ಅಥವಾ
(6) (3) (3) (0) (0) (1) (0) (0) (2) (1) (0) (0) (0) (0) ಅಂ (3) ಅಃ (3) (15) (0) (2) (0) (0) (1) (0) (0) (0) (0) (0) (0) (0) (0) (0) (3) (0) (1) (0) (6) (3) (0) (5) (2) (4) (0) (0) (0) (1) (0) (1) (1) (7) (2) (0)

ಪದದಿಂದ ಪ್ರಾರಂಭವಾಗುವ ವಚನಗಳು:

ಪೂಜೆಯಲ್ಲಿ ಲಕ್ಷಿತವಪ್ಪವರು ಪುಣ್ಯದ ಆಗಿಂಗೆ ಒಡಲು. ದಾಸೋಹವೆಂಬ ಸೋಹವನರಿದಲ್ಲಿ ಚತುರ್ವಿಧಫಲಪದದಾಸೆಗೆ ಒಡಲು. ಇಂತೀ ಉಭಯದ ಪ್ರೀತಿಯನರಿತು ತೋರಿದ ತೋರಿಕೆ ಬಂದಂತೆ, ಅವನಾರೈದು ಗುರುವಿಂಗೆ ತನು ಹೋಯಿತ್ತು; ಲಿಂಗಕ್ಕೆ ಮನ ಹೋಯಿತ್ತು; ಜಂಗಮಕ್ಕೆ ಧನ ಹೋಯಿತ್ತು;. ಇಂತೀ ಎಲ್ಲ ಲಕ್ಷ್ಯದಲ್ಲಿ ಲಕ್ಷಿಸಿ, ನೀವು ಕೈಲಾಸಕ್ಕೆ ಹೋದೆಹೆನೆಂಬ ಕಲ್ಲೆದೆಗೆ ನಾನಂಜುವೆ, ಎನ್ನಯ್ಯಪ್ರಿಯ ಇಮ್ಮಡಿ ನಿಃಕಳಂಕಮಲ್ಲಿಕಾರ್ಜುನಾ.
--------------
ಮೋಳಿಗೆ ಮಹಾದೇವಿ
ಪೂಜಿಸಿ ಕಂಡೆಹೆನೆಂದಡೆ, ಆ ಪೂಜೆಗೆ ತನ್ಮಯಮೂರ್ತಿ ನೀನು. ನೆನಹಿನಲ್ಲಿ ಅನುಕರಿಸಿ ಕಂಡೆಹೆನೆಂದಡೆ ಆ ನೆನಹಿಂಗೆ ಆತ್ಮಸ್ವರೂಪ ನೀನು. ಎಲ್ಲಾ ಎಡೆಯಲ್ಲಿ ಭಿನ್ನವ ಮಾಡಿ ಕಂಡೆಹೆನೆಂದಡೆ, ಅಣೋರಣೀಯಾನ್ ಮಹತೋ ಮಹೀಯಾನ್ ನೀನು. ಸತ್ಯವೆಲ್ಲಿದ್ದಿತ್ತು ಅಲ್ಲಿ ತಪ್ಪದೆ ಇಪ್ಪೆ ನೀನು, ಎನ್ನಯ್ಯಪ್ರಿಯ ಇಮ್ಮಡಿ ನಿಃಕಳಂಕಮಲ್ಲಿಕಾರ್ಜುನಾ ವಿಶ್ವಾಸವೆಲ್ಲಿಪ್ಪುದೊ ಅಲ್ಲಿ ತಪ್ಪದೆ ಇಪ್ಪೆ ನೀನು.
--------------
ಮೋಳಿಗೆ ಮಹಾದೇವಿ
ಪೂಜಿಸುವವರ ಕಂಡವರ ಕಂಡು, ಆ ಗುಣವ ತಾ ಕೈಕೊಂಡು ಪೂಜಿಸದೆ ವಾಗ್ಬ್ರಹ್ಮವ ನುಡಿವವರ ಕಂಡು, ಶೇಷವನು ಈಚೆಯಲ್ಲಿ ನುಡಿಯದೆ, ತನ್ನ ಸ್ವಯಾನುಭಾವ ಪೂಜೆ, ತನ್ನ ಸ್ವಯಸಿದ್ಭವಾದ ನುಡಿ, ಇಂತೀ ಉಭಯಸ್ಥಲಗೂಡಿ, ಕ್ಷೀರ ನೀರಿನಂತೆ ಹೊರೆಯಿಲ್ಲದೆ ವರ್ಣಭೇದವಿಲ್ಲದೆ ಕೂಡಬೇಕು, ಎನ್ನಯ್ಯಪ್ರಿಯ ಇಮ್ಮಡಿ ನಿಃಕಳಂಕಮಲ್ಲಿಕಾರ್ಜುನನಲ್ಲಿ.
--------------
ಮೋಳಿಗೆ ಮಹಾದೇವಿ