಲಿ ಕಟ್ಟಿಕೊಳ್ಳಿ. ಪರಮಪದವಿಯ ನಿಮ್ಮ ಎದೆಯಲ್ಲಿ ಇರಿದುಕೊಳ್ಳಿ. ಎನಗೆ ನಿಮ್ಮ ತೊತ್ತು ಸೇವೆಯೆ ಸಾಕು, ಮಹಾಲಿಂಗ ಕಲ್ಲೇಶ್ವರಾ.
--------------
ಹಾವಿನಹಾಳ ಕಲ್ಲಯ್ಯ
ಪರಸ್ತ್ರೀಯರ ರೂಪ ಕಾಯದ ಕಣ್ಣಿನಲ್ಲಿ ಕಂಡು, ಮನ ಹರಿದು, ತನು ಕರಗಿ ಬೆರಸಿದ ಬಳಿಕ ಸಂಗವಲ್ಲದೇನು ಹೇಳಾ ! ಮನ ಬೆರಸಿ, ತನು ತಳಿತು, ಇಂದ್ರಿಯಂಗಳು ತುಳುಕಿದ ಬಳಿಕ, ಸಂಗವಲ್ಲದೇನು ಹೇಳಾ ? ಮಹಾಲಿಂಗ ಕಲ್ಲೇಶ್ವರ ಬಲ್ಲ ಸಿದ್ಧರಾಮನ ಪರಿಯ. ಮನದ ಹಾದರಿಗನು ಶಬ್ದ ರುಚಿಕರನು.
--------------
ಹಾವಿನಹಾಳ ಕಲ್ಲಯ್ಯ