ಅಥವಾ
(6) (3) (3) (0) (0) (1) (0) (0) (2) (1) (0) (0) (0) (0) ಅಂ (3) ಅಃ (3) (15) (0) (2) (0) (0) (1) (0) (0) (0) (0) (0) (0) (0) (0) (0) (3) (0) (1) (0) (6) (3) (0) (5) (2) (4) (0) (0) (0) (1) (0) (1) (1) (7) (2) (0)

ಪದದಿಂದ ಪ್ರಾರಂಭವಾಗುವ ವಚನಗಳು:

ಹೇಮದ ಬೆಂಬಳಿಯ ಸ್ವರೂಪದಂತೆ, ಗ್ರಾಮದ ಬೆಂಬಳಿಯ ಬಟ್ಟೆಯಂತೆ. ಹೇಮದ ರೂಪವಳಿದು ಸ್ವರೂಪವಡಗಿದಲ್ಲಿ ಕುಶಲಚಿತ್ರವೆಲ್ಲಿದ್ದಿತ್ತು ? ಬಟ್ಟೆಯ ಮೆಟ್ಟಿ ಹೋಗಿ ಪುನರಪಿಯಾಗಿ ತಿರುಗಿದಲ್ಲಿ, ಊರ ಬಾಗಿಲ ಬಟ್ಟೆಯ ಒಂದರಲ್ಲಿ ಹೋಗಬೇಕು. ಇದು ದೃಷ್ಟಕ್ಕೆ ಕೊಟ್ಟ ಇಷ್ಟ ಆ ಇಷ್ಟ ಚಿತ್ತದಲ್ಲಿ ಅಚ್ಚೊತ್ತಿದ ಮತ್ತೆ, ಆ ನಿಶ್ಚಯ ಉಭಯವ ತಿಳಿದಲ್ಲಿ, ಕಾಯಕ್ಕೆ ಕೈಲಾಸವೆಂಬುದಿಲ್ಲ, ಭಾವಕ್ಕೆ ಬಯಲೆಂಬುದಿಲ್ಲ. ಅನಲನಲ್ಲಿ ಅರತ ದ್ರವ್ಯದಂತೆ ಅದು ಅಮೂರ್ತಿಭಾವ, ಎನ್ನಯ್ಯಪ್ರಿಯ ಇಮ್ಮಡಿ ನಿಃಕಳಂಕಮಲ್ಲಿಕಾರ್ಜುನನಲ್ಲಿ.
--------------
ಮೋಳಿಗೆ ಮಹಾದೇವಿ
ಹೃತ್ಕಮಲಮಧ್ಯದಲ್ಲಿಪ್ಪ ಲಿಂಗವ ಸರ್ವಾಂಗದಲ್ಲಿ ವೇಧಿಸಿ, ಪರಿಪೂರ್ಣವಪ್ಪ ಲಿಂಗವ ಅಂತರ್ಮುಖದಿಂದ ಬಹಿರ್ಮುಖಕ್ಕೆ ತಂದು, ಪಂಚಸ್ಥಾನದಲ್ಲಿಪ್ಪ ಲಿಂಗವ ಕರಸ್ಥಲದಲ್ಲಿ ಮೂರ್ತಿಗೊಳಿಸಲಿಕ್ಕಾಗಿ, ಕಂಗಳು ತುಂಬಿ, ಬಾಹ್ಯದೃಷ್ಟಿಯರತು, ಲಿಂಗದೃಷ್ಟಿ ಪರಿಪೂರ್ಣವಾಗಿ, ದೃಕ್ಕಿಂಗೆ ತೋರುವುದೆಲ್ಲವೂ ಲಿಂಗಮಯವಾಗಿ, ಏನ ಮುಟ್ಟಿ ಹಿಡಿದಡೆಯೂ ಪುಷ್ಪಮಯವಾಗಿ, ಜಿಹ್ವೆಯಲ್ಲಿ ತೋರುವ ಅಪ್ಪುರಸ ಮುಂತಾದುವೆಲ್ಲವು ಅರ್ಪಿತಮಯವಾಗಿ, ಇಂತಪ್ಪ ವ್ಯವಧಾನ ಸರ್ವಾಂಗಲಿಂಗಿಯ ಅವಧಾನ. ಇಷ್ಟದ ಅರಿವೆಂದು ಉಭಯದ ಗುಟ್ಟು ಕೆಟ್ಟಲ್ಲಿ ಎನ್ನಯ್ಯಪ್ರಿಯ ಇಮ್ಮಡಿ ನಿಃಕಳಂಕಮಲ್ಲಿಕಾರ್ಜುನನೆಂಬುದಕ್ಕೆ ಇದಿರೆಡೆಯಿಲ್ಲ.
--------------
ಮೋಳಿಗೆ ಮಹಾದೇವಿ