ಅಥವಾ
(6) (3) (3) (0) (0) (1) (0) (0) (2) (1) (0) (0) (0) (0) ಅಂ (3) ಅಃ (3) (15) (0) (2) (0) (0) (1) (0) (0) (0) (0) (0) (0) (0) (0) (0) (3) (0) (1) (0) (6) (3) (0) (5) (2) (4) (0) (0) (0) (1) (0) (1) (1) (7) (2) (0)

ಪದದಿಂದ ಪ್ರಾರಂಭವಾಗುವ ವಚನಗಳು:

ಆರು ದೇವರ ನಿಮ್ಮ ಎದೆಯಲ್ಲಿ ಇರಿದುಕೊಳ್ಳಿ. ಮೂರು ದೇವರ ನಿಮ್ಮ ಮೂಗಿನಲ್ಲಿ ಮುರಿದುಕೊಳ್ಳಿ. ಗುರು ತೋರಿದ್ದು ಒಂದೇ ದೇವರು ಸಾಕು, ಇಮ್ಮಡಿ ನಿಃಕಳಂಕ ಮಲ್ಲಿಕಾರ್ಜುನಾ.
--------------
ಮೋಳಿಗೆ ಮಹಾದೇವಿ
ಆರು ಮಣಿಗೆ ದಾರವನೇರಿಸಿ, ಕುಣಿಕೆಗೆ ಮಣಿಯಿಲ್ಲದೆ ಅರಸುತ್ತಿದ್ದರಲ್ಲಾ ತತ್ವಜ್ಞರು. ಇದು ಆದಿಯ ಕ್ರೀ, ಅನಾದಿಯ ಜ್ಞಾನ. ಈ ಉಭಯವ ಭೇದಿಸಿದಡೆ ಕುಣಿಕೆಯ ಮಣಿ ತಲಪಿಗೇರಿತ್ತು, ಎನ್ನಯ್ಯಪ್ರಿಯ ಇಮ್ಮಡಿ ನಿಃಕಳಂಕಮಲ್ಲಿಕಾರ್ಜುನಲಿಂಗವು ಏಕವೆಂದಲ್ಲಿ
--------------
ಮೋಳಿಗೆ ಮಹಾದೇವಿ
ಆವ ಬೀಜವ ಬಿತ್ತಿದಡೂ ಪೃಥ್ವಿಗೆ ಬೇರು, ಬಯಲಿಂಗೆ ಶಾಖೆ ತಲೆದೋರಿ ಬೆಳೆವಂತೆ ಐಕ್ಯಕ್ಕೆ ಮರೆ, ಕ್ರೀಗೆ ಬಾಹ್ಯ. ಉಭಯದ ಭೇದವುಳ್ಳನ್ನಕ್ಕ ಭಕ್ತಿಯ ಹೋರಾಟ ಬಿಡದು. ಎನ್ನಯ್ಯಪ್ರಿಯ ಇಮ್ಮಡಿ ನಿಃಕಳಂಕಮಲ್ಲಿಕಾರ್ಜುನಾ ಮಣಿಯುಳ್ಳನ್ನಕ್ಕ ಪವಣಿಕೆಯ ಹಂಗು ಬಿಡದು.
--------------
ಮೋಳಿಗೆ ಮಹಾದೇವಿ