ಅಥವಾ
(15) (6) (1) (0) (3) (0) (0) (0) (5) (0) (0) (3) (0) (0) ಅಂ (4) ಅಃ (4) (11) (0) (4) (1) (0) (0) (0) (3) (0) (0) (0) (0) (0) (0) (0) (3) (0) (3) (0) (3) (4) (0) (6) (3) (5) (0) (1) (0) (5) (2) (7) (0) (0) (6) (0)

ಪದದಿಂದ ಪ್ರಾರಂಭವಾಗುವ ವಚನಗಳು:

ಕಲ್ಲೊಳಗಣ ಕಿಚ್ಚು ಉರಿಯದ ಪರಿಯಂತೆ, ಬೀಜದೊಳಗಣ ವೃಕ್ಷ ಉಲಿಯದ ಪರಿಯಂತೆ, ಪುಷ್ಪದ ಕಂಪು ನನೆಯಲ್ಲಿ ತೋರದಂತೆ, ಚಂದ್ರಕಾಂತದ ಉದಕ ಒಸರದ ಪರಿಯಂತೆ, ಮಹಾಲಿಂಗ ಕಲ್ಲೇಶ್ವರನಲ್ಲಿ ಲಿಂಗೈಕ್ಯ. ಇಹವೆನ್ನ ಪರವೆನ್ನ ಸಹಜವೆನ್ನ ತಾನೆನ್ನ.
--------------
ಹಾವಿನಹಾಳ ಕಲ್ಲಯ್ಯ
ಕುಲಹೀನಶಿಷ್ಯಂಗೆ ಅನುಗ್ರಹವ ಕೊಟ್ಟು, ತನ್ನ ಪ್ರಾಣಲಿಂಗವ ನಿಕ್ಷೇಪಿಸಿ, ಕರ್ಣಮಂತ್ರವ ಹೇಳಿ, ಆ ಶ್ರೀಗುರು ಬಂದು, ಆ ಶಿಷ್ಯನ ಮನೆಯ ಹೊಗಲೊಲ್ಲದೆ, ಅಕ್ಕಿ ತುಪ್ಪವ ನೀ [ಡಿ]ಸಿಕೊಂಡುಂಬವನ ಕೇಡಿಂಗಿನ್ನೇವೆನಯ್ಯಾ ? ತನ್ನ ಪ್ರಾಣಲಿಂಗವನವರಿಗೆ ಕೊಟ್ಟು, ತಾ ಹೋಗೆನೆಂಬ ವ್ರತಗೇಡಿಗಿನ್ನೇವೆನಯ್ಯಾ ? ಅವನ ಧನಕ್ಕೆ ತಂದೆಯಾದನಲ್ಲದೆ, ಅವನ ಕುಲಕ್ಕೆ ತಂದೆಯಲ್ಲ. ಇದು ಕಾರಣ, ಮಹಾಲಿಂಗ ಕಲ್ಲೇಶ್ವರಾ, ಲಿಂಗವ ಮಾರಿಕೊಂಡುಂಬ ಭಂಗಗಾರರು ಕೆಟ್ಟ ಕೇಡನೇನೆಂಬೆನಯ್ಯಾ.
--------------
ಹಾವಿನಹಾಳ ಕಲ್ಲಯ್ಯ
ಕರ್ಪುರದ ಕಳ್ಳನ ಹುಲ್ಲಿನಲ್ಲಿ ಕಟ್ಟಿಸಲು, ಅಗ್ನಿಯೆಂಬ ಹಿತವ ಬಂದು ಬಿಡಿಸಲಾಗಿ, ಪಾಶ ಬೆಂದು ಕಳ್ಳ ತನ್ನಲ್ಲಯೆ ಅಡಗಿದಂತೆ, ಶರಣಂಗೆ ಬಯಲಪಾಶ ಬಂದು ಕಟ್ಟಿರಲು, ಬಯಲಲಿಂಗ ಬಂದು ಬಿಡಿಸಲು, ಬಯಲು ಬಯಲು ಏಕವಾಯಿತ್ತು. ಮಹಾಲಿಂಗ ಕಲ್ಲೇಶ್ವರನೆಂಬ ಸಂಪತ್ತು ಸದಾಶೂನ್ಯವಾಯಿತ್ತು.
--------------
ಹಾವಿನಹಾಳ ಕಲ್ಲಯ್ಯ
ಕಂಗಳು ತುಂಬಿ ನಿಮ್ಮುವ ನೋಡುತ್ತ ನೋಡುತ್ತಲಯ್ಯಾ, ಕಿವಿಗಳು ತುಂಬಿ ನಿಮ್ಮುವ ಕೇಳುತ್ತ [ಕೇಳುತ್ತ] ಲಯ್ಯಾ, ಮನ ತುಂಬಿ ನಿಮ್ಮುವ ನೆನೆವುತ್ತ ನೆನೆವುತ್ತಲಯ್ಯಾ, ಮಹಾಲಿಂಗ ಕಲ್ಲೇಶ್ವರದೇವರಲ್ಲಿ ಸುಖಿಯಾಗಿರ್ದೆನಯ್ಯಾ.
--------------
ಹಾವಿನಹಾಳ ಕಲ್ಲಯ್ಯ
ಕೂಪರ ಕೊಲುವಡೆ ಮಸೆದ ಕೂರಲಗು ಮತ್ತೇಕೆ ? ಒಲ್ಲೆನೆಂದಡೆ ಸಲದೆ, ಕೊಲೆ ಮರಳಿ ಮತ್ತುಂಟೆ ? ಮಹಾಲಿಂಗ ಕಲ್ಲೇಶ್ವರ ಒಲ್ಲೆನೆಂದಟ್ಟಿದಡೆ, ತುಪ್ಪದಲ್ಲಿ ಕಿಚ್ಚ ನಂದಿಸಿದಂತಾಯಿತ್ತು.
--------------
ಹಾವಿನಹಾಳ ಕಲ್ಲಯ್ಯ
ಕೂತಾಗ ಭಕ್ತ ಮುನಿದಾಗ ಮಾನವನಾದ ಪಾತಕರ ನುಡಿಯ ಕೇಳಲಾಗದು. ಅಂಥ ಪಾತಕರ ಉಲುಹೆಂಬುದು, ಉಲಿವ ಕಬ್ಬಕ್ಕಿಯ ಉಲುಹಿನಂತೆ. ಅದನು ಮಹಂತರು ಕೇಳಲಾಗದು. ಅದಕ್ಕದು ಸ್ವಭಾವವೆಂಬುದ ಬಲ್ಲರಾಗಿ, ಮತಿಗೆಟ್ಟು ನುಡಿವ ಮತ್ತರಹ ಮತ್ರ್ಯರ ನುಡಿಯ ಗಡಣೆ, ಭ್ರಾಂತಿವಿಡಿದ ಭ್ರಮಿತರಿಗೆ ಯೋಗ್ಯವಲ್ಲದೆ, ಸಜ್ಜನ ಸಾತ್ವಿಕ ಜ್ಞಾನವೇದ್ಯರಹ ಸದ್ಭಕ್ತರು ಮೆಚ್ಚವರೆ ? ಅಸತ್ಯವೆ ರೂಪಾಗಿಪ್ಪ ಶೂನ್ಯವಾದಿಗಳೆತ್ತಲೂ ಸಲ್ಲರಾಗಿ ಅವರುಗಳು ಪ್ರೇತಗಾಮಿಗಳು. ಅಮೇಧ್ಯ ಕೂಪದಲ್ಲಿ ಉತ್ಪನ್ನವಾದ ಕ್ರಿಮಿಗಳಂತಪ್ಪ ಜೀವಿಗಳು ತಾವಾರೆಂದರಿಯರು. ಇಂದು ನಿಂದ ಗತಿಯ ತಿಳಿಯರು, ಮುಂದಣ ಗತಿಯನೆಂತೂ ಎಯ್ದಲರಿಯರು. ಆತ್ಮನು ಶ್ವೇತ ಪೀತ ಹರಿತ ಕಪೋತ ಮಾಂಡಿಷ್ಟ ಕೃಷ್ಣರೆಂಬ ಷಡ್ವರ್ಣದೊಳಗಾವ ವರ್ಣವೆಂದೂ ವಿಚಾರಿಸಲರಿಯರಾಗಿ, ಭ್ರಾಂತುವಿಡಿದು ಆತ್ಮೋಹಮೆಂದು ಅಹಂಕರಿಸಿ, ಅಜ್ಞಾನ ತಲೆಗೇರಿ, ಮತ್ತತನದಿಂದಜಾತ ಶಿವಶರಣರ ದೂಷಿಸಿ, ಮಿಥ್ಯವಾದದಿಂದ ನುಡಿವರು ತಾವೆ ಘನವೆಂದು, ಬಯಲಬೊಮ್ಮದ ಹಮ್ಮಿನ ನೆಮ್ಮುಗೆವಿಡಿದು, ಸಹಜ ಸಮಾಧಾನ ಶಿವೈಕ್ಯರ ಹಳಿದು ನುಡಿವರು. ಆದಿಯಲ್ಲಿ ಅಹಂ ಬ್ರಹ್ಮವೆಂದು ಬ್ರಹ್ಮನೆ ವಿಧಿಯಾದನು. ಹರಗಣಂಗಳೊಳಗೆ ಅಗ್ರಗಣ್ಯ ಗಣೇಶ್ವರನಹ ನಂದಿಕೇಶ್ವರನ ಉದಾಸೀನಂ ಮಾಡಿ, ಆ ನಂದಿಕೇರ್ಶವರನ ಶಾಪದಿಂದ ಸನುತ್ಕುಮಾರನೆ ವಿಧಿಯಾದನು. ಕರ್ಮವೆ ಅಧಿಕವೆಂದು ಕೆಮ್ಮನೆ ಕೆಟ್ಟ ಹೆಮ್ಮೆಯಲ್ಲಿ, ದ್ವಿಜ ಮುನಿಗಳ ನೆರಹಿ ಕ್ರತುವ ಮಾಡಿ, ಆ ದೇವ ಮುನಿಗಳೊಳಗಾಗಿ, ದಕ್ಷಂಗೆ ಬಂದ ಅಪಾಯವನರಿದು ಮರೆದರಲ್ಲಾ. ಕುಬೇರನಿಂದಧಿಕವಹ ಧನ, ದೇವೇಂದ್ರನಿಂದಧಿಕವಹ ಐಶ್ವರ್ಯ, ಸೂರ್ಯನಿಂದಧಿಕವಹ ತೇಜಸ್ಸು, ಗಜ ಪಟೌಳಿ ಸೀತಾಂಗನೆಗತ್ಯಧಿಕವಹ ರೂಪು ಲಾವಣ್ಯ ಸೌಂದರ್ಯವನುಳ್ಳ ಸ್ತ್ರೀಯರುಂಟು. ಕೋಟಿವಿದ್ಯದಲ್ಲಿ ನೋಡುವಡೆ ಸಹಸ್ರವೇದಿಯೆನಿಸುವ ರಾವಣನು ಪಾರದ್ವಾರಕಿಚ್ಛೈಸಿ ಪರವಧುವಿನ ದೆಸೆಯಿಂದಲೇನಾದನರಿಯರೆ ! ತನು ಕೊಬ್ಬಿನ ಮನ, ಮನ ವಿಕಾರದ ಇಂದ್ರಿಯ ವಿಷಯಂಗಳ ಅಂದವಿಡಿದ ವಿಕಳತೆಯಲ್ಲಿ ನುಡಿವ ಸಟೆಗರ ಕಾಯಲರಿವವೆ ? ನಿಮ್ಮಯ ಮನ ಸನ್ನಿಧಿಯಲ್ಲಿ, ಇಂತಿವೆಲ್ಲವ ಕಂಡೂ ಕೇಳಿಯೂ ಅರಿಯರು. ಹರನ ಸದ್ಭಕ್ತರ ಕೂಡೆ ವಿರೋಧಿಸಿ, ನರಕವನು ಮುಂದೆ ಅನುಭವಿಸಿ, ಇಂದು ಅಪಖ್ಯಾತಿಗೊಳಗಾಗಿ ಕೆಟ್ಟುಹೋಗಬೇಡ. ಅತ್ಯಧಿಕ ಶಿವನೆ ಸತ್ಸದಾಚಾರವಿಡಿದು, ನಿತ್ಯಪದವ ಪಡೆಯಿರೆ ಘಾಸಿ ಮಾಡುವನು ನಿಮ್ಮ ಸೋಜಿಗ. ಸದಾಶಿವ ಬಲ್ಲಿದನೆನ್ನ ದೇವ ಮಹಾಲಿಂಗ ಕಲ್ಲೇಶ್ವರನು ತನ್ನ ಭಕ್ತರೆ ಕೆಡೆನುಡಿದವರ ಬಿಡದೆ ದಂಡಿಸುವನು.
--------------
ಹಾವಿನಹಾಳ ಕಲ್ಲಯ್ಯ
ಕೇಳಿರೆ ಕೇಳಿರೆ ಶಿವವಚನ, ಗುರುವಚನ. ಪುರಾತರ ವಚನಾನುಭವ ಕೇಳಿ ಬದುಕಿರಯ್ಯಾ. ಕೇಳಿದ ಸದ್ಭಕ್ತರೆಲ್ಲರು ಕೃತಾರ್ಥರಪ್ಪರು. ತನು ಕರಗಿ, ಮನ ಕೊರಗಿ, ಭಾವ ಬೆಚ್ಚದೊ ! ಅಹಂಕಾರವಳಿದು, ಶರಣರ ಅನುಭಾವವ ಕೇಳಿದಡೆ, ಅದೇ ಮುಕ್ತಿ ನೋಡಿರೆ, ಇಂತಲ್ಲದೆ ಮನೋವ್ಯಾಕುಲನಾಗಿ, ತನುಮುಟ್ಟಿ ಕೇಳಿದಡೆ, ಉಪದೇಶವೆಂತು ಸಲುವುದಯ್ಯಾ ? ಎಂತಳವಡುವುದಯ್ಯಾ ? ಮಹಾಲಿಂಗ ಕಲ್ಲೇಶ್ವರಾ, ಗುರುವಚನ ಪರಾಙ್ಮುಖಂಗೆ ಎಂದೆಂದೂ ಭವ ಹಿಂಗದು ನೋಡಾ.
--------------
ಹಾವಿನಹಾಳ ಕಲ್ಲಯ್ಯ
ಕೋಗಿಲೆಗಳು ಉಗ್ಘಡಿಸಲು ಮಾಮರಂಗಳ ಮೇಲೆ, ತುಂಬಿಗಳು ಝೇಂಕಾರದಿಂ ಮೆರೆದು ಮೋಹರಿಸಲು, ಮಂದಾನಿಲಗಳ ತನ್ನ ಬೇಹಿಗೆ ಕಳುಹಲು, ಅನಂಗ ತನ್ನ ಬರವೆರಸಿ ಬಂದು ನಿಲಲು, ರಸಭರಿತವಾಗಿರ್ದ ಪರಿಯ ಕಬ್ಬಿನ ಬಿಲ್ಲೇರಿಸಿ, ಕುಸುಮ ಸರವನೆ ತೊಟ್ಟು, ಎಸಲಾರದೆ, ಬಿಲ್ಲು ಬೇರಾಗಿ, ಇವರೆಲ್ಲರ ಪರಿಯೆಂದು ಬಗೆದುಬಂದೆ, ಕಾಮಾ ನಿಲ್ಲದಿರೈ. ನಿನ್ನ ರೂಪ ಮಹಾಲಿಂಗ ಕಲ್ಲೇಶ್ವರದೇವ ಬಲ್ಲ. ಸಿದ್ಧರಾಮ ನಿನ್ನಳವಲ್ಲ, ಎಲವೊ ಕಾಮಾ.
--------------
ಹಾವಿನಹಾಳ ಕಲ್ಲಯ್ಯ
ಕರ್ತು ಭೃತ್ಯನ ವಾಸಕ್ಕೆಯಿದ್ದಲ್ಲಿ, ಆತನ ಭಕ್ತಿಯನರಿತು, ತಾ ಒಡಗೂಡಿದಲ್ಲಿ, ಆತ ಕೊಟ್ಟುದ ತಾ ಮುಟ್ಟದೆ, ಆತನಲ್ಲಿ ದುರ್ವಾಕ್ಯ ದುಶ್ಚರಿತ್ರ ಪಗುಡಿ ಪರಿಹಾಸಕಂಗಳಂ ಬೀರದೆ, ಆತನ ಚಿತ್ತನೋವಂತೆ ಮತ್ತಾವ ಬಂಧನದ ಕಟ್ಟನಿಕ್ಕದೆ, ಕೃತ್ಯವೆಮಗೊಂದ ಮಾಡೆಂದು ನೇಮವ ಲಕ್ಷಿಸದೆ, ಆತ ತನ್ನ ತಾನರಿತು ಮಾಡಿದಲ್ಲಿ, ಅದು ತನಗೆ ಮುನ್ನಿನ ಸೋಂಕೆಂಬುದನರಿತು, ಗನ್ನಗದುಕಿನಿಂ ಬಿನ್ನಾಣದಿಂದೊಂದುವ ಮುಟ್ಟದೆ, ಆ ಪ್ರಸನ್ನವಪ್ಪ ವಸ್ತು, ಮಹಾಮಹಿಮ ಕಲ್ಲೇಶ್ವರಲಿಂಗ ತಾನಾದ ಶರಣ.
--------------
ಹಾವಿನಹಾಳ ಕಲ್ಲಯ್ಯ
ಕಲುನಡೆಯ ಪಶುಗಳೈದೆ ಕರೆವ ಹಯನಪ್ಪಡೆ, ಅಳೆಯ ಹಡೆಯದ ಲೋಕವೈ ಹೋಗಲೇಕೆ? ಕೈದುವ ಹಿಡಿದವರೆಲ್ಲಾ ನೆಟ್ಟನೆ ಕಲಿಗಳಾದರೆ, ಮಾರ್ಬಲಕಂಜಿ ತಿರುಗಲೇಕೆ? ಇಷ್ಟಲಿಂಗವೆಂದು ಕಟ್ಟಿಕೊಂಡವರೆಲ್ಲಾ ನೆಟ್ಟನೆ ಭಕ್ತರಾದಡೆ ಮುಟ್ಟಲಿಲ್ಲ, ದುರಿತ ದುಃಕರ್ಮ ಹುಟ್ಟಲಿಲ್ಲ ಭವದಲ್ಲಿ. ಆದಿತ್ಯ ಪುರಾಣೇ : ಪೂಜಕಾ ಬಹವಸ್ಸಂತಿ ಭಕ್ತಾಶ್ಚತಸಹಸ್ರಶಃ | ತತ್ರ ಪ್ರಸಾದಪಾತ್ರಸ್ತುದ್ವೌ ತ್ರಯೋ ಚತುಃ ಪಂಚವ್ಯೆ || ಇಂತೆಂದುದಾಗಿ, ಪೂಜಕರು ಹಲಬರಹರು, ಭಕ್ತರು ಲಕ್ಷಸಂಖ್ಯೆಗಳು. ಅಲ್ಲಿ ಪ್ರಸಾದ ಪಾತ್ರವಾಯಿತ್ತಾದಡೆ, ಇಬ್ಬರು ಮೂವರಲ್ಲದೆ ಐವರರಿವರಿಲ್ಲ, [ಮಹಾಲಿಂಗ]ಕಲ್ಲೇಶ್ವರಾ.
--------------
ಹಾವಿನಹಾಳ ಕಲ್ಲಯ್ಯ
ಕ್ಷೇತ್ರ ವಿಶೇಷವೊ, ಬೀಜವಿಶೇಷವೊ ? ಬಲ್ಲವರು ನೀವು ಹೇಳಿರೆ ! ಬೀಜವಿಶೇಷವೆಂದಡೆ ಕುಲದಲಧಿಕ ಸದ್ಬ್ರಾಹ್ಮಣನ ಸತಿ ಜಾರೆಯಾಗಿ, ಶ್ವಪಚನ ರಮಿಸಲು. ಆ ಬೀಜ ಗರ್ಭವಾಗಿ ಜನಿಸಿದ ಸುತಂಗೆ ಬ್ರಾಹ್ಮಣ ಕರ್ಮದಿಂದ ಉಪನಯನ, ಬ್ರಹ್ಮಚರ್ಯ, ವೇದಾಧ್ಯಯನ, ಅಗ್ನಿ ಹೋತ್ರ, ಯಜ್ಞಯಜನಕ್ಕೆ ಯೋಗ್ಯವಾಗನೆ ಆ ಸುತನು ? ಕುಲದಲಧಿಕ ಬ್ರಾಹ್ಮಣನು ಚಂಡಾಲ ಸತಿಯ ರಮಿಸಲು, ಜನಿಸಿದ ಸುತಂಗೆ ವಿಪ್ರಕರ್ಮ ಸಲ್ಲದೆ ಹೋಗದೆ ? ಇದು ದೃಷ್ಟ. ಇದನತಿಗಳೆದ ವೇದಾದಿ ವಿದ್ಯಂಗಳ ಬಲ್ಲ ಲೌಕಿಕ ವಿದ್ವಾಂಸರು ತಿಳಿದುನೋಡಿ ಹೇಳಿರೆ ! ಶ್ರುತಿ: ಜನ್ಮನಾ ಜಾಯತೇ ಶೂದ್ರಃ ಕರ್ಮಣಾ ದ್ವಿಜ ಉಚ್ಯತೇ | ವೇದಾಧ್ಯಾಯೀ ಭವೇದ್ವಿಪ್ರಃ ಬ್ರಹ್ಮ ಚರತೇತಿ ಬ್ರಾಹ್ಮಣಃ | ವರ್ಣೇನ ಜಾಯತೇ ಶೂದ್ರಃ ಸ್ತ್ರೀ ಶುದ್ರಾಶ್ಚ ಕಾರಣಾತ್ | ಉತ್ಪತ್ತಿ ಶೂದ್ರ ಪುತ್ರಶ್ಚ ವಿಪ್ರಶೂದ್ರಂ ನ ಭುಂಯೇತ್ || ಇಂತೆಂದುದಾಗಿ, ಇದು ಕಾರಣ, ಗುರು ಸದ್ಭಾವದಲುದಯಿಸಿದ ಶಿವಜ್ಞಾನಬೀಜ ಸದ್ಭಕ್ತಿಯನಿಂಬುಗೊಂಡ ಶಿಷ್ಯನ ಹೃದಯ ಮನ ಕರಣವೆಂಬ ಸುಕ್ಷೇತ್ರವು ಕುಲಹೀನ ಸ್ತ್ರೀ, ಕುಲಯುಕ್ತ ಸ್ತ್ರೀಯರ ದೋಷಪಿಂಡದಂತಲ್ಲ. ಎನ್ನ ಮಹಾಲಿಂಗ ಕಲ್ಲೇಶ್ವರನ ಶರಣರೆ ಅಜಾತರೆಂದಿಕ್ಕಿದೆ ಮುಂಡಿಗೆಯನಾ, ಪರವೆತ್ತಿಕೊಳ್ಳಿರೆ.
--------------
ಹಾವಿನಹಾಳ ಕಲ್ಲಯ್ಯ