ಅಥವಾ
(6) (3) (3) (0) (0) (1) (0) (0) (2) (1) (0) (0) (0) (0) ಅಂ (3) ಅಃ (3) (15) (0) (2) (0) (0) (1) (0) (0) (0) (0) (0) (0) (0) (0) (0) (3) (0) (1) (0) (6) (3) (0) (5) (2) (4) (0) (0) (0) (1) (0) (1) (1) (7) (2) (0)

ಪದದಿಂದ ಪ್ರಾರಂಭವಾಗುವ ವಚನಗಳು:

ನೀರು ನೆಲನಿಲ್ಲದೆ ಇರಬಹುದೆ ? ಬೀಜ ನೆಲೆಯಿಲ್ಲದೆ ಹುಟ್ಟಬಹುದೆ ? ಜ್ಞಾನ ಕ್ರಿಯೆಯಿಲ್ಲದೆ ಅರಿಯಬಹುದೆ ? ಚಿತ್ತ ಚಿತ್ತುವಿಲ್ಲದೆ ವಸ್ತುವ ಲಕ್ಷಿಸಿ ಗ್ರಹಿಸಬಲ್ಲುದೆ ? ಇಂತೀ ಕ್ರೀಜ್ಞಾನ ಸಂಬಂಧಸ್ಥಲಭಾವ. ಎನ್ನಯ್ಯಪ್ರಿಯ ಇಮ್ಮಡಿ ನಿಃಕಳಂಕಮಲ್ಲಿಕಾರ್ಜುನನಲ್ಲಿ ಉಭಯಸ್ಥಲಭೇದ.
--------------
ಮೋಳಿಗೆ ಮಹಾದೇವಿ
ನಿಚ್ಚಣಿಕೆಯನೇರಿ ತೆಗೆವುದಕ್ಕೆ ಮುಂದೊಂದಟ್ಟಳೆಯಲ್ಲಿ ಬಯಕೆ ಲಕ್ಷಿಸಿದ್ದಿತ್ತು. ಬಯಕೆಯುಳ್ಳನ್ನಕ್ಕ ನಿಚ್ಚಣಿಕೆಯನೆತ್ತುತ್ತ ಇಳುಹುತ್ತ ಈ ಕೃತ್ಯದಲ್ಲಿ ಸಾಯಲಾರೆ. ಎನ್ನಯ್ಯಾ, ಎನಗೊಂದು ಗೊತ್ತ ತೋರಾ, ಎನ್ನಯ್ಯಪ್ರಿಯ ಇಮ್ಮಡಿ ನಿಃಕಳಂಕಮಲ್ಲಿಕಾರ್ಜುನಾ.
--------------
ಮೋಳಿಗೆ ಮಹಾದೇವಿ
ನುಡಿದ ನುಡಿಯೆಲ್ಲವು ಮಹಾಪ್ರಸಂಗವಾದ ಮತ್ತೆ ಲೆಕ್ಕವಿಲ್ಲದ ವೇದ, ಸಂಖ್ಯೆಯಿಲ್ಲದ ಶಾಸ್ತ್ರ, ಕಡೆ ನಡು ಮೊದಲಿಲ್ಲದ ಪುರಾಣವನೋದಲೇತಕ್ಕೆ ? ಅಲಗು ಮರೆ ಉಳ್ಳವಂಗೆ ಶಸ್ತ್ರದ ಭಯವೇತಕ್ಕೆ ? ಬಾಣದ ತೊಗಲುಳ್ಳವಂಗೆ ಅಂಬಿನ ಘಾಯವೇತಕ್ಕೆ ? ಶಬ್ದಮುಗ್ಧವಾದವಂಗೆ ಇಚ್ಫೆಯ ನುಡಿದು ಕುಚಿತ್ತನಾಗಲೇಕೆ ? ಅದು ತನ್ನ ಸ್ವಯದಿಂದ ಅಲ್ಲ ಅಹುದೆಂಬುದಕ್ಕೆ ದೃಷ್ಟವಾಯಿತ್ತು. ಬೆಳಗಿನ ಮುಖದಿಂದ ಬೆಳಗಿನ ಕಳೆಯನರಿವಂತೆ ನಿನ್ನಿಂದ ನೀನೇ ತಿಳಿ, ಎನ್ನಯ್ಯಪ್ರಿಯ ಇಮ್ಮಡಿ ನಿಃಕಳಂಕಮಲ್ಲಿಕಾರ್ಜುನನ ಭಿನ್ನಭಾವವಿಲ್ಲದೆ
--------------
ಮೋಳಿಗೆ ಮಹಾದೇವಿ
ನಿಮಿತ್ತ ಲಗ್ನ ಮಾಯಾಮರುವಡಿ ಬೇಳುವೆಮೂಲಿಕೆಯಿಂದ ಕಡೆಯೆ ನಿನ್ನ ಇರವು ? ನೀನೆ ಗತಿಯೆಂದು ಅರ್ಚಿಸುವವರಲ್ಲಿ, ನೀನೆ ಮತಿಯೆಂದು ನೆನೆವವರಲ್ಲಿ, ನೀನಲ್ಲದೆ ಪೆರತೊಂದನರಿಯದವರಲ್ಲಿ, ನೀನಿರದಿದ್ದಡೆ ನಿನಗದೆ ವಿಶ್ವಾಸಘಾತಕ, ನಿನಗದೆ ಪಾತಕ. ನಿನ್ನ ಗುಣವ ನಾನಿನ್ನರಿದು ಮುಟ್ಟಿದೆನಾದಡೆ, ಪಂಚಮಹಾಪಾತಕ. ಇದಕ್ಕೆ ದೃಷ್ಟ: ಯಥಾ ಬೀಜಃ ತಥಾಂಕುರ'ದಂತೆ. ಅದು ನಿನ್ನ ಗುಣ ಎನ್ನಲ್ಲಿ ಸುಳಿದ ಸುಳಿವು. ಅದು ಬೀಜದ ನಷ್ಟ:ಫಲಕ್ಕೆ ಮೊದಲಿಲ್ಲ. ಎನ್ನ ನಿನ್ನ ಮಾತಿನ ಬಳಕೆ ಬೇಡ; ಎನ್ನಲ್ಲಿ ಸನ್ನದ್ಧನಾಗಿರು ಎನ್ನಯ್ಯಪ್ರಿಯ ಇಮ್ಮಡಿ ನಿಃಕಳಂಕಮಲ್ಲಿಕಾರ್ಜುನಾ.
--------------
ಮೋಳಿಗೆ ಮಹಾದೇವಿ
ನೀರಿನ ಮೇಲೆ ಧರೆ ಹೊರೆಯಾಗಿ ಮತ್ತಾ ನೀರನಾಶ್ರಯಿಸಿಕೊಂಡಿಪ್ಪಂತೆ, ಬೀಜದ ಸಾರ ಬಲಿದು ಬೀಜವಾಗಿ ಆ ಸಾರ ಬೀಜವನಿಂಬಿಟ್ಟುಕೊಂಡಿಪ್ಪಂತೆ, ನಿರವಯವಸ್ತು ಕುರುಹಾಗಿ ಆ ಕುರುಹಿಂಗೆ ತಾನರಿವಾಗಿ ಭಾವಿಸಿಕೊಂಬಂತೆ, ದರ್ಪಣದಲ್ಲಿ ತನ್ನೊಪ್ಪವ ಕಾಣಿಸಿಕೊಂಬ ದೃಕ್ಕು ದರ್ಪಣದಿಂದೆಂದಡೆ ನಿಶ್ಚಯವಲ್ಲ; ದೃಕ್ಕಿನಿಂದೆಂದಡೆ ಇದಿರಿಟ್ಟು ಲಕ್ಷಿಸಬೇಕು. ಇದು ಭಿನ್ನವಲ್ಲ, ಅಭಿನ್ನವಲ್ಲ; ಕ್ರಿಯೆಯಲ್ಲ, ನಿಃಕ್ರಿಯೆಯಲ್ಲ; ಇದು ಭಿನ್ನವಲ್ಲ, ನಿರ್ಭಾವವಲ್ಲ. ಅಹುದು ಅಲ್ಲವೆಂಬ ಸಂದೇಹ ಸಂಧಿಸಿ ನಿಂದಲ್ಲಿ ಎನ್ನಯ್ಯಪ್ರಿಯ ಇಮ್ಮಡಿ ನಿಃಕಳಂಕಮಲ್ಲಿಕಾರ್ಜುನನು ಸ್ವಯವಾದ ಸಂಬಂಧಸ್ಥಲ.
--------------
ಮೋಳಿಗೆ ಮಹಾದೇವಿ
ನಿರಂಜನೆ ರಂಜಿಸಲುಂಟೆ ? ನಿಜ ನಿಶ್ಚೈಸಿದಲ್ಲಿ ಸಂಗಕ್ಕೆ ಒಳಗಪ್ಪುದೆ ? ಈ ಸುಗುಣದಂಗವ ತಿಳಿದು ಲಿಂಗ ಆತ್ಮನಲ್ಲಿ ಸಂಗವಾಗಿ ಆತ್ಮ ಲಿಂಗದಲ್ಲಿ ಮೂರ್ಛೆಗತವಾದ ಮತ್ತೆ, ಎನ್ನಯ್ಯಪ್ರಿಯ ಇಮ್ಮಡಿ ನಿಃಕಳಂಕಮಲ್ಲಿಕಾರ್ಜುನನೆಂಬ ಸೊಲ್ಲೇಕೆ ಉಡುಗದು ?
--------------
ಮೋಳಿಗೆ ಮಹಾದೇವಿ